‘ಯಾವುದೇ ಗುಂಪು ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಸ್ಥಳವನ್ನು ಶಾಶ್ವತವಾಗಿ ಅಥವಾ ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕಟು ಅಭಿಪ್ರಾಯ ವ್ಯಕ್ತಪಡಿಸಿದೆ.
‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಸ್ಥಳಗಳ ನಿರ್ಬಂಧಗಳಿಂದ ತಮಗೆ ತೊಂದರೆ ಆಗುತ್ತಿದೆ. ಪ್ರತಿಭಟನೆಗಳ ಸಂದರ್ಭದಲ್ಲಿ ಅಂಗಡಿಗಳನ್ನು ಮುಚ್ಚಿದ್ದರಿಂದ ಕೋಟ್ಯಂತರ ರುಪಾಯಿ ನಷ್ಟವಾಗಿದೆ’ ಎಂದು ಆರೋಪಿಸಿ ವ್ಯಾಪಾರಿಗಳ ಸಂಘಟನೆಯ ಅರ್ಜಿ ಅಲ್ಲಿಸಿತ್ತು,
ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನ್ಯಾ। ಸೂರ್ಯಕಾಂತ್ ನೇತೃತ್ವದ ಪೀಠ, ‘ಪ್ರತಿಭಟಿಸುವ ಹಕ್ಕು ಸಂವಿಧಾನಾತ್ಮಕ ಹಕ್ಕು ಹೌದು, ಆದರೆ ಇದರೊಂದಿಗೆ ವ್ಯಾಪಾರಿಗಳು, ಕಾರ್ಮಿಕರು ಮತ್ತು ಸಾಮಾನ್ಯ ಜನರ ಕೆಲಸ ಹಾಗೂ ಓಡಾಟದ ಹಕ್ಕು ಕೂಡ ಇದೆ. ಅದನ್ನು ಕೂಡ ಸಮತೋಲನಗೊಳಿಸಬೇಕು’ ಎಂದು ಸರ್ಕಾರಕ್ಕೆ ಸೂಚ್ಯವಾಗಿ ಚಾಟಿ ಬೀಸಿತು.
‘ನೀವು ಯಾವಾಗಲೂ ಒಂದು ಸ್ಥಳವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಜಂತರ್ ಮಂತರ್‌ನಂತಹ ನಿರ್ದಿಷ್ಟ ಪ್ರತಿಭಟನಾ ಸ್ಥಳಗಳಿಗೂ ಒಂದು ನಿರ್ದಿಷ್ಟ ಸಮಯದ ಮಿತಿ ಇರಬೇಕು’ ಎಂದಿತು.
05:30 PM (IST) Nov 04
ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರು ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರಾಮಾಯಣ’ ಕೇವಲ ಸಿನಿಮಾವಲ್ಲ, ಭಾರತೀಯ..
05:14 PM (IST) Nov 04
ಲಡಾಖ್ ಆಡಳಿತವು ಸೋನಮ್ ವಾಂಗ್ಚುಕ್ ಅವರ ಡೆಸರ್ಟ್ ಫ್ಲವರ್ ಶಾಲೆಯ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಭೂಹಂಚಿಕೆ ವಿವಾದವು ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಕಾರಣ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.
04:51 PM (IST) Nov 04
ಬಾಲಿವುಡ್ ಸಿನಿಮಾಗಳಲ್ಲಿಯೂ ವಿವಿಧ ರೀತಿಯ ಗ್ಲಾಮರ್ ಮತ್ತು ಬೋಲ್ಡ್ ದೃಶ್ಯಗಳು ಇರುತ್ತವೆ. ಅಲ್ಲಿ ನಟಿಸುವಾಗ ಕಾಣಿಸದ ಆಕ್ಷೇಪಗಳು ದಕ್ಷಿಣದ ಕಮರ್ಷಿಯಲ್ ಸಿನಿಮಾಗಳ ವಿಚಾರ ಬಂದಾಗ ಮಾತ್ರ ಏಕೆ ವ್ಯಕ್ತವಾಗುತ್ತವೆ ಎಂದು ಈ ವಿವಾದದ ನಡುವೆ ಸಿನಿಪ್ರಿಯರು ಪ್ರಶ್ನೆಯನ್ನು ಎತ್ತುತ್ತಿದ್ದಾರೆ.
04:34 PM (IST) Nov 04
04:15 PM (IST) Nov 04
ರಾಮಾಯಣ ಸಿನಿಮಾದಲ್ಲಿ ನಟಿಸಿರುವ ಹೀರೋ ಹೀರೋಯಿನ್‌ಗಳು ಪಡೆದ ಸಂಭಾವನೆ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಚಿತ್ರದಲ್ಲಿ ರಾಕ್ಷಸನ ಪಾತ್ರ ಮಾಡಿರುವ ವಿವೇಕ್ ಒಬೇರಾಯ್, ಒಂದೇ ಒಂದು ರೂಪಾಯಿ ಹಣವನ್ನ ಸ್ವಂತಕ್ಕೆ ಪಡೆದಿಲ್ಲ. ಬದಲಾಗಿ ಯಾರಿಗೆ ಕೊಟ್ಟಿದ್ದಾರೆ ಗೊತ್ತಾ?
04:07 PM (IST) Nov 04
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಕರ್ನಾಟಕದಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿಯ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ ಮೊದಲ 18 ದಿನಗಳಲ್ಲಿ ಚಿತ್ರದ ಕನ್ನಡ ಆವೃತ್ತಿ ₹9.54..
04:00 PM (IST) Nov 04
03:19 PM (IST) Nov 04
ಸಲ್ಮಾನ್ ಖಾನ್ ಈ ಮನವಿಗೆ ಪ್ರತಿಕ್ರಿಯಿಸುತ್ತಾರೆಯೇ? ದೇವಸ್ಥಾನಕ್ಕೆ ಭೇಟಿ ನೀಡುವ ನಿರ್ಧಾರ ಕೈಗೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯ ಈ ಬೆಳವಣಿಗೆ ಬಾಲಿವುಡ್ ಹಾಗೂ ಬಿಷ್ಣೋಯ್ ಸಮುದಾಯದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಏನ್ ಹೇಳ್ತಾರೆ? ನೋಡಿ..
03:12 PM (IST) Nov 04
01:47 PM (IST) Nov 04
01:46 PM (IST) Nov 04
ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ದೆಹಲಿಯ ಕೃಷಿ ಭವನದಲ್ಲಿರುವ 100 ವರ್ಷಗಳ ಹಳೆಯ ಖಾದೀಮಿ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಶಾಶ್ವತ ಧಾರ್ಮಿಕ ರಚನೆಗೆ ಅವಕಾಶ ನೀಡುವುದು ಆಸ್ತಿಯ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗಿದೆ ಎಂದು ಸರ್ಕಾರ ವಾದಿಸಿದೆ.
01:42 PM (IST) Nov 04
ಅಮೆರಿಕದ ಮಿಶಿಗನ್ ಸೆನೆಟ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿ ಡಾ. ಅಬ್ದುಲ್ ಅಲ್ ಸಯೀದ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಇವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ಈಜಿಪ್ಟ್ ಮೂಲದ ಅಮೆರಿಕನ್ ಆಗಿದ್ದಾರೆ.
01:27 PM (IST) Nov 04
01:24 PM (IST) Nov 04
ಕಳೆದ 10 ದಿನಗಳಲ್ಲಿ ಭಾರತವು ಬಾಹ್ಯಾಕಾಶ, ರೈಲ್ವೆ, ಆರ್ಥಿಕತೆ ಮತ್ತು ಕಡಲ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವ ಸಾಧನೆಗಳನ್ನು ಮಾಡಿದೆ. ISRO ಉಪಗ್ರಹ ಉಡಾವಣೆ, ಬುಲೆಟ್ ರೈಲು ಕಾಮಗಾರಿ, ಬಡತನ ಇಳಿಕೆ ಮತ್ತು ಜಿಯೋ ಐಪಿಒ ದಾಖಲೆಗಳು ದೇಶದ ಪ್ರಗತಿಯನ್ನು ಎತ್ತಿ ತೋರಿಸುತ್ತವೆ.
01:21 PM (IST) Nov 04
ಟೈಗರ್ ಶ್ರಾಫ್ ಗುಂಡಿನ ದಾಳಿ ಪ್ರಕರಣದಲ್ಲಿ ಒಂದೊಂದೇ ಕೊಂಡಿಗಳು ಹೊರಬರುತ್ತಿದ್ದು, ಪೊಲೀಸರ ತನಿಖೆ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬರುತ್ತದೆಯೇ ಎಂಬ ಕುತೂಹಲ ಬಾಲಿವುಡ್ ವಲಯದಲ್ಲಿ ಮೂಡಿದೆ.
01:09 PM (IST) Nov 04
Diwali Crackers 2026: ಭಾರದಲ್ಲಿ ದೀಪಾವಳಿ ಹಬ್ಬದಂದು ಮಾತ್ರವಲ್ಲದೆ ಈ ಹಬ್ಬಳ್ಳಲ್ಲೂ ಹೆಚ್ಚು ಪಟಾಕಿ ಸಿಡಿಸಲಾಗುತ್ತದೆ. ಆ ಹಬ್ಬಗಳು ಯಾವವು ತಿಳಿಯಲು ಮುಂದೆ ಓದಿ.
12:53 PM (IST) Nov 04
2026-27ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 585.2 ಕೋಟಿ ರೂ. ಆದಾಯ, ಶೇ. 23.6ರಷ್ಟು ಏರಿಕೆ
ನಿವ್ವಳ ಲಾಭದಲ್ಲಿ ಶೇ. 34.7ರಷ್ಟು ಭಾರಿ ಜಿಗಿತ, ₹76.1 ಕೋಟಿ ಲಾಭ ದಾಖಲು
ಕಜಕಿಸ್ತಾನ್ ಪ್ರವೇಶದೊಂದಿಗೆ 6 ದೇಶಗಳಿಗೆ ಸೇವೆ ವಿಸ್ತರಣೆ, ಒಟ್ಟು 570 ಕ್ಲಿನಿಕ್‌ಗಳ ಬೃಹತ್ ಜಾಲ.
ಕಂಪನಿಯ ಒಟ್ಟು ಆದಾಯದಲ್ಲಿ ವಿದೇಶಿ ವಹಿವಾಟಿನ ಪಾಲು ಶೇ. 47ಕ್ಕೆ ಏರಿಕೆ
12:06 PM (IST) Nov 04
11:26 AM (IST) Nov 04
ಅಮೆರಿದ ಮಧ್ಯಂತರ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಡೋನಾಲ್ಡ್ ಟ್ರಂಪ್ ಮೀಮ್ಸ್ ಹರಿದಾಡುತ್ತಿದೆ. ಟ್ರಂಬ್ ಬೆಂಬಲಿತ ವೀವೆಕ್ ರಾಮಸ್ವಾಮಿ ಹಿನ್ನಡೆ ಅನುಭವಿಸುತ್ತಿದ್ದಂತೆ ಟ್ರಂಪ್ ಫುಲ್ ಟ್ರೋಲ್ ಆಗಿದ್ದಾರೆ.
11:19 AM (IST) Nov 04
ಈ ಪ್ರಕರಣದಲ್ಲಿ ಗೂಗಲ್ ಎಲ್‌ಎಲ್‌ಸಿ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಪರ ವಕೀಲರು ಕೂಡ ಪೈರಸಿ ಸಂಬಂಧಿತ ದೂರುಗಳ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಚಿತ್ರದ ಅನಧಿಕೃತ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಡುವುದನ್ನು ತಡೆಯಲು ಚಿತ್ರತಂಡಕ್ಕೆ ಮತ್ತಷ್ಟು ನೆರವು ಸಿಕ್ಕಂತಾಗಿದೆ.
10:13 AM (IST) Nov 04
08:26 AM (IST) Nov 04