Asianet Suvarna News Asianet Suvarna News

ಬ್ಲ್ಯಾಕ್‌ ಫಂಗಸ್‌ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ ಸರ್ಕಾರದ ಈ ನಿರ್ಧಾರ!

* ಬ್ಲ್ಯಾಕ್‌ ಪಂಗಸ್‌ ನಿಯಂತ್ರಣಕ್ಕೆ ಸರ್ಕಾರದ ಯತ್ನ

* 5 ಕಂಪನಿಗೆ ಲಸಿಕೆ ಉತ್ಪಾದಿಸಲು ಲೈಸೆನ್ಸ್

* ಫಂಗಸ್‌ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಆಂಪೊಟೆರಿಸಿನ್ ಬಿ ಲಸಿಕೆ ಲಭ್ಯತೆ ಹೆಚ್ಚಿಸಲು ಈ ಕ್ರಮ

Govt licenses five more manufacturers to make Amphotericin B to treat Black Fungus pod
Author
Bangalore, First Published May 27, 2021, 11:51 AM IST

ನವದೆಹಲಿ(ಮೇ.27): ಭಾರತದಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಹೀಗಿರುವಾಗ ಇದನ್ನು ನಿಯಂತ್ರಿಸಲು ಭಾರತ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಸದ್ಯಕ್ಕೀಗ ಸರ್ಕಾರ ಈ ಫಂಗಸ್‌ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಆಂಪೊಟೆರಿಸಿನ್ ಬಿ ಲಸಿಕೆ ಲಭ್ಯತೆ ಹೆಚ್ಚಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದನೆ ಹೆಚ್ಚಿಸಲು ಐದು ಹೆಚ್ಚುವರಿ ಕಂಪನಿಗಳಿಗೆ ಲೈಸೆನ್ಸ್ ನೀಡಿದೆ. 

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

ಈ ಲಸಿಕೆ ಲಭ್ಯವಿರುವ ವಿಶ್ವದ ಯಾವುದೇ ರಾಷ್ಟ್ರವಾದರೂ ಸರಿ, ಭಾರತಕ್ಕೆ ತನ್ನಿ ಎಂದು ಪಿಎಂ ಮೋದಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ನಿರ್ದೇಶನದ ಬೆನ್ನಲ್ಲೇ ಅಧಿಕಾರಿಗಳು ಈ ಲಸಿಕೆ ಹೊಂದಿಸುವ ಕಾರ್ಯಕ್ಕಿಳಿದಿದ್ದರು. ಭಾರತದ ಈ ಪ್ರಯತ್ನಜಕ್ಕೆ ಅಮೆರಿಕದ ಗಿಲ್ಯಾಡ್ ಸೈನ್ಸಸ್ ಸಹಾಯ ಮಾಡಿತು.

* ಗಿಲ್ಯಾಡ್ ಸೈನ್ಸಸ್, ಮೈಲಾನ್ ಕಂಪನಿಯ ಮೂಲಕ ಭಾರತಕ್ಕೆ ಅಂಬಿಸೋಮ್‌ ಪೂರೈಕೆಗೆ ಮತ್ತಷ್ಟು ವೇಗ ನೀಡುವ ಕೆಲಸ ಮಾಡುತ್ತಿದೆ.

* ಈವರೆಗೆ 121,000 ಲಸಿಕೆಗಳು ದೇಶವನ್ನು ತಲುಪಿವೆ. ಅಲ್ಲದೆ 85,000 ಹೆಚ್ಚುವರಿ ಲಸಿಕೆಗಳು ಶೀಘ್ರದಲ್ಲೇ ಭಾರತಕ್ಕೆ ಬರಲಿವೆ.]

* ಕಂಪನಿಯು ಮೈಲಾನ್ ಮೂಲಕ ಭಾರತಕ್ಕೆ ಒಂದು ಮಿಲಿಯನ್ ಡೋಸ್ ಆಂಬಿಸೋಮ್ ನೀಡಲಿದೆ.

* ಕಂಪನಿಯು ಇತರ ದೇಶಗಳಲ್ಲಿ ಲಭ್ಯವಿರುವ ಸಂಗ್ರಹವನ್ನೂ ಹಿಂತೆಗೆದುಕೊಳ್ಳುತ್ತಿದೆ, ಆ ಮೂಲಕ ಭಾರತಕ್ಕೆ ಈ ಲಸಿಕೆ ಮತ್ತಷ್ಟು ತರಲು ಯತ್ನಿಸುತ್ತಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios