ಯೋಗದೊಳಗೆ ಕೊಂಕು ಹುಡುಕಿದ ಕಾಂಗ್ರೆಸ್, ಪಾಕ್ ISI ಎಜೆಂಟ್ ಅರೆಸ್ಟ್; ಜೂ.21ರ ಟಾಪ್ 10 ಸುದ್ದಿ!

By Suvarna NewsFirst Published Jun 21, 2021, 4:50 PM IST
Highlights

ಅಂತಾರಾಷ್ಟ್ರೀಯ ಯೋಗದಿನದಂದು ಕಾಂಗ್ರೆಸ್ ವಿವಾದ ಸೃಷ್ಟಿಸಿದೆ. ಓಮ್ ಉಚ್ಚಾರಣೆಯಿಂದ ಯೋಗದ ಶಕ್ತಿ ಹೆಚ್ಚಾಗಲ್ಲ ಎಂದಿದೆ. ಮೂಕ, ಕಿವುಡ ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಪಾಕ್ ಎಜೆಂಟ್‌ನ್ನು ಉತ್ತರ ಪ್ರದೇಶ ಪೊಲೀಸರು ಅರೆಸ್ಟ್ ಮಾಡಿದ್ದಾರೆ.  ಬಾಲಿವುಡ್ ನಟಿ ಮೇಲೆ ಕಳ್ಳಿ ಆರೋಪ ಮಾಡಿದ ಪಿಜಿ ಮಾಲೀಕ, ಟೆಸ್ಟ್ ಕ್ರಿಕೆಟ್‌ನಲ್ಲಿ 10 ವರ್ಷ ಪೂರೈಸಿದ ವಿರಾಟ್ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಉ.ಪ್ರದೇಶದ ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ; ಇಬ್ಬರು ಪಾಕ್ ISI ಎಜೆಂಟ್ ಅರೆಸ್ಟ್!...

ಉತ್ತರ ಪ್ರದೇಶದ, ದೆಹಲಿ ಸೇರಿದಂತೆ ದೇಶದ ಹಲವೆಡೆ ಕಿವುಡ, ಮೂಕ ಮಕ್ಕಳನ್ನು ಅಸಾಯಕರನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಇಬ್ಬರನ್ನು  ಭಯೋತ್ರಾದಕ ನಿಗ್ರಹ ದಳ (ATS) ಬಂಧಿಸಿದೆ. ಬಂಧಿತ ಇಬ್ಬರು ಪಾಕಿಸ್ತಾನ ISI ಎಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಅನ್ನೋದು ವಿಚಾರಣೆಯಿಂದ ಬಹಿರಂಗವಾಗಿದೆ.

'ॐ ಉಚ್ಛಾರಣೆಯಿಂದ ಯೋಗ ಶಕ್ತಿಶಾಲಿಯಾಗಲ್ಲ, ಅಲ್ಲಾ ಎಂದರೆ ಶಕ್ತಿ ಕಡಿಮೆ ಆಗುವುದಿಲ್ಲ'...

ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಹೋರಾಟದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ಯೋಗ ಮಹತ್ವಪೂರ್ಣವಾಗಿದೆ ಎಂಬ ಸಂದೇಶ ನೀಡಿದ್ದಾರೆ. ಈ ನಡುವೆ ಕಾಂಗ್ರರೆಸ್‌ ನಾಯಕ ಅಭಿಷೇಕ್ ಮನು ಸಿಮಘ್ವಿ ಟ್ವೀಟ್ ಒಂದನ್ನು ಮಾಡಿ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.

ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿ​ಕೆ!...

ವಿಶ್ವ ಯೋಗ​ದಿ​ನ​ವಾದ ಜೂ.21ರಿಂದ 18 ವರ್ಷ ಮೇಲ್ಪ​ಟ್ಟ​ ದೇಶದ ಎಲ್ಲಾ ನಾಗ​ರಿ​ಕ​ರಿಗೆ ಕೇಂದ್ರ ಸರ್ಕಾರ ಉಚಿತ ಲಸಿ​ಕೆ​ಯನ್ನು ವಿತ​ರಿ​ಸ​ಲಿದೆ. ಜೂ.7ರಂದು ದೇಶ​ವನ್ನು ಉದ್ದೇ​ಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿ​ದ್ದ​ರು.

ಗುರುವಾರದ ಸಭೆಯಲ್ಲಿ ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಲನಕ್ಷೆ ಚರ್ಚೆ!...

ಜಮ್ಮು ಮತ್ತು ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ ನಾಯಕರ ಜೊತೆ ಕೇಂದ್ರ ಸರ್ಕಾರ ಜೂ.24ರ ಗುರುವಾರ ಆಯೋಜಿಸಿರುವ ಸಭೆಯಲ್ಲಿ, ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವುದರ ಬದಲಾಗಿ, ಕ್ಷೇತ್ರ ಮರುವಿಂಗಡನೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಕೊರೋನಾ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ ಯೋಗ: ಪಿಎಂ ಮೋದಿ...

7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೊರೋನಾ ಹಿನ್ನೆಲೆ ಈ ಹಿಂದಿನಂತೆ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇನ್ನು ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಯೋಗ ಇಡೀ ವಿಶ್ವಕ್ಕೇ ವಿಶ್ವಾಸ ಕೊಟ್ಟಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ. 

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 10 ವರ್ಷ ಭರ್ತಿ...

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ವರ್ಷ ಪೊರೈಸಿದ್ದಾರೆ. ಕಳೆದೊಂದು ದಶಕದಲ್ಲಿ ಕೊಹ್ಲಿ ಆಧುನಿಕ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

ನಟಿ ಮಿನಿಷಾ ವಿರುದ್ಧ ಪಿಜಿ ಓನರ್ ಹಣ ಕದ್ದ ಆರೋಪ!...

ಖಾಲಿ ಕೈಯಲ್ಲಿ ಮುಂಬೈಗೆ ಬಂದ ನಟಿ ಮಿನಿಷಾಗೆ ಕಳ್ಳಿ ಎಂದು  ಆರೋಪ ಮಾಡಿದ ಪಿಜಿ ಓನರ್. ಏನಿದು ಘಟನೆ?

ಸಿದ್ದು ಮುಂದಿನ ಸಿಎಂ ವಿವಾದ: ನಾಯಕರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ ರವಾನೆ...

ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ತಾರಕಕ್ಕೇರಿದೆ. ಕೆಲ ಶಾಸಕರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬಹಿರಂಗ ಹೇಳಿಕೆ ನೀಡುತ್ತಿರುವುದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಣ್ಣು ಕೆಂಪಾಗಿಸಿದೆ.

ಅಜ್ಜ ಆಗ್ತಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ: ಸೊಸೆ ರೇವತಿಗೆ 5 ತಿಂಗಳು!...

ನಿಖಿಲ್ ಕುಮಾರಸ್ವಾಮಿ ಕುಟುಂಬದಲ್ಲಿ ಇಂದು ಡಬಲ್ ಸಂಭ್ರಮ. ಪತ್ನಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್.

16 ಜಿಲ್ಲೆಗಳೊಂದಿಗೆ ಮತ್ತೆ 6 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ...

ಈಗಾಗಲೇ ರಾಜ್ಯ ಸರ್ಕಾರ 16 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿ ಆದೇಶ ಹೊರಿಡಿಸಿದೆ. ಇದರ ಬೆನ್ನಲ್ಲೇ ಇದೀಗ ಮತ್ತೆ 6 ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ಆದೇಶಿಸಿದೆ. 

click me!