ನವದೆಹಲಿ (ನ.11): ದೆಹಲಿಯಲ್ಲಿ ನಡೆದ ಕಾರು ಸ್ಫೋಟದಲ್ಲಿ ಇಲ್ಲಿಯವರೆಗೂ 9 ಮಂದಿ ಬಲಿಯಾಗಿದ್ದಾರೆ. ಇದು ಆಕಸ್ಮಿಕ ಘಟನೆಯೋ ಅಥವಾ ಭಯೋತ್ಪಾದಕರ ಆತ್ಮಾಹುತಿ ದಾಳಿಯೋ? ಎನ್ನುವ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಐತಿಹಾಸಿಕ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿಯಲ್ಲಿಯೇ ಈ ಘಟನೆ ನಡೆದಿದೆ. ದೇಹಗಳು ಸಂಪೂರ್ಣ ಛಿದ್ರವಾಗಿದ್ದವು. 20 ಜನರಿಗೆ ಗಂಭೀರವಾಗಿ ಗಾಯವಾಗಿದ್ದರೆ, 9 ವಾಹನಗಳು ಸುಟ್ಟು ಭಸ್ಮವಾಗಿದೆ. ಇದರ ಬೆನ್ನಲ್ಲಿಯೇ ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, 3 ಟೆರರ್ ಡಾಕ್ಟರ್‌ಗಳು ಸೇರಿ 11 ಉಗ್ರರ ಬಂಧನವಾಗಿದೆ. 3 ಟನ್ ಸ್ಫೋಟಕ ವಶ ಬೆನ್ನಲ್ಲಿಯೇ ಈ ಘಟನೆ ನಡೆದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:44 PM (IST) Nov 11
ದೆಹಲಿ ಸ್ಫೋಟದ ಶಂಕಿತ ಆರೋಪಿ ಶಾಹೀನ್ ಸಹೋದರ ಅರೆಸ್ಟ್, ಸತತ ಐದು ಗಂಟೆ ವಿಚಾರಣೆ ನಡೆಸಿ ಪರ್ವೇಜ್‌ನ ಬಂಧಿಸಲಾಗಿದೆ. ದೆಹಲಿ ಸ್ಫೋಟದ ಹಿಂದೆ ಉಗ್ರರ ಕೈವಾಡದ ಹಲವು ಸಾಕ್ಷ್ಯಗಳು ತನಿಖಾ ತಂಡದ ಕೈಸೇರಿದೆ.
09:07 PM (IST) Nov 11
ಬಾಂಬ್ ಸ್ಫೋಟಕ್ಕೆ ಭಾರತ ಕಾರಣ ಎಂದ ಪಾಕಿಸ್ತಾನ ಪ್ರಧಾನಿ, ಹೊಣೆ ಹೊತ್ತ ಟಿಟಿಪಿ ಉಗ್ರ ಸಂಘಟನೆ, 12 ಮಂದಿ ಸಾವಿಗೆ ಕಾರಣವಾಗಿರುವ ಬಾಂಬ ಸ್ಫೋಟದ ಕುರಿತು ಆರೋಪಗಳು ನಡೆಯುತ್ತಿದ್ದು, ಶಹೆಬಾಜ್ ಷರೀಪ್, ಭಾರತವೇ ಹೊಣೆ ಎಂದಿದ್ದಾರೆ.
08:12 PM (IST) Nov 11
Bihar Exit Polls ಬಿಹಾರದಲ್ಲಿ ಮತ್ತೆ ಬಿಜೆಪಿ-ಜೆಡಿಯು ಸರ್ಕಾರ, ಮಹಾಘಟಬಂದನ್, ಪಿಕೆ ತಿರಸ್ಕಾರ , ಪ್ರಮುಖ ಎಜೆನ್ಸಿಗಳ ಸಮೀಕ್ಷೆ ಪ್ರಕಟಗೊಂಡಿದೆ. ಈ ಸಮೀಕ್ಷೆಗಳು ಬಿಜೆಪಿ-ಜೆಡಿಯು, ಮಹಾಘಟನಬಂದನ್ ಹಾಗೂ ಜನ ಸೂರಾಜ್‌ಗೆ ನೀಡಿದ ಸ್ಥಾನವೆಷ್ಟು?
07:13 PM (IST) Nov 11
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, ಪ್ರಕರಣದ ಶಂಕಿತ ಆತ್ಮಾಹುತಿ ಬಾಂಬರ್ ಡಾ. ಉಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಸ್ಫೋಟದ ಬಗ್ಗೆ ತನ್ನ ಪತ್ನಿಗೆ ಮುನ್ಸೂಚನೆ ನೀಡಿದ್ದನೇ ಎಂಬ ಅನುಮಾನ ತನಿಖೆ ವೇಳೆ ವ್ಯಕ್ತವಾಗಿದೆ.
07:00 PM (IST) Nov 11
Bihar Exit Polls ಬಿಹಾರ ಚುನಾವಣೆ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಗೆ ಗೆಲುವು , ಬಹುತೇಕ ಎಜೆನ್ಸಿಗಳ ಎಕ್ಸಿಟ್ ಪೋಲ್ ಫಲಿತಾಂಶ ಬಹಿರಂಗವಾಗಿದ್ದು, ಎಲ್ಲಾ ಮತಗಟ್ಟೆ ಸಮೀಕ್ಷೆ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದಿದೆ.
06:33 PM (IST) Nov 11
Bihar Exit Poll ಬಿಹಾರ ಮತಗಟ್ಟೆ ಸಮೀಕ್ಷೆ ಬಹಿರಂಗ, 131 ಸ್ಥಾನದೊಂದಿಗೆ ಎನ್‌ಡಿಎಗೆ ಬಹುಮತ, ಬಿಹಾರದ ಎರಡು ಹಂತದ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಬಹಿರಂಗಗೊಂಡಿದೆ.
06:05 PM (IST) Nov 11
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಆ ಸಮಯದಲ್ಲಿ ಅವರ ಆಮ್ಲಜನಕದ ಮಟ್ಟ 50%ಕ್ಕೆ ಇಳಿದಿತ್ತು. ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಅಯ್ಯರ್ ಹೊರಗುಳಿಯುವ ಸಾಧ್ಯತೆ ಇದೆ.
05:17 PM (IST) Nov 11
ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡವು ದೆಹಲಿಯನ್ನು ಮಣಿಸಿ ಐತಿಹಾಸಿಕ ಜಯ ದಾಖಲಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್ರಾನ್ ಇಕ್ಬಾಲ್ ಅವರ ಅಜೇಯ ಶತಕದ ನೆರವಿನಿಂದ ಜಮ್ಮು ಮತ್ತು ಕಾಶ್ಮೀರ ತಂಡವು 179 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿತು.
05:08 PM (IST) Nov 11
ಶಾಲಾ ಮಕ್ಕಳಿಗೆ ಹೈಬ್ರಿಡ್ ಮಾಡೆಲ್ ಘೋಷಿಸಿದ ಸರ್ಕಾರ, 3 ದಿನ ಕ್ಲಾಸ್ ಇನ್ನುಳಿದ ದಿನ ಆನ್‌ಲೈನ್ ಕ್ಲಾಸ್ ನಡೆಸಲು ಸೂಚಿಸಲಾಗಿದೆ. ದಿಢೀರ್ ಸರ್ಕಾರ ಶಾಲಾ ಮಕ್ಕಳಿಗೆ ಆಫ್ ಲೈನ್ ಕ್ಲಾಸ್ ಘೋಷಿಸಿದ್ದೇಕೆ?
05:05 PM (IST) Nov 11
Odisha girl tortured in USA: ಅಮೆರಿಕನ್ ದಂಪತಿಯಿಂದ 7 ವರ್ಷಗಳ ಹಿಂದೆ ದತ್ತು ಪಡೆಯಲ್ಪಟ್ಟ ಒಡಿಶಾದ ಯುವತಿಯೊಬ್ಬಳು, ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾಳೆ. ತನ್ನನ್ನು ರಕ್ಷಿಸಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾಳೆ.
04:27 PM (IST) Nov 11
ದೆಹಲಿ ಸ್ಫೋಟದ ಕುರಿತು ಆಗಸ್ಟ್‌ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಆಪರೇಶನ್ ಸಿಂದೂರ್2 ಸುಳಿವು ನೀಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಕೆಲ ತಿಂಗಳ ಹಿಂದೆ ಭವಿಷ್ಯ ನುಡಿದಿದ್ದರು.
04:21 PM (IST) Nov 11
2026ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತೀಯ ತಂಡದ ಆಯ್ಕೆ ಬಗ್ಗೆ ಚರ್ಚೆ ಜೋರಾಗಿದೆ. ನಿತೀಶ್ ಕುಮಾರ್ ರೆಡ್ಡಿ ತಂಡದಿಂದ ಹೊರಗುಳಿಯುವುದು ಖಚಿತ ಎನ್ನುತ್ತಿದ್ದಾರೆ ತಜ್ಞರು, ಆದರೆ ಹರ್ಷಿತ್ ರಾಣಾಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆ ವಿವರಗಳು ಏನು ಗೊತ್ತಾ?
03:32 PM (IST) Nov 11
03:15 PM (IST) Nov 11
Pakistan blast: ಪಾಕಿಸ್ತಾನ ರಾಜಧಾನಿಯ ಹೃದಯಭಾಗದಲ್ಲಿ ಸಂಭವಿಸಿದ ಸ್ಫೋಟಕ್ಕೆ ಇಸ್ಲಾಮಾಬಾದ್ ನ್ಯಾಯಾಲಯ ಸಂಕೀರ್ಣದಲ್ಲಿ ನಿಲ್ಲಿಸಿದ್ದ ವಾಹನದೊಳಗೆ ಅಳವಡಿಸಲಾದ ಗ್ಯಾಸ್ ಸಿಲಿಂಡರ್ ಕಾರಣ ಎಂದು ಶಂಕಿಸಲಾಗಿದೆ.
02:30 PM (IST) Nov 11
Thulluvadho Ilamai actor Abhinay death: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳಿನ ನಟ ಅಭಿನಯ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ಒಂಟಿಯಾಗಿ ವಾಸಿಸುತ್ತಿದ್ದ ಅಭಿನಯ್ ಸೋಮವಾರ ಮುಂಜಾನೆ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
01:35 PM (IST) Nov 11
Nithari Serial Killings Surender Koli Acquitted ದೇಶವನ್ನೆ ಬೆಚ್ಚಿ ಬೀಳಿಸಿದ್ದ 2005-2006ರ ನಿಥಾರಿ ಸರಣಿ ಹತ್ಯೆ ಪ್ರಕರಣದ ಆರೋಪಿ ಸುರೀಂದರ್ ಕೋಲಿಯನ್ನು ಸುಪ್ರೀಂ ಕೋರ್ಟ್ ಕೊನೆಯ ಪ್ರಕರಣದಲ್ಲೂ ದೋಷಮುಕ್ತಗೊಳಿಸಿದೆ.
01:28 PM (IST) Nov 11
ನವದೆಹಲಿ: ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶಮಿ ಸಂಪೂರ್ಣ ಫಿಟ್ ಆಗಿದ್ದರೂ, ಭಾರತ ತಂಡದಿಂದ ಅವರನ್ನು ಹೊರಗಿಟ್ಟಿರುವುದೇಕೆ ಎನ್ನುವ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.
01:08 PM (IST) Nov 11
Bathing in a moving train: ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿಯಾಗಲು ವ್ಯಕ್ತಿಯೊಬ್ಬ ಚಲಿಸುವ ರೈಲಿನ ಬೋಗಿಯೊಳಗೆ ಸ್ನಾನ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ನಂತರ ರೈಲ್ವೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
12:23 PM (IST) Nov 11
2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ, ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಕಳಪೆ ಪ್ರದರ್ಶನ ನೀಡಿದ ಲಿವಿಂಗ್‌ಸ್ಟೋನ್ ಮತ್ತು ಲುಂಗಿ ಎಂಗಿಡಿ ಸೇರಿದಂತೆ ಒಟ್ಟು 5 ಆಟಗಾರರನ್ನು ತಂಡದಿಂದ ಕೈಬಿಡುವ ಬಗ್ಗೆ ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ.
12:07 PM (IST) Nov 11
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದ ನಂತರ, ಭಯೋತ್ಪಾದಕ ಕೃತ್ಯದ ಶಂಕೆಯ ನಡುವೆ ಭಾರತೀಯ ರಕ್ಷಣಾ ವಲಯದ ಷೇರುಗಳು ಭಾರಿ ಏರಿಕೆ ಕಂಡಿವೆ. ಮಾರುಕಟ್ಟೆ ಕುಸಿದಿದ್ದರೂ, MTAR ಟೆಕ್ನಾಲಜೀಸ್, ಡೇಟಾ ಪ್ಯಾಟರ್ನ್ಸ್‌ನಂತಹ ಷೇರುಗಳು ಗಣನೀಯ ಲಾಭ ಗಳಿಸಿವೆ.
11:11 AM (IST) Nov 11
ಕ್ರಿಕೆಟಿಗ ಸಂಜು ಸ್ಯಾಮ್ಸನ್ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಅವರ ವರ್ಗಾವಣೆಯ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಹುಟ್ಟುಹಬ್ಬದ ದಿನವೇ ಸಿಎಸ್‌ಕೆ ಕಡೆಯಿಂದ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.
10:44 AM (IST) Nov 11
ಮೂಲಗಳ ಪ್ರಕಾರ, ಫರಿದಾಬಾದ್ ಭಯೋತ್ಪಾದಕ ಘಟಕದ ಶಂಕಿತ ಭಯೋತ್ಪಾದಕ ಮೊಹಮ್ಮದ್ ಉಮರ್, ಫರಿದಾಬಾದ್‌ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಇಲ್ಲಿಯವರೆಗೂ 9 ಮಂದಿ ಸಾವು ಕಂಡಿದ್ದಾರೆ.
10:03 AM (IST) Nov 11
ಹಿರಿಯ ನಟ ಧರ್ಮೇಂದ್ರ ನಿಧನದ ಸುಳ್ಳು ಸುದ್ದಿ ಹರಡಿದ ಬೆನ್ನಲ್ಲೇ, ಅವರ ಪುತ್ರಿ ಇಶಾ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
09:39 AM (IST) Nov 11
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026ರ ಹರಾಜಿಗೂ ಮುನ್ನ ರವೀಂದ್ರ ಜಡೇಜಾರನ್ನು ಟ್ರೇಡ್ ಮಾಡುವ ಸಾಧ್ಯತೆ ಇದೆ. ಅವರ ಬದಲಿಗೆ ಮೂವರು ಆಟಗಾರರ ಪಟ್ಟಿ ಇಲ್ಲಿದೆ.
08:57 AM (IST) Nov 11
ಹಿರಿಯ ನಟ ಧರ್ಮೇಂದ್ರ 89 ನೇ ವಯಸ್ಸಿನಲ್ಲಿ ನಿಧನರಾದರು. ಉಸಿರಾಟದ ಸಮಸ್ಯೆಯಿಂದಾಗಿ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
08:49 AM (IST) Nov 11
07:54 AM (IST) Nov 11
ಎನ್‌ಡಿಎ ಮತ್ತು ಇಂಡಿಯಾ ಕೂಟದ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗಿದ್ದ ಬಿಹಾರದಲ್ಲಿ 2ನೆಯ ಹಾಗೂ ಕೊನೆಯ ಹಂತದ ಚುನಾವಣೆ ನ.11ರಂದು ನಡೆಯಲಿದೆ. ಈ ಹಂತದಲ್ಲಿ 122 ಕ್ಷೇತ್ರಗಳಲ್ಲಿ 1302 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
07:54 AM (IST) Nov 11
ಭದ್ರತಾ ಪಡೆಗಳು ಭಾನುವಾರವಷ್ಟೇ ಗುಜರಾತ್‌ನಲ್ಲಿ ಮೂವರು ಮತ್ತು ಸೋಮವಾರ ಕಾಶ್ಮೀರದಲ್ಲಿ 8 ಉಗ್ರರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿರುವುದು, ಇದು ಉಗ್ರ ಕೃತ್ಯವಿರಬಹುದು ಎಂಬ ಶಂಕೆಗೆ ಕಾರಣವಾಗಿದೆ.
07:53 AM (IST) Nov 11
ಇಲ್ಲಿನ ಕೆಂಪುಕೋಟೆಯ ಬಳಿ ಸಂಭವಿಸಿದ ಸ್ಫೋಟದ ಭೀಕರತೆಯನ್ನು ಕೆಲ ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟಿದ್ದಾರೆ. ‘ರಸ್ತೆಯ ಮೇಲೆಲ್ಲಾ ಕೆಲವರ ಶ್ವಾಸಕೋಶ, ತುಂಡಾದ ಕೈ ಸೇರಿದಂತೆ ದೇಹದ ಭಾಗಗಳು ಛಿದ್ರವಾಗಿ ಬಿದ್ದದ್ದು ಕಾಣಿಸಿತು.
07:53 AM (IST) Nov 11
ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ವಿಶ್ವಪ್ರಸಿದ್ಧ ತಿರುಪತಿ ದೇಗುಲಕ್ಕೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ವೇಳೆ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಹಾಲನ್ನೇ ಖರೀದಿ ಮಾಡದ ಉತ್ತರಾಖಂಡ ಮೂಲದ ಕಂಪನಿ 68 ಲಕ್ಷ ಕೆಜಿಯಷ್ಟು ಭಾರೀ ಪ್ರಮಾಣದ ತುಪ್ಪ ನಕಲಿ ಪೂರೈಕೆ ಮಾಡಿತ್ತು.
07:52 AM (IST) Nov 11
ಗ್ಯಾರಂಟಿ ಘೋಷಿಸಿ ಭಾರತೀಯ ಮೂಲದ ಮಮ್ದಾನಿ ಅಮೆರಿಕದ ನ್ಯೂಯಾರ್ಕ್‌ನ ಮೇಯರ್ ಹುದ್ದೆ ಗೆದ್ದ ಬೆನ್ನಲ್ಲೇ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಗ್ಯಾರಂಟಿ ಭಾಗ್ಯ ಘೋಷಿಸಿದ್ದಾರೆ.
07:52 AM (IST) Nov 11
ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗುತ್ತಿರುವ ಬಾಂಗ್ಲಾದೇಶ ಇದೀಗ ಭಾರತ ವಿರೋಧಿ ಉಗ್ರರಿಗೂ ನೆಲೆಯಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
07:52 AM (IST) Nov 11
ಬ್ಯಾಂಕ್‌ಗಳಲ್ಲಿ ಚಿನ್ನ ಅಡ ಇಟ್ಟುಕೊಂಡು ಸಾಲ ನೀಡುವ ವ್ಯವಸ್ಥೆಯನ್ನು ಇದೀಗ ಬೆಳ್ಳಿಗೂ ಆರ್‌ಬಿಐ ವಿಸ್ತರಿಸಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿಯ ಸಾಲ ಮತ್ತು ಮರುಪಾವತಿಗೆ ಗಡುವು ವಿಧಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 2026ರ ಏ.1ರಿಂದ ಈ ಹೊಸ ನೀತಿ ಜಾರಿಗೆ ಬರಲಿದೆ.
07:51 AM (IST) Nov 11
ಕೆಮಿಕಲ್ ಬಾಂಬ್ ದಾಳಿಗೆ ಸಜ್ಜಾಗಿದ್ದ ಉಗ್ರನೊಬ್ಬ ಗುಜರಾತ್‌ನಲ್ಲಿ ಸೆರೆ ಸಿಕ್ಕ ಬೆನ್ನಲ್ಲೇ ದೇಶವ್ಯಾಪಿ ಕಂಡುಕೇಳರಿಯದ ರೀತಿಯ ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ ಮೂವರು ಕಾಶ್ಮೀರಿ ವೈದ್ಯರು ಸೇರಿದಂತೆ 8 ಉಗ್ರರ ಜಾಲವನ್ನು ಭೇದಿಸುವಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ.
07:51 AM (IST) Nov 11
ಕಾರು ಸ್ಫೋಟದಿಂದ ಹಲವರು ಮೃತರಾಗಿರುವುದು ತೀವ್ರ ಆಘಾತ ತಂದಿದೆ. ಹೆಚ್ಚಿನ ಭದ್ರತೆ ಹಾಗೂ ದಟ್ಟಣೆ ಇರುವ ಸ್ಥಳದಲ್ಲಿ ನಡೆದಿರುವ ಸ್ಫೋಟದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
07:50 AM (IST) Nov 11
ಮೈಸೂರು-ಬೆಂಗಳೂರು ಪೊಲೀಸರ ಜೊತೆ ಮಾತನಾಡಿದ್ದೇನೆ. ದೆಹಲಿಯಲ್ಲಿ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.