LIVE NOW
Published : Oct 09, 2026, 07:30 AM ISTUpdated : Oct 09, 2026, 08:16 AM IST

India News Live: ಕೊಲ್ಲಿ ಯುದ್ಧಕ್ಕೀಗ ಪಾಕಿಸ್ತಾನ ಪ್ರವೇಶ - ಸೌದಿ ಮೇಲಿನ ದಾಳಿಗೆ ಪಾಕ್‌ ಪ್ರತಿದಾಳಿ, ಭಾರತದ ವಿಮಾನ ಸಂಚಾರ ರದ್ದು

ಸಾರಾಂಶ

ಜಿಎಸ್‌ಟಿ ಅಧಿಕಾರಿಗಳಿಗಿದ್ದ ಬಂಧನ ಅಧಿಕಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಹಾಗೂ ಕ್ರಿಮಿನಲ್ ಪ್ರಾಸಿಕ್ಯೂಷನ್ (ಅಭಿಯೋಜನೆ) ಪ್ರಕ್ರಿಯೆ ಆರಂಭಿಸಲು ಇದ್ದ ಕನಿಷ್ಠ ಮಿತಿಯನ್ನು 1 ಕೋಟಿ ರು.ನಿಂದ 5 ಕೋಟಿ ರು.ಗೆ ಏರಿಸಲು ಜಿಎಸ್‌ಟಿ ಮಂಡಳಿಯು ಗುರುವಾರ ನಡೆದ ತನ್ನ 57ನೇ ಸಭೆಯಲ್ಲಿ ಅನುಮೋದನೆ ನೀಡಿದೆ.

ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ದೈನಂದಿನ ತೆರಿಗೆ ಆಡಳಿತ ವ್ಯವಸ್ಥೆಯು ಸರಳವಾಗಿ ಹಾಗೂ ತೆರಿಗೆದಾರರ ಮೇಲೆ ನಂಬಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಉದ್ಯಮ ನಡೆಸುವವರನ್ನು ಮತ್ತು ತೆರಿಗೆದಾರರನ್ನು ಸರ್ಕಾರ ನಂಬಬೇಕು. ಅವರ ನಡುವಿನ ವಹಿವಾಟುಗಳಲ್ಲಿ ಅನಗತ್ಯ ಸರ್ಕಾರಿ ಹಸ್ತಕ್ಷೇಪ ಹಾಗೂ ತನಿಖೆಗಳ ಕಿರುಕುಳ ಇರಬಾರದು’ ಎಂದು ಸ್ಪಷ್ಟಪಡಿಸಿದರು.

ದಂಡ ಮತ್ತು ಶಿಕ್ಷೆ ನಿಯಮ ಸಡಿಲಿಕೆ:

ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರವನ್ನು ಹಿಂಪಡೆಯುವುದರ ಜತೆಗೆ, ಕನಿಷ್ಠ ಶಿಕ್ಷೆಯ ನಿಯಮವನ್ನು ರದ್ದುಗೊಳಿಸಲಾಗಿದೆ. ಪ್ರತಿಯೊಂದು ಪ್ರಕರಣದಲ್ಲೂ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸುವ ಸಂಪೂರ್ಣ ಅಧಿಕಾರವನ್ನು ನ್ಯಾಯಾಂಗದ ವಿವೇಚನೆಗೆ ಬಿಡಲಾಗಿದೆ.

08:16 AM (IST) Oct 09

ಕೊಲ್ಲಿ ಯುದ್ಧಕ್ಕೀಗ ಪಾಕಿಸ್ತಾನ ಪ್ರವೇಶ - ಸೌದಿ ಮೇಲಿನ ದಾಳಿಗೆ ಪಾಕ್‌ ಪ್ರತಿದಾಳಿ, ಭಾರತದ ವಿಮಾನ ಸಂಚಾರ ರದ್ದು

ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮೆಕ್ಕಾ ಒಪ್ಪಂದದ ಅನ್ವಯ ಪಾಕಿಸ್ತಾನವು ಯೆಮೆನ್‌ನಲ್ಲಿರುವ ಹೌತಿ ನೆಲೆಗಳ ಮೇಲೆ ವಾಯುದಾಳಿ ನಡೆಸುವ ಮೂಲಕ ಯುದ್ಧ ಪ್ರವೇಶಿಸಿದೆ. ಈ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತದಿಂದ ರಿಯಾದ್‌ಗೆ ತೆರಳುವ ವಿಮಾನಗಳನ್ನು ಅಕ್ಟೋಬರ್ 10ರವರೆಗೆ ರದ್ದುಗೊಳಿಸಲಾಗಿದೆ.

Read Full Story

07:42 AM (IST) Oct 09

ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರ ರದ್ದು - ಪ್ರಾಸಿಕ್ಯೂಷನ್ ಮಿತಿ ₹5 ಕೋಟಿಗೆ ಏರಿಕೆ, ತೆರಿಗೆದಾರರಿಗೆ ರಿಲೀಫ್!

57ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರವನ್ನು ರದ್ದುಗೊಳಿಸಲಾಗಿದೆ ಮತ್ತು ಕ್ರಿಮಿನಲ್ ಪ್ರಾಸಿಕ್ಯೂಷನ್ ಮಿತಿಯನ್ನು 5 ಕೋಟಿ ರೂ.ಗೆ ಏರಿಸಲಾಗಿದೆ. ದಂಡದ ಮೊತ್ತವನ್ನು ಕಡಿತಗೊಳಿಸಿದ್ದು, ಸಣ್ಣಪುಟ್ಟ ತಪ್ಪುಗಳಿಗೆ ಕಠಿಣ ಕ್ರಮ ಜರುಗಿಸದಿರಲು ನಿರ್ಧರಿಸಲಾಗಿದೆ. ಈ ಹೊಸ ನಿಯಮಗಳು 2027ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.
Read Full Story

More Trending News