ನವದೆಹಲಿ(ಜು.20): ಟ್ವೀಟರ್‌ನಲ್ಲಿ 6 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಮತ್ತೊಂದು ದಾಖಲೆ ಬರೆದಿದ್ದಾರೆ. 2009ರಲ್ಲಿ ಟ್ವೀಟರ್‌ ಪ್ರವೇಶಿಸಿದ್ದ ನರೇಂದ್ರ ಮೋದಿ, ಇದೀಗ 6 ಕೋಟಿ ಹಿಂಬಾಲಕರೊಂದಿಗೆ, ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಮತ್ತು ಒಟ್ಟಾರೆ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವವರ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಏರಿದ್ದಾರೆ.

ಜಾಗತಿಕ ನಾಯಕರ ಪೈಕಿ 12.7 ಕೋಟಿ ಹಿಂಬಾಲಕರೊಂದಿಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮೊದಲ ಸ್ಥಾನದಲ್ಲಿ ಮತ್ತು 8.37 ಕೋಟಿ ಹಿಂಬಾಲಕರೊಂದಿಗೆ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡನೇ ಸ್ಥಾನದಲ್ಲಿದ್ದಾರೆ.

ಅ.5ಕ್ಕೆ ರಾಮಮಂದಿರಕ್ಕೆ ಮೋದಿ ಭೂಮಿಪೂಜೆ: ಪೂಜಾ ಕೈಂಕರ್ಯಗಳಲ್ಲಿ ಮೋದಿ ಭಾಗಿ ಸಾಧ್ಯತೆ!

ಮೋದಿ ಸೋಶಿಯಲ್‌ ಮಿಡಿಯಾ ಮೇನಿಯಾ

ಖಾತೆ ಹಿಂಬಾಲಕರು

ಟ್ವೀಟರ್‌ 6 ಕೋಟಿ

ಫೇಸ್ಬುಕ್‌ 4.6 ಕೋಟಿ

ಇನ್ಸ್ಟಾಗ್ರಾಂ 4.54 ಕೋಟಿ

ಲಿಂಕ್‌್ಡ ಇನ್‌ 35 ಲಕ್ಷ