Asianet Suvarna News Asianet Suvarna News

ವೋಕಲ್ ಫಾರ್ ಲೋಕಲ್: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ EV!

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನ ಕೂಡ ಪಾಲ್ಗೊಂಡಿತ್ತು. ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಟಾಟಾ ಕಾರು ಮಿಂಚಿತ್ತು. ಈ  ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

Republic day parade Tata Nexon EV was kept on tableaux of B ministy for vocal for local ckm
Author
Bengaluru, First Published Jan 27, 2021, 2:23 PM IST

ನವದೆಹಲಿ(ಜ.26):  72ನೇ ಗಣರಾಜ್ಯೋತ್ಸವ ಹಲವು ಕಾರಣಗಳಿಂದ ವಿಶೇಷವಾಗಿತ್ತು. ಕೊರೋನ ವೈರಸ್ ನಡುವೆ ಮುಂಜಾಗ್ರತ ಕ್ರಮಗಳೊಂದಿಗೆ ಗಣತಂತ್ರ ದಿನ ಆಚರಿಸಿಲಾಗಿದೆ. ಈ ಬಾರಿಯ ಪರೇಡ್‌ನಲ್ಲಿ ಎಲ್ಲಾ ಸ್ಥಬ್ದಚಿತ್ರಗಳು ಭಾರತದ ಸಂಸ್ಕೃತಿ, ಪರಂಪರೆ, ವಿಜ್ಞಾನ, ಆವಿಷ್ಕಾರ, ಭದ್ರತೆ ಸೇರಿದಂತೆ ಸಂಪೂರ್ಣ ಭಾರತವವನ್ನು ಪ್ರತಿನಿಧಿಸಿತ್ತು. ಇದರಲ್ಲಿ ವೋಕಲ್ ಫಾರ್ ಲೋಕಲ್ ಸ್ಥಬ್ದಚಿತ್ರದಡಿ ಟಾಟಾ ಮೋಟಾರ್ಸ್ ಕಂಪನಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಕಾಣಿಸಿಕೊಂಡಿತ್ತು.

10 ತಿಂಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದಾಖಲೆ; ಭಾರತದ EV ಲೋಕದಲ್ಲಿ ಹೊಸ ಸಂಚಲನ!.

72ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ 32 ಟ್ಯಾಬ್ಲೋ ಪ್ರದರ್ಶನ ಮಾಡಲಾಯಿತು. ಇದರಲ್ಲಿ ವೋಕಲ್ ಫಾಲ್ ಲೋಕಲ್ ಸ್ಥಬ್ಧಚಿತ್ರ ಪ್ರದರ್ಶನದಲ್ಲಿ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ, 5 ಸ್ಟಾರ್ ಸೇಫ್ಟಿ ಹಾಗೂ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನೆಕ್ಸಾನ್ ಕಾರನ್ನು ಪ್ರದರ್ಶಿಸಲಾಯಿತು.

 

ಲೀಸ್ ಮೂಲಕ ಕಾರು; ಟಾಟಾ ನೆಕ್ಸಾನ್ EV ಮೇಲೆ ಭರ್ಜರಿ ಆಫರ್!

ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ವೋಕಲ್ ಫಾರ್ ಲೋಕಲ್ ಸ್ಥಬ್ದಚಿತ್ರ ಪ್ರದರ್ಶನ ಮಾಡಿದೆ. DRDO ಅಭಿವೃದ್ಧಿ ಪಡಿಸಿದ ಸೇನಾ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಲಾಯಿತು ಇದರಲ್ಲಿ ಟಾಟಾ ನೆಕ್ಸಾನ್ ಕೂಡ ಸೇರಿಕೊಂಡಿತು. ಈ ಮೂಲಕ ಭಾರತದ ಹೆಮ್ಮೆಯ ಟಾಟಾಗೆ ಮತ್ತೊಂದು ಗೌರವ ಸಿಕ್ಕಿದೆ.

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ 13.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 15.99 ಲಕ್ಷ ರೂಪಾಯಿ. ಸಂಪೂರ್ಣ ಚಾರ್ಜ್‌ಗೆ 312 ಕಿಲೋಮೀಟರ್ ಮೈಲೇಜ್ ನೀಡಲಿದೆ.  ಕಾರಿನ ಎಲೆಕ್ಟ್ರಿಕ್ ಮೋಟಾರ್‌ಗೆ 8 ವರ್ಷ ಅಥವಾ 1.6 ಲಕ್ಷ ಕಿಲೋಮೀಟರ್ ವಾರೆಂಟಿ ನೀಡಲಿದೆ.

Follow Us:
Download App:
  • android
  • ios