ದೆಹಲಿ ಸ್ಫೋಟದ ಕುರಿತು ಆಗಸ್ಟ್‌ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಆಪರೇಶನ್ ಸಿಂದೂರ್2 ಸುಳಿವು ನೀಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಕೆಲ ತಿಂಗಳ ಹಿಂದೆ ಭವಿಷ್ಯ ನುಡಿದಿದ್ದರು. 

ನವದೆಹಲಿ (ನ.11) ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣ ದೇಶಾದ್ಯಂತ ಹೈ ಅಲರ್ಟ್ ಸಂದರ್ಭ ಸೃಷ್ಟಿಸಿದೆ. ದೆಹಲಿ ಕಾರು ಸ್ಫೋಟದ ಹಿಂದೆ ಉಗ್ರರ ಕೈವಾಡಗಳು ಸ್ಪಷ್ಟವಾಗುತ್ತಿದೆ. ಕೆಲ ಶಂಕಿತ ಉಗ್ರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರು ಸ್ಫೋಟ ಪ್ರಕರಣದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉಗ್ರರ ಕೈವಾಡದ ಕುರಿತು ಎನ್ಐಎ ಸೇರಿದಂತೆ ಪ್ರಮುಖ ತನಿಖಾ ಎಜೆನ್ಸಿಗಳು ತನಿಖೆ ನಡೆಸುತ್ತಿದೆ. ಇದೀಗ ಈ ದೆಹಲಿ ಕಾರು ಸ್ಫೋಟದ ಕುರಿತು ಆಗಸ್ಟ್ ತಿಂಗಳಲ್ಲೇ ಭಾರತದ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು. ಇಷ್ಟೇ ಅಲ್ಲ ಡಿಸೆಂಬರ್ ತಿಂಗಳಲ್ಲಿ ಪಾಕಿಸ್ತಾನ ಜೊತೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಆಗಸ್ಟ್ ತಿಂಗಳಲ್ಲೇ ಭವಿಷ್ಯ ನುಡಿದಿದ್ದ ಪ್ರಶಾಂತ್ ಕಿಣಿ

ಆಗಸ್ಟ್ 20 ರಂದು ಜ್ಯೋತಿಷಿ ಪ್ರಶಾಂತ್ ಕಿಣಿ ದೆಹಲಿ ಸ್ಫೋಟದ ಕುರಿತು ಸುಳಿವು ನೀಡಿದ್ದರು. ಆಗಸ್ಟ್ 20 ರಂದು ಟ್ವೀಟ್ ಮಾಡಿದ್ದ ಪ್ರಶಾಂತ್ ಕಿಣಿ, ನವೆಬಂಬರ್ ಅಥವಾ ಡಸೆಂಬರ್ ತಿಂಗಳಲ್ಲಿ ಪೆಹಲ್ಗಾಂ 2 ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಕಿಣಿ ಸ್ಪಷ್ಟವಾಗಿ ದೆಹಲಿ ಕಾರು ಸ್ಫೋಟ ಎಂದು ಹೇಳಿಲ್ಲ. ಆದರೆ ಪೆಹಲ್ಗಾಂ ರೀತಿಯ ಉಗ್ರ ದಾಳಿಯೊಂದು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂಬ ಭವಿಷ್ಯವನ್ನು ಹೇಳಿದ್ದರು. ಇದೀಗ ಕಿಣಿ ಭವಿಷ್ಯ ನುಡಿದಂತೆ ನವೆಂಬರ್ 10 ರಂದು ದೆಹಲಿಯಲ್ಲಿ ಕಾರು ಸ್ಫೋಟದಲ್ಲಿ 10 ಮಂದಿ ಮಂದಿ ಮೃತಪಟ್ಟಿದ್ದಾರೆ. ಇದು ಭಯೋತ್ಪಾದಕ ಕೃತ್ಯ ಎಂದು ಪ್ರಶಾಂತ್ ಕಿಣಿ ಹೇಳಿದ್ದಾರೆ.

Scroll to load tweet…

ಆಪರೇಶನ್ ಸಿಂದೂರ್ 2 ಕುರಿತು ಭವಿಷ್ಯ ನುಡಿದಿರುವ ಕಿಣಿ

ಪಹೆಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ಉಗ್ರರ ನೆಲೆ ಧ್ವಂಸಗೊಳಿಸಿತ್ತು. ಬಳಿಕ ಪಾಕಿಸ್ತಾನ ಪ್ರತಿದಾಳಿ ನಡೆಸಿದಾಗ ಭಾರತ ತಿರುಗೇಟು ನೀಡಿತ್ತು. ಭಾರತದ ತಿರುಗೇಟಿಗೆ ಮಂಡಿಯೂರಿದ ಪಾಕಿಸ್ತಾನ ಕದನ ವಿರಾಮಕ್ಕೆ ಮನವಿ ಮಾಡಿತ್ತು. ಹೀಗಾಗಿ ಯುದ್ಧ ಆರಂಭಕ್ಕೂ ಮೊದಲೇ ಅಂತ್ಯಗೊಂಡಿತ್ತು. ಈ ಕುರಿತು ಜ್ಯೋತಿಷಿ ಪ್ರಶಾಂತ್ ಕಿಣಿ ಆಗಸ್ಟ್ 13ರಂದು ಭವಿಷ್ಯ ನುಡಿದಿದ್ದಾರೆ. ಹಲವರು ಬೆಂಬಲಿಗರು ಭಾರತ ಹಾಗೂ ಪಾಕಿಸ್ತಾನ ಯುದ್ಧ ಯಾವಾಗಾ ಎಂದು ಕೇಳುತ್ತಿದ್ದಾರೆ. ನನ್ನ ಉತ್ತರ 2025ರ ಡಿಸೆಂಬರ್ ತಿಂಗಳ 3ನೇ ವಾರ. ಕಾರಣ ಈ ವೇಳೆ ಕೆಲ ಘಟನೆಗಳು ಪಾಕಿಸ್ತಾನ ಮೇಲೆ ಯುದ್ಧ ಮಾಡುವಂತೆ ಮಾಡಲಿದೆ ಎಂದು ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ. ಡಿಸೆಂಬರ್‌ನಲ್ಲಿ ಭಾರತ ಆಪರೇಶನ್ ಸಿಂದೂರ್ 2 ಕಾರ್ಯಾಚರಣೆ ನಡೆಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ರೆಡ್ ಫೋರ್ಟ್ ಭಯೋತ್ಪಾದಕ ಕೃತ್ಯ ಎಂದ ಕಿಣಿ

ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಸ್ಪಷ್ಟವಾಗಿ ಭಯೋತ್ಪಾದಕ ಕೃತ್ಯ ಎಂದು ಪ್ರಶಾಂತ್ ಕಿಣಿ ಹೇಳಿದ್ದಾರೆ. ಪೆಹಲ್ಗಾಂ 2 ರೀತಿಯ ದಾಳಿಗೆ ಭಾರಿ ತಯಾರಿಗಳು ನಡೆದಿದೆ. ಈ ಪೈಕಿ ಒಂದು ದೆಹಲಿ ಕಾರು ಸ್ಫೋಟ. ಭಾರತ ಅತೀವ ಎಚ್ಚರಿಕೆ ವಹಿಸಬೇಕು. ಕಾರಿನ ಸಿಎನ್‌ಜಿ ಸ್ಫೋಟದಿಂದ 10 ಮಂದಿ ಸಾವು, 30 ಮಂದಿ ಗಾಯಗೊಳ್ಳುವುದಿಲ್ಲ. ಕೆಲವರು ಇದನ್ನು ಸಿಎನ್‌ಜಿ ಸ್ಪೋಟ ಎಂದು ಹೇಳುತ್ತಿದ್ದಾರೆ. ಆದರೆ ಇದು ಸ್ಪಷ್ಟವಾಗಿ ಭಯೋತ್ಪಾದಕ ಕೃತ್ಯ ಎಂದು ಕಿಣಿ ಹೇಳಿದ್ದಾರೆ.

Scroll to load tweet…