Asianet Suvarna News Asianet Suvarna News

ನಾಪತ್ತೆಯಾಗಿದ್ದ ಡ್ರೋಣ್ ಪ್ರತಾಪ್ ಮೈಸೂರಲ್ಲಿ ಪತ್ತೆ..!

ಹೋಂ ಕ್ವಾರಂಟೈನ್ ಉಲ್ಲಂಘಿಸಿರುವುದಕ್ಕೆ ಪ್ರತಾಪ್ ವಿರುದ್ಧ ತಲಘಟ್ಟಪುರದಲ್ಲಿ FIR ದಾಖಲಾಗಿತ್ತು. ಇದರ ಬೆನ್ನಲ್ಲೇ ಡ್ರೋಣ್ ಪ್ರತಾಪ್ ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಾಪ್ ಜಾಡು ಹಿಡಿದು ಹುಡುಕಾಟ ನಡೆಸಿದ್ದರು.

ಮೈಸೂರು(ಜು.20): ಹೋಂ ಕ್ವಾರಂಟೈನ್ ಉಲ್ಲಂಘಿಸಿ ನಾಪತ್ತೆಯಾಗಿದ್ದ ಡ್ರೋಣ್ ಪ್ರತಾಪ್ ಇದೀಗ ಮೈಸೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಕೈಗೆ ಹೋಂ ಕ್ವಾರಂಟೈನ್ ಸೀಲ್ ಹಾಕಿದ್ದರೂ ಡ್ರೋಣ್ ಪ್ರತಾಪ್ ಹೊರಗಡೆ ಸುತ್ತಾಡಿರುವುದು ಬೆಳಕಿಗೆ ಬಂದಿತ್ತು.

ಹೋಂ ಕ್ವಾರಂಟೈನ್ ಉಲ್ಲಂಘಿಸಿರುವುದಕ್ಕೆ ಪ್ರತಾಪ್ ವಿರುದ್ಧ ತಲಘಟ್ಟಪುರದಲ್ಲಿ FIR ದಾಖಲಾಗಿತ್ತು. ಇದರ ಬೆನ್ನಲ್ಲೇ ಡ್ರೋಣ್ ಪ್ರತಾಪ್ ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಾಪ್ ಜಾಡು ಹಿಡಿದು ಹುಡುಕಾಟ ನಡೆಸಿದ್ದರು.

ಕಲರ್ ಕಲರ್ ಕಾಗೆ ಹಾರಿಸಿ ಕುರಿ ಮಾಡಿದ್ರಾ 'ಡ್ರೋಣ್ ಪ್ರತಾಪ್'?

ಡ್ರೋಣ್ ಪ್ರತಾಪ್ ಅವರನ್ನು ಬೆಂಗಳೂರಿಗೆ ಕರೆತಂದು ಕ್ವಾರಂಟೈನ್ ಮಾಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಆದರೆ ಪ್ರತಾಪ್ ಮಾತ್ರ ತಾವು ಮೈಸೂರಿನಲ್ಲೇ ಕ್ವಾರಂಟೈನ್ ಆಗುವುದಾಗಿ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories