ಐಪಿಎಲ್ ಸ್ಟಾರ್ ಮೊಹಮ್ಮದ್ ಸಿರಾಜ್, ನಟಿ ಮಾಹಿರಾ ಶರ್ಮಾ ಅವರ ಫೋಟೋಗಳಿಗೆ ಲೈಕ್ ಕೊಟ್ಟಿದ್ದಾರೆ. ಇದರಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆಯಾ ಅನ್ನೋ ಗುಸುಗುಸು ಶುರುವಾಗಿದೆ. ಮಾಹಿರಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸಿರಾಜ್ ಈ ರೀತಿ ಮಾಡಿದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗ್ತಿದೆ.
ಐಪಿಎಲ್ 2025 ಮೆಗಾ ಹರಾಜಿನಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಗುಜರಾತ್ ಟೈಟಾನ್ಸ್ 12.75 ಕೋಟಿ ರೂ.ಗಳಿಗೆ ಖರೀದಿಸಿದೆ. ಆದರೆ ಮಿಯಾಂ ಮ್ಯಾಜಿಕ್ ಐಪಿಎಲ್ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡ್ತಿದೆ. ಪಂಜಾಬಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಮಾಹಿರಾ ಶರ್ಮಾ ಜೊತೆ ಸಿರಾಜ್ ಹೆಸರು ತಳುಕು ಹಾಕಿಕೊಳ್ಳಲು ಕಾರಣ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮಾಡಿದ್ದೊಂದು ಕೆಲಸ. ಮಾಹಿರಾ ಮತ್ತು ಸಿರಾಜ್ ನಡುವೆ ಏನು ನಡೀತಿದೆ ಅಂತ ನೋಡೋಣ.
ನಟ ಆಮಿರ್ ಖಾನ್ ವಿವಾದಾತ್ಮಕ ಹೇಳಿಕೆ, ಸಹ ನಟಿಯರ ಜೊತೆಗೆ ವಿಚಿತ್ರ ವರ್ತನೆ!
ಮಾಹಿರಾ ಫೋಟೋಗೆ ಸಿರಾಜ್ ಲೈಕ್: ಪಂಜಾಬಿ ನಟಿ ಮಾಹಿರಾ ಶರ್ಮಾ ನವೆಂಬರ್ 25 ರಂದು ತಮ್ಮ 27 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬಕ್ಕೆ ಎರಡು ದಿನ ಮೊದಲು ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಅವರು ಕಪ್ಪು ಬಣ್ಣದ ಬ್ಯಾಕ್‌ಲೆಸ್ ಸೂಟ್ ಧರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗಿದ್ವು. ಈ ಫೋಟೋಗಳಿಗೆ ಲೈಕ್ ಮಾಡಿದವರಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಅಂದಿನಿಂದ ಮಾಹಿರಾ ಮತ್ತು ಸಿರಾಜ್ ಲಿಂಕ್-ಅಪ್ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮಾಹಿರಾ ಏನ್ ಮಾಡ್ತಾರೆ?: ಮಾಹಿರಾ ಶರ್ಮಾ ಬಿಗ್ ಬಾಸ್ 13 ರ ಸ್ಪರ್ಧಿಯಾಗಿದ್ದರು. ಅವರು ಪಂಜಾಬಿ ಚಿತ್ರಗಳಲ್ಲಿ ಮತ್ತು ಮ್ಯೂಸಿಕ್ ವೀಡಿಯೊಗಳಲ್ಲಿ ಕೆಲಸ ಮಾಡುತ್ತಾರೆ. ಇದಲ್ಲದೆ, ಅವರು ನಾಗಿನ್, ಕುಂಡಲಿ ಭಾಗ್ಯ, ಬೇಪನಾಹ್ ಪ್ಯಾರ್ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಬಗ್ಗೆ ಹೇಳುವುದಾದರೆ, ನವೆಂಬರ್ 24 ರಂದು ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಅವರನ್ನು 12.75 ಕೋಟಿ ರೂ.ಗಳಿಗೆ ಖರೀದಿಸಿತು.
ತೆಲುಗು ಬಿಗ್‌ಬಾಸ್ ನಿಂದ ಎಲಿಮಿನೇಟ್ ಆದ ಕನ್ನಡತಿ ಯಶ್ಮಿಗೆ ನಿಖಿಲ್ ಮೇಲೆ ಫೀಲಿಂಗ್ಸ್ ಇದ್ಯಾ?
ಇದಕ್ಕೂ ಮೊದಲು ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಐಪಿಎಲ್ ಇತಿಹಾಸದಲ್ಲಿ ಅವರು 93 ಪಂದ್ಯಗಳಲ್ಲಿ 93 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರನ್ನು ಮಿಯಾಂ ಮ್ಯಾಜಿಕ್ ಎಂದೂ ಕರೆಯುತ್ತಾರೆ. ಈ ಮಿಯಾಂ ಮ್ಯಾಜಿಕ್ ಈಗ ಮಾಹಿರಾ ಮೇಲೂ ನಡೆಯುತ್ತಿದೆಯಾ? ಆದರೆ, ಇದೆಲ್ಲವೂ ಊಹಾಪೋಹಗಳು ಮಾತ್ರ. ಇಬ್ಬರಿಂದಲೂ ಯಾವುದೇ ದೃಢೀಕರಣ ಬಂದಿಲ್ಲ.