ಕೊರೋನಾ ನಿರ್ವಹಣೆ ವಿಚಾರದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯೇ ನಂ.1 ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

ನವದೆಹಲಿ(ಜ.01): ಕೊರೋನಾ ವೈರಸ್‌ ತಂದೊಡ್ಡಿದ ಬಗೆಬಗೆಯ ಸಂಕಷ್ಟಗಳು ಹಾಗೂ ಆರ್ಥಿಕ ಕುಸಿತದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯತೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ.

ಮಾರ್ನಿಂಗ್‌ ಕನ್ಸಲ್ಟ್‌ ಎಂಬ ಅಮೆರಿಕ ಮೂಲದ ಸಮೀಕ್ಷಾ ಸಂಸ್ಥೆಯು ವಿಶ್ವದ 13 ದೇಶಗಳಲ್ಲಿ ಆಯಾ ದೇಶದ 13 ಮುಖ್ಯಸ್ಥರ ಜನಪ್ರಿಯತೆಯ ಸಮೀಕ್ಷೆ ನಡೆಸಿತ್ತು. ಡಿಸೆಂಬರ್‌ 22ಕ್ಕೆ ಅಂತ್ಯಗೊಂಡ ವಾರದಲ್ಲಿ 7 ದಿನಗಳ ಅವಧಿಯಲ್ಲಿ ವಯಸ್ಕರ ಅಭಿಪ್ರಾಯ ಸಂಗ್ರಹಿಸಿತ್ತು. ಇದರಲ್ಲಿ ಮೋದಿ ಅವರಿಗೆ 55 ಅಂಕಗಳು (ಅಪ್ರೂವಲ್‌ ರೇಟಿಂಗ್‌) ಲಭಿಸಿದ್ದು, ಈ 13 ದೇಶಗಳ ಮುಖ್ಯಸ್ಥರಲ್ಲಿ ಅತಿ ಜನಪ್ರಿಯ ಎನ್ನಿಸಿಕೊಂಡಿದ್ದಾರೆ.

ಹೊಸ ವರ್ಷ: ಪಾರ್ಟಿಗಾಗಿ ಅಕ್ರಮವಾಗಿ ಸಂಗ್ರಹಿಸಿದ್ದ 83 ಲೀಟರ್‌ ಮದ್ಯ ವಶ

ಇನ್ನುಳಿದಂತೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್‌ ಮ್ಯಾನ್ಯುಯೆಲ್‌ ಲೋಪೆಜ್‌ 29 ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ಗೆ 27 ಅಂಕಗಳು ಬಂದಿದ್ದು, ಮೋದಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಪ್ರೇಲಿಯಾ, ಬ್ರೆಜಿಲ್‌, ಕೆನಡಾ, ಫ್ರಾನ್ಸ್‌, ಜರ್ಮನಿ, ಭಾರತ, ಇಟಲಿ, ಜಪಾನ್‌, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್‌, ಬ್ರಿಟನ್‌, ಅಮೆರಿಕದಲ್ಲಿ ಈ ಸಮೀಕ್ಷೆ ನಡೆದಿತ್ತು.