Published : Apr 13, 2026, 07:11 AM ISTUpdated : Apr 13, 2026, 11:28 PM IST

India News Live: ಸನ್‌ರೈಸರ್ಸ್ ವೇಗಿಗಳಾದ ಪ್ರಫುಲ್-ಸಕೀಬ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಧೂಳೀಪಟ; ಮೊದಲ ಸೋಲು ಕಂಡ ಪರಾಗ್ ಪಡೆ!

ಸಾರಾಂಶ

ನವದೆಹಲಿ (ಏ.13): ಇಡೀ ವಿಶ್ವದ ಗಮನ ಸೆಳೆದಿದ್ದ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ಮೂಡಿಸಿದ್ದ ಇರಾನ್‌-ಅಮೆರಿಕ ನಡುವಿನ ಸಂಧಾನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಭಾನುವಾರ ಅಂತ್ಯಗೊಂಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸುಮಾರು 21 ಗಂಟೆಗಳಿಂದ ನಡೆಯುತ್ತಿದ್ದ ಮ್ಯಾರಥಾನ್‌ ಮಾತುಕತೆ ಅರ್ಧಕ್ಕೇ ಮೊಟಕುಗೊಳಿಸಿ ಅಮೆರಿಕ ಮತ್ತು ಇರಾನ್‌ ನಿಯೋಗ ಸ್ವದೇಶಕ್ಕೆ ವಾಪಸಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:28 PM (IST) Apr 13

ಸನ್‌ರೈಸರ್ಸ್ ವೇಗಿಗಳಾದ ಪ್ರಫುಲ್-ಸಕೀಬ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಧೂಳೀಪಟ; ಮೊದಲ ಸೋಲು ಕಂಡ ಪರಾಗ್ ಪಡೆ!

ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಸ್ಪೋಟಕ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ವಿದರ್ಭ ವೇಗಿ ಪ್ರಫುಲ್ ಹಿಂಗೆ ಅವರ ಮಾರಕ ಬೌಲಿಂಗ್ ದಾಳಿಗೆ (ಮೊದಲ ಓವರ್‌ನಲ್ಲೇ 3 ವಿಕೆಟ್) ತತ್ತರಿಸಿದ ರಾಜಸ್ಥಾನ ರಾಯಲ್ಸ್ 57 ರನ್‌ಗಳ ಸೋಲನುಭವಿಸಿತು.
Read Full Story

11:05 PM (IST) Apr 13

ಚುನಾವಣಾ ಕಣದಲ್ಲಿ ತಂತ್ರಜ್ಞಾನದ ಮಾಯಾಜಾಲ! ವಿಜಯ್ ಹೊಲೊಗ್ರಾಫಿಕ್ ಎಐ ಚಿತ್ರ ಬಳಸಿ ಮತಯಾಚನೆ

ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ವಿನೂತನ ಪ್ರಯೋಗ ನಡೆದಿದ್ದು, ಟಿವಿಕೆ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಪಕ್ಷದ ನಾಯಕ ನಟ ವಿಜಯ್ ಅವರ ಹೊಲೊಗ್ರಾಫಿಕ್ ಎಐ ಚಿತ್ರವನ್ನು ಬಳಸಿ ಮತಯಾಚನೆ ಮಾಡುತ್ತಿದ್ದಾರೆ. ಈ ತಂತ್ರಜ್ಞಾನವು ವಿಜಯ್ ಅವರೇ ನೇರವಾಗಿ ಬಂದು ಭಾಷಣ ಮಾಡಿದಂತೆ ಭಾಸವಾಗುತ್ತದೆ.

Read Full Story

10:53 PM (IST) Apr 13

ಮೇಲೆ-ಕೆಳಗೆ ಮುಚ್ಚಿಕೊಳ್ಳಲು ನಟಿ ಅನನ್ಯಾ ಪರದಾಟ - ಕಾಲು ಸರಿಸಿ ಕಾಪಾಡಿದ ದೇವರಕೊಂಡ- ವಿಡಿಯೋ ವೈರಲ್

ಪ್ರೆಸ್​ಮೀಟ್​ವೊಂದರಲ್ಲಿ ತುಂಡುಡುಗೆ ಧರಿಸಿ ಮುಜುಗರಕ್ಕೀಡಾದ ನಟಿ ಅನನ್ಯಾ ಪಾಂಡೆಗೆ ಸಹನಟ ವಿಜಯ ದೇವರಕೊಂಡ ಸಹಾಯ ಮಾಡಿದ್ದಾರೆ. ವೇದಿಕೆಯಲ್ಲಿ ಅನನ್ಯಾ ತಮ್ಮ ಉಡುಪನ್ನು ಸರಿಪಡಿಸಿಕೊಳ್ಳಲು ಪರದಾಡುತ್ತಿದ್ದು, ಇದನ್ನು ಗಮನಿಸಿದ ವಿಜಯ, ಕ್ಯಾಮರಾ ಕಣ್ಣುಗಳಿಂದ ಆಕೆಯನ್ನು ಕಾಪಾಡಲು ಪ್ರಯತ್ನಿಸಿದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
Read Full Story

10:53 PM (IST) Apr 13

ನಿಮ್ಮ ಹಾಸಿಗೆಗೂ ಎಕ್ಸ್‌ಪೈರಿ ಡೇಟ್ ಇದೆ ಗೊತ್ತಾ? ಯಾವಾಗ ಬದಲಾಯಿಸಬೇಕು?

ನಿಮ್ಮ ಹಾಸಿಗೆಗೆ ಕಾಲಾವಧಿ ಮುಗಿದಿದೆ ಎಂದು ನಿಮಗೆ ತಿಳಿದಿದೆಯೇ? ಹಳೆಯ ಹಾಸಿಗೆಯಿಂದ ಬರುವ ಬೆನ್ನುನೋವು, ಅಲರ್ಜಿಗಳು ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಇಲ್ಲಿ ತಿಳಿಯಿರಿ.
Read Full Story

10:32 PM (IST) Apr 13

ಪ್ರಫುಲ್ ದಾಳಿಗೆ ತರಗೆಲೆಗಳಂತೆ ಉದುರಿ ಹೋದ ರಾಜಸ್ಥಾನ ರಾಯಲ್ಸ್; ವೈಭವ್ ಸೂರ್ಯವಂಶಿ ಶೂನ್ಯ ಸಂಪಾದನೆ!

ವಿದರ್ಭದ ವೇಗಿ ಪ್ರಫುಲ್ ಹಿಂಗೆ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಬಿರುಗಾಳಿ ಎಬ್ಬಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ತಮ್ಮ ಮೊದಲ ಓವರ್‌ನಲ್ಲೇ ಮೂರು ವಿಕೆಟ್ ಪಡೆದು ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದರು. ಪವರ್‌ಪ್ಲೇ ಅಂತ್ಯದ ವೇಳೆಗೆ ನಾಲ್ಕು ವಿಕೆಟ್ ಕಬಳಿಸಿ ರಾಜಸ್ಥಾನ ತಂಡಕ್ಕೆ ಆಘಾತ ನೀಡಿದರು.
Read Full Story

09:24 PM (IST) Apr 13

ಮದುವೆ ಬಗ್ಗೆ ನಿರ್ಮಾಪಕ ಅಲ್ಲು ಅರವಿಂದ್ ಮಾತು - ನಾಚಿ ನೀರಾದ ನಟಿ ಮೃಣಾಲ್ ಠಾಕೂರ್!

ಮೃಣಾಲ್ ಠಾಕೂರ್ ಬಗ್ಗೆ ಆಗಾಗ ಲವ್ ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತವೆ. ಕಳೆದ ವರ್ಷ, ಐಶ್ವರ್ಯಾಗೆ ವಿಚ್ಛೇದನ ನೀಡಿದ ನಂತರ ಧನುಷ್, ಮೃಣಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

Read Full Story

09:16 PM (IST) Apr 13

ನಿತೀಶ್ ಕುಮಾರ್ ನಂತ್ರ ಮುಂದಿನ CM ಯಾರು? ಬಿಹಾರ ಸಿಂಹಾಸನಕ್ಕೆ ಐವರ ನಡುವೆ ಮಹಾ ಪೈಪೋಟಿ

ನಿತೀಶ್ ಕುಮಾರ್ ರಾಜೀನಾಮೆ ಬಳಿಕ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಿಎಂ ಸ್ಥಾನಕ್ಕಾಗಿ ಪಕ್ಷದ ಐವರು ಪ್ರಬಲ ನಾಯಕರಾದ ಐವರ ಹೆಸರುಗಳು ರೇಸ್‌ನಲ್ಲಿವೆ.

Read Full Story

08:44 PM (IST) Apr 13

ಮಗಳು ರಾಹಾ ಬಗ್ಗೆ ಆಲಿಯಾ ಭಟ್​ ಚಿಂತೆ - ಸದ್ಗುರು ಜಗ್ಗಿ ವಾಸುದೇವ ಹೇಳಿದ್ದು ಕೇಳಿ ನಟಿ ಶಾಕ್​

ನಟಿ ಆಲಿಯಾ ಭಟ್ ಅವರು ತಮ್ಮ ಮಗಳು ರಾಹಾ ಬಗ್ಗೆ ಇರುವ ಪೋಷಕರ ಚಿಂತೆಯನ್ನು ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಚಿಂತೆ ಮಾಡುವ ಪೋಷಕರು ಒಳ್ಳೆಯ ಪೋಷಕರಾಗಲು ಸಾಧ್ಯವಿಲ್ಲ, ಬದಲಿಗೆ ಮಕ್ಕಳಿಂದಲೇ ಜೀವನವನ್ನು ಕಲಿಯಬೇಕು ಎಂದು ಸದ್ಗುರು ಸಲಹೆ ನೀಡಿದ್ದಾರೆ.
Read Full Story

08:26 PM (IST) Apr 13

ವಧು ಬೇಡಿಕೆ ಕೇಳಿ ಬೆಚ್ಚಿಬಿದ್ದ ಶೋಭನ ರಾತ್ರಿಗೆ ರೆಡಿಯಾಗಿ ಬಂದ ವರ; ಕುಟುಂಬಸ್ಥರು ಶಾಕ್

ವಧುವೊಬ್ಬಳು ಮೊದಲರಾತ್ರಿಯಲ್ಲಿ ತನ್ನ ಪತಿಯಿಂದ 90 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾಳೆ. ಈ ಘಟನೆಯು ಎರಡೂ ಕುಟುಂಬಗಳ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿ, ಪ್ರಕರಣವು ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.

Read Full Story

07:52 PM (IST) Apr 13

ಪಿಂಕ್ ಸಿಲ್ಕ್ ಡ್ರೆಸ್‌ನಲ್ಲಿ ಮಿಂಚಿದ ತೃಪ್ತಿ ದಿಮ್ರಿ - 'ಅನಿಮಲ್' ಬೆಡಗಿಯ ಬ್ಯೂಟಿ ನೀವೂ ನೋಡಿ!

ನಟಿ ತೃಪ್ತಿ ದಿಮ್ರಿ ಅವರು ಬ್ಲಶ್ ಪಿಂಕ್ ಬಣ್ಣದ ಸುಂದರವಾದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು. ಸರಳತೆ ಮತ್ತು ಸೌಂದರ್ಯವನ್ನು ಸಮತೋಲನಗೊಳಿಸಿದ ಈ ಡ್ರೆಸ್‌ನಲ್ಲಿ ಅವರು ಕಂಗೊಳಿಸಿದರು.

Read Full Story

07:31 PM (IST) Apr 13

ನಿನ್ನೆ ಮೊನಾಲಿಸಾ ಮಿಸ್ಸಿಂಗ್​ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ನಾಪತ್ತೆಯಾಗಿದ್ದಾಳೆಂದು ಆಕೆಯ ಪತಿ ಎಂದು ಹೇಳಲಾದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಆದರೆ, ಆ ವಿಡಿಯೋ ಮಾಡಿದ ವ್ಯಕ್ತಿ ಪತಿ ಫರ್ಮಾನ್ ಖಾನ್ ಅಲ್ಲ, ಬದಲಿಗೆ ಆಗಿದ್ದೇನು? ಇಲ್ಲಿದೆ ಕುತೂಹಲದ ಸ್ಟೋರಿ

Read Full Story

07:30 PM (IST) Apr 13

ಶಾಲೆಯಲ್ಲಿ ಮೂರು ಬಾರಿ ಫೇಲ್ ಆಗಿದ್ದೆ - ಬಾಲ್ಯದ ಕಥೆ ಬಿಚ್ಚಿಟ್ಟ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್

ಬಾಲಿವುಡ್ ಸೂಪರ್‌ಸ್ಟಾರ್, ಖಿಲಾಡಿ ಅಕ್ಷಯ್ ಕುಮಾರ್ 'ವೀಲ್ ಆಫ್ ಫಾರ್ಚೂನ್' ಶೋನ ಲೈವ್ ಎಪಿಸೋಡ್‌ನಲ್ಲಿ  ತಮ್ಮ ಬಾಲ್ಯದ ಗೆಳೆಯನನ್ನು ಪರಿಚಯಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು. 

Read Full Story

07:09 PM (IST) Apr 13

ನನ್ನ ಬಾಲಿವುಡ್ ಬ್ರೇಕ್‌ಗೆ ಆತನೇ ಕಾರಣ - ರಣವೀರ್ ಸಿಂಗ್ ನನ್ನ ಲಕ್ಕಿ ಚಾರ್ಮ್ ಎಂದ ಸೀತಾ ರಾಮಂ ನಟಿ

ರಣವೀರ್ ಅಲ್ಲಾಬಾಡಿಯಾ ಜೊತೆಗಿನ ಸಂವಾದದಲ್ಲಿ, ಮೃಣಾಲ್ ಠಾಕೂರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ರಣವೀರ್ ಸಿಂಗ್ ಜೊತೆ ಕೆಲಸ ಮಾಡಿದ್ದು ಹೇಗೆ ಒಂದು ಪ್ರಮುಖ ಘಟ್ಟವಾಯಿತು ಎಂದು ಹಂಚಿಕೊಂಡಿದ್ದಾರೆ.

Read Full Story

06:41 PM (IST) Apr 13

ಕಣ್ಣೀರ ವಿದಾಯ, ಪಂಚಭೂತಗಳಲ್ಲಿ ಲೀನರಾದ ಆಶಾ ಭೋಸ್ಲೆ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಭಾರತೀಯ ಸಂಗೀತ ಲೋಕದ ದಂತಕಥೆ ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆದಿದ್ದು, ಬಾಲಿವುಡ್ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಈ ಲೇಖನವು ಅವರ ಅಂತ್ಯಕ್ರಿಯೆಯ ವಿವರ ಹಾಗೂ ಹೋರಾಟದ ಬದುಕಿನ ಕಥೆಯನ್ನು ವಿವರಿಸುತ್ತದೆ.
Read Full Story

06:32 PM (IST) Apr 13

ಒಂದೇ ಫೋಟೋದಿಂದ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ ಜೂ.ಎನ್‌ಟಿಆರ್‌ - ಇದು ಬಾಡಿನಾ ಅಥವಾ ಬಾಕ್ಸಾಫೀಸ್ ಶೇಕ್ ಮಾಡೋ ಮಷೀನಾ?

ಮಾಸ್ ಆಕ್ಷನ್ ಚಿತ್ರಗಳಿಗೆ ಪ್ರಶಾಂತ್ ನೀಲ್ ಹೆಸರುವಾಸಿ. ಇನ್ನು ಜೂ.ಎನ್‌ಟಿಆರ್‌ಗೆ ಇರುವ ಮಾಸ್ ಇಮೇಜ್ ಬಗ್ಗೆ ಹೇಳಬೇಕಾಗಿಲ್ಲ. ಇವರಿಬ್ಬರ ಕಾಂಬೋದಲ್ಲಿ ಬರುವ ಈ ಸಿನಿಮಾ ಹೇಗಿರಬಹುದು ಎಂದು ಊಹಿಸಿದರೆ ಕುತೂಹಲ ಹೆಚ್ಚುತ್ತಿದೆ.

Read Full Story

06:12 PM (IST) Apr 13

ಪ್ರಭಾಸ್‌ರ ಆ ಸಿನಿಮಾ ರಿಜೆಕ್ಟ್ ಮಾಡಿ ತಪ್ಪು ಮಾಡಿದೆ - ಆ ನೋವು ಈಗಲೂ ಇದೆ ಎಂದ ನಟಿ ತಮನ್ನಾ

ನಟಿ ತಮನ್ನಾ ಈಗ ಸಖತ್ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿವೆ. ಆದರೆ, ಹಿಂದೆ ಪ್ರಭಾಸ್‌ ಜೊತೆಗಿನ ಒಂದು ಸಿನಿಮಾ ತಿರಸ್ಕರಿಸಿದ್ದರ ಬಗ್ಗೆ ಈಗಲೂ ಬೇಸರವಿದೆ ಎಂದು ಹೇಳಿಕೊಂಡಿದ್ದಾರೆ.

Read Full Story

05:36 PM (IST) Apr 13

Vishnu Priya Controversy - ಅರೆಬೆತ್ತಲೆ ಜಾಹೀರಾತು? ನಿರೂಪಕಿ ವಿಷ್ಣು ಪ್ರಿಯಾ ವಿರುದ್ಧ ಸೈಬರ್ ಕ್ರೈಂಗೆ ದೂರು

ವಿಷ್ಣು ಪ್ರಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅರೆಬೆತ್ತಲೆ ಹಾಗೂ ಅಶ್ಲೀಲತೆಯನ್ನು ಪ್ರಚೋದಿಸುವಂತಹ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

Read Full Story

05:30 PM (IST) Apr 13

ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲಿನ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಅವರ ಕ್ಯಾಪ್ಟನ್ಸಿ ನಿರ್ಧಾರಗಳ ವಿರುದ್ಧ ರವಿಚಂದ್ರನ್ ಅಶ್ವಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Read Full Story

05:23 PM (IST) Apr 13

ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್

ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್, ನಾಸಿಕ್ ಟಿಸಿಎಸ್ ಕಂಪನಿಯಲ್ಲಿ ನಡೆದ ಲವ್ ಜಿಹಾದ್, ಮತಾಂತರ ಪ್ರಕರಣದಿಂದ ಕಾರ್ಪೋರೇಟ್ ಜಿಹಾದ್ ಕೇಸ್ ಬೆಳಕಿಗೆ ಬಂದಿದೆ.

Read Full Story

05:06 PM (IST) Apr 13

ಜಸ್ಪ್ರೀತ್ ಬುಮ್ರಾಗೆ ಇದೇನಾಯ್ತು? 5 ಮ್ಯಾಚ್, 122 ಎಸೆತ ಆದ್ರೆ ಒಂದೇ ಒಂದು ವಿಕೆಟ್ ಇಲ್ಲ! ಇಲ್ಲಿದೆ 3 ಇಂಟ್ರೆಸ್ಟಿಂಗ್ ಕಾರಣಗಳು

ಮುಂಬೈ ಇಂಡಿಯನ್ಸ್‌ನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ಐದು ಐಪಿಎಲ್ ಪಂದ್ಯಗಳಿಂದ ವಿಕೆಟ್ ಪಡೆಯದೆ ಸಂಕಷ್ಟದಲ್ಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯರ ತಂತ್ರಗಾರಿಕೆ, ಎದುರಾಳಿಗಳ ಎಚ್ಚರಿಕೆಯ ಆಟ ಮತ್ತು ಬೌಲಿಂಗ್‌ನಲ್ಲಿನ ಅತಿಯಾದ ಪ್ರಯೋಗಗಳು ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಈ ವಿಕೆಟ್ ಬರವು ಮುಂಬೈ ತಂಡದ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಿದೆ.
Read Full Story

04:23 PM (IST) Apr 13

ನಟಿ ಕೀರ್ತಿ ಸುರೇಶ್ ಕುಡಿಯಲ್ಲ, ಆದ್ರೆ ಬೆಳಗಿನ ಜಾವ 2 ಗಂಟೆಗೆ ಹೈಪರ್ ಆಗ್ತಾಳೆ.. - ಸೀಕ್ರೆಟ್ ಬಿಚ್ಚಿಟ್ಟ ಸಮಂತಾ

ಪ್ರಿಯದರ್ಶನ್ ನಿರ್ದೇಶನದ ಮೋಹನ್‌ಲಾಲ್ ನಟನೆಯ 'ಗೀತಾಂಜಲಿ' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್, ಇಂದು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

Read Full Story

03:57 PM (IST) Apr 13

ಅಮೆರಿಕ ಇರಾನ್ ಮಾತುಕತೆ ಹೊಟೆಲ್ ಬಿಲ್ ಭರಿಸುವುದು ಯಾರು? ಪಾಕಿಸ್ತಾನ ಕಂಗಾಲು

ಅಮೆರಿಕ ಇರಾನ್ ಮಾತುಕತೆ ಹೊಟೆಲ್ ಬಿಲ್ ಭರಿಸುವುದು ಯಾರು? ಪಾಕಿಸ್ತಾನ ಕಂಗಾಲು, ಸಂಧಾನ ಮಾತುಕತೆ ವಿಫಲವಾಗಿದೆ. ಆದರೆ ಪಾಕಿಸ್ತಾನಕ್ಕೆ ತಲೆನೋವಿಗೆ ನಟ ಪರೇಶ್ ರಾವಲ್ ನೀಡಿದ ಉತ್ತರ ಭಾರಿ ವೈರಲ್ ಆಗಿದೆ.

 

Read Full Story

03:57 PM (IST) Apr 13

ಐಪಿಎಲ್ ಇತಿಹಾಸ - ಮೊದಲ ಬಾಲ್, ಮೊದಲ ಸೆಂಚುರಿ, ಮೊದಲ ಸ್ಟಂಪ್! ಇಲ್ಲಿದೆ ರೋಚಕ ಕಹಾನಿ

ಐಪಿಎಲ್ ಈಗ 19ನೇ ಸೀಸನ್‌ನಲ್ಲಿದೆ. ಮುಂದಿನ ವರ್ಷ ಈ ಮೆಗಾ ಲೀಗ್ 20ನೇ ವರ್ಷಕ್ಕೆ ಕಾಲಿಡಲಿದೆ. ಈ ಹಿನ್ನೆಲೆಯಲ್ಲಿ, ಐಪಿಎಲ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಮೊದಲ ಬೌಲ್ ಯಾರು ಮಾಡಿದ್ದು, ಯಾರು ಎದುರಿಸಿದ್ದು, ಮೊದಲ ಸೆಂಚುರಿ ಯಾರು ಬಾರಿಸಿದ್ದು ಎಂಬಂತಹ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ.

Read Full Story

03:17 PM (IST) Apr 13

ವಾಲ್-ಮೆಟ್’ನಲ್ಲಿ ನುವಾಮಾದಿಂದ ₹200 ಕೋಟಿ ಹೂಡಿಕೆ, ಡಿಫೆನ್ಸ್‌, ಏರೋಸ್ಪೇಸ್‌ ವಲಯದ ಸ್ವಾವಲಂಬನೆಗೆ ಹೊಸ ಬೂಸ್ಟ್!

ವಾಯುಯಾನ, ರಕ್ಷಣೆ ಮತ್ತು ಬಾಹ್ಯಾಕಾಶ ವಲಯಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ 'ವಾಲ್-ಮೆಟ್ ಎಂಜಿನಿಯರಿಂಗ್' ಕಂಪನಿಯು, ನುವಾಮಾ ಗ್ರೂಪ್‌ನಿಂದ 200 ಕೋಟಿ ರೂಪಾಯಿಗಳ ಬಂಡವಾಳವನ್ನು ಸಂಗ್ರಹಿಸಿದೆ. ಈ ಹೂಡಿಕೆಯು ಕಂಪನಿಯ ಪೂರೈಕೆ ಜಾಲವನ್ನು ಬಲಪಡಿಸಲು, ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ಮತ್ತು ಜಾಗತಿಕವಾಗಿ ವ್ಯವಹಾರವನ್ನು ವಿಸ್ತರಿಸಲು ನೆರವಾಗಲಿದೆ.
Read Full Story

03:00 PM (IST) Apr 13

ತಮನ್ನಾ ಭಾಟಿಯಾ ಇಷ್ಟವಾದ ಹೀರೋ ಯಾರು ಗೊತ್ತಾ? ಅವರ ಸಿನಿಮಾ ಎಷ್ಟು ಸಲ ನೋಡಿದ್ದಾರೋ ಲೆಕ್ಕವೇ ಇಲ್ಲವಂತೆ!

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಆದರೆ, ತನಗೆ ಇಷ್ಟವಾದ ನಟ ಯಾರೆಂದು ಕೇಳಿದರೆ ಬಾಲಿವುಡ್ ನಟನ ಹೆಸರನ್ನು ಹೇಳಿದ್ದಾರೆ. ಅವರ ಸಿನಿಮಾಗಳನ್ನು ಎಷ್ಟು ಬಾರಿ ನೋಡಿದ್ದಾರೋ ಲೆಕ್ಕವೇ ಇಲ್ಲವಂತೆ.

Read Full Story

02:58 PM (IST) Apr 13

ನಶೆಯಲ್ಲಿ ಕಾರು ಚಲಾಯಿಸಿ ಸಿಕ್ಕಿ ಬಿದ್ದ ಡಾಕ್ಟರ್, ತಪ್ಪಿಸಿಕೊಳ್ಳಲು ಮಾಡಿದ ಮ್ಯಾಜಿಕ್‌ಗೆ ದಂಗಾದ ಪೊಲೀಸ್

ನಶೆಯಲ್ಲಿ ಕಾರು ಚಲಾಯಿಸಿ ಸಿಕ್ಕಿ ಬಿದ್ದ ಡಾಕ್ಟರ್, ತಪ್ಪಿಸಿಕೊಳ್ಳಲು ಮಾಡಿದ ಮ್ಯಾಜಿಕ್‌ಗೆ ದಂಗಾದ ಪೊಲೀಸ್, ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುವಾಗ ಸಿಕ್ಕಿ ಬಿದ್ದ ಡಾಕ್ಟರ್ ಮಾಡಿದ ಮಂತ್ರ ಏನು?

Read Full Story

02:27 PM (IST) Apr 13

ಜನನಾಯಗನ್ ಬಳಿಕ, ಅದೇ ನಿರ್ಮಾಪಕರ 'KD' ಚಿತ್ರಕ್ಕೂ ಸೆನ್ಸಾರ್ ಕಿರಿಕ್; ನಿಜವಾಗಿ ಏನಾಗ್ತಿದೆ?

ನಿರ್ದೇಶಕ ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿಗೆ ಬರೆದ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್ ನಡೆ ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗ್ಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರೋದ್ರಿಂದ ಚಿತ್ರಕ್ಕೆ ಎ ಸರ್ಫಿಟಿಕೇಟ್ ನೀಡುವುದಾಗಿ ಹೇಳಿದೆ.

Read Full Story

01:54 PM (IST) Apr 13

'ಇಂಟರ್ನೆಟ್' ನನ್ನ ಪಾಲಿನ ಸಂಜೀವಿನಿ ಎಂದ ಬಿಗ್ ಬಿ; ಡಿಜಿಟಲ್ ಬಾಂಧವ್ಯದ ಅಮಿತಾಭ್ ಬಚ್ಚನ್ ಗುಟ್ಟು ರಟ್ಟು!

ಇತ್ತೀಚೆಗಷ್ಟೇ ಬಿಡುಗಡೆಯಾದ ರಜನಿಕಾಂತ್ ಅಭಿನಯದ 'ವೇಟ್ಟೈಯನ್' ಸಿನಿಮಾದಲ್ಲೂ ಅಮಿತಾಭ್ ಅವರ ಅಭಿನಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದರ ಜೊತೆಗೆ, ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಸಿನಿಮಾ 'ರಾಮಾಯಣ: ಭಾಗ 1' ರಲ್ಲೂ ಬಿಗ್ ಬಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.

Read Full Story

01:39 PM (IST) Apr 13

ಡಗೌಟ್‌ನಲ್ಲಿ ಫೋನ್ ಬಳಕೆ - ರಾಜಸ್ಥಾನ ರಾಯಲ್ಸ್ ಮ್ಯಾನೇಜರ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್!

ಐಪಿಎಲ್ ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ ಮ್ಯಾನೇಜರ್ ರೂಮಿ ಭಿಂದರ್‌ಗೆ ಬಿಸಿಸಿಐ ನೋಟಿಸ್ ಜಾರಿ ಮಾಡಿದೆ. ಆದರೆ, ಈ ನಿಯಮ ಉಲ್ಲಂಘನೆಯ ಹಿಂದೆ ಭಿಂದರ್ ಅವರ ಗಂಭೀರ ಆರೋಗ್ಯ ಸಮಸ್ಯೆಯ ಕಾರಣವಿರುವುದು ಇದೀಗ ಬಹಿರಂಗವಾಗಿದೆ. ಅವರ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ ಬಿಸಿಸಿಐ ಮಾನವೀಯ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
Read Full Story

01:07 PM (IST) Apr 13

ತೆಲುಗು ಚಿತ್ರರಂಗದಿಂದ ದೂರವಾಗ್ತಾರಾ ರಾಮ್ ಚರಣ್? ಪೆದ್ದಿ ಸಿನಿಮಾ ಬಳಿಕ ಈ ನಟ ಎಲ್ಲಿಗೆ ಹೊರಟಿದ್ದಾರೆ?

'ಧುರಂಧರ್' ಸಿನಿಮಾದ ಮೂಲಕ ಅಬ್ಬರಿಸುತ್ತಿರುವ ನಿರ್ದೇಶಕ ಆದಿತ್ಯ ಧರ್, ರಾಮ್ ಚರಣ್ ಅವರಿಗೆ ಒಂದು ಬೃಹತ್ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಇದು ಒಂದು ಹೈ-ವೋಲ್ಟೇಜ್ ಮಲ್ಟಿ-ಸ್ಟಾರರ್ ಸಿನಿಮಾವಾಗಿದ್ದು, ಬಾಲಿವುಡ್‌ನ ಬೇರೆ ಸ್ಟಾರ್‌ ನಟರು ಕೂಡ ಇದರಲ್ಲಿ ಇರಲಿದ್ದಾರಂತೆ. ಏನೆಲ್ಲಾ ಸುದ್ದಿ ಇದೆ ನೋಡಿ.. 

Read Full Story

12:32 PM (IST) Apr 13

ಹಾರ್ದಿಕ್ ಪಾಂಡ್ಯ ಔಟಾಗುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಕೃನಾಲ್ ಪಾಂಡ್ಯ! ದಾಯಾದಿಗಳಾದ್ರಾ ಅಣ್ತಮ್ಮಾಸ್? ವಿಡಿಯೋ ವೈರಲ್

ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ಔಟಾದಾಗ ಅವರ ಅಣ್ಣ ಕೃನಾಲ್ ಪಾಂಡ್ಯ ಅತಿಯಾಗಿ ಸಂಭ್ರಮಿಸಿದ್ದಾರೆ. ಈ ಘಟನೆ ಮತ್ತು ಹಾರ್ದಿಕ್ ಅವರ ಕೋಪದ ನೋಟವು, ಇಬ್ಬರು ಸಹೋದರರ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.
Read Full Story

12:05 PM (IST) Apr 13

ತಮಿಳು ಲೇಡಿ ಸೂಪರ್ ಸ್ಟಾರ್ ನಯನತಾರಾ ಕೈನಲ್ಲಿ ಇಷ್ಟೊಂದು ಬಿಗ್ ಬಜೆಟ್ ಸಿನಿಮಾಗಳಿರೋದು ಹೇಗೆ? ಸೀಕ್ರೆಟ್ ರಿವೀಲ್!

ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಾಯಕ ಪ್ರಧಾನ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ಧೂಳಿಪಟ ಮಾಡುವ ತಾಕತ್ತು ಅವರಿಗಿದೆ. ಸದ್ಯ ನಯನತಾರಾ ಅವರ ಡೈರಿ ಮುಂದಿನ ಎರಡು-ಮೂರು ವರ್ಷಗಳವರೆಗೆ ಭರ್ತಿಯಾಗಿದ್ದು, ಅಕ್ಷರಶಃ ಅವರು 'ಬ್ಯುಸಿ ಆಕ್ಟ್ರೆಸ್' ಆಗಿದ್ದಾರೆ.

Read Full Story

11:42 AM (IST) Apr 13

ಪತ್ನಿಯನ್ನ ಅಡುಗೆ ಮನೆಗೆ ಸೇರಿಸದಿದ್ದರೆ ಅದು 'ಮಾನಸಿಕ ಕ್ರೌರ್ಯ' - ಪತಿ ವಿರುದ್ಧದ FIR ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ವಿವಾಹಿತ ಮಹಿಳೆಯನ್ನು ಆಕೆಯ ಗಂಡನ ಮನೆಯ ಅಡುಗೆ ಮನೆಗೆ ಪ್ರವೇಶಿಸದಂತೆ ತಡೆಯುವುದು ಐಪಿಸಿ ಸೆಕ್ಷನ್ 498A ಅಡಿಯಲ್ಲಿ 'ಮಾನಸಿಕ ಕ್ರೌರ್ಯ' ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಹತ್ವದ ತೀರ್ಪು ನೀಡಿದೆ. 

Read Full Story

11:25 AM (IST) Apr 13

ಆಶಾ ಭೋಸ್ಲೆ ಕೊನೆಯ ಆಸೆ ಇದಾಗಿತ್ತು.. ಆದರೆ ಈ ಮಹಾನ್ ಗಾಯಕಿ ಬಯಕೆ ಈಡೇರಿತಾ?

ಸುಮಾರು 12,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಆಶಾ ಭೋಸ್ಲೆ ಅವರಿಗೆ ದಾದಾಸಾಹೇಬ್ ಫಾಲ್ಕೆ ಸೇರಿದಂತೆ ನೂರಾರು ಗೌರವಗಳು ಸಂದಿವೆ. ಕೇವಲ ಹಿಂದಿಯಷ್ಟೇ ಅಲ್ಲದೆ, ಭಾರತದ ಹಲವು ಭಾಷೆಗಳಲ್ಲಿ, ವಿದೇಶಿ ಭಾಷೆಗಳಲ್ಲಿ ಕೂಡ ಆಶಾ ಭೋಸ್ಲೆ ಹಾಡಿದ್ದರು. 

Read Full Story

11:21 AM (IST) Apr 13

ಜಾರ್ಖಂಡ್ ಹೈಕೋರ್ಟ್ ಚಾಟಿ - ಇಡೀ ಪೊಲೀಸ್ ಠಾಣೆಯ 28 ಸಿಬ್ಬಂದಿ ಸಸ್ಪೆಂಡ್‌

ಜಾರ್ಖಂಡ್‌ನಲ್ಲಿ 9 ತಿಂಗಳಿನಿಂದ ನಾಪತ್ತೆಯಾಗಿದ್ದ ಯುವತಿಯ ಪ್ರಕರಣವನ್ನು ಹೈಕೋರ್ಟ್ ಎಚ್ಚರಿಸಿದ 24 ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ. ಪ್ರಿಯಕರನಿಂದಲೇ ಹತ್ಯೆಯಾಗಿದ್ದ ಯುವತಿಯ ಅಸ್ಥಿಪಂಜರ ಪತ್ತೆಯಾಗಿದೆ.

Read Full Story

10:35 AM (IST) Apr 13

ಕನ್ನಡಿಗನ ಪಾಲಾದ ಪರ್ಪಲ್ ಕ್ಯಾಪ್; ಆರೆಂಜ್ ಕ್ಯಾಪ್ ಪಡೆಯುಲು ಶುರುವಾಯ್ತು ಬಿಗ್ ಫೈಟ್

ಐಪಿಎಲ್ ಸೂಪರ್ ಸಂಡೇ ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಜಯಭೇರಿ ಬಾರಿಸಿವೆ. ಈ ಫಲಿತಾಂಶದಿಂದ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಗುಜರಾತ್‌ನ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಪಡೆದರೆ, ಆರೆಂಜ್ ಕ್ಯಾಪ್‌ಗಾಗಿ ಪೈಪೋಟಿ ತೀವ್ರಗೊಂಡಿದೆ.
Read Full Story

09:21 AM (IST) Apr 13

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌; ಕನ್ನಡಿಗ ಆಯುಶ್ ಶೆಟ್ಟಿಗೆ ಐತಿಹಾಸಿಕ ಬೆಳ್ಳಿ!

ಚೀನಾದ ನಿಂಗ್ಬೊದಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಾರ್ಕಳದ ಆಯುಷ್ ಶೆಟ್ಟಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಚೀನಾದ ಶಿ ಯು ಕಿ ವಿರುದ್ಧ ಸೋತರೂ, ಈ ಕೂಟದಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
Read Full Story

08:41 AM (IST) Apr 13

ರಾಜಸ್ಥಾನ ರಾಯಲ್ಸ್‌ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್‌ರೈಸರ್ಸ್‌ ಹೈದರಾಬಾದ್?

ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿರುವ ರಾಜಸ್ಥಾನ ರಾಯಲ್ಸ್, ಸೋಮವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಲಿದೆ. ಯುವ ಆಟಗಾರ ವೈಭವ್‌ ಸೂರ್ಯವಂಶಿ ಬ್ಯಾಟಿಂಗ್ ಹಾಗೂ ರವಿ ಬಿಷ್ಣೋಯ್ ಬೌಲಿಂಗ್ ರಾಯಲ್ಸ್‌ ತಂಡದ ಬಲವಾಗಿದ್ದರೆ, ಹೈದರಾಬಾದ್ ತಂಡವು ಬಲಿಷ್ಠ ಬ್ಯಾಟಿಂಗ್ ಹೊಂದಿದ್ದರೂ ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ವೈಫಲ್ಯದಿಂದ ಸೋಲನುಭವಿಸುತ್ತಿದೆ.
Read Full Story

08:31 AM (IST) Apr 13

IPL 2026 - ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಸಾಲ್ಟ್‌, ರಜತ್ ಮತ್ತು ಕೊಹ್ಲಿಯವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 240 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ ಆರ್‌ಸಿಬಿ, ಮುಂಬೈ ತಂಡವನ್ನು 222 ರನ್‌ಗಳಿಗೆ ಕಟ್ಟಿಹಾಕಿ ಗೆಲುವಿನ ಹಳಿಗೆ ಮರಳಿತು.
Read Full Story

07:56 AM (IST) Apr 13

ಅರುಣಾಚಲದ 27 ಸ್ಥಳಗಳಿಗೆ ಚೀನಾದಿಂದ ಹೊಸ ಹೆಸರು - ಭಾರತದ ತೀಕ್ಷ್ಣ ತಿರುಗೇಟು

ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಚೀನಾ ಹೊಸ ಹೆಸರುಗಳನ್ನು ಇಟ್ಟಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗವಾಗಿದ್ದು, ಇಂತಹ ದುರುದ್ದೇಶಪೂರಿತ ಪ್ರಯತ್ನಗಳಿಂದ ವಾಸ್ತವ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Read Full Story

More Trending News