ಇಸ್ಲಾಮಾಬಾದ್‌(ನ.01): ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್‌ ಸೇರಿದಂತೆ ಹಲವು ನಗರಗಳಲ್ಲಿ ಭಾರತೀಯ ವಾಯುಪಡೆಯ ವಿಂಗ್‌ಕಮಾಂಡರ್‌ ಅಭಿನಂದನ್‌ ವರ್ತಮಾನ್‌, ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟರ್‌ಗಳು ಶನಿವಾರ ದಿಢೀರನೆ ಪ್ರತ್ಯಕ್ಷವಾಗಿವೆ.

ಈ ಪೋಸ್ಟರ್‌ಗಳಲ್ಲಿ ಪಾಕಿಸ್ತಾನದ ಸಂಸದ ಅಯಾಜ್‌ ಸಾಧಿಕ್‌ ಅವರ ಫೋಟೋಗಳನ್ನೂ ಮುದ್ರಿಸಲಾಗಿದೆ. ಅಭಿನಂದನ್‌ ಅವರನ್ನು ವಶಕ್ಕೆ ಪಡೆದ ವೇಳೆ ಪಾಕ್‌ ಸೇನಾ ಮುಖ್ಯಸ್ಥ ಬಾಜ್ವಾ ಅವರು ನಡುಗುತ್ತಿದ್ದರು ಎಂಬು ಸಂಸದ ಅಜಾಜ್‌ ಹೇಳಿಕೆ ನೀಡಿದ್ದರು. ಇದಕ್ಕೆ ಪಾಕ್‌ನಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

ಅದರ ಬೆನ್ನಲ್ಲೇ ಅಯಾಜ್‌ ಫೋಟೋಕ್ಕೆ ಅಭಿನಂದನ್‌ ರೀತಿಯಲ್ಲೇ ಮೀಸೆಯನ್ನು ಹಾಕಿ ದೇಶದ್ರೋಹಿ ಎಂದು ಟೀಕಿಸಿ ಪೋಸ್ಟರ್‌ಗಳನ್ನು ಮುದ್ರಿಸಿ ಎಲ್ಲೆಡೆ ಅಂಟಿಸಲಾಗಿದೆ. ತನ್ಮೂಲಕ ಅಯಾಜ್‌ ವಿರೋಧಿ ಗುಂಪಿನವರು ಅಯಾಜ್‌ ಭಾರತದ ಪರ ಹಾಗೂ ಪಾಕಿಸ್ತಾನದ ದ್ರೋಹಿ ಎಂಬಂತೆ ಬಿಂಬಿಸಿದ್ದಾರೆ.