ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಅಭಿನಂದನ್ ವರ್ಧಮಾನ್ ಪೋಸ್ಟರ್ ಕಾಣಿಸಿಕೊಂಡಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ಮೋದಿ ಹೇಳಿದ್ದಾರೆ. ಲವ್ ಜಿಹಾದ್ ನಡೆಸುವರಿಗೆ ಕಾದಿದೆ ಕಠಿಣ ಶಿಕ್ಷೆ. 28 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ, ಸ್ವಲ್ಪ ಯಾಮಾರಿದ್ರೂ ಸಾಕು RCB ಲೀಗ್ ಹಂತದಲ್ಲೇ ಔಟ್ ಸೇರಿದಂತೆ ನವೆಂಬರ್ 1ರ ಟಾಪ್ 10 ನ್ಯೂಸ್ ಇಲ್ಲಿವೆ.
ಲಾಹೋರ್‌ನಲ್ಲಿ ಮೋದಿ, ವರ್ತಮಾನ್ ಪೋಸ್ಟರ್!...
undefined
ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್ ಸೇರಿದಂತೆ ಹಲವು ನಗರಗಳಲ್ಲಿ ಭಾರತೀಯ ವಾಯುಪಡೆಯ ವಿಂಗ್‌ಕಮಾಂಡರ್ ಅಭಿನಂದನ್ ವರ್ತಮಾನ್, ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟರ್‌ಗಳು ಶನಿವಾರ ದಿಢೀರನೆ ಪ್ರತ್ಯಕ್ಷವಾಗಿವೆ.
ಲವ್ ಜಿಹಾದ್ ನಡೆಸಿದರೆ ‘ಅಂತಿಮ ಯಾತ್ರೆ’!...
ಲವ್ ಜಿಹಾದ್ ವಿರುದ್ಧ ಸುಗ್ರೀವಾಜ್ಞೆ ಹೊರಡಿಸುವ ಸುಳಿವು ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ಬಲವಂತದ ಮತಾಂತರ ನಡೆಸುವವರ ‘ರಾಮ ನಾಮ್ ಸತ್ಯ ಹೈ’ (ಅಂತಿಮ ಯಾತ್ರೆ) ನಡೆಸಲಾಗುವುದು’ ಎಂದು ಗುಡುಗಿದ್ದಾರೆ.
ಅಯೋಧ್ಯೆ ಮಂದಿರಕ್ಕೆ ಭೂಮಿ ಪೂಜೆ ನಡೆದಲ್ಲೇ 28 ವರ್ಷ ಬಳಿಕ ದೀಪಾವಳಿ!...
ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಸ್ಥಳದಲ್ಲೇ ಈ ಬಾರಿ ಅದ್ಧೂರಿ ದೀಪಾವಳಿ ಆಚರಣೆಗೆ ನಿರ್ಧರಿಸಲಾಗಿದೆ. ಆ ಸ್ಥಳದಲ್ಲಿ ದೀಪಾವಳಿ ನಡೆಯುತ್ತಿರುವುದು 28 ವರ್ಷಗಳ ಬಳಿಕ. ಭೂಮಿಪೂಜೆ ನಡೆದ ಸ್ಥಳ ಸೇರಿ ಇಡೀ ಅಯೋಧ್ಯೆಯಲ್ಲಿ ಸಂಭ್ರಮದಲ್ಲಿ ಹಬ್ಬ ಆಚರಣೆಗೆ ನಿರ್ಧರಿಸಲಾಗಿದೆ
ದೇಶದ ಪ್ರತಿಪ್ರಜೆಗೂ ಕೊರೋನಾ ಲಸಿಕೆ: ಹಿರಿಯರು, ಮೊದಲ ಆದ್ಯತೆ!...
ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೊರೋನಾ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ವಾಗ್ದಾನ ಮಾಡಿದ್ದಾರೆ.
ಅಯ್ಯೋ.. ಹೀಗಾಗದೇ ಇರಲಿ; ಸ್ವಲ್ಪ ಯಾಮಾರಿದ್ರೂ ಸಾಕು RCB ಲೀಗ್ ಹಂತದಲ್ಲೇ ಔಟ್..!...
ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವುದರ ಮೂಲಕ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೈದರಾಬಾದ್ ಎದುರಿನ ಸೋಲು ಕೊಹ್ಲಿ ಪಡೆಯನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.
3 ವರ್ಷವಿದ್ದಾಗ ಲೈಂಗಿಕ ದೌರ್ಜನ್ಯ: ಭಯಾನಕ ಘಟನೆ ನೆನಪಿಸಿದ ಬಾಲಿವುಡ್ ನಟಿ...
ದಂಗಲ್ ಸಿನಿಮಾ ಮೂಲಕ ಹಿಟ್ ಆದ ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಎಲ್ಲರಿಗೂ ಗೊತ್ತು. ಸಿಂಪಲ್ ಸುಂದರಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್...
ದಸರೆ ಮತ್ತು ದೀಪಾವಳಿ ಬಂತೆಂದರೆ ಸಾಕು ಹೊಸ ವಾಹನಗಳ ಖರೀದಿಯ ಭರಾಟೆಯನ್ನು ನಾವು ಎಲ್ಲ ಕಡೆ ಕಾಣುತ್ತೇವೆ. ಈ ಬಾರಿ ಮಾತ್ರ ಹೊಸ ಕಾರುಗಳಿಗಿಂತ ಹಳೆಯ ಕಾರುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂಬುದು ಅಧ್ಯಯನ ವರದಿಯೊಂದು ತಿಳಿಸಿದೆ.
ನಿಮ್ಮ ಮತ ಕೈಗೆ, ನಿಮ್ಮ ಮತ ಕಾಂಗ್ರೆಸ್‌ಗೆ: ಬಿಜೆಪಿ ನಾಯಕ ಸಿಂಧಿಯಾ ಎಡವಟ್ಟು!...
ಮಧ್ಯಪ್ರದೇಶದಲ್ಲಿ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿರುವ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್‌ಗೆ ಮತ ನೀಡಿ ಎನ್ನುವ ಮೂಲಕ ಮುಜುಗರಕ್ಕೊಳಗಾಗಿದ್ದಾರೆ.
ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ನಿಧನ...
ಕೊರೋನಾ ಸೋಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಆಸ್ಪತ್ರೆಯೇ ದೃಢಪಡಿಸಿದೆ.
ಮುಂದಿನ ವರ್ಷ ಐಪಿಎಲ್ ಆಡ್ತಾರಾ ಧೋನಿ? ಟಾಸ್ ವೇಳೆ ಸೀಕ್ರೆಟ್ ಹೇಳಿದ CSK ನಾಯಕ!...
13ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೇಸರದಿಂದ ಹೊರನಡೆದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಅಂತಿಮ ಪಂದ್ಯದೊಂದಿದೆ ಸಿಎಸ್‌ಕೆ ಟೂರ್ನಿಗೆ ವಿದಾಯ ಹೇಳಿದೆ. ಆದರೆ ಇದು ಧೋನಿಯ ಕೊನೆಯ ಪಂದ್ಯವೇ ಎಂಬ ಪ್ರಶ್ನೆಗೆ ಧೋನಿ ಉತ್ತರಿಸಿದ್ದಾರೆ.