ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸದಿದ್ದರೆ, ಸಮಾರಂಭ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಕೊರೋನಾ ನಿರ್ವಣೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಶ್ರೀರಾಮುಲು ಲೆಕ್ಕ ಕೊಟ್ಟಿದ್ದಾರೆ. ಟ್ವಿಟರ್‌ನಲ್ಲಿ 6 ಕೋಟಿ ಹಿಂಬಾಲಕನ್ನು ಪಡೆದಿರುವ ಮೋದಿ ವಿಶ್ವದ 3ನೇ ನಾಯಕನಾಗಿ ಹೊರಹೊಮ್ಮಿದ್ದಾರೆ. ಸೊಳ್ಳೆಯಿಂದ ಹರಡುತ್ತಾ ಕೊರೋನಾ, ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ ಪತ್ತೆ ಸೇರಿದಂತೆ ಜುಲೈ 20ರ ಟಾಪ್ 10 ಸುದ್ದಿ ಇಲ್ಲಿವೆ.
ಮೋದಿ ಬಾರದಿದ್ದರೆ ಆ.5ರಂದು ಭೂಮಿಪೂಜೆ ಇಲ್ಲ!...
undefined
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಆಗಸ್ಟ್ 5ರ ಸಂಭಾವ್ಯ ದಿನಾಂಕವನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಗದಿ ಮಾಡಿದ್ದರೂ, ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸದಿದ್ದರೆ ಸಮಾರಂಭ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಹೀಗಂತ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್ ಅವರೇ ಹೇಳಿದ್ದಾರೆ.
ಕೊರೋನಾ ನಡುವೆ ಕಡಕ್‌ನಾತ್ ಕೋಳಿಗೆ ಭಾರೀ ಬೇಡಿಕೆ!
ಕೊರೋನಾದಿಂದಾಗಿ ಪ್ರೊಟೀನ್ ಭರಿತ ‘ಕಡಕ್‌ನಾತ್’ ಕೋಳಿ ತಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆಯಂತೆ. ಮದ್ಯಪ್ರದೇಶದ ಬುಡಕಟ್ಟು ಜಿಲ್ಲೆ ಜಬುವಾದಿಂದ ಈ ಕೋಳಿಯ ತಳಿ ದೇಶಾದ್ಯಂತ ಮಾರಾಟವಾಗುತ್ತಿದ್ದು, ಕೊರೋನಾದಿಂದಾಗಿ ಬೇಡಿಕೆಯಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಜಬುವಾದ ಕೃಷಿ ವಿಜ್ಞಾ ನ ಕೇಂದ್ರ ಹೇಳಿದೆ. ಲಾಕ್‌ಡೌನ್ ವೇಳೆ ಸಂಚಾರಕ್ಕೆ ನಿಯಂತ್ರಣ ಇದ್ದಿದ್ದರಿಂದ ಬೇಡಿಕೆಯಲ್ಲಿ ಕುಸಿಯ ಉಂಟಾಗಿತ್ತು.
ಟ್ವೀಟರ್‌ನಲ್ಲಿ ಮೋದಿಗೆ 6 ಕೋಟಿ ಹಿಂಬಾಲಕರು: ವಿಶ್ವದ 3ನೇ ನಾಯಕ...
ಟ್ವೀಟರ್‌ನಲ್ಲಿ 6 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಮತ್ತೊಂದು ದಾಖಲೆ ಬರೆದಿದ್ದಾರೆ. 2009ರಲ್ಲಿ ಟ್ವೀಟರ್ ಪ್ರವೇಶಿಸಿದ್ದ ನರೇಂದ್ರ ಮೋದಿ, ಇದೀಗ 6 ಕೋಟಿ ಹಿಂಬಾಲಕರೊಂದಿಗೆ, ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಮತ್ತು ಒಟ್ಟಾರೆ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವವರ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಏರಿದ್ದಾರೆ.
ಭ್ರಷ್ಟಾಚಾರ ಆರೋಪ: ಲೆಕ್ಕ ಕೊಟ್ಟ ಶ್ರೀರಾಮುಲು, ಅವ್ಯವಹಾರ ಸಾಬೀತಾದ್ರೆ ರಾಜೀನಾಮೆ ಸವಾಲ್...
ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಜನರ ದುಡ್ಡನ್ನು ಕೊಳ್ಳೆ ಹೊಡೆದಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಆರೋಗ್ಯ ಸಚಿವ ಶ್ರೀರಾಮುಲು ಲೆಕ್ಕ ಕೊಟ್ಟಿದ್ದಾರೆ.
BCCI ಒಂದೇ ತಪ್ಪಿಗೆ ಡೆಕ್ಕನ್ ಚಾರ್ಜರ್ಸ್‌ಗೆ 4800 ಕೋಟಿ ಪರಿಹಾರ..!
ಅವಧಿಗಿಂತ ಮೊದಲೇ ಟೂರ್ನಿಯಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಕಿಕೌಟ್ ಮಾಡಿದ ತಪ್ಪಿಗೆ ಇದೀಗ ಬಿಸಿಸಿಐ ಬರೋಬ್ಬರಿ 4 ಸಾವಿರ ಕೋಟಿ ರುಪಾಯಿಗೂ ಅಧಿಕ ದಂಡ ತೆರಬೇಕಾದ ಪರಿಸ್ಥಿತಿ ಎದುರಾಗಿದೆ.
ಇದು ಮನೆಯಲ್ಲ ಹೃತಿಕ್ ರೋಷನ್‌ರ ಕಸ್ಟಮೈಸ್ಡ್ ಕಾರು!
ಬಾಲಿವುಡ್‌ನ ಹಲವು ಸ್ಟಾರ್ಸ್‌ಗೆ ತರತರದ ಕಾರುಗಳ ಗೀಳಿದೆ. ದುಬಾರಿ ಕಾರುಗಳು ಮಾಲೀಕರೂ ಹೌದು. ಆಗಾಗ ಅವರ ಕಾರುಗಳ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುತ್ತವೆ. ಸದ್ಯಕ್ಕೆ ನಟ ಹೃತಿಕ್ ರೋಷನ್ ಕಾರು ಚರ್ಚೆಯಲ್ಲಿದ್ದು, ಅದರ ಪೋಟೋಗಳು ವೈರಲ್ ಆಗುತ್ತಿವೆ. ಕ್ರಿಶ್ ನಟನ ಮಾಡಿಫೈಡ್ ಕಾರು ಐಷಾರಾಮಿ ಮನೆಗಿಂತ ಕಡಿಮೆಯಿಲ್ಲ. ಇಲ್ಲಿವೆ ಕಸ್ಟಮೈಸ್ಡ್ ಮರ್ಸಿಡಿಸ್ ವಿ-ಕ್ಲಾಸ್ ಫೋಟೋಗಳು.
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ವಿನ್ಯಾಸ, ಮತ್ತಷ್ಟು ಆಕರ್ಷಕ ಹ್ಯುಂಡೈ i20!...
ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಹ್ಯುಂಡೈ ಐ20 ಕಾರು ಅತ್ಯಂತ ಜನಪ್ರಿಯವಾಗಿದೆ. ಆರಾಮದಾಯಕ ಪ್ರಯಾಣ, ಆಕರ್ಷಕ ವಿನ್ಯಾಸ, ಅಗ್ರೆಸ್ಸೀವ್ ಹಾಗೂ ಸ್ಪೋರ್ಟ್ ಲುಕ್‌ನಿಂದ ಐ20 ಬಹುತೇಕರ ನೆಚ್ಚಿನ ಕಾರಾಗಿದೆ. ಇದೀಗ ಹೆಚ್ಚುವರಿ ಫೀಚರ್ಸ್, ಮಹತ್ವದ ಬದಲಾವಣೆ, ಮತ್ತಷ್ಟು ಆಕರ್ಷಕ ವಿನ್ಯಾಸದೊಂದಿಗೆ ಹ್ಯುಂಡೈ ಐ20 ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.
ಸೊಳ್ಳೆಯಿಂದ ಹರಡುತ್ತಾ ಕೊರೋನಾ? ಕೊನೆಗೂ ಸಿಕ್ತು ಉತ್ತರ...
ಸೊಳ್ಳೆಗಳಿಂದಲೂ ಕೊರೋನಾ ಹರಡುತ್ತದೆ ಎಂಬುದು ಬರೀ ಊಹಾಪೋಹ ಎಂದು ಅಧ್ಯಯನವೊಂದರಿಂದ ದೃಢಪಟ್ಟಿದೆ. ‘ಈ ಮುನ್ನ ವಿಶ್ವಸಂಸ್ಥೆಯು ಸೊಳ್ಳೆಯಿಂದ ಕೊರೋನಾ ಹರಡಲ್ಲ ಎಂದು ಸ್ಪಷ್ಟನೆ ನೀಡಿತ್ತು. ನಮ್ಮ ಅಧ್ಯಯನ ಅದನ್ನು ದೃಢಪಡಿಸಿದೆ.
ನಾಪತ್ತೆಯಾಗಿದ್ದ ಡ್ರೋಣ್ ಪ್ರತಾಪ್ ಮೈಸೂರಲ್ಲಿ ಪತ್ತೆ..!...
ಹೋಂ ಕ್ವಾರಂಟೈನ್ ಉಲ್ಲಂಘಿಸಿರುವುದಕ್ಕೆ ಪ್ರತಾಪ್ ವಿರುದ್ಧ ತಲಘಟ್ಟಪುರದಲ್ಲಿ FIR ದಾಖಲಾಗಿತ್ತು. ಇದರ ಬೆನ್ನಲ್ಲೇ ಡ್ರೋಣ್ ಪ್ರತಾಪ್ ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಾಪ್ ಜಾಡು ಹಿಡಿದು ಹುಡುಕಾಟ ನಡೆಸಿದ್ದರು.
ಕೈ ಕೆಸರಾಗಿಲ್ಲ, ಗದ್ದೆ ಕೆಲಸ ಮಾಡ್ತಿಲ್ಲ; ಸಲ್ಮಾನ್ ವಿರುದ್ಧ ಹೇಳಿಕೆಗೆ ಈ ವಿಡಿಯೋ ಸಾಕ್ಷಿ!...
ಬಾಲಿವುಡ್ ಸುಲ್ತಾನ್, ಬ್ಯಾಡ್ ಬಾಯ್ ಸಲ್ಮಾನ್ ಖಾನ್ ವಿರುದ್ಧ ಆರೋಪಗಳು ಹರಿದಾಡುವುದು ಸರ್ವೇ ಸಾಮಾನ್ಯ. ಅದರಲ್ಲೂ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದ ನಂತರವಂತೂ ಸಲ್ಲು ಏನೇ ಕೆಲಸ ಮಾಡಿದ್ದರೂ ಅದು ಸಿಂಪತಿ ಪಡೆದುಕೊಳ್ಳಲು ಎಂಬ ರೀತಿಯಲ್ಲಿ ಮಾತುಗಳು ಹರಿದಾಡುತ್ತಿದ್ದವು.