SDPI ವಿಜಯೋತ್ಸವ ವೇಳೆ ಪಾಕ್ ಪರ ಘೋಷಣೆ: ಮೂವರ ಬಂಧನ
ಎಸ್‌ಡಿಪಿಐ ಬೆಂಬಲಿತರು ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಸಾಕಷ್ಟು ವೈರಲ್ ಆದ ಬೆನ್ನಲ್ಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಳ್ತಂಗಡಿ(ಜ.01): ಉಜಿರೆಯಲ್ಲಿ ಬುಧವಾರ ಗ್ರಾಪಂ ಚುನಾವಣೆ ವಿಜಯೋತ್ಸವ ವೇಳೆ ದೇಶ ವಿರೋಧಿ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಮೂವರನ್ನು ಬೆಳ್ತಂಗಡಿ ಪೊಲೀಸರು ಗುರುವಾರ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಎಸ್‌ಡಿಪಿಐ ಬೆಂಬಲಿತರು ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿಡಿಯೋ ವೈರಲ್ ಆಗಿ ಆಕ್ರೋಶಕ್ಕೆ ತುತ್ತಾಗಿದ್ದ ಹಿನ್ನೆಲೆ ಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿಗಳಾದ ಮೊಹಮ್ಮದ್ ಹರ್ಷದ್ (22), ದಾವೂದ್ (36) ಹಾಗೂ ಇಸಾಕ್ (28) ಎಂಬುವರನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ: ಗ್ರಾಪಂ ಫಲಿತಾಂಶದ ವೇಳೆ ಪಾಕ್ ಪರ ಘೋಷಣೆ ಕೂಗಿ SDPI ಕಾರ್ಯಕರ್ತರ ಪುಂಡಾಟ
ಈ ಬೆನ್ನಲ್ಲೇ ವಿಡಿಯೋಗಳನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಲ್ಲದೆ, ಘಟಣೆಗೆ ಸಂಬಂಧಿಸಿದಂತೆ ಸಂಗ್ರಹಿಸಲಾದ ಮೊಬೈಲ್ ಮೂಲಕ ಚಿತ್ರೀಕರಿಸಿರುವ ಇತರ ಎರಡು ವಿಡಿಯೋಗಳೂ ಪೊಲೀಸರಿಗೆ ಸಿಕ್ಕಿದ್ದು, ಅವುಗಳನ್ನೂ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ತನಿಖೆ ಹಾಗೂ ಸಾಕ್ಷ್ಯಗಳ ಅಧಾರದಲ್ಲಿ ಮೂವರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಎಸ್‌ಡಿಪಿಐ ಒಂದು ಸಂವಿಧಾನ ನಿಯಮದಡಿ ನೋಂದಣಿಯಾದ ರಾಜಕೀಯ ಪಾರ್ಟಿ ಎಂದುಕೊಂಡಿದ್ದೆವು. ಆದರೆ ಅದು ಭಯೋತ್ಪಾದನೆಗೆ ಪೂರಕವಾಗಿ ವರ್ತಿಸುತ್ತಿದೆ. ಅದು ಪಕ್ಷವಾದ್ದರಿಂದ ನಿಷೇಧಿಸುವುದು ಚುನಾವಣಾ ಆಯೋಗ ವ್ಯಾಪ್ತಿಗೆ ಬರುತ್ತದೆ.- ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷರು
ಶತ್ರು ರಾಷ್ಟ್ರ ಪಾಕ್ ಪರ ಘೋಷಣೆ ಕೂಗಿದವರಿಗೆ ಕೆಲವು ರಾಜಕೀಯ ಪಕ್ಷಗಳ ಬೆಂಬಲವಿದೆ. ಅಂತಹ ಪಕ್ಷಗಳು ಇಂದು ಯೋಚನೆ ಮಾಡಬೇಕಾಗಿದೆ. ಹಿಂದಿನ ಸರ್ಕಾರಗಳು ನೀಡಿದ ಬೆಂಬಲದಿಂದ ಇಂದು ಎಸ್ ಡಿಪಿಐಗೆ ಇಷ್ಟೆಲ್ಲಾ ಸೊಕ್ಕು ಬಂದಿದೆ - ಕೆ.ಎಸ್. ಈಶ್ವರಪ್ಪ,