ಲಸಿಕೆ ಸುಳ್ಳು ವದಂತಿಗೆ ಕೇಂದ್ರದ ಉತ್ತರ, ಕೆಂಪುಕೋಟೆ ವಶಪಡಿಸಲು ಹುನ್ನಾರ; ಮೇ.27ರ ಟಾಪ್ 10 ಸುದ್ದಿ!

By Suvarna NewsFirst Published May 27, 2021, 5:12 PM IST
Highlights

ಲಸಿಕೆ ಅಭಾವ ಸೇರಿದಂತೆ ಹಲವು ಸುಳ್ಳು ವದಂತಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಯಾಸ್ ಚಂಡಮಾರುತಕ್ಕೆ ನಲುಗಿದ ಒಡಿಶಾ, ಪಶ್ಚಿಮ ಬಂಗಾಳಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಕೆಂಪು ಕೋಟೆ ವಶಪಡಿಸಲು ರೈತರು ಸಂಚು ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಡೇವಿಡ್ ವಾರ್ನರ್‌ಗೆ ಯಶ್ ಮೇಲೆ ಲವ್, ಡಿಜಿಟಲ್ ನಿಯಮದಿಂದ ಖಾಸಗಿ ಹಕ್ಕಿಗೆ ಬರುತ್ತಾ ಭಂಗ? ಮೇ.27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಯಾಸ್ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾ, ಬಂಗಾಳಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ!...

ಯಾಸ್ ಅಬ್ಬರಕ್ಕೆ ನಲುಗಿದ ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ(ಮೇ.27) ಭೇಟಿ ನೀಡಿಲಿದ್ದಾರೆ.

ಬ್ಲ್ಯಾಕ್‌ ಫಂಗಸ್‌ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ ಸರ್ಕಾರದ ಈ ನಿರ್ಧಾರ!...

ಭಾರತದಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಹೀಗಿರುವಾಗ ಇದನ್ನು ನಿಯಂತ್ರಿಸಲು ಭಾರತ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಸದ್ಯಕ್ಕೀಗ ಸರ್ಕಾರ ಈ ಫಂಗಸ್‌ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಆಂಪೊಟೆರಿಸಿನ್ ಬಿ ಲಸಿಕೆ ಲಭ್ಯತೆ ಹೆಚ್ಚಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದನೆ ಹೆಚ್ಚಿಸಲು ಐದು ಹೆಚ್ಚುವರಿ ಕಂಪನಿಗಳಿಗೆ ಲೈಸೆನ್ಸ್ ನೀಡಿದೆ. 

ಕೆಂಪುಕೋಟೆ ವಶಪಡಿಸಲು ಸಂಚು ನಡೆದಿತ್ತು;ಟ್ರಾಕ್ಟರ್ ರ‍್ಯಾಲಿ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!...

ದೆಹಲಿ ಕೆಂಪು ಕೋಟೆ ಮುತ್ತಿಗೆ ಹಾಕಿ ವಶಪಡಿಸಿಕೊಂಡ, ರೈತರ ಪ್ರತಿಭಟನಾ ಕೇಂದ್ರವನ್ನಾಗಿ ಮಾಡಲು ಸಂಚು ನಡೆಸಲಾಗಿತ್ತು ಎಂದು ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.

ತಮ್ಮದೇ ಸಿನಿಮಾಕ್ಕೆ 45 ಕೋಟಿ ರೂ ಪಡೆದಿದ್ದ ಧೋನಿ..!...

ವಿಶ್ವ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಎಂ.ಎಸ್‌.ಧೋನಿಯ ಜೀವನಾಧಾರಿತ ಸಿನಿಮಾವನ್ನು ಬಹುತೇಕ ಎಲ್ಲಾ ಕ್ರಿಕೆಟ್‌ ಪ್ರೇಮಿಗಳು ನೋಡಿರುತ್ತಾರೆ. 2016ರಲ್ಲಿ ತೆರೆ ಕಂಡಿದ್ದ ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ ಸಿನಿಮಾಕ್ಕೆ ಧೋನಿ ಬರೋಬ್ಬರಿ 45 ಕೋಟಿ ರು. ಪಡೆದಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಡೇವಿಡ್ ವಾರ್ನರ್‌ಗೆ ಯಶ್ ಮೇಲೆ ಲವ್: KGF2ಗಾಗಿ ವೈಟಿಂಗ್...

ಸಿನಿಮಾ ಶೂಟಿಂಗ್ ಇರಲಿ, ಇಲ್ಲದಿರಲಿ ಸಿನಿಮಾ ಸ್ಟಾರ್‌ಗಳು ಹೇಗೆ ಸದ್ದು ಮಾಡ್ತಿದ್ದಾರೋ ಅದೇ ರೀತಿ ಕ್ರಿಕೆಟಿಗರು ಸುದ್ದಿಯಲ್ಲಿದ್ದಾರೆ. ಕ್ರಿಕೆಟರ್ ಡೇವಿಡ್ ವಾರ್ನರ್‌ಗೆ ಈಗ ಯಶ್ ಮೇಲೆ ಸಿಕ್ಕಾಪಟ್ಟೆ ಲವ್.

ಹೊಸ ಡಿಜಿಟಲ್ ನಿಯಮಗಳಿಂದ ನಿಮ್ಮ ಖಾಸಗಿ ಹಕ್ಕಿಗೆ ಭಂಗ ಬರುತ್ತಾ?...

ಸೋಷಿಯಲ್ ಮೀಡಿಯಾಗಳ ಮೇಲೆ ನಿಯಂತ್ರಣ ಸಾಧಿಸಲು ಅನುಕೂಲವಾಗುವ ಕೇಂದ್ರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು ಬಳಕೆದಾರರ ಖಾಸಗಿ ಹಕ್ಕನ್ನು ಉಲ್ಲಂಘಿಸುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಣೆ ನೀಡಿದೆ. ಆದರೆ, ವಾಟ್ಸಾಪ್ ಸೇರಿದಂತೆ ಕೆಲವು ಸೋಷಿಯಲ್ ಮೀಡಿಯಾಗಳು ಖಾಸಗಿ ಹಕ್ಕಿಗೆ ಭಂಗ ಬರಲಿದೆ ಎಂದು ವಾದ ಮಾಡುತ್ತಿವೆ.

ಲಾಕ್‌ಡೌನ್ ಕಾರಣ ಕಾರು ತೆಗೆಯುವಂತಿಲ್ಲ; ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ ನಿರ್ವಹಣೆಗೆ 7 ಟಿಪ್ಸ್!...

ಲಾಕ್‍ಡೌನ್ ಕಾರಣ ವಾಹನಗಳನ್ನು ಪಾರ್ಕಿಂಗ್‌‌ನಿಂದ ತೆಗೆಯುವಂತಿಲ್ಲ. ತುರ್ತು ಹಾಗೂ ಅಗತ್ಯವಸ್ತುಗಳ ಖರೀದಿಗೆ ಹೊರತು ಪಡಿಸಿ ವಾಹನ ಓಡಾಟಕ್ಕೆ ಅವಕಾಶವೂ ಇಲ್ಲ. ಹೀಗಾಗಿ ಲಾಕ್‌ಡೌನ್‌ ವೇಳೆ ಪಾರ್ಕ್ ಮಾಡಿರುವ ವಾಹನ ನಿರ್ವಹಣೆ ಸವಾಲಾಗಿದೆ. ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಮ್. ಈ ರೀತಿ ಕಾರು ಪಾರ್ಕ್‌ಮಾಡಿದಲ್ಲೇ ನಿಂತಿದ್ದರೆ ವಾಹನ ಕೆಟ್ಟು ಹೋಗಲಿದೆ. ಇದಕ್ಕಾಗಿ ಫೋರ್ಡ್ ಇಂಡಿಯಾ ಮಹತ್ವದ 7 ಸಲಹೆಗಳನ್ನು ನೀಡಿದೆ.  

ಲಸಿಕೆ ಬಗ್ಗೆ ವಿಪಕ್ಷಗಳಿಂದ ಸುಳ್ಳು: ಪ್ರತೀ ವದಂತಿಗೂ ಉತ್ತರಿಸಿದ ಕೇಂದ್ರ!...

ಭಾರತದಲ್ಲಿ ಕೊರೋನಾ ವೈರಸ್‌ ನಿಯಂತ್ರಿಸುವ ಸಲುವಾಗಿ ವಿಶ್ವದ ಬಹದುದೊಡ್ಡ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಈವರೆಗೂ ಸುಮಾರು 20 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಹೀಗಿರುವಾಗ ಕೆಲ ರಾಜ್ಯಗಳು ಲಸಿಕೆ ಕೊರತೆ ಇದೆ ಎಂದು ದೂರಿವೆ. ಇನ್ನು ಕೆಲ ರಾಜ್ಯಗಳು ಲಸಿಕೆ ಕೊರತೆ, ವಿದೇಶಗಳಿಂದ ಲಸಿಕೆ ಖರೀದಿಸದ್ದಕ್ಕೆ ಕೇಂದ್ರವೇ ಹೊಣೆ ಎಂದು ದೂರಿವೆ

ಯೋಗೇಶ್ವರ್‌ ವಿರುದ್ಧ ಬಿಜೆಪಿಯಲ್ಲಿ ಭಾರೀ ಅಸಮಾಧಾನ : ಕೈ ತಪ್ಪುತ್ತಾ ಸಚಿವ ಸ್ಥಾನ?...

ಯೋಗೇಶ್ವರ್ ಅವರನ್ನ ಕ್ಯಾಬಿನೆಟ್ ನಿಂದ ಕಿತ್ತು ಹಾಕಿದರೆ ಬಂಡಾಯ ನಿಲ್ಲುತ್ತದೆ ಎಂದು ತುಮಕೂರಿನಲ್ಲಿ ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಹೇಳಿದರು. 

100 ಮೀ. ಕ್ಯೂ ಇದ್ದರೆ ಟೋಲ್ ಕಟ್ಟಬೇಕಾಗಿಲ್ಲ, ಹೊಸ ರೂಲ್ಸ್!...

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸುಗಮವಾಗಿ ಮತ್ತು ತ್ವರಿತವಾಗಿ ಸಾಗಬೇಕು, ಪ್ರತಿ ವಾಹನವು 10 ಸೆಕೆಂಡ್‌ಗಳಿಗಿಂತ ಹೆಚ್ಚು ಕಾಯಬಾರದು ಎಂದು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಹೊಸ ನಿಯಮಗಳು ಜಾರಿಗೊಳ್ಳಲಿದ್ದು, ಇನ್ಮುಂದೆ 100 ಮೀಟರ್‌ಗಿಂತ ಹೆಚ್ಚು ದೂರ ವಾಹನಗಳ ಕ್ಯೂ ಇದ್ರೆ ಟೋಲ್ ಪ್ಲಾಜಾಗಳಲ್ಲಿ ಟೋಲ್ ಫೀ ಕಟ್ಟಬೇಕಾಗಿಲ್ಲ.

click me!