ಟ್ರಾಕ್ಟರ್ ರ‍್ಯಾಲಿ ಕರಾಳ ಸತ್ಯ ಅನಾವರಣ, ಡಿಬಾಸ್‌ಗೆ ಟಾಲಿವುಡ್ ಮಂದಿ ಸನ್ಮಾನ; ಜ.27ರ ಟಾಪ್ 10 ಸುದ್ದಿ!

By Suvarna News  |  First Published Jan 27, 2021, 5:25 PM IST

ರೈತರ ಟ್ರಾಕ್ಟರ್ ರ‍್ಯಾಲಿ ಹಿಂದಿನ ಉದ್ದೇಶಗಳು ಒಂದೊಂದಾಗಿ ಬಯಲಾಗುತ್ತಿದೆ. ಖಲಿಸ್ತಾನ  ಹೋರಾಟ, ದೆಹಲಿ ಕೆಂಪು ಕೋಟೆ ಮುತ್ತಿಗೆ ಸೇರಿದಂತೆ ಎಲ್ಲಾ ಘಟನೆಗಳ ಹಿಂದಿನ ಕರಾಳ ಸತ್ಯ ಬಹಿರಂಗಗೊಳ್ಳುತ್ತಿದೆ.  ಇತ್ತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.  ದರ್ಶನ್‌ಗೆ ಟಾಲಿವುಡ್ ಮಂದಿಯ ಸ್ವಾಗತ, 90ರೂಪಾಯಿ ದಾಟಿದ ಪೆಟ್ರೋಲ್ ದರ ಸೇರಿದಂತೆ ಜ.27ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.


ಸೌರವ್ ಗಂಗೂಲಿಗೆ ಮತ್ತೆ ಕಾಣಿಸಿಕೊಂಡ ಎದೆನೋವು; ಆಸ್ಪತ್ರೆ ದಾಖಲು!...

Latest Videos

undefined

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆ ದಾಖಲಾಗಿದ್ದಾರೆ. ಇತ್ತಚೀಗಷ್ಟೇ ಲಘು ಹೃದಯಾಘಾತದಿಂದ ಚೇತರಿಸಿಕೊಂಡಿದ್ದ ಗಂಗೂಲಿ ಇದೀಗ ಮತ್ತೆ ಆಸ್ಪತ್ರೆ ದಾಖಲಾಗಿದ್ದಾರೆ.

ರೈತರ ತಡೆಯುವಲ್ಲಿ ತಲ್ಲೀನರಾದ ಪೊಲೀಸರು, ಟ್ರ್ಯಾಕ್ಟರ್ ಬಂದದ್ದೂ ತಿಳಿಯಲಿಲ್ಲ: ದುರಂತ ಅಂತ್ಯ!...

ದೆಹಲಿಯ ಕೆಂಪುಕೋಟೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗಿತ್ತು. ಕೊರೋನಾ ಮಹಾಮಾರಿ ಒಂದೆಡೆಯಾದರೆ, ಇತ್ತ ರೈತರ ಪ್ರತಿಭಟನೆಯ ಕಿಚ್ಚು ಇದಕ್ಕೆ ಕಾರಣವಾಗಿತ್ತು. ಇನ್ನು ದೆಹಲಿ ಪೊಲೀಸರು ರೈತರಿಗೆ ಟ್ರಾಕ್ಟರ್ ಪರೇಡ್ ನಡೆಸುವ ಅವಕಾಶ ನೀಡಿದ್ದರಾದರೂ ಷರತ್ತುಗಳನ್ನು ವಿಧಿಸಿದ್ದರು. ಆದರೆ ರೈತರ ಆಕ್ರೋಶಕ್ಕೆ ಎಲ್ಲವೂ ತಲೆ ಕೆಳಗಾಗಿದೆ.

ಕೆಂಪುಕೋಟೆಯಲ್ಲಿ ಸಿಖ್ ಧ್ವಜಾರೋಹಣ ಮಾಡಿದ ದೀಪ್ ಸಿದು ಮಹತ್ವದ ಹೇಳಿಕೆ!...

ಗಣರಾಜ್ಯೋತ್ಸವದಂದು ಕೆಂಪುಕೋಟೆ ಮೇಲಿನ ತ್ರಿವರ್ಣ ಧ್ವಜದ ಬಳಿ ಸಿಖ್ ಧ್ವಜಾರೋಹಣ ಮಾಡಿದ ಆರೋಪ ಸದ್ಯ ದೀಪ್ ಸಿದು ಎಂಬಾತನ ಮೇಲಿದೆ. ಈ ಆರೋಪದ ಬೆನ್ನಲ್ಲೇ ಖುದ್ದು ಸಿದು ಫೇಸ್‌ಬುಕ್ ಮೂಲಕ ಈ ಧ್ವಜಾರೋಹಣ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾರೆ.

ದೆಹಲಿ ದಂಗೆ : 5 ತಿಂಗಳ ಹಿಂದೆಯೇ ಸ್ಕೆಚ್ ನಡೆಸಿತ್ತಾ ಖಲೀಸ್ತಾನ...?...

ಕೇಂದ್ರ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ನಡೆಸಿದ ಹೋರಾಟ ಹಿಂಸಾಚಾರದ ಮೂಲಕ ಅರಾಜಕತೆಯ ಹಾದಿಗೆ ತಿರುಗಿದೆ. ಇದರೊಂದಿಗೆ ಕಳೆದ 60 ದಿನಗಳಿಂದ ಶಾಂತಿಯುತವಾಗಿ ನಡೆಸುತ್ತಿದ್ದ ಹೋರಾಟ ಅರ್ಥ ಕಳೆದುಕೊಂಡು, ಟೀಕೆಗೆ ಗುರಿಯಾಗಿದೆ. 

ಐಪಿಎಲ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಆಟಗಾರ ಹರಾಜು ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ...

 ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಭರದ ಸಿದ್ದತೆ ಮಾಡಿಕೊಳ್ಳುತ್ತಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆಯುವ ಆಟಗಾರ ಹರಾಜು ಎಲ್ಲಿ? ಯಾವಾಗ ನಡೆಯಲಿದೆ ಎನ್ನುವ ಕುತೂಹಲಕ್ಕೆ ಬಿಸಿಸಿಐ ತೆರೆ ಎಳೆದಿದೆ.

ಡಿಬಾಸ್ ಸ್ಟೈಲ್‌ಗೆ ಟಾಲಿವುಡ್ ಮಂದಿ ಫಿದಾ..! ದರ್ಶನ್‌ಗೆ ತೆಲುಗು ಮಂದಿಯ ಸ್ವಾಗತ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಹವಾ ಟಾಲಿವುಡ್‌ನಲ್ಲಿ ಹೆಚ್ಚಾಗಿದೆ. ಟಾಲಿವುಡ್‌ನ ಪ್ರಮುಖ ನಟರ ಅಭಿಮಾನಿಗಳು ರಾಬರ್ಟ್ ಸಿನಿಮಾವನ್ನು ಸ್ವಾಗತಿಸುತ್ತಿದ್ದಾರೆ. ದರ್ಶನ್‌ಗೆ ಟಾಲಿವುಡ್‌ಗೆ ಸ್ವಾಗತ ಎಂದು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ.

ತೈಲ ಬೆಲೆ ಮತ್ತೆ ಏರಿಕೆ: ಬೆಂಗ್ಳೂರಲ್ಲಿ 90 ರು. ಗಡಿಗೆ ಪೆಟ್ರೋಲ್‌ ದರ!...

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಪರ್ವ ಮುಂದುವರಿಕೆ| ಬೆಂಗ್ಳೂರಲ್ಲಿ 90 ರು. ಗಡಿಗೆ ಪೆಟ್ರೋಲ್‌ ದರ| ಎರಡೂ ಉತ್ಪನ್ನಗಳ ದರವನ್ನು ತಲಾ 35 ಪೈಸೆ ಹೆಚ್ಚಳ

ವೋಕಲ್ ಫಾರ್ ಲೋಕಲ್: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ EV!...

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನ ಕೂಡ ಪಾಲ್ಗೊಂಡಿತ್ತು. ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಟಾಟಾ ಕಾರು ಮಿಂಚಿತ್ತು.

ಪ್ರೇಯಸಿ ಮುಖ ನೋಡಲು ತರಕಾರಿ ಮಾರಿಕೊಂಡು ಬಂದವನಿಗೆ ಇದೆಂತಹಾ ಶಿಕ್ಷೆ!...

ಪ್ರೇಯಸಿ ಮುಖ ನೋಡಲು ಆಕೆಯ ಮನೆ ಬಳಿ ತರಕಾರಿ ಮಾರಿಕೊಂಡು ಹೋದ ಯುವಕನನ್ನು ಗ್ರಾಮಸ್ಥರೆಲ್ಲಾ ಸೇರಿ ಹಿಡಿದಿದ್ದಾರೆ. ಸಾಲದೆಂಬಂತೆ ಆತನಿಗೆ ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಕಪ್ಪು ಮಸಿ ಒರಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಊರಿಡೀ ಮೆರವಣಿಗೆ ಮಾಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಕಾನ್ಪುರದ ಮಂಗಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಎನ್ನಲಾಗಿದೆ.

click me!