LIVE NOW
Published : Jan 05, 2026, 06:56 AM ISTUpdated : Jan 05, 2026, 11:53 PM IST

Indian Latest News Live: ಫೆಬ್ರವರಿ ಕೊನೆಯಲ್ಲಿ ಶಿಖರ್‌ ಧವನ್‌ 2ನೇ ಮದುವೆ, ಐರ್ಲೆಂಡ್‌ ಹುಡುಗಿಯ ವರಿಸಲಿರುವ ಕ್ರಿಕೆಟಿಗ

ಸಾರಾಂಶ

ಮುಂಬೈ: ‘ಡ್ರಗ್ಸ್‌ ವ್ಯಾಪಾರದ ಆರೋಪದಲ್ಲಿ ವೆನಿಜುವೆಲಾ ಅಧ್ಯಕ್ಷರನ್ನು ಟ್ರಂಪ್ ಹಿಡಿದು ದೇಶಕ್ಕೆ ಕರೆತಂದಂತೆ ಉಗ್ರ ಮಸೂದ್‌ ಅಜರ್‌ನನ್ನೂ ಪ್ರಧಾನಿ ಮೋದಿ ಪಾಕ್‌ನಿಂದ ಹಿಡಿದು ತರಲಿ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಸಲಹೆ ನೀಡಿದ್ದಾರೆ. ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒವೈಸಿ, ‘ಟ್ರಂಪ್‌ಗೆ ವೆನಿಜುವೆಲಾದ ಅಧ್ಯಕ್ಷ ಮಡುರೋ ಅವರನ್ನು ಅಪಹರಿಸಲು ಸಾಧ್ಯವಾದರೆ ನೀವು ( ಪ್ರಧಾನಿ ಮೋದಿ) ಪಾಕಿಸ್ತಾನಕ್ಕೆ ಹೋಗಿ 26/11 ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ನ್ನು ಭಾರತಕ್ಕೆ ಕರೆ ತರಬಹುದು. ನೀವು ಪಾಕಿಸ್ತಾನಕ್ಕೆ ಹೋಗಿ ಮುಂಬೈ ದಾಳಿ ನಡೆಸಿದ ಕ್ರೂರ ಜನರನ್ನು ಮರಳಿ ಕರೆತರಬಹುದು. ಅದು ಮಸೂದ್‌ ಅಜರ್‌ ಆಗಿರಬಹುದು ಅಥವಾ ಎಲ್‌ಇಟಿಯ ಕ್ರೂರ ರಾಕ್ಷಸರಾಗಿರಬಹುದು’ ಎಂದಿದ್ದಾರೆ.

Shikhar dhawan-sophie shine

11:53 PM (IST) Jan 05

ಫೆಬ್ರವರಿ ಕೊನೆಯಲ್ಲಿ ಶಿಖರ್‌ ಧವನ್‌ 2ನೇ ಮದುವೆ, ಐರ್ಲೆಂಡ್‌ ಹುಡುಗಿಯ ವರಿಸಲಿರುವ ಕ್ರಿಕೆಟಿಗ

Shikhar Dhawan to Marry Sophie Shine in Feb 2026; Details Inside ಮೂಲಗಳ ಪ್ರಕಾರ, ವಿವಾಹವು ಅದ್ದೂರಿಯಾಗಿ ನಡೆಯಲಿದ್ದು, ದೆಹಲಿ NCR ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.

 

Read Full Story

11:03 PM (IST) Jan 05

ಡ್ರಗ್ಸ್‌, ತೈಲ ಎಲ್ಲವೂ ಕುಂಟುನೆಪ..ವೆನುಜುವೇಲ ಮೇಲೆ ಅಮೆರಿಕ ದಾಳಿ ಮಾಡಿದ್ದಕ್ಕೆ ಇದೊಂದೇ ಕಾರಣ..

ಅಮೆರಿಕವು ವೆನುಜುವೇಲದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ದಾಳಿಯ ಹಿಂದಿನ ನಿಜವಾದ ಕಾರಣ ಕೇವಲ ತೈಲವಲ್ಲ, ಬದಲಾಗಿ ತನ್ನ 'ಪೆಟ್ರೋಡಾಲರ್‌' ವ್ಯವಸ್ಥೆಯನ್ನು ರಕ್ಷಿಸಿಕೊಳ್ಳುವ ಅಮೆರಿಕದ ತಂತ್ರವಾಗಿದೆ.

Read Full Story

10:46 PM (IST) Jan 05

ಕಪ್ಪೆ ಲೋಕದ ರೋಚಕ ರೊಮಾನ್ಸ್‌ - ಇಷ್ಟವಿಲ್ಲದ ಗಂಡು ಹತ್ರ ಬಂದ್ರೆ ಹೇಗೆ ಚಳ್ಳೆಹಣ್ಣು ತಿನ್ಸತ್ತೆ ನೋಡಿ ಹೆಣ್​ ಕಪ್ಪೆ!

ಗಂಡು ಕಪ್ಪೆಗಳು ಸಂಯೋಗಕ್ಕೆ ಬಂದಾಗ, ಇಷ್ಟವಿಲ್ಲದ ಹೆಣ್ಣು ಕಪ್ಪೆಗಳು ಸತ್ತಂತೆ ನಟಿಸಿ ತಪ್ಪಿಸಿಕೊಳ್ಳುತ್ತವೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.  ಸಂಶೋಧನೆಯಲ್ಲಿ, ಹೆಣ್ಣು ಕಪ್ಪೆಗಳು ನಿಸ್ತೇಜವಾಗಿ ಬಿದ್ದು, ಗಂಡು ಕಪ್ಪೆಗಳು ದೂರ ಹೋದ ನಂತರ ಮತ್ತೆ ಚಲಿಸುತ್ತವೆ ಎಂಬುದು ತಿಳಿದುಬಂದಿದೆ.

Read Full Story

10:08 PM (IST) Jan 05

ಅಂದದ ಉಗುರಿಗೆ ಮರುಳಾದ ಮಹಿಳೆಗೆ ಚರ್ಮದ ಕ್ಯಾನ್ಸರ್‌! ಬೆಚ್ಚಿಬೀಳಿಸ್ತಿದೆ ಈ ಘಟನೆ- ಮಹಿಳೆಯರೇ ಹುಷಾರ್​

ಕೃತಕ ಉಗುರುಗಳ ಬಳಕೆಯಿಂದ 35 ವರ್ಷದ ಮಹಿಳೆಯೊಬ್ಬರಲ್ಲಿ ಅಪರೂಪದ ಚರ್ಮದ ಕ್ಯಾನ್ಸರ್ (ಸುಬುಂಗುವಲ್‌ ಮೆಲನೋಮಾ) ಪತ್ತೆಯಾಗಿದೆ. ಅಕ್ರಿಲಿಕ್ ಉಗುರುಗಳನ್ನು ಅಂಟಿಸಲು ಬಳಸುವ ಯುವಿ ದೀಪಗಳು ಮತ್ತು ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

Read Full Story

09:16 PM (IST) Jan 05

ವಿವಾಹಿತೆಗೆ ಅಕ್ರಮ ಸಂಬಂಧದಿಂದ ಮಗುವಾದ್ರೆ ಅಪ್ಪ ಯಾರು? ಸುಪ್ರೀಂಕೋರ್ಟ್‌ನಿಂದ ಕುತೂಹಲದ ತೀರ್ಪು

ವಿವಾಹಿತ ಮಹಿಳೆಗೆ ಅಕ್ರಮ ಸಂಬಂಧದಿಂದ ಮಗು ಜನಿಸಿದರೆ, ಆ ಮಗುವಿನ ಕಾನೂನುಬದ್ಧ ತಂದೆ ಆಕೆಯ ಪತಿಯೇ ಆಗಿರುತ್ತಾನೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112ರ ಅಡಿಯಲ್ಲಿ, ಮಗುವಿನ ಘನತೆಯನ್ನು ಕಾಪಾಡಲು ಕೋರ್ಟ್​ ಹೇಳಿದ್ದೇನು?

Read Full Story

08:32 PM (IST) Jan 05

ಬಾಂಗ್ಲಾದೇಶದಲ್ಲಿ ಸಾರ್ವಜನಿಕವಾಗಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಕೊ*ಲೆ, 3 ವಾರದಲ್ಲಿ ಐದನೇ ಘಟನೆ!

5th Hindu Killed in 3 Weeks: Rana Pratap Shot Dead in Bangladesh ಮೃತರನ್ನು ಕೇಶಬಪುರದ ಅರುವಾ ಗ್ರಾಮದ ತುಷಾರ ಕಾಂತಿ ಬೈರಾಗಿ ಅವರ ಪುತ್ರ ರಾಣಾ ಪ್ರತಾಪ್ (45) ಎಂದು ಗುರುತಿಸಲಾಗಿದೆ.

 

Read Full Story

08:01 PM (IST) Jan 05

ನನಗೆ 6 ಮಕ್ಕಳು, ನಿನ್ನನ್ನು ತಡೆದವರು ಯಾರು? ಬಿಜೆಪಿ ನಾಯಕಿ ನವನೀತ್‌ ರಾಣಾಗೆ ತಿರುಗೇಟು ನೀಡಿದ ಓವೈಸಿ

ಬಿಜೆಪಿ ನಾಯಕಿ ನವನೀತ್ ರಾಣಾ ಅವರ 'ಹಿಂದೂಗಳು ನಾಲ್ಕು ಮಕ್ಕಳನ್ನು ಹೊಂದಬೇಕು' ಎಂಬ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ತಿರುಗೇಟು ನೀಡಿದ್ದಾರೆ. ತಮಗೆ ಆರು ಮಕ್ಕಳಿದ್ದು, ನಾಲ್ಕು ಮಕ್ಕಳನ್ನು ಹೊಂದಲು ಯಾರು ತಡೆಯುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Read Full Story

07:03 PM (IST) Jan 05

ಸೆಲೆಕ್ಷನ್ ಕಮಿಟಿ ಬಳಿಕ ಎಲೆಕ್ಷನ್ ಕಮಿಷನ್‌ನಿಂದಲೂ ಶಮಿಗೆ ಶಾಕ್, SIR ಸಂಬಂಧ ಸಮನ್ಸ್

ಸೆಲೆಕ್ಷನ್ ಕಮಿಟಿ ಬಳಿಕ ಎಲೆಕ್ಷನ್ ಕಮಿಷನ್‌ನಿಂದಲೂ ಶಮಿಗೆ ಶಾಕ್, SIR ಸಂಬಂಧ ಸಮನ್ಸ್ ನೀಡಲಾಗಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ಮೊಹಮ್ಮದ್ ಶಮಿ ಹಾಗೂ ಶಮಿ ಸಹೋದರನಿಗೂ ಸಮನ್ಸ್ ನೀಡಲಾಗಿದೆ.

 

Read Full Story

06:32 PM (IST) Jan 05

ದೇಶಾದ್ಯಂತ ಅಬ್ಬರಿಸಿದ ಈ ಭಾರತೀಯ ಸಿನಿಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ, ಸಂಭ್ರಮ ಡಬಲ್

ದೇಶಾದ್ಯಂತ ಅಬ್ಬರಿಸಿದ ಈ ಭಾರತೀಯ ಸಿನಿಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ, ಸಂಭ್ರಮ ಡಬಲ್ ಆಗಿದೆ. 2000 ಸಿನಿಮಾ ಅರ್ಜಿಗಳ ಪೈಕಿ ಗರಿಷ್ಠ 250 ಸಿನಿಮಾ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಭಾರತದ ಸಿನಿಮಾ ಕೂಡ ಸೇರಿಕೊಂಡಿದೆ.

 

Read Full Story

06:31 PM (IST) Jan 05

Breaking - ಅಮೆರಿಕ ಉಪಾಧ್ಯಕ್ಷ JD Vance ಮನೆ ಮೇಲೆ ಗುಂಡಿನ ದಾಳಿ, ಒಬ್ಬನ ಬಂಧನ

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರ ಓಹಿಯೋ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ದಾಳಿ ನಡೆದಾಗ ವ್ಯಾನ್ಸ್‌ ಕುಟುಂಬ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.
Read Full Story

06:20 PM (IST) Jan 05

ಚಾಟ್ ಜಿಪಿಟಿ ಸಲಹೆ ಪಡೆದು 3 ತಿಂಗಳಲ್ಲಿ 27 ಕೇಜಿ ತೂಕ ಇಳಿಸಿದ ಯುವಕ

ಹಸನ್ ಎಂಬ ವ್ಯಕ್ತಿ ಯಾವುದೇ ಜಿಮ್ ಅಥವಾ ತಜ್ಞರ ಸಹಾಯವಿಲ್ಲದೆ, ಕೇವಲ ಚಾಟ್ ಜಿಪಿಟಿ ಬಳಸಿ 3 ತಿಂಗಳಲ್ಲಿ 27 ಕೆಜಿ ತೂಕ ಇಳಿಸಿಕೊಂಡಿದ್ದಾರೆ.ಅವರು ತಮ್ಮ ಡಯಟ್ ಪ್ಲಾನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

05:36 PM (IST) Jan 05

ಭಾರತ-ನ್ಯೂಜಿಲೆಂಡ್ ನಡುವಿನ ಮ್ಯಾಚ್ ಫ್ರೀ ಆಗಿ ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಡೀಟೈಲ್ಸ್

India vs New Zealand ODI Streaming: ಭಾರತ-ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 11ರಿಂದ ಆರಂಭವಾಗಲಿದೆ. ಬನ್ನಿ ನಾವಿಂದು ಎಲ್ಲಿ ಉಚಿತವಾಗಿ ಈ ಪಂದ್ಯವನ್ನು ವೀಕ್ಷಿಸಬಹುದು ಎನ್ನುವುದನ್ನು ತಿಳಿಯೋಣ.

 

Read Full Story

05:31 PM (IST) Jan 05

10 ದಿನಗಳ ಹಿಂದೆ ಮದುವೆ, ಹನಿಮೂನ್‌ಗೆ ಹೋಗೋವಾಗಲೇ ವಿಮಾನ ನಿಲ್ದಾಣದಲ್ಲೇ ಬಿಗ್‌ಬಾಸ್‌ ಸ್ಪರ್ಧಿ ಅರೆಸ್ಟ್‌!

ಸ್ಪ್ಲಿಟ್ಸ್‌ವಿಲ್ಲಾ 13ರ ವಿಜೇತ ಜೇ ದುಧಾನೆ ಅವರನ್ನು ₹5 ಕೋಟಿ ವಂಚನೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹನಿಮೂನ್‌ಗೆ ತೆರಳುತ್ತಿದ್ದ ವೇಳೆ, ನಕಲಿ ದಾಖಲೆ ನೀಡಿ ಅಂಗಡಿಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ

Read Full Story

04:57 PM (IST) Jan 05

ಸದ್ದಿಲ್ಲದೆ ಎಂಗೇಜ್‌ಮೆಂಟ್ ಮುಗಿಸಿ ಅಚ್ಚರಿಕೊಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ

ಸದ್ದಿಲ್ಲದೆ ಎಂಗೇಜ್‌ಮೆಂಟ್ ಮುಗಿಸಿ ಅಚ್ಚರಿಕೊಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ, ಗೆಳೆಯ ಮಂಡಿಯೂರಿ ಮಾಡಿದ ಪ್ರಪೋಸಲ್‌ಗೆ ಕಣ್ಮುಚ್ಚಿ ಯೆಎಸ್ ಎಂದ ಈಕೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂತಸವನ್ನು ಮಾಜಿ ಸ್ಪರ್ಧಿ ಹಂಚಿಕೊಂಡಿದ್ದಾಳೆ.

 

Read Full Story

04:29 PM (IST) Jan 05

ಇಂಟರ್‌ನ್ಯಾಷನಲ್‌ ಲೀವ್ ಇನ್ ರಿಲೇಷನ್‌ಶಿಪ್‌ - ಸೌತ್ ಕೊರಿಯನ್ ಬಾಯ್‌ಫ್ರೆಂಡ್ ಎದೆಬಗೆದ ಮಣಿಪುರದ ಪ್ರೇಯಸಿ

ಗ್ರೇಟರ್ ನೋಯ್ಡಾದಲ್ಲಿ, ತನ್ನ ಜೊತೆ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ದಕ್ಷಿಣ ಕೊರಿಯಾದ ಪ್ರಜೆಯನ್ನು ಮಣಿಪುರದ ಯುವತಿಯೊಬ್ಬಳು ಹತ್ಯೆ ಮಾಡಿದ್ದಾಳೆ. 

Read Full Story

03:42 PM (IST) Jan 05

ಗಾಯಕಿ ಚಿತ್ರಾ ಅಯ್ಯರ್‌ಗೆ ಸರಣಿ ಆಘಾತ - ತಂದೆಯ ಸಾವಾಗಿ ತಿಂಗಳು ಕಳೆಯುವ ಮೊದಲೇ ಸೋದರಿಯೂ ಸಾವು

ಖ್ಯಾತ ಗಾಯಕಿ ಚಿತ್ರಾ ಅಯ್ಯರ್ ಅವರ ಸೋದರಿ, 52 ವರ್ಷದ ಶಾರದಾ ಅಯ್ಯರ್, ಒಮನ್‌ನ ಜೆಬೆಲ್ ಶಾಮ್ಸ್ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುವಾಗ ಸಂಭವಿಸಿದ ದುರಂತದಲ್ಲಿ ನಿಧನರಾಗಿದ್ದಾರೆ. ತಂದೆಯ ಮರಣದ ಒಂದು ತಿಂಗಳೊಳಗೆ ನಡೆದ ಈ ಘಟನೆಯು ಕುಟುಂಬಕ್ಕೆ ಆಘಾತ ತಂದಿದೆ.

Read Full Story

03:30 PM (IST) Jan 05

ಶಾಂತಗೊಂಡಿದ್ದ ಮಣಿಪುರದಲ್ಲಿ ಮೂರು ಐಇಡಿ ಬಾಂಬ್ ಸ್ಫೋಟ, ಇಬ್ಬರಿಗೆ ಗಾಯ

ಶಾಂತಗೊಂಡಿದ್ದ ಮಣಿಪುರದಲ್ಲಿ ಮೂರು ಐಇಡಿ ಬಾಂಬ್ ಸ್ಫೋಟ, ಇಬ್ಬರಿಗೆ ಗಾಯ, ಬೆಳಗಿನ ಜಾವ 2 ಸ್ಫೋಟ ಸಂಭವಿಸಿದರೆ, ಎರಡೂವರೆ ಗಂಟೆ ಬಳಿಕ ಮತ್ತೊಂದು ಐಇಡಿ ಸ್ಫೋಟಗೊಂಡಿದೆ. ಮಣಿಪುರದಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

Read Full Story

03:21 PM (IST) Jan 05

ಈತ ಭಾರತ ಏಕದಿನ ತಂಡದಲ್ಲಿ ಯಾಕಿದ್ದಾನೆ? ಗಾಯಕ್ವಾಡ್ ಬದಲಿಗೆ ಈ ಆಟಗಾರನಿಗೆ ಸ್ಥಾನ ನೀಡಿದ್ದಕ್ಕೆ ಕಿಡಿಕಾರಿದ ಮಾಜಿ ಕ್ರಿಕೆಟರ್!

ಚೆನ್ನೈ: ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಅಜಿತ್‌ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕೆಲವೊಂದು ಅಚ್ಚರಿ ತೀರ್ಮಾನ ತೆಗೆದುಕೊಂಡಿದೆ. ಈ ಪೈಕಿ ಋತುರಾಜ್ ಗಾಯಕ್ವಾಡ್ ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಆಕ್ರೋಶ ಹೊರಹಾಕಿದ್ದಾರೆ.

 

Read Full Story

02:55 PM (IST) Jan 05

ಪಾಕಿಸ್ತಾನದ ರಾಜತಾಂತ್ರಿಕ ಗ್ಯಾಂಬ್ಲಿಂಗ್, ಅಮೆರಿಕ ಜೊತೆಗಿನ ಸ್ನೇಹದಿಂದ ಪ್ರಾದೇಶಿಕ ರಾಜಕಾರಣದ ಮೇಲಿನ ಪರಿಣಾಮ

ಪಾಕಿಸ್ತಾನದ ರಾಜತಾಂತ್ರಿಕ ಗ್ಯಾಂಬ್ಲಿಂಗ್, ಅಮೆರಿಕ ಜೊತೆಗಿನ ಸ್ನೇಹದಿಂದ ಪ್ರಾದೇಶಿಕ ರಾಜಕಾರಣದ ಮೇಲಿನ ಪರಿಣಾಮ ಏನು? ಇಸ್ಲಾಮಾಬಾದ್‌ನ ಹೊಸ ವಿದೇಶಾಂಗ ನೀತಿಯಿಂದ ನೆರೆಹೊರೆಯ ರಾಷ್ಟ್ರಗಳಲ್ಲಿ ಆತಂಕ?

Read Full Story

02:26 PM (IST) Jan 05

ಅಮೆರಿಕದಿಂದ ಮಡುರೊ ಅರೆಸ್ಟ್, ಭಾರತದಿಂದ ಹಫೀದ್ ಬಂಧನ ಆಗಲ್ವಾ? ಓವೈಸಿ ಪ್ರಶ್ನೆಗೆ ಬಿಜೆಪಿ ಉತ್ತರ

ಅಮೆರಿಕದಿಂದ ಮಡುರೊ ಅರೆಸ್ಟ್, ಭಾರತದಿಂದ ಹಫೀದ್ ಬಂಧನ ಆಗಲ್ವಾ? ಓವೈಸಿ ಪ್ರಶ್ನೆಗೆ ಬಿಜೆಪಿ ವಿಶ್ವವೇ ಮೆಚ್ಚುವ ಉತ್ತರ ನೀಡಿದೆ. ವೆನಿಜುವೆಲಾಗೆ ನುಗ್ಗಿ ಅಧ್ಯಕ್ಷರ ಬಂಧಿಸಿದ ನಡೆ ಉಲ್ಲೇಖಿಸಿ ಅಸಾದುದ್ದೀನ್ ಓವೈಸಿ ಮಹತ್ವದ ಪ್ರಶ್ನೆ ಎತ್ತಿದ್ದಾರೆ.

 

Read Full Story

02:22 PM (IST) Jan 05

ವಾಹನ ಹಿಡಿದ ಟ್ರಾಫಿಕ್ ಪೊಲೀಸರಿಗೆ ಹಾವು ತೋರಿಸಿ ಆಟೋದೊಂದಿಗೆ ಎಸ್ಕೇಪ್ ಆದ ಕುಡುಕ - ವೀಡಿಯೋ ವೈರಲ್

ಹೈದರಾಬಾದ್‌ನಲ್ಲಿ ಡ್ರಿಂಕ್ & ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದ ಆಟೋ ಚಾಲಕನೊಬ್ಬ, ಕೇಸ್‌ನಿಂದ ತಪ್ಪಿಸಿಕೊಳ್ಳಲು ಸತ್ತ ಹಾವನ್ನು ತೋರಿಸಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆತಂಕಗೊಂಡ ಸಮಯವನ್ನು ಬಳಸಿಕೊಂಡು, ಚಾಲಕ ತನ್ನ ಆಟೋ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.

Read Full Story

01:32 PM (IST) Jan 05

ಶತಕ ಚಚ್ಚಿ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ಜೋ ರೂಟ್! ಇಂಗ್ಲೆಂಡ್ ಬ್ಯಾಟರ್ ಮುಂದಿನ ಟಾರ್ಗೆಟ್ ಸಚಿನ್ ರೆಕಾರ್ಡ್

ಸಿಡ್ನಿ ಟೆಸ್ಟ್‌ನಲ್ಲಿ ಜೋ ರೂಟ್ (160) ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಅವರ 41ನೇ ಟೆಸ್ಟ್ ಶತಕವಾಗಿದ್ದು, ಈ ಮೂಲಕ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ  ರೂಟ್, ಸಚಿನ್ ಮತ್ತು ಕಾಲಿಸ್ ದಾಖಲೆ ಮುರಿಯುವತ್ತ ಹೆಜ್ಜೆ ಹಾಕಿದ್ದಾರೆ.

Read Full Story

01:01 PM (IST) Jan 05

ಜನವರಿ 27ಕ್ಕೆ ರಾಷ್ಟ್ರವ್ಯಾಪಿ ಮುಷ್ಕರದ ಎಚ್ಚರಿಕೆ, ಬೇಡಿಕೆ ಈಡೇರಿಸಲು ಬ್ಯಾಂಕ್ ನೌಕರರ ಪಟ್ಟು

ಜನವರಿ 27ಕ್ಕೆ ರಾಷ್ಟ್ರವ್ಯಾಪಿ ಮುಷ್ಕರದ ಎಚ್ಚರಿಕೆ, ಬೇಡಿಕೆ ಈಡೇರಿಸಲು ಬ್ಯಾಂಕ್ ನೌಕರರ ಪಟ್ಟು, ವಾರದಲ್ಲಿ 2 ದಿನ ರಜೆ ಸೇರಿದಂತೆ ಹಲವು ಬೇಡಿಕೆ ಈಡೇರಿಕಾಗಿ ಬ್ಯಾಂಕ್ ನೌಕರರು ಮುಷ್ಕರದ ಎಚ್ಚರಿಕ ನೀಡಿದ್ದಾರೆ.

 

Read Full Story

12:47 PM (IST) Jan 05

ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ - ಬಾವಿಗೆ ಬಿದ್ದು ರೈತ ಚಿರತೆ ಇಬ್ಬರೂ ಸಾವು

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಚಿರತೆಯೊಂದು ರೈತನ ಮೇಲೆ ದಾಳಿ ಮಾಡಿದೆ. ಹೋರಾಟದ ವೇಳೆ ಇಬ್ಬರೂ ಬಾವಿಗೆ ಬಿದ್ದು, ರೈತ ಸಾವನ್ನಪ್ಪಿದ್ದಾನೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಚಿರತೆಯ ರಕ್ಷಣೆಗೆ ಅಡ್ಡಿಪಡಿಸಿದ್ದರಿಂದ, ಚಿರತೆಯೂ ಪ್ರಾಣ ಬಿಟ್ಟಿದೆ.
Read Full Story

12:24 PM (IST) Jan 05

ಟಿ20 ವಿಶ್ವಕಪ್‌ನಲ್ಲಿ ಈತನೇ ಭಾರತದ ಎಕ್ಸ್‌ ಫ್ಯಾಕ್ಟರ್ ಎಂದ ಎಬಿ ಡಿವಿಲಿಯರ್ಸ್‌! ಆದ್ರೆ ಅದು ಅಭಿಷೇಕ್, ಬುಮ್ರಾ ಅಲ್ಲ

ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಭಾರತದ ಮೇಲೆ ಎಲ್ಲರ ಕಣ್ಣಿದೆ. ಈ ನಡುವೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ಭಾರತದ ಈ ಆಟಗಾರ ಎಕ್ಸ್‌ ಫ್ಯಾಕ್ಟರ್ ಆಗಬಹುದು ಎಂದು ಎಚ್ಚರಿಸಿದ್ದಾರೆ.

 

Read Full Story

12:21 PM (IST) Jan 05

ಈ ಬಿಗ್ ಬಾಸ್ ವಿನ್ನರ್‌ಗೆ ಇನ್ನೂ ಸಿಕ್ಕಲ್ಲ ಕಾರು, ತಮಾಷೆ ಮಾಡುತ್ತಲೇ ನೋವು ತೋಡಿಕೊಂಡ ಸ್ಪರ್ಧಿ

ಈ ಬಿಗ್ ಬಾಸ್ ವಿನ್ನರ್‌ಗೆ ಇನ್ನೂ ಸಿಕ್ಕಲ್ಲ ಕಾರು, ತಮಾಷೆ ಮಾಡುತ್ತಲೇ ನೋವು ತೋಡಿಕೊಂಡ ಸ್ಪರ್ಧಿ, ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನ ಜೊತೆಗೆ ಕಾರು ಕೂಡ ಆಫರ್ ಮಾಡಲಾಗಿತ್ತು. ಆದರೆ ಇದುವರೆಗೂ ಕಾರು ಸಿಕ್ಕಿಲ್ಲ ಎಂದು ಸ್ವತಃ ವಿನ್ನರ್ ಹೇಳಿದ್ದಾರೆ.

 

Read Full Story

11:58 AM (IST) Jan 05

ಮದುವೆ ಮನೆಯಲ್ಲೇ ಎಎಪಿ ನಾಯಕನ ಭೀಕರ ಹತ್ಯೆ - ಅತಿಥಿಗಳ ಮುಂದೆಯೇ ಗುಂಡಿಕ್ಕಿದ ದುಷ್ಕರ್ಮಿಗಳು

ಪಂಜಾಬ್‌ನಲ್ಲಿ ಅಪರಿಚಿತರ ಗುಂಡಿನ ದಾಳಿ ಮುಂದುವರೆದಿದೆ. ಅಮೃತ್‌ಸರದಲ್ಲಿ ಎಎಪಿ ನಾಯಕ ಸರಪಂಚ್ ಜರ್ನೈಲ್ ಸಿಂಗ್ ಅವರನ್ನು ಮದುವೆ ಸಮಾರಂಭದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದೇವಿಂದರ್ ಬಂಬಿಹಾ ಗ್ಯಾಂಗ್ ಈ ಕೃತ್ಯದ ಹೊಣೆ ಹೊತ್ತಿದೆ.

Read Full Story

11:31 AM (IST) Jan 05

ತುಕಡೆ ತುಕಡೆ ಗ್ಯಾಂಗ್‌ಗೆ ಜೈಲೇ ಗತಿ, ಉಮರ್ ಖಾಲಿದ್, ಶಾರ್ಜಿಲ್ ಇಮಾಮ್‌ ಜಾಮೀನು ಅರ್ಜಿ ವಜಾ

ತುಕಡೆ ತುಕಡೆ ಗ್ಯಾಂಗ್‌ಗೆ ಜೈಲೇ ಗತಿ, ಉಮರ್ ಖಾಲಿದ್, ಶಾರ್ಜಿಲ್ ಇಮಾಮ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂ, ದೆಹಲಿ ಗಲಭೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ಉಮರ್ ಹಾಗೂ ಶಾರ್ಜಿಲ್‌ಗೆ ಬೇಲ್ ನಿರಾಕರಿಸಿದೆ.

 

Read Full Story

10:37 AM (IST) Jan 05

ಅಮೆರಿಕಾದಲ್ಲಿ ಹೊಸವರ್ಷದಂದು ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ - ಬಾಯ್‌ಫ್ರೆಂಡ್ ಭಾರತಕ್ಕೆ ಪರಾರಿ

ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಹೊಸವರ್ಷದ ದಿನದಂದು ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಯುವತಿ ನಿಕಿತಾ ಗೊದಿಶಾಲಾ, ತನ್ನ ಬಾಯ್‌ಫ್ರೆಂಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ಇರಿತದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾಳೆ.

Read Full Story

10:16 AM (IST) Jan 05

ಮೊಹಮ್ಮದ್ ಶಮಿ ಯಾಕೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿಲ್ಲ; ಕೊನೆಗೂ ಬಯಲಾಯ್ತು ಸತ್ಯ!

ಬೆಂಗಳೂರು: ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಶಮಿ ಹೆಸರು ನಾಪತ್ತೆಯಾಗಿದೆ. ಅಷ್ಟಕ್ಕೂ ಶಮಿ ಕೈಬಿಟ್ಟಿದ್ದೇಕೆ ಎನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.

Read Full Story

09:44 AM (IST) Jan 05

ಆಂಧ್ರಪ್ರದೇಶದ ಪುಟ್ಟಪರ್ತಿಯ ಸತ್ಯ ಸಾಯಿಬಾಬನ ಪರಮ ಭಕ್ತ ನಿಕೋಲಸ್‌ ಮಡುರೋ

ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ, ಸತ್ಯ ಸಾಯಿಬಾಬಾರ ಪರಮ ಭಕ್ತರಾಗಿದ್ದರು. ಅಮೆರಿಕವು ಡ್ರೋನ್‌, ಉಪಗ್ರಹ ಮತ್ತು ಆಂತರಿಕ ಮಾಹಿತಿದಾರರನ್ನು ಬಳಸಿ, ಮಡುರೋ ಮನೆ ಮಾದರಿ ನಿರ್ಮಿಸಿ ದಾಳಿಯ ತಾಲೀಮು ನಡೆಸಿತ್ತು..

Read Full Story

09:31 AM (IST) Jan 05

ಬಾಂಗ್ಲಾದೇಶ ಮನವಿ ಒಪ್ಪಿಕೊಳ್ತಾ ಐಸಿಸಿ? ಬಾಂಗ್ಲಾ ಟಿ20 ವಿಶ್ವಕಪ್ ಮ್ಯಾಚ್ ಲಂಕಾಗೆ ಶಿಫ್ಟ್?

ಐಪಿಎಲ್‌ನಿಂದ ಮುಸ್ತಾಫಿಜುರ್ ರೆಹಮಾನ್‌ರನ್ನು ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಆಟಗಾರರ ಸುರಕ್ಷತೆಯ ಕಾರಣ ನೀಡಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿಗೆ ಅಧಿಕೃತವಾಗಿ ಮನವಿ ಮಾಡಿದೆ.  

Read Full Story

08:28 AM (IST) Jan 05

2036ರ ಒಲಿಂಪಿಕ್ಸ್ ಆಯೋಜಿಸಲು ಸಕಲ ಪ್ರಯತ್ನ - ನರೇಂದ್ರ ಮೋದಿ ಪುನರುಚ್ಚಾರ

2036ರ ಒಲಿಂಪಿಕ್‌ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಾರಣಸಿಯಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್‌ಶಿಪ್‌ ಉದ್ಘಾಟಿಸಿ ಮಾತನಾಡಿದ ಅವರು, ಖೇಲೋ ಇಂಡಿಯಾದಂತಹ ಯೋಜನೆಗಳು ಪ್ರತಿಭೆಗಳನ್ನು ಪೋಷಿಸುತ್ತಿವೆ ಎಂದರು.

Read Full Story

More Trending News