ಚೀನಾದ ನಿಂಗ್ಬೊದಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಾರ್ಕಳದ ಆಯುಷ್ ಶೆಟ್ಟಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಚೀನಾದ ಶಿ ಯು ಕಿ ವಿರುದ್ಧ ಸೋತರೂ, ಈ ಕೂಟದಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ನಿಂಗ್ಬೊ(ಚೀನಾ): ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಉಡುಪಿಯ ಕಾರ್ಕಳ ತಾಲೂಕಿನ ಸಾಣೂರು ಮೂಲದ ಆಯುಷ್ ಶೆಟ್ಟಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಅವರು ಚೀನಾದ ಶಿ ಯು ಕಿ ವಿರುದ್ಧ ಸೋತು ರನ್ನರ್‌-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐತಿಹಾಸಿಕ ಸಾಧನೆ ಮಾಡಿದ ಕನ್ನಡಿಗ

ಟೂರ್ನಿಯಲ್ಲಿ ವಿಶ್ವ ನಂ.1, ವಿಶ್ವ ನಂ.4, ವಿಶ್ವ ನಂ.7 ಶಟ್ಲರ್‌ಗಳ ವಿರುದ್ಧ ಗೆದ್ದರೂ ಭಾನುವಾರ ನಡೆದ ಫೈನಲ್‌ನಲ್ಲಿ 20 ವರ್ಷದ ಆಯುಶ್‌ ವಿಶ್ವ ನಂ.2 ಆಟಗಾರ ಯು ಕಿ ವಿರುದ್ಧ 8-21, 10-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಸೋಲಿನ ಹೊರತಾಗಿಯೂ ಆಯುಶ್‌ ತಮ್ಮ ವೃತ್ತಿ ಬದುಕಿನ ಪ್ರಮುಖ ಮೈಲುಗಲ್ಲು ಸಾಧಿಸಿದ್ದಾರೆ. ಬ್ಯಾಡ್ಮಿಂಟನ್‌ ಏಷ್ಯಾ ಕೂಟದಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1965ರಲ್ಲಿ ದಿನೇಶ್‌ ಖನ್ನಾ ಅವರು ಚಿನ್ನ ಗೆದ್ದಿದ್ದರು. ಆ ಬಳಿಕ ಕೂಟದಲ್ಲಿ ಫೈನಲ್‌ಗೇರಿದ ಮೊದಲ ಭಾರತೀಯ ಆಯುಶ್‌.

Scroll to load tweet…

ಶುಕ್ರವಾರ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.25 ಆಟಗಾರ, 20 ವರ್ಷದ ಆಯುಶ್‌ ಅವರು ವಿಶ್ವದ ನಂ.4 ಆಟಗಾರ, ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟೀ ಅವರನ್ನು 23-21, 21-17 ಅಂಕಗಳ ಅಂತರದಲ್ಲಿ ಸೋಲಿಸಿ ಅಂತಿಮ 4ರ ಘಟ್ಟ ಪ್ರವೇಶಿಸಿದ್ದರು.

ಕೂಟದಲ್ಲಿ ಭಾರತಕ್ಕೆ ಸಿಕ್ಕ 19ನೇ ಪದಕ

1962ರಿಂದ ನಡೆಯುತ್ತಿರುವ ಈ ಕೂಟದಲ್ಲಿ ಭಾರತ 19ನೇ ಪದಕ ಗೆದ್ದಿದೆ. 1965ರಲ್ಲಿ ಸಿಂಗಲ್ಸ್‌ನಲ್ಲಿ ದಿನೇಶ್‌ ಖನ್ನಾ, 2023ರಲ್ಲಿ ಪುರುಷ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಚಿನ್ನ ಗೆದ್ದಿದ್ದಾರೆ. ಉಳಿದಂತೆ 1 ಬೆಳ್ಳಿ(ಆಯುಶ್), 16 ಕಂಚಿನ ಪದಕಗಳು ಲಭಿಸಿವೆ.