ಟೆಹ್ರಾನ್: ಇರಾನ್‌ಗೆ ಸಹಾಯಾರ್ಥವಾಗಿ ಭಾರತ ನೀಡುತ್ತಿರುವ ಮಾನವೀಯ ನೆರವನ್ನು ಸಂಗ್ರಹಿಸಲು ಈ ವಾರಾಂತ್ಯ ಭಾರತಕ್ಕೆ ಬರಲಿದ್ದ ಇರಾನ್‌ನ ವಿಮಾನವೊಂದರ ಮೇಲೆ ಅಮೆರಿಕ ದಾಳಿ ನಡೆಸಿದೆ. ಮಹಾನ್ ಏರ್‌ಲೈನ್ಸ್‌ಗೆ ಸೇರಿದ ಈ ವಿಮಾನವು ಈ ವಾರದ ಅಂತ್ಯದಲ್ಲಿ ಭಾರತಕ್ಕೆ ಬರಲು ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಅಮೆರಿಕದ ದಾಳಿಗೆ ಬಲಿಯಾಗಿದೆ. ಇತ್ತೀಚೆಗೆ ಕಾಶ್ಮೀರಿಗಳು ಇರಾನ್‌ಗೆ ಹಣ, ಆಭರಣಗಳು ಮತ್ತು ಇತರ ವಸ್ತುಗಳನ್ನು ದಾನ ಮಾಡಿದ್ದರು. ಅದಕ್ಕೆ ಇರಾನ್ ಧನ್ಯವಾದವನ್ನೂ ಅರ್ಪಿ

11:33 PM (IST) Mar 31
10:47 PM (IST) Mar 31
ಜೈಪುರದಲ್ಲಿ ವಿದೇಶಿ ಕಲಾವಿದೆಯೊಬ್ಬರು ಆನೆಗೆ ಪಿಂಕ್ ಬಣ್ಣ ಬಳಿದು ನಡೆಸಿದ ಫೋಟೋಶೂಟ್ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ಚಂಚಲ್ ಹೆಸರಿನ ಆನೆ ಸಾವನ್ನಪ್ಪಿದ್ದು,, ಅದರ ಸಾವಿಗೆ ಫೋಟೋಶೂಟ್ ಕಾರಣ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
08:56 PM (IST) Mar 31
ಸಿಎಸ್‌ಕೆ ಸೋಲಿಸಲು ಬರ್ತ್‌ಡೇ ಕೇಕ್ ಕಟ್ಟಿಂಗ್ ತ್ಯಾಗ ಮಾಡಿದ ವೈಭವ್ ಸೂರ್ಯವಂಶಿ, 15 ರ ಪೋರ ಮೊದಲ ಪಂದ್ಯದಲ್ಲೇ ಅತೀವೇಗದ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದು ಮಾತ್ರವಲ್ಲ, ರಾಜಸ್ಥಾನಕ್ಕೆ ಭರ್ಜರಿ ಗೆಲುವು ನೀಡಿದ್ದಾರೆ.
08:27 PM (IST) Mar 31
08:11 PM (IST) Mar 31
ದಿವ್ಯಶಕ್ತಿ ಮತ್ತು ಪವಾಡದ ಹೆಸರಿನಲ್ಲಿ ನಕಲಿ ಬಾಬಾಗಳು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಕರಾಳ ಸತ್ಯವನ್ನು ಈ ಲೇಖನ ಅನಾವರಣಗೊಳಿಸುತ್ತದೆ. ಇಬ್ಬರು ಸಂತ್ರಸ್ತೆಯರ ಭಯಾನಕ ಅನುಭವವನ್ನು ಸುದ್ದಿವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.
07:29 PM (IST) Mar 31
ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್, ತಮ್ಮ ವೃತ್ತಿಜೀವನದ ಆರಂಭದಲ್ಲಿ 'ಪನೌತಿ' ಅಥವಾ 'ಅಪಶಕುನಿ' ಎಂಬ ಪಟ್ಟವನ್ನು ಎದುರಿಸಿದ್ದರು. ಮಲಯಾಳಂ ಚಿತ್ರವೊಂದು ನಿಂತುಹೋದ ಕಾರಣ, 9 ಚಿತ್ರಗಳಿಂದ ಕೈಬಿಡಲಾಗಿತ್ತು. ಅವರು 'ಪರಿಣೀತಾ' ಮತ್ತು 'ಡರ್ಟಿ ಪಿಕ್ಚರ್' ನಂತಹ ಚಿತ್ರಗಳ ಮೂಲಕ ಸ್ಟಾರ್ ಆಗಿ ಬೆಳೆದರು.
06:30 PM (IST) Mar 31
06:29 PM (IST) Mar 31
ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ ಕೊರತೆಗೆ ಪರಿಹಾರವಾಗಿ, ಬಳಸಿ ಎಸೆದ ಎಂಜಿನ್ ಆಯಿಲ್‌ನಿಂದ ಉರಿಯುವ 'ಮ್ಯಾಜಿಕ್ ಸ್ಟೌವ್' ಅನ್ನು ಕಂಡುಹಿಡಿದಿದ್ದಾರೆ. ಗ್ಯಾಸ್ ಸಿಲಿಂಡರ್ ಅವಲಂಬನೆಯಿಲ್ಲದೆ ತಮ್ಮ ಜಿಲೇಬಿ ವ್ಯಾಪಾರವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ.
06:01 PM (IST) Mar 31
ಬಿಹಾರದ ನಳಂದ ಜಿಲ್ಲೆಯ ಶೀತಲಾ ಮಾತಾ ದೇವಾಲಯದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ನಿರೀಕ್ಷೆ ಮೀರಿ ಜನಸಂದಣಿ ಸೇರಿದ್ದರಿಂದ ಮತ್ತು ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ.
05:47 PM (IST) Mar 31
'ಪೆದ್ದಿ' ಸಿನಿಮಾಗಾಗಿ ರಾಮ್ ಚರಣ್ ಸಂಪೂರ್ಣ ಸಸ್ಯಾಹಾರ ಸೇವಿಸಿ, 8 ತಿಂಗಳ ಕಠಿಣ ತಾಲೀಮಿನಿಂದ ದೈತ್ಯ ದೇಹವನ್ನು ಪಡೆದಿದ್ದಾರೆ. ಈ ಬಗ್ಗೆ ನಿರ್ದೇಶಕ ಬುಚಿ ಬಾಬು ಸನಾ ಮಾಹಿತಿ ಹಂಚಿಕೊಂಡಿದ್ದಾರೆ.
05:38 PM (IST) Mar 31
ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು, ಜೀವಂತ ಬೆಟ್ಟಾ ಮೀನುನ್ನು ಕಾಕ್‌ಟೇಲ್‌ನಲ್ಲಿ ಹಾಕಿ ಕೊಡಲಾಗುತ್ತಿತ್ತು. ಕಾಕ್‌ಟೇಲ್‌ನಲ್ಲಿ ಮೀನು ಹಾಕಿ ನೀಡುವುದೇಕೆ?
05:25 PM (IST) Mar 31
05:15 PM (IST) Mar 31
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, "ನೀವು ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೀರಿ, ಆದರೂ ಯಾಕೆ ಇನ್ನೂ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಿದ್ದೀರಿ?" ಎಂದು ಕಯಾದುಗೆ ಪ್ರಶ್ನೆ ಕೇಳಿದರು.
04:59 PM (IST) Mar 31
ಯುಎಇಯಲ್ಲಿರುವ ಅಮೆರಿಕದ ಹಿರಿಯ ಕಮಾಂಡರ್‌ಗಳ ಸಭೆಯನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಇದಕ್ಕೂ ಮುನ್ನ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಈ ಸಂಘರ್ಷವು ಕೊಲ್ಲಿ ರಾಷ್ಟ್ರಗಳಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸಿದೆ.
04:53 PM (IST) Mar 31
04:51 PM (IST) Mar 31
ಅಜಿತ್ ಕುಮಾರ್ 'ಕಪಲ್ ಗೋಲ್ಸ್' ಎನಿಸುವಂತಹ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಜಿತ್ ತಮ್ಮ ಸ್ಪೆಷಲ್ ಬಿರಿಯಾನಿ ಮಾಡುತ್ತಿದ್ದಾಗ, ಪತ್ನಿ ಶಾಲಿನಿ ಅವರನ್ನು ತಮಾಷೆ ಮಾಡಿದ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.
04:36 PM (IST) Mar 31
ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ 'ಇಂಡಿಗೋ' (IndiGo), ಜಾಗತಿಕ ವಾಯುಯಾನ ಕ್ಷೇತ್ರದ ದಿಗ್ಗಜ ವಿಲಿಯಂ ವಾಲ್ಷ್ ಅವರನ್ನು ತನ್ನ ನೂತನ ಸಿಇಒ (CEO) ಆಗಿ ನೇಮಕ ಮಾಡಿದೆ.ಇಂಡಿಗೋದ ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ಹಠಾತ್ ಆಗಿ ರಾಜೀನಾಮೆ ನೀಡಿದ ಮೂರು ವಾರಗಳ ಒಳಗೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ.
03:32 PM (IST) Mar 31
ಮಧ್ಯಪ್ರದೇಶದ 20 ವರ್ಷದ ಯುವಕ ಬಿಟ್ಟು ತಬಾಹಿ, ತೀವ್ರ ಕಲುಷಿತಗೊಂಡಿದ್ದ ಅಜ್ನರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಿದ್ದಾರೆ. ಟೀಕೆಗಳನ್ನು ಮೆಟ್ಟಿನಿಂತ, ಅವರ ದೃಢ ಸಂಕಲ್ಪದಿಂದ ನದಿಗೆ ಮರುಜೀವ ಬಂದಿದ್ದು, ಟೀಕಿಸಿದವರೇ ಹೊಗಳುತ್ತಿದ್ದಾರೆ.
03:16 PM (IST) Mar 31
03:13 PM (IST) Mar 31
ಗುರೂಜಿಯ 150 ಮಹಿಳೆಯರ ರಾಸಲೀಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್, ಪತ್ನಿಯರ ಸ್ವಾಪಿಂಗ್ ಬಯಲು, ಪೂಜೆ, ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯರನ್ನು ಕಚೇರಿಯಲ್ಲೇ ಬಳಸಿಕೊಂಡ ಪ್ರಕರಣದಲ್ಲಿ ಇದೀಗ ಮತ್ತೊಂದ ಗಂಭೀರ ಆರೋಪ ಕೇಳಿಬಂದಿದೆ.
02:46 PM (IST) Mar 31
1920ರ ತ್ರಿಪಕ್ಷೀಯ ಒಪ್ಪಂದವನ್ನು ಉಲ್ಲೇಖಿಸಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜಸ್ಥಾನದಿಂದ ₹1.44 ಲಕ್ಷ ಕೋಟಿ ನೀರಿನ ರಾಯಲ್ಟಿ ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ. 1960ರಿಂದ ರಾಜಸ್ಥಾನ ಹಣ ಪಾವತಿಸಿಲ್ಲ ಎಂದು ಪಂಜಾಬ್ ಆರೋಪಿಸಿದೆ.
01:53 PM (IST) Mar 31
01:52 PM (IST) Mar 31
01:28 PM (IST) Mar 31
Software engineer salary jump: ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಬೆಂಗಳೂರಿನ ಸಾಫ್ಟ್‌ವೇರ್ ಡೆವಲಪರ್ ಹೇಗೆ 80 ಲಕ್ಷದ ಗೂಗಲ್ ಉದ್ಯೋಗ ಗಿಟ್ಟಿಸಿದೆ ಎಂಬುದನ್ನು ಹೇಳಿಕೊಂಡಿದ್ದು ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.
01:28 PM (IST) Mar 31
ಸದ್ಯ ಧುರಂಧರ್ 2 ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತ ಹೊಸಹೊಸ ದಾಖಲೆ ಸೃಷ್ಟಿಸುತ್ತ ಸಾಗುತ್ತಿದೆ. 12ನೇ ದಿನಕ್ಕೆ ಇಷ್ಟೊಂದು ಕಲೆಕ್ಷನ್ ಮಾಡಿರುವ ಈ ಸಿನಿಮಾ ಮುಂದೆ ಇನ್ನೂ ಹೆಚ್ಚಿನ ಗಳಿಕೆ ಮಾಡೋದಂತೂ ಖಂಡಿತ. ಈ ಚಿತ್ರದ ಗಳಿಕೆ ಸದ್ಯಕ್ಕಂತೂ ಯಾವುದೇ ಬ್ರೇಕ್ ಇಲ್ಲದೇ ನಾಗಾಲೋಟ ಮುಂದುವರಿಸಿದೆ. ಆದರೆ ಏನಿದು ಲೆಫ್ಟ್-ರೈಟ್?
01:23 PM (IST) Mar 31
ನಟಿ-ನಿರ್ದೇಶಕಿ ರೂಪಾ ಅಯ್ಯರ್ ಅವರ ನೇತಾಜಿ ಸುಭಾಷ್‌ಚಂದ್ರ ಬೋಸ್ ಕುರಿತ 'ಆಜಾದ್ ಭಾರತ್' ಹಿಂದಿ ಚಿತ್ರವು ಸಂಸತ್ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರವು ಬೋಸ್ ಸ್ಥಾಪಿಸಿದ ಮೊದಲ ಮಹಿಳಾ ಸೈನ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಕಥೆಯನ್ನು ಹೇಳುತ್ತದೆ.
01:11 PM (IST) Mar 31
01:10 PM (IST) Mar 31
ಆದಾಯ ತೆರಿಗೆ ಇಲಾಖೆಯು ನಗದು ವ್ಯವಹಾರಗಳ ಮೇಲೆ ಕಠಿಣ ಮಿತಿಗಳನ್ನು ವಿಧಿಸಿದೆ. ದಿನನಿತ್ಯದ ವ್ಯವಹಾರ, ಆಸ್ತಿ ಖರೀದಿ, ಕೈಸಾಲ, ಮತ್ತು ಬಾಡಿಗೆ ಅಡ್ವಾನ್ಸ್ ಸೇರಿದಂತೆ ಹಲವು ವಹಿವಾಟುಗಳಿಗೆ ಮಿತಿ ನಿಗದಿಪಡಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ 100% ದಂಡ ತೆರಬೇಕಾಗುತ್ತದೆ.
12:50 PM (IST) Mar 31
ಜೀವನಾಂಶ ಪಡೆಯಲು ಪತಿಯ ಆದಾಯವನ್ನು ಹೆಚ್ಚಿಸಿ ಹೇಳಿದ ಪತ್ನಿಯ ವಿರುದ್ಧಸುಳ್ಳು ಸಾಕ್ಷ್ಯದ ಆರೋಪದಡಿ ಕ್ರಿಮಿನಲ್ ಕ್ರಮಜರುಗಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
12:38 PM (IST) Mar 31
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಪಂಜಾಬ್ ಕಿಂಗ್ಸ್ ತಂಡದ ಯುವ ಆಟಗಾರ ಶಶಾಂಕ್ ಸಿಂಗ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವೆಲ್ಲಾ ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.
12:23 PM (IST) Mar 31
Fuel price hike in America: ಇರಾನ್, ಅಮೆರಿಕಾ ಮತ್ತು ಇಸ್ರೇಲ್ ನಡುವಿನ ಯುದ್ಧವು 32ನೇ ದಿನಕ್ಕೆ ಕಾಲಿಟ್ಟಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಸಂಘರ್ಷದಿಂದಾಗಿ, ಅಮೆರಿಕಾದಲ್ಲಿ ಮೂರು ವರ್ಷಗಳಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್‌ಗೆ 4 ಡಾಲರ್‌ಗೆ ಏರಿಕೆಯಾಗಿದೆ.
12:17 PM (IST) Mar 31
ಒಂದು ಕಾಲದಲ್ಲಿ 'ಬಾಹುಬಲಿ 2' ಬರೆದಿದ್ದ ದಾಖಲೆಗಳು ಅಳಿಸಲಾಗದ ಮೈಲಿಗಲ್ಲು ಎನ್ನಲಾಗುತ್ತಿತ್ತು. ಆದರೆ, 'ಧುರಂಧರ್ 2' (Dhurandhar 2) ಈಗ ಆ ಇತಿಹಾಸವನ್ನು ತಿರುಗಿ ಬರೆದಿದೆ. ಪುಷ್ಪ 2, ಬಾಹುಬಲಿ 2 ಮತ್ತು ದಂಗಲ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ ಈ ಸಿನಿಮಾ 'ಧುರಂಧರ್ 2'.
11:59 AM (IST) Mar 31
10:53 AM (IST) Mar 31
10:22 AM (IST) Mar 31
10:21 AM (IST) Mar 31
09:31 AM (IST) Mar 31
ಅಸ್ಸಾಂನಲ್ಲಿ ಯುವಕರಿಗೆ ಉತ್ತಮ ಅವಕಾಶಗಳಿಲ್ಲದ ಕಾರಣ, ಸ್ವತಃ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪುತ್ರ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
09:11 AM (IST) Mar 31
09:01 AM (IST) Mar 31
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದ ಮದುವೆಯೊಂದರಲ್ಲಿ, ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಕಡಿಮೆ ಇದೆ ಎಂಬ ಕಾರಣಕ್ಕೆ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ಈ ಸಣ್ಣ ಜಗಳವು ವಿಕೋಪಕ್ಕೆ ತಿರುಗಿ, ಮದುವೆ ಮನೆಯೇ ರಣರಂಗವಾಯ್ತು, ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಬೇಕಾಯಿತು.
08:33 AM (IST) Mar 31