LIVE NOW
Published : Mar 09, 2026, 06:42 AM ISTUpdated : Mar 09, 2026, 10:24 PM IST

India Latest News Live: ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು?

ಸಾರಾಂಶ

ವಾಷಿಂಗ್ಟನ್‌: ‘ಇರಾನ್‌ ವಿರುದ್ಧದ ಯುದ್ಧದಲ್ಲಿ ನಮಗೆ ಬ್ರಿಟನ್‌ ಸಹಾಯ ಬೇಕಿಲ್ಲ. ಈಗಾಗಲೇ ಯುದ್ಧವನ್ನು ಗೆದ್ದ ನಂತರ ಯಾರೂ ಕೈಜೋಡಿಸುವ ಅಗತ್ಯವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬ್ರಿಟನ್‌ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.

ಅಮೆರಿಕಕ್ಕೆ ನೆರವು ನೀಡಲು ತಮ್ಮ ಯುದ್ಧನೌಕೆ ಸರ್ವಸನ್ನದ್ಧವಾಗಿದೆ ಎಂದು ಶನಿವಾರ ಬ್ರಿಟನ್‌ ರಕ್ಷಣಾ ಸಚಿವಾಲಯ ಹೇಳಿತ್ತು. ಇದನ್ನು ತಿರಸ್ಕರಿಸಿರುವ ಟ್ರಂಪ್‌, ‘ಒಂದು ಕಾಲದಲ್ಲಿ ನಮಗೆ ಎಲ್ಲರಿಗಿಂತ ಶ್ರೇಷ್ಠ ಮಿತ್ರನಾಗಿದ್ದ ಬ್ರಿಟನ್‌, ಮಧ್ಯಪ್ರಾಚ್ಯಕ್ಕೆ 2 ಯುದ್ಧವಾಹಕ ನೌಕೆಗಳನ್ನು ಕಳಿಸಲು ಚಿಂತನೆ ನಡೆಸುತ್ತಿದೆ. ಆದರೆ ಇನ್ನು ನಮಗೆ ಅವುಗಳ ಅಗತ್ಯವಿಲ್ಲ. ಯುದ್ಧ ಗೆದ್ದ ನಂತರ ಕೈಜೋಡಿಸುವ ಜನ ನಮಗೆ ಬೇಕಿಲ್ಲ’ ಎಂದು ಟ್ರುತ್‌ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

10:24 PM (IST) Mar 09

ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು?

ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು? ಜೆರುಸಲೇಂನಲ್ಲಿರುವ ಈ ಮಸೀದಿ ಇಸ್ರೇಲ್ ಸರ್ಕಾರದ ವ್ಯಾಪ್ತಿಯಲ್ಲಿದೆ. ಇದೀಗ ಈ ಮಸೀದಿಯನ್ನು ಇಸ್ರೇಲ್ ಬಂದ್ ಮಾಡಿಸಿದೆ.

 

Read Full Story

09:58 PM (IST) Mar 09

IDBI ಬ್ಯಾಂಕ್‌ನಿಂದ ನೇಮಕಾತಿ ಕರೆ - 1300 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರ ಭವಿಷ್ಯ ಬದಲಾಗುವುದೇ?

IDBI ಬ್ಯಾಂಕ್ ದೇಶಾದ್ಯಂತ 1300 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (JAM) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ವಿಭಾಗದಲ್ಲಿ ಪದವಿ ಪಡೆದ 20 ರಿಂದ 25 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ.
Read Full Story

09:55 PM (IST) Mar 09

ಯಾವುದೇ ಕಾರಣಕ್ಕೂ ಈ ಒಂದು ಬೆರಳಿಗೆ ಚಿನ್ನದ ಉಂಗುರ ಹಾಕ್ಬೇಡಿ - 21 ದಿನ ನೀವೇ ಟೆಸ್ಟ್​ ಮಾಡಿ ನೋಡಿ!

ಜ್ಯೋತಿಷ ಶಾಸ್ತ್ರದ ಪ್ರಕಾರ, ಒಂದು ಬೆರಳು ಶನಿ ಮಹಾತ್ಮನಿಗೆ ಸಂಬಂಧಿಸಿದ್ದಾಗಿದ್ದು, ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ, ನಿರಾಸೆ ಮತ್ತು ನಿಧಾನಗತಿಯ ಪ್ರಗತಿ ಉಂಟಾಗಬಹುದು.  21 ದಿನಗಳ ಕಾಲ ಉಂಗುರವನ್ನು ತೆಗೆದು ವ್ಯತ್ಯಾಸವನ್ನು ಗಮನಿಸಿ ಎನ್ನುತ್ತಾರೆ ಅವರು.

Read Full Story

08:44 PM (IST) Mar 09

ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ 2026 - 25000 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಭಾರತೀಯ ಸೇನೆಯು ಅಗ್ನಿವೀರ್ ಜನರಲ್ ಡ್ಯೂಟಿ, ಟ್ರೇಡ್ಸ್‌ಮನ್, ಮತ್ತು ಕ್ಲರ್ಕ್ ಸೇರಿದಂತೆ 25,000ಕ್ಕೂ ಹೆಚ್ಚು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 10ನೇ ಅಥವಾ 12ನೇ ತರಗತಿ ಪಾಸಾದ 17.5 ರಿಂದ 22 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ ಮತ್ತು ನೇಮಕಾತಿ ರ‍್ಯಾಲಿಯನ್ನು ಒಳಗೊಂಡಿರುತ್ತದೆ.
Read Full Story

08:22 PM (IST) Mar 09

ರಾಮೇಶ್ವರಂ ಕೆಫೆಯಲ್ಲಿ ಇಡ್ಲಿ ಸಾಂಬಾರ್‌ ಸವಿದ ಮುಖೇಶ್‌ ಅಂಬಾನಿ!

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ಮುಂಬೈನ 'ರಾಮೇಶ್ವರಂ ಕೆಫೆ'ಗೆ ಭೇಟಿ ನೀಡಿದ್ದರು. ಶತಕೋಟ್ಯಾಧಿಪತಿಯಾದರೂ ಸಾಮಾನ್ಯರಂತೆ ಕೆಫೆಗೆ ಬಂದ ಅವರ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

07:55 PM (IST) Mar 09

ಫ್ರೀ ಬಸ್​ ಜೊತೆ ಮಹಿಳೆಯರಿಗೆ ಚಿನ್ನ, ದುಡ್ಡು , ರೇಷ್ಮೆ ಸೀರೆ, ಸಿಲಿಂಡರ್‌ ಎಲ್ಲವೂ ಉಚಿತ- ಏನಿದು ಸ್ಕೀಮ್​?

 'ತಮಿಳಿಗ ವೆಟ್ರಿ ಕಳಗಂ' ಪಕ್ಷದ ಮೂಲಕ 'ಅಣ್ಣನ್ ಸೀರ್' ಎಂಬ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ಮದುವೆಗೆ 8 ಗ್ರಾಂ ಚಿನ್ನ, ವರ್ಷಕ್ಕೆ 6 ಉಚಿತ ಸಿಲಿಂಡರ್‌ಗಳು ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯದಂತಹ ಹಲವು ಉಚಿತ ಕೊಡುಗೆಗಳನ್ನು ನೀಡುವ ಭರವಸೆ ನೀಡಿದ್ದಾರೆ. 

Read Full Story

07:55 PM (IST) Mar 09

ಅಮಾನ್ ಗುಪ್ತಾ 'ಮ್ಯಾಜಿಕ್' - 3.75 ಕೋಟಿಯ ಬಿಸಿನೆಸ್ ಈಗ 1,100 ಕೋಟಿ ರೂಪಾಯಿ ಸಾಮ್ರಾಜ್ಯ!

ಶಾರ್ಕ್ ಟ್ಯಾಂಕ್ ಇಂಡಿಯಾದ ಪ್ರಮುಖ ಹೂಡಿಕೆದಾರ ಅಮಾನ್ ಗುಪ್ತಾ, ತಾವು ಬೆಂಬಲಿಸಿದ ಸ್ಟಾರ್ಟ್‌ಅಪ್‌ಗಳ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. 'ಲೆಟ್ಸ್ ಟ್ರೈ' ಮತ್ತು 'EM5 ಪರ್ಫ್ಯೂಮ್' ನಂತಹ ಕಂಪನಿಗಳು ಅವರ ಹೂಡಿಕೆಯ ನಂತರ ಮೌಲ್ಯ ಮತ್ತು ಆದಾಯದಲ್ಲಿ ಅಗಾಧ ಬೆಳವಣಿಗೆ ಕಂಡಿವೆ. 

Read Full Story

07:38 PM (IST) Mar 09

ನಿಷ್ಠೆ ಇದ್ದರೂ ಕೆಲಸಕ್ಕೆ ಸಿಗದ ಮನ್ನಣೆ - ರಾಜೀನಾಮೆ ಬಳಿಕ ಕಂಪೆನಿಯೊಳಗೆ ವೈರಲ್ ಆದ ಉದ್ಯೋಗಿಯ ಕಥೆ!

ಹನ್ನೊಂದು ವರ್ಷಗಳ ಕಾಲ ನಿಷ್ಠೆಯಿಂದ ದುಡಿದರೂ ಬಡ್ತಿ ಮತ್ತು ಮನ್ನಣೆ ಸಿಗದ ಉದ್ಯೋಗಿಯೊಬ್ಬರ ಕಥೆಯಿದು. ಕಚೇರಿ ರಾಜಕೀಯದಿಂದ ದೂರವಿದ್ದ ಅವರು, ಹೊಸ ಉದ್ಯೋಗಿಗೆ ತರಬೇತಿ ನೀಡಿದ ನಂತರ ತಮ್ಮ ಮೌಲ್ಯವನ್ನು ಅರಿತುಕೊಂಡು ರಾಜೀನಾಮೆ ನೀಡುತ್ತಾರೆ. ಅವರ ಈ ನಿರ್ಧಾರ ಮತ್ತು ಅದರ ನಂತರದ ಘಟನೆಗಳು ಕೆಲಸದ ಸ್ಥಳದಲ್ಲಿನ ನಿಷ್ಠೆಯ ಮೌಲ್ಯದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

07:31 PM (IST) Mar 09

Car Discount - 1 ಲೀಟರ್‌ಗೆ 27.97 ಕಿಮೀ ಮೈಲೇಜ್, 1 ಲಕ್ಷ ರೂಪಾಯಿ ಡಿಸ್ಕೌಂಟ್ ಇರುವ ಎಸ್‌ಯುವಿ ಆಫರ್ ಮಿಸ್ ಮಾಡ್ಕೋಬೇಡಿ!

ಟೊಯೋಟಾ ಹೈರೈಡರ್‌ ಮೇಲೆ 1 ಲಕ್ಷ ರೂಪಾಯಿವರೆಗೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಸೆಲ್ಫ್ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಈ ಕಾರು, ಪ್ರತಿ ಲೀಟರ್‌ಗೆ 27.97 ಕಿ.ಮೀ. ಮೈಲೇಜ್ ನೀಡುತ್ತದೆ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
Read Full Story

07:24 PM (IST) Mar 09

Salim Khan Health Update - ಸಲ್ಮಾನ್ ಖಾನ್ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಯಾವಾಗ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್

ಸಲ್ಮಾನ್ ಖಾನ್ ಅವರ 90 ವರ್ಷದ ತಂದೆ ಸಲೀಂ ಖಾನ್, ಸಣ್ಣ ಬ್ರೈನ್ ಹೆಮರೇಜ್ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 14 ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಇದೀಗ ಅವರ ಆರೋಗ್ಯದ ಬಗ್ಗೆ ಹೊಸ ಅಪ್‌ಡೇಟ್ ಬಂದಿದೆ.

Read Full Story

07:06 PM (IST) Mar 09

Aishwarya Lekshmi - 'ಸ್ನಾನ ಮಾಡ್ತಿದ್ದಾಗ ಬಂದ್ರಾ' ಅಂದ್ರು... ಟ್ರೋಲ್‌ಗಳಿಗೆ ನಟಿ ಕೊಟ್ಟ ಸಖತ್ ಉತ್ತರವೇನು!

ನಟಿ ಐಶ್ವರ್ಯ ಲಕ್ಷ್ಮಿ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಹಾಕಿದ್ದ ಡ್ರೆಸ್‌ನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಹಳದಿ ಬಣ್ಣದ ಸ್ಟ್ರಾಪ್‌ಲೆಸ್, ಸ್ಲೀವ್‌ಲೆಸ್ ಡ್ರೆಸ್ ಹಾಕಿಕೊಂಡು ಅವರು ಒಂದು ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು.

Read Full Story

06:56 PM (IST) Mar 09

ಜನನಾಯಗನ್ ರೀ-ಸೆನ್ಸಾರ್, ಸಿಗುತ್ತಾ ಗ್ರೀನ್ ಸಿಗ್ನಲ್? ಟಾಕ್ಸಿಕ್‌​ಗೂ ಮುನ್ನ ಜನನಾಯಗನ್ ರಿಲೀಸ್?

ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನನಾಯಗನ್' ಸೆನ್ಸಾರ್ ವಿವಾದಕ್ಕೆ ಸಿಲುಕಿತ್ತು. ಇಂದು ಚಿತ್ರದ ಮರು-ಸೆನ್ಸಾರ್ ನಡೆಯಲಿದ್ದು, ಅದರ ಭವಿಷ್ಯ ನಿರ್ಧಾರವಾಗಲಿದೆ. ಇದರ ನಡುವೆ ವಿಜಯ್ ಅವರ ವೈಯಕ್ತಿಕ ಜೀವನದ ವಿವಾದಗಳು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ.
Read Full Story

06:34 PM (IST) Mar 09

'2 ವರ್ಷದ ಮಗು ಮೇಲೆ ರೇ*ಪ್ ಆದಾಗ ಕೇಳಲಿಲ್ಲ, ಇವರ ಬಗ್ಗೆ ಯಾಕೆ ಮಾತಾಡ್ತೀರಾ?' - ವಿಜಯ್ ಅಭಿಮಾನಿಯ ಖಡಕ್ ಪ್ರಶ್ನೆ

ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತ ಡೈವೋರ್ಸ್ ಪಡೆಯುತ್ತಿದ್ದಾರೆ, ಇದಕ್ಕೆ ನಟಿ ತ್ರಿಷಾ ಜೊತೆಗಿನ ಸಂಬಂಧವೇ ಕಾರಣ ಅಂತ ಸುದ್ದಿ ಹಬ್ಬಿತ್ತು. ಈಗ ಈ ಗಾಸಿಪ್‌ಗಳ ಬಗ್ಗೆ ಅಭಿಮಾನಿಯೊಬ್ಬರು ಗರಂ ಆಗಿದ್ದು, ಅವರ ಖಾಸಗಿ ಜೀವನದ ಚರ್ಚೆ ಮಾಡುವುದನ್ನು ವಿರೋಧಿಸಿದ್ದಾರೆ.

Read Full Story

06:22 PM (IST) Mar 09

ನವವಧುವಿಗೆ ಗಿಫ್ಟ್ - ‘ಇದು ನಂದೇ ಕಥೆ..’ ಎಂದಿದ್ದ ರಶ್ಮಿಕಾ ಮಂದಣ್ಣ..!

ನವವಧು ರಶ್ಮಿಕಾ ಮಂದಣ್ಣ ಅವರಿಗೆ 'ದಿ ಗರ್ಲ್ ಫ್ರೆಂಡ್' ಚಿತ್ರದ ಮನೋಜ್ಞ ನಟನೆಗಾಗಿ ತೆಲಂಗಾಣ ಸರ್ಕಾರದ ಗದ್ದರ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ವಿಜಯ್ ದೇವರಕೊಂಡ ಜೊತೆಗಿನ ಮದುವೆಯ ನಂತರ ಬಂದ ಈ ಗೌರವ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

Read Full Story

06:19 PM (IST) Mar 09

Prabhas ಅವರ 'ಈಶ್ವರ್' ಚಿತ್ರಕ್ಕೆ ಅಲ್ಲು ಅರ್ಜುನ್ ಫಸ್ಟ್ ಚಾಯ್ಸ್ ಆಗಿದ್ರಾ? ಮಿಸ್ ಆಗಿದ್ದೇಗೆ?

ರೆಬಲ್ ಸ್ಟಾರ್ ಪ್ರಭಾಸ್ ಅವರ ಚೊಚ್ಚಲ ಚಿತ್ರ 'ಈಶ್ವರ್'ಗೆ ಅಲ್ಲು ಅರ್ಜುನ್ ಕೂಡ ಆಡಿಷನ್ ಕೊಟ್ಟಿದ್ದರು ಅನ್ನೋದು ನಿಮಗೆ ಗೊತ್ತಾ? ಮಾಸ್ ಕಟೌಟ್ ಮತ್ತು ಫಿಸಿಕ್ ಸರಿಹೊಂದಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಅಲ್ಲು ಅರ್ಜುನ್ ಅವರನ್ನು ತಿರಸ್ಕರಿಸಿ, ಪ್ರಭಾಸ್ ಅವರನ್ನು ಆಯ್ಕೆ ಮಾಡಿದ್ದರಂತೆ.

Read Full Story

06:16 PM (IST) Mar 09

ಮೂರನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ಚೀತಾ ಜ್ವಾಲಾ, 50 ದಾಟಿದ ಸಂಖ್ಯೆ

ಮೂರನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ಚೀತಾ ಜ್ವಾಲಾ, 50 ದಾಟಿದ ಸಂಖ್ಯೆ, ಕುನೋ ರಾಷ್ಟ್ರೀಯ ಅಭಯಾರಣ್ಯದಲ್ಲಿ ಇದೀಗ ಜ್ವಾಲಾ ಚೀತಾ ಮರಿಗಳ ಸದ್ದು ಕೇಳಿಸುತ್ತಿದೆ. ಕೇಂದ್ರ ಸಚಿವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

 

Read Full Story

05:19 PM (IST) Mar 09

'ಹೊರಗಿನ ಜಗತ್ತಿಗೆ ನಾನು ಹೇಗೇ ಕಂಡರೂ ..' - ವಿಶ್ವಕಪ್ ಗೆಲ್ಲಿಸಿ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಸಂಜು ಸ್ಯಾಮ್ಸನ್

ಟಿ20 ವಿಶ್ವಕಪ್ ಗೆದ್ದ ನಂತರ, ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ಯಶಸ್ಸಿನ ಶ್ರೇಯವನ್ನು ಪತ್ನಿ ಚಾರುಲತಾಗೆ ಸಲ್ಲಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ 321 ರನ್ ಗಳಿಸಿ, ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆ ಬರೆದ ಸಂಜು ಸ್ಯಾಮ್ಸನ್.

Read Full Story

05:14 PM (IST) Mar 09

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ರಾಧಿಕಾ ಸಿನಿಮಾ - 10 ದಿನಕ್ಕೆ ಇಷ್ಟೊಂದು ಕೋಟಿ ಕಲೆಕ್ಷನ್?

ರಾಧಿಕಾ ಶರತ್‌ಕುಮಾರ್ ನಟನೆಯ 'ತಾಯಿ ಕಿಳವಿ' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಕೇವಲ 10 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

Read Full Story

05:02 PM (IST) Mar 09

ಮಹಿಳಾ ಸ್ಕೂಬಾ ಡೈವರ್‌ನ ಎಲ್ಲೆಂದರಲ್ಲಿ ಮುಟ್ಟಿ ಕಿರುಕುಳ ಕೊಟ್ಟ ತರಬೇತುದಾರ, ವಿಡಿಯೋ ಬಹಿರಂಗ

ಮಹಿಳಾ ಸ್ಕೂಬಾ ಡೈವರ್‌ನ ಎಲ್ಲೆಂದರಲ್ಲಿ ಮುಟ್ಟಿ ಕಿರುಕುಳ ಕೊಟ್ಟ ತರಬೇತುದಾರ, ವಿಡಿಯೋ ಬಹಿರಂಗವಾಗಿದೆ. ಯುವತಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಈ ಘಟನೆ ನಡೆದಿದೆ. ಇದೀಗ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ.

 

Read Full Story

04:59 PM (IST) Mar 09

ನೇಮಕಾತಿಯ ಕರಾಳ ಮುಖ - ಅಸಭ್ಯವಾಗಿ ಉತ್ತರಿಸಿದ ಹೆಚ್‌ಆರ್, ವೈರಲ್ ಆದ ವಾಟ್ಸಾಪ್ ಚಾಟ್

ಉದ್ಯೋಗಾಕಾಂಕ್ಷಿಯೊಬ್ಬರು ನೇಮಕಾತಿ ಪ್ರತಿನಿಧಿಯೊಂದಿಗೆ ನಡೆದ ವಾಟ್ಸಾಪ್ ಸಂಭಾಷಣೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಸಂಬಳದ ಮಾತುಕತೆ ವೇಳೆ, HR ಪ್ರತಿನಿಧಿಯು "ನೀವು ಅಷ್ಟು ಸಂಬಳ ನೀಡುವಷ್ಟು ಒಳ್ಳೆಯವರಲ್ಲ" ಎಂದು ಅಸಭ್ಯವಾಗಿ ಉತ್ತರಿಸಿದ್ದು, ಈ ಘಟನೆ ನೇಮಕಾತಿ ಪ್ರಕ್ರಿಯೆಯಲ್ಲಿನ ವೃತ್ತಿಪರತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

04:45 PM (IST) Mar 09

ಯಶ್ ‘ಟಾಕ್ಸಿಕ್’-ರಣವೀರ್ ‘ಧುರಂಧರ್ 2’ - ಅಡ್ವಾನ್ಸ್ ಬುಕಿಂಗ್‌ನಲ್ಲಿ ಯಾರು ಮುಂದೆ?

ಸದ್ಯಕ್ಕೆ ಬಾಕ್ಸಾಫೀಸ್‌ನಲ್ಲಿ ಎರಡು ಸಿನಿಮಾಗಳದ್ದೇ ಸುದ್ದಿ. ಒಂದು ರಣವೀರ್ ಸಿಂಗ್ ನಟನೆಯ 'ಧುರಂಧರ್ 2', ಇನ್ನೊಂದು ಯಶ್ ಅಭಿನಯದ 'ಟಾಕ್ಸಿಕ್'. ಎರಡೂ ಚಿತ್ರಗಳು ಮಾರ್ಚ್ 19 ರಂದು ಒಂದೇ ದಿನ ರಿಲೀಸ್ ಆಗ್ತಿವೆ. ವಿಶ್ವಾದ್ಯಂತ ತೆರೆ ಕಾಣುತ್ತಿರುವ ಈ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಕೂಡ ಶುರುವಾಗಿದೆ.

Read Full Story

04:40 PM (IST) Mar 09

ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ, ಶಕೂನ್ ಗ್ರೂಪ್ ಎಂಡಿ ಸಾವು, BMW ಕಾರು ಪುಡಿ ಪುಡಿ

ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ, ಶಕೂನ್ ಗ್ರೂಪ್ ಎಂಡಿ ಸಾವು, BMW ಕಾರು ಪುಡಿ ಪುಡಿ, ವೇಗವಾಗಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಮಾಜಿ ಸಿಎಂ ಸೇರಿ ಹಲವರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ.

 

Read Full Story

04:28 PM (IST) Mar 09

Priyanka Mohan - 'ಆ ಕರಾಳ ದಿನಗಳಿಗೆ ವಾಪಸ್ ಹೋಗಲ್ಲ.. ನನ್ನ ವಿರುದ್ಧ ದ್ವೇಷದ ಅಭಿಯಾನ ನಡೆದಿತ್ತು' ಎಂದ ನಟಿ

ಡಾನ್, ಕ್ಯಾಪ್ಟನ್ ಮಿಲ್ಲರ್ ಅಂತಹ ಹಿಟ್ ಸಿನಿಮಾಗಳ ಮೂಲಕ ಸೌತ್ ಇಂಡಿಯಾದಲ್ಲಿ ಫೇಮಸ್ ಆದ ನಟಿ ಪ್ರಿಯಾಂಕಾ ಮೋಹನ್, ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ಎದುರಿಸಿದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.

Read Full Story

04:03 PM (IST) Mar 09

ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಗರ್ಭಿಣಿ ಪತ್ನಿಗೆ ಡಿವೋರ್ಸ್ ಕೊಟ್ಟ ಯೂಟ್ಯೂಬರ್

ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಗರ್ಭಿಣಿ ಪತ್ನಿಗೆ ಡಿವೋರ್ಸ್ ಕೊಟ್ಟ ಯೂಟ್ಯೂಬರ್, ಯೂಟ್ಯೂಬರ್ ತನ್ನ ಯೂಟ್ಯೂಬ್ ಶೈಲಿಯಲ್ಲೇ ಡಿವೋರ್ಸ್ ನೀಡಿದ ಘಟನೆ ನಡೆದಿದೆ. ಅತ್ತ ಪತ್ನಿಗೂ ಡಿವೋರ್ಸ್ ಕೊಟ್ಟಿರುವುದು ವಿಡಿಯೋ ನೋಡಿಯೇ ಗೊತ್ತಾಗಿದೆ.

 

Read Full Story

03:59 PM (IST) Mar 09

ಮೈದಾನದಲ್ಲೇ ಹೆಂಡ್ತಿ ಜೊತೆ 'ಹಿಟ್‌ಮ್ಯಾನ್' ಕಿರಿಕ್? ರೋಹಿತ್ ಶರ್ಮಾ Angry ವಿಡಿಯೋ ವೈರಲ್!

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ದೇ ಮೈದಾನದಲ್ಲಿ ಗಂಭೀರವಾಗಿ ಚರ್ಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಟಿ20 ವಿಶ್ವಕಪ್ ವೇಳೆ ನಡೆದ ಈ ಘಟನೆಯು ಇಬ್ಬರ ನಡುವೆ ಜಗಳ ನಡೆದಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

03:57 PM (IST) Mar 09

ಕ್ರಿಕೆಟರ್ ಸೂರ್ಯಕುಮಾರ್ ಪತ್ನಿ ದೇವಿಶಾ ವೈರಲ್ ವಿಡಿಯೋ ಹಿಂದಿನ ಊಹಾಪೋಹ ನಿಜವೇ? ಈ ಹಿಂದೆಯೂ ಇದೇ ರೀತಿ ಆಗಿತ್ತು!

ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಗರ್ಭಿಣಿ ಎಂಬ ವದಂತಿಗಳು ಹಬ್ಬಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಅವರ ಬೇಬಿ ಬಂಪ್ ಕಾಣಿಸಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ದಂಪತಿಗಳಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.
Read Full Story

03:22 PM (IST) Mar 09

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ನೀರಿಲ್ಲದ ಟಾಯ್ಲೆಟ್‌ ನೀಡಿದ ಮಮತಾ ಸರ್ಕಾರ; ಶಿಷ್ಟಾಚಾರ ಲೋಪಕ್ಕೆ ಕೇಂದ್ರ ಗರಂ!

ಪಶ್ಚಿಮ ಬಂಗಾಳ ಪ್ರವಾಸದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆ ಮತ್ತು ಶಿಷ್ಟಾಚಾರದಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ. ಈ 'ಬ್ಲೂ ಬುಕ್' ಉಲ್ಲಂಘನೆಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವರದಿ ಕೇಳಿದೆ.

Read Full Story

03:04 PM (IST) Mar 09

ಬಿಸಿಯೂಟದ ಮಹಿಳಾ ಕುಕ್ ಜೊತೆ ಹೆಡ್ ಮಾಸ್ಟರ್ ಕುಚ್ ಕುಚ್, ಶಾಲಾ ಅಧ್ಯಕ್ಷ ಸೇರಿ ಗ್ರಾಮಸ್ಥರಿಂದ ಗೂಸ

ಬಿಸಿಯೂಟದ ಮಹಿಳಾ ಕುಕ್ ಜೊತೆ ಹೆಡ್ ಮಾಸ್ಟರ್ ಕುಚ್ ಕುಚ್, ಶಾಲಾ ಅಧ್ಯಕ್ಷ ಸೇರಿ ಗ್ರಾಮಸ್ಥರಿಂದ ಗೂಸ, ಕರ್ತವ್ಯದಲ್ಲಿದ್ದಾಗಲೇ ಹೆಡ್ ಮಾಸ್ಟರ್ ಮೇಲೆ ದಾಳಿ ನಡೆಸಲಾಗಿದೆ. ಬಳಿಕ ಚಪ್ಪಲಿ ಹಾರ ಹಾಕಿ ಪರೇಡ್ ನಡೆಸಿದ ಘಟನೆ ನಡೆದಿದೆ.

 

Read Full Story

02:31 PM (IST) Mar 09

ಭಾರತ ವಿಶ್ವಕಪ್ ಮುಡಿಗೇರಿಸುವ ಸಂಭ್ರಮದಲ್ಲಿ ಮಿಸ್‌ಫೈರ್ ಆದ ರವಿಶಾಸ್ತ್ರಿ ಕಾಮೆಂಟರಿ, ಅಭಿಮಾನಿಗಳ ಬೇಸರ!

ಭಾರತ ತಂಡವು ಐತಿಹಾಸಿಕ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ. ಆದರೆ, ಗೆಲುವಿನ ಅಂತಿಮ ಕ್ಷಣದಲ್ಲಿ ಕಾಮೆಂಟೇಟರ್ ರವಿಶಾಸ್ತ್ರಿ ಮಾಡಿದ ಸಣ್ಣ ತಪ್ಪಿನಿಂದಾಗಿ, ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
Read Full Story

02:11 PM (IST) Mar 09

ಸತ್ತಿರುವುದಾಗಿ ಘೋಷಿಸಿದ ವೈದ್ಯರು - 35 ನಿಮಿಷ ನಿರಂತರ ಸಿಪಿಆರ್ ಮಾಡಿ ಪತ್ನಿಯ ಬದುಕಿಸಿದ ಪತಿ..

ಕೋಮಲ್ ಜಮಾವಲ್ ಎಂಬ ಮಹಿಳೆ ಗ್ವಿಲೆನ್-ಬಾರ್ ಸಿಂಡ್ರೋಮ್‌ನಿಂದಾಗಿ ವೈದ್ಯರಿಂದ ಮೃತಪಟ್ಟಿದ್ದಾರೆಂದು ಘೋಷಿಸಲ್ಪಟ್ಟರು. ಆದರೆ, ಅವರ ಪತಿ 35 ನಿಮಿಷಗಳ ಕಾಲ ಸಿಪಿಆರ್ ಮಾಡಿ ಅವರನ್ನು ಬದುಕಿಸಿದ್ದು, ಕುಟುಂಬದ ಬೆಂಬಲದಿಂದ ಚೇತರಿಸಿಕೊಂಡ ತಮ್ಮ ಸ್ಪೂರ್ತಿದಾಯಕ ಕತೆಯನ್ನು ಅವರು ಹಂಚಿಕೊಂಡಿದ್ದಾರೆ.

Read Full Story

02:05 PM (IST) Mar 09

ಡಿವೋರ್ಸ್ ಅರ್ಜಿ ಬಳಿಕ ನಟ ವಿಜಯ್‌ಗೆ ಮತ್ತೆ ಬಿಗ್‌ ಶಾಕ್! ತಮಿಳುನಾಡು ರಾಜಕೀಯದಲ್ಲಿ ಸಂಚಲನ

ಕರೂರು ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ, ನಟ ವಿಜಯ್ ಅವರಿಗೆ ಸಿಬಿಐ ಮತ್ತೆ ಸಮನ್ಸ್ ನೀಡಿದೆ. ನಾಳೆ ದೆಹಲಿಯ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
Read Full Story

01:44 PM (IST) Mar 09

ಕನಸು ನನಸು ಆಯ್ತು ಅಂತ ನಿಟ್ಟುಸಿರುವ ಬಿಡುವಷ್ಟರಲ್ಲಿ ವರನಿಗೆ ಬಿಗ್ ಶಾಕ್ ನೀಡಿದ ವಧು

ಯುವಕನೊಬ್ಬ ಮಧ್ಯವರ್ತಿಗಳಿಗೆ ಹಣ ನೀಡಿ ದೇವಸ್ಥಾನದಲ್ಲಿ ಮದುವೆಯಾಗುತ್ತಾನೆ. ಆದರೆ, ಮದುವೆಯಾದ ಐದನೇ ದಿನಕ್ಕೆ ನವವಧು ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಈ ಮೂಲಕ ತಾನು ದೊಡ್ಡ ವಂಚನೆಗೆ ಒಳಗಾಗಿರುವುದಾಗಿ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.

Read Full Story

01:31 PM (IST) Mar 09

ಸಚಿನ್ ತೆಂಡೂಲ್ಕರ್ ಮಾಡಿದ ಆ ಒಂದು ಫೋನ್ ಕಾಲ್ ಸಂಜು ಬದುಕನ್ನೇ ಬದಲಿಸಿತು! ಅಷ್ಟಕ್ಕೂ ಆಗಿದ್ದೇನು?

2026ರ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಆಟವಾಡಿ 'ಟೂರ್ನಿ ಶ್ರೇಷ್ಠ' ಪ್ರಶಸ್ತಿ ಗೆದ್ದ ಸಂಜು ಸ್ಯಾಮ್ಸನ್, ತಮ್ಮ ಕಷ್ಟದ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ನೀಡಿದ ಬೆಂಬಲದ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

01:02 PM (IST) Mar 09

ದೇವಸ್ಥಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶಾಸಕಿ ಮೈಥಿಲಿ! ಹೀಗಾಗಿದ್ದು ಇದೇ ಮೊದಲು ಎಂದ ಗಾಯಕಿ

ಬಿಹಾರ ಶಾಸಕಿ, ಗಾಯಕಿ ಮೈಥಿಲಿ ಠಾಕೂರ್ ಅವರ ಭಾವುಕ ವಿಡಿಯೋವೊಂದು ವೈರಲ್ ಆಗಿದೆ.  ದೇವಸ್ಥಾನವೊಂದರಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು. 'ನನ್ನ ಜೀವನದಲ್ಲಿ ಹೀಗಾಗಿದ್ದು ಇದೇ ಮೊದಲು, ನನ್ನನ್ನು ನಾನೇ ನಿಯಂತ್ರಿಸಿಕೊಳ್ಳಲು ಆಗಲಿಲ್ಲ' ಎಂದು ಮೈಥಿಲಿ ಠಾಕೂರ್ ಹೇಳದ್ದಾರೆ.

Read Full Story

12:20 PM (IST) Mar 09

ನನ್ನ ಬ್ರೇಕಪ್‌ಗೆ ಇವರೇ ಕಾರಣ - ಅವಳಿ ಸೋದರಿಗೆ 40 ಬಾರಿ ಇರಿದು ಕೊಂದ ಟೆಕ್ಕಿಯಿಂದ ತಾಯಿ ಮೇಲೂ ಹಲ್ಲೆ

ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ, ತನ್ನ ಬ್ರೇಕಪ್‌ಗೆ ಸೋದರಿಯೇ ಕಾರಣವೆಂದು ಕೋಪಗೊಂಡ ಇಂಜಿನಿಯರ್ ಯುವಕನೊಬ್ಬ, ತನ್ನ ಅವಳಿ ಸೋದರಿಗೆ 40 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಡೆಯಲು ಬಂದ ತಾಯಿಯ ಮೇಲೂ ಹಲ್ಲೆ ನಡೆಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story

12:14 PM (IST) Mar 09

'ಈ ವಿಶ್ವಕಪ್ ಆ ಇಬ್ಬರಿಗೆ ಸೇರಿದ್ದು' - ಟಿ20 ವಿಶ್ವಕಪ್ ಅನ್ನು ಈ ಇಬ್ಬರು ಸಹ ಆಟಗಾರರಿಗೆ ಅರ್ಪಿಸಿದ ಗೌತಮ್ ಗಂಭೀರ್!

ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿದೆ. ಈ ಐತಿಹಾಸಿಕ ಗೆಲುವನ್ನು ಗಂಭೀರ್ ಅವರು ತಮ್ಮ ಹಿಂದಿನ ಕೋಚ್‌ಗಳಾದ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್‌ಗೆ ಅರ್ಪಿಸಿದ್ದಾರೆ. ತಂಡವನ್ನು ಬಲಿಷ್ಠವಾಗಿ ರೂಪಿಸಿದ & ಯುವ ಆಟಗಾರರನ್ನು ಬೆಳೆಸಿದ ಅವರ ಕೊಡುಗೆ ಸ್ಮರಿಸಿದ್ದಾರೆ.

Read Full Story

11:30 AM (IST) Mar 09

Mamata Banerjee - ರಾಷ್ಟ್ರಪತಿ ನಿಂತಿದ್ದಾರೆ, ನೀವು-ಅಡ್ವಾಣಿ ಕೂತಿದ್ದೀರಿ, ಇದೇನಾ ನಿಮ್ಮ ಗೌರವ? ಮೋದಿ ವಿರುದ್ಧ ಮಮತಾ ಫೋಟೋ ಅಸ್ತ್ರ

ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಮಾನ ಮಾಡಲಾಗಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಟಿಎಂಸಿ ತಿರುಗೇಟು ನೀಡಿದೆ. ರಾಷ್ಟ್ರಪತಿ ನಿಂತಿದ್ದರೆ, ಪ್ರಧಾನಿ ಮತ್ತು ಅಡ್ವಾಣಿ ಕುಳಿತಿರುವ ಹಳೆಯ ಫೋಟೋವನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Read Full Story

11:05 AM (IST) Mar 09

ಎರಡು ದಿನದ ಬಳಿಕ ಮತ್ತೆ ಕುಸಿತವಾಯ್ತು ಚಿನ್ನದ ಬೆಲೆ; ಯುಗಾದಿ, ರಂಜಾನ್‌ಗೆ ಖರೀದಿಸಿ ಬಂಗಾರ

ಜಾಗತಿಕ ಮಾರುಕಟ್ಟೆಯ ಅನಿರೀಕ್ಷಿತ ಬದಲಾವಣೆಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇಂದು 22 ಮತ್ತು 24 ಕ್ಯಾರಟ್ ಬಂಗಾರದ ದರಗಳು ಕುಸಿದಿದ್ದು, ಹಬ್ಬಕ್ಕೆ ಉಡುಗೊರೆ ನೀಡಲು ಚಿನ್ನ ಖರೀದಿಸಲು ಇದು ಉತ್ತಮ ಸಮಯವಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆ ಕಂಡುಬಂದಿದೆ.
Read Full Story

10:05 AM (IST) Mar 09

ಸಿಎಂ ಯೋಗಿ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆ - ಮೌಲಾನಾ ವಿರುದ್ಧ FIR

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮೌಲಾನಾ ಅಬ್ದುಲ್ಲಾ ಸಲೀಂ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ಸಂಬಂಧ 83 ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಹಿಂದೂ ಸಂಘಟನೆಗಳು ತಕ್ಷಣದ ಬಂಧನಕ್ಕೆ ಆಗ್ರಹಿಸಿವೆ.
Read Full Story

09:02 AM (IST) Mar 09

ಭಾರತದ ಟಿ20 ವಿಶ್ವಕಪ್ ಗೆಲುವು - ನಿರ್ಣಾಯಕ ಹಂತಗಳಲ್ಲಿ ಮಿಂಚಿದ ಟೀಂ ಇಂಡಿಯಾದ ಸೂಪರ್ ಸ್ಟಾರ್ಸ್

ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ತಂಡದ 15 ಆಟಗಾರರ ಕೊಡುಗೆಯೂ ಮಹತ್ವದ್ದಾಗಿದೆ. ಈ ಪೈಕಿ, ಇಶಾನ್ ಕಿಶನ್, ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಬೂಮ್ರಾ ಸೇರಿದಂತೆ ಕೆಲ ಆಟಗಾರರು ನಿರ್ಣಾಯಕ ಹಂತಗಳಲ್ಲಿ ಮಿಂಚಿ ತಂಡದ ಗೆಲುವಿನ ಸೂಪರ್‌ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ.
Read Full Story

More Trending News