ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ಕಂಪ್, ದ್ವಿಪಕ್ಷೀಯ ಟ್ರೇಡ್ ಡೀಲ್ ಕುರಿತು ಚರ್ಚಿಸಿದ್ದಾರೆ. ಶೀಘ್ರದಲ್ಲೇ ಭಾರತ ಹಾಗೂ ಅಮರಿಕ ಟ್ರೇಡ್ ಡೀಲ್ ಸಹಿ ಮಾಡಲಿದೆ ಎಂದಿದ್ದಾರೆ. ಅಮೆರಿಕದ ಮೇಲೆ ಭಾರತದ ಹೆಚ್ಚು ತೆರಿಗೆ ವಿಧಿಸಿತ್ತು. ಇದೀಗ ನಾವು ಭಾರತದ ಮೇಲೆ ತೆರಿಗೆ ವಿಧಿಸಿದ್ದೇವೆ. ಆದರೆ ಮೋದಿ ನನ್ನ ಆತ್ಮೀಯ. ಹೀಗಾಗಿ ನಾವು ಉತ್ತಮ ಟ್ರೇಡ್ ಡೀಲ್ ಒಪ್ಪಂದ ಮಾಡುತ್ತಿದ್ದೇವೆ ಎಂದು ಮಾಧ್ಯಮ ಜೊತೆ ಹೇಳಿದ್ದಾರೆ. ರಾಷ್ಟ್ರ ರಾಜಕಾರಣ, ಕಾಕ್ರೋಚ್ ಜನತಾ ಪಾರ್ಟಿ ಹೋರಾಟದಲ್ಲಿ ತಿರುವು ಸೇರಿದಂತೆ ಇಂದಿನ ಪ್ರತಿಕ್ಷಣದ ಲೈವ್ ಸುದ್ದಿ ಇಲ್ಲಿದೆ.

10:53 PM (IST) Jun 05
ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ನಿರ್ವಹಣಾ ಕಾರ್ಯದಿಂದಾಗಿ, ನೈಋತ್ಯ ರೈಲ್ವೆ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ 42 ರೈಲುಗಳನ್ನು ರದ್ದುಗೊಳಿಸಿದೆ. ಚೆನ್ನೈ, ಬೆಂಗಳೂರು, ಮೈಸೂರು ಮತ್ತು ಯಶವಂತಪುರ ನಡುವೆ ಸಂಚರಿಸುವ ಈ ರೈಲುಗಳ ರದ್ದತಿಯಿಂದ ಪ್ರಯಾಣವನ್ನು ಮರುಯೋಜಿಸಬೇಕಿದೆ.
10:36 PM (IST) Jun 05
ಸೆಂಟ್ ಪೀಟರ್ಸ್‌ಬರ್ಗ್ ಶೃಂಗಸಭೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಸಾರ್ವಭೌಮತ್ವವನ್ನು ಶ್ಲಾಘಿಸಿದ್ದಾರೆ. ಭಾರತವು ವಿದೇಶಿ ಆದೇಶಗಳನ್ನು ಪಾಲಿಸುವುದಿಲ್ಲ ಮತ್ತು ರಷ್ಯಾದೊಂದಿಗಿನ ಸಹಕಾರವನ್ನು ಕಡಿಮೆ ಮಾಡಲು ಪಾಶ್ಚಿಮಾತ್ಯ ದೇಶಗಳು ಹೇರುತ್ತಿರುವ ಒತ್ತಡ ನಿಷ್ಪ್ರಯೋಜಕ ಎಂದಿದ್ದಾರೆ.
10:25 PM (IST) Jun 05
ನಟಿ ಅವಿಕಾ ಗೋರ್ ಅಭಿನಯದ 'ಅಗ್ಲಿ ಸ್ಟೋರಿ' ಚಿತ್ರವನ್ನು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ ತಮಿಳು ಭಾಷೆಯಲ್ಲೂ ಡಬ್ ಮಾಡಿ ಸ್ಟ್ರೀಮ್ ಮಾಡಲಾಗುತ್ತಿದೆ. ಶ್ರೀ ನಂದು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಶಿವಾಜಿ ರಾಜ ಮತ್ತು ರವಿತೇಜ ಮಹಾದಾಸ್ಯಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
10:14 PM (IST) Jun 05
ವಾಟ್ಸಾಪ್ ತನ್ನ 'ವ್ಯೂ ಒನ್ಸ್' ಫೀಚರ್ ಅನ್ನು ಈಗ ಟೆಕ್ಸ್ಟ್ ಮೆಸೇಜ್‌ಗಳಿಗೂ ವಿಸ್ತರಿಸಲು ಸಿದ್ಧತೆ ನಡೆಸಿದೆ. ಈ ಸೌಲಭ್ಯದಡಿ, ಕಳುಹಿಸಿದ ಸಂದೇಶವನ್ನು ಸ್ವೀಕರಿಸುವವರು ಒಮ್ಮೆ ಓದಿದ ತಕ್ಷಣ ಅದು ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತದೆ ಮತ್ತು ಅದರ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
09:44 PM (IST) Jun 05
09:35 PM (IST) Jun 05
ನಟಿ ತೃಪ್ತಿ ದಿಮ್ರಿ ಅವರ ಹೊಳೆಯುವ ತ್ವಚೆ ಮತ್ತು ಕ್ಲಿಯರ್ ಕಾಂಪ್ಲೆಕ್ಷನ್ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಅವರ ಸ್ಕಿನ್‌ಕೇರ್ ರೊಟೀನ್ ತುಂಬಾ ಸರಳವಾಗಿದೆ. ನಿಮಗೂ ಅವರಂತಹ ತ್ವಚೆ ಬೇಕೇ? ಹಾಗಿದ್ರೆ ಮುಂದೆ ಓದಿ!
08:50 PM (IST) Jun 05
ಹರಿದ್ವಾರ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರು ಮತ್ತು ಪುರುಷರ ಗುಂಪೊಂದು ಪ್ಲಾಟ್‌ಫಾರ್ಮ್ ಮೇಲೆಯೇ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿರುವ ಅಸಹ್ಯಕರ ಘಟನೆ ನಡೆದಿದೆ. ಶೌಚಾಲಯಗಳಿದ್ದರೂ ಈ ರೀತಿ ವರ್ತಿಸಿದ್ದಾರೆ.
08:16 PM (IST) Jun 05
ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ಬೈಕ್ ರೇಸಿಂಗ್ ಉತ್ಸಾಹಿ ಅಜಿತ್ ಕುಮಾರ್, ತಮ್ಮ ತಾಯಿ ಮೋಹಿನಿ ಮಣಿ ಅವರ ನಿಧನದ ನಂತರ, ತೀವ್ರ ದುಃಖದ ನಡುವೆಯೂ ಮತ್ತೆ ತಮ್ಮ ಕೆಲಸದತ್ತ ಗಮನ ಹರಿಸಲು ಪ್ರಾರಂಭಿಸಿದ್ದಾರೆ.
07:36 PM (IST) Jun 05
ಚೈತ್ರಾ ಆಚಾರ್ ಮಾಡಿಸಿರುವ ಈ ಲೇಟೆಸ್ಟ್ ಫೋಟೋಶೂಟ್ ತುಂಬಾನೇ ಡಿಫರೆಂಟ್ ಆಗಿದೆ. ಈ ಫೋಟೋಗಳಲ್ಲಿ ಚೈತ್ರಾ ರವಿಕೆ (Blouse) ಧರಿಸಿಲ್ಲ! ಹೌದು, ಕೇವಲ ಸೀರೆಯನ್ನಷ್ಟೇ ಉಟ್ಟು, ಅತ್ಯಂತ ಕಲಾತ್ಮಕವಾಗಿ ಮತ್ತು ಮಾದಕವಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
06:41 PM (IST) Jun 05
ತಮ್ಮ ಕಾಮಿಡಿ ನಟನೆಯಿಂದ ನಗುವಿನ ಹೊಳೆ ಹರಿಸುವ ಕೋವೈ ಸರಳ, ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ತಮ್ಮ ಮದುವೆ ಬಗ್ಗೆ ಆಸಕ್ತಿಕರ ಹೇಳಿಕೆ ನೀಡಿದ್ದು, ತಾವ್ಯಾಕೆ ಮದುವೆಯಾಗಿಲ್ಲ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
06:24 PM (IST) Jun 05
ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಅಕಾಲಿಕ ನಿವೃತ್ತಿ ಘೋಷಿಸುತ್ತಿರುವುದನ್ನು ತಡೆಯಲು ಬಿಸಿಸಿಐ ಹೊಸ ನಿವೃತ್ತಿ ನೀತಿಯನ್ನು ಜಾರಿಗೆ ತರಲು ಚಿಂತಿಸುತ್ತಿದೆ. ಈ ನೀತಿಯ ಅಡಿಯಲ್ಲಿ, ನಿವೃತ್ತಿ ನಂತರ ವಿದೇಶಿ ಲೀಗ್ ಆಡುವ ಆಟಗಾರರಿಗೆ 'ಕೂಲಿಂಗ್ ಆಫ್ ಪಿರಿಯಡ್' ಹೇರುವ ಪ್ರಸ್ತಾಪವಿದೆ.
06:18 PM (IST) Jun 05
ರಾಜಕೀಯ ರಂಗದಲ್ಲಿ ಗರ್ಜಿಸುತ್ತಿರುವ ವಿಜಯ್ ಅವರ ಬಗ್ಗೆ ಅವರ ತಾಯಿ ನೀಡಿರುವ ಈ 'ನೇಚರ್ ಲವರ್' ಸರ್ಟಿಫಿಕೇಟ್, ಅಭಿಮಾನಿಗಳಿಗೆ ಮಾತ್ರವಲ್ಲದೆ ಪರಿಸರ ಪ್ರೇಮಿಗಳಿಗೂ ಖುಷಿ ನೀಡಿದೆ. ಮಗನ ಬಗ್ಗೆ ಅಮ್ಮ ಇನ್ನೇನು ಹೇಳಿದ್ದಾರೆ ನೋಡಿ…
06:01 PM (IST) Jun 05
ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರವು ನಾಯಕಿ ಜಾನ್ವಿ ಕಪೂರ್ ಅವರ 'ಅಚ್ಚಿಯಮ್ಮ' ಪಾತ್ರದ ಲೈಂಗಿಕೀಕರಣ ಮತ್ತು ವಸ್ತುವಿನಂತೆ ಬಿಂಬಿಸಿದ್ದಕ್ಕಾಗಿ ತೀವ್ರ ವಿವಾದಕ್ಕೆ ಸಿಲುಕಿದೆ. ನಿರ್ದೇಶಕ ಬುಚ್ಚಿಬಾಬು ಸನಾ ಮತ್ತು ನಟ ರಾಮ್ ಚರಣ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
05:58 PM (IST) Jun 05
ತಮ್ಮ ಹೊಸ ಸಿನಿಮಾ 'ಬ್ಲಾಸ್ಟ್'ನಲ್ಲಿ ಸೀರೆ ಉಟ್ಟುಕೊಂಡು ಮಾಡಿದ ಫೈಟಿಂಗ್ ಸೀನ್‌ಗಳಿಂದ ನಟಿ ಅಭಿರಾಮಿ ಸಖತ್ ಸುದ್ದಿಯಲ್ಲಿದ್ದಾರೆ. ಸೀರೆ ಉಟ್ಟು ಫೈಟ್ ಮಾಡೋದ್ರಲ್ಲಿ ಒಂದು ವಿಶೇಷವಾದ ಶಕ್ತಿ ಇದೆ ಅಂತ ಅವರು ಹೇಳಿದ್ದಾರೆ.
05:41 PM (IST) Jun 05
ಬಾಲಾಜಿ ಅವರು ಈ ಹಿಂದೆ ವೇದಿಕೆಯೊಂದರಲ್ಲಿ ಮಾತನಾಡುತ್ತಾ, "ಈ ಸಿನಿಮಾದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಿದ್ದೆ. ಅದು ಅವರ ಕೊನೆಯ ಸಿನಿಮಾವಾಗಬೇಕಿತ್ತು. ಆದರೆ ಅವರು ಎಚ್. ವಿನೋದ್ ಅವರ ಸಿನಿಮಾಗೆ ಓಕೆ ಅಂದರು. ನಂತರ ನಾನು ಸೂರ್ಯ ಅವರಿಗೆ ಈ ಕಥೆ ಹೇಳಿದೆ" ಎಂದಿದ್ದರು.
05:36 PM (IST) Jun 05
ಪಾರ್ಸೆಲ್ ಡೆಲಿವರಿ ಮಾಡಲು ಹೋದ ರಾಪಿಡೋ ಡ್ರೈವರ್‌ಗೆ ಶಾಕ್! ಬಾಕ್ಸ್ ಬದಲು ಬೈಕ್ ಮೇಲೆ ಕೂತಿದ್ದು ಒಂದು ಮುದ್ದಾದ ನಾಯಿ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರ ಮನಗೆದ್ದಿದೆ.
05:23 PM (IST) Jun 05
ಭಾರತೀಯ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಪ್ರಶಾಂತ್ ನೀಲ್ ಅವರಿಗೆ ನಿನ್ನೆ ಹುಟ್ಟುಹಬ್ಬದ ಸಂಭ್ರಮ. ಸೌತ್ ಸಿನಿಮಾರಂಗದ ಸೂಪರ್‌ಸ್ಟಾರ್‌ಗಳು, ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ಹಲವು ಪ್ರೊಡಕ್ಷನ್ ಹೌಸ್‌ಗಳು..
04:51 PM (IST) Jun 05
‘ಓಟಿಟಿಗಳನ್ನು ನಂಬಿಕೊಂಡು ಸಿನಿಮಾ ಮಾಡಬೇಡಿ. ಓಟಿಟಿಗಳ ಕಾಲ ಮುಗಿದು ಹೋಗಿದೆ’. ಹೀಗೆ ಹೇಳಿರುವುದು ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್.
03:48 PM (IST) Jun 05
ಆನ್‌ಲೈನ್ ಇ-ಕಾಮರ್ಸ್ ಸಂಸ್ಥೆ ಫಸ್ಟ್‌ಕ್ರೈ, ಗ್ರಾಹಕರೊಬ್ಬರ ಆರ್ಡರ್ ರದ್ದುಗೊಳಿಸಿ, ಅವರನ್ನು 'ವಂಚಕ ಯೂಸರ್' ಎಂದು ಆಂತರಿಕವಾಗಿ ಪಟ್ಟಿ ಮಾಡಿತ್ತು. ಈ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯವು ಸಂಸ್ಥೆಯ ಕ್ರಮವನ್ನು 'ಅನ್ಯಾಯದ ವ್ಯಾಪಾರ ಪದ್ಧತಿ' ಎಂದು ಪರಿಗಣಿಸಿದೆ.
01:52 PM (IST) Jun 05
ಪಾರ್ಥಿಬನ್ ಅವರ ಈ ಹಠಾತ್ ಪಲ್ಟಿಯ ಹಿಂದೆ ಏನಿದೆ? ತ್ರಿಶಾ ಜೊತೆಗಿನ ಕಿರಿಕ್ ಮರೆತು ವಿಜಯ್‌ಗೆ ಹತ್ತಿರವಾಗಲು ಅವರು ಪ್ರಯತ್ನಿಸುತ್ತಿದ್ದಾರಾ? ಅಥವಾ ವಿಜಯ್ ಅವರ ರಾಜಕೀಯ ಶಕ್ತಿಯನ್ನು ಕಂಡು ಅವರು ಈ ರೀತಿ ಮಾಡಿದ್ರಾ? ಸೀಕ್ರೆಟ್ ಇಲ್ಲಿದೆ ನೋಡಿ..!
12:04 PM (IST) Jun 05
ಬೆಂಗಳೂರು, ಮೈಸೂರು, ಹುಬ್ಬಳಿಯಿಂದ ಹೊರಡುವ ಹಲವು ರೈಲು ಸಂಚಾರ ಭಾಗಶಃ ರದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ , ಕೆಲ ರೈಲು ಸಂಚಾರ ವಿಳಂಬವಾಗುವ ಕುರಿತು ಭಾರತೀಯ ರೈಲ್ವೇ ಮಹತ್ವದ ಅಪ್‌ಡೇಟ್ ನೀಡಿದೆ?
11:56 AM (IST) Jun 05
'ಪೆದ್ದಿ' ಸಿನಿಮಾ ರಾಮ್ ಚರಣ್ ಅಭಿಮಾನಿಗಳಿಗೆ ಹಬ್ಬ ಎನಿಸಿದರೂ, ಜಾನ್ವಿ ಅಭಿಮಾನಿಗಳಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದೆ. ಬಾಲಿವುಡ್‌ನಲ್ಲಿ ಗ್ಲಾಮರ್ ಗೊಂಬೆಯಾಗಿದ್ದ ಜಾನ್ವಿ, ಸೌತ್ ಸಿನಿಮಾದಲ್ಲಿ ಒಂದು ಗಟ್ಟಿ ಪಾತ್ರ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ.
11:05 AM (IST) Jun 05
ಭಾರಿ ಕೋಲಾಹಲ ಸೃಷ್ಟಿಸಿದ ಅಣ್ಣಾಮಲೈ ರಾಜೀನಾಮೆ ಇದೀಗ ಅಂಗೀಕಾರಗೊಂಡಿದೆ. ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅಧಿಕೃತವಾಗಿ ಬಿಜೆಪಿಯಿಂದ ಹೊರಬಂದಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ.
08:24 AM (IST) Jun 05
07:20 AM (IST) Jun 05
ಭಾರತ ಅಮೆರಿಕ ದ್ವಿಪೀಕ್ಷಿಯ ಟ್ರೇಡ್ ಒಪ್ಪಂದ (BTA)ಕ್ಕಾಗಿ ಉಭಯ ದೇಶಗಳು ಕೆಲಸ ಮಾಡುತ್ತಿದೆ. ಶೇಕಡಾ 99ರಷ್ಟು ಪೂರ್ಣಗೊಂಡಿದೆ. ಶೇಕಡಾ 1ರಷ್ಟು ಬಾಕಿ ಇದೆ. ಈ ಕುರಿತು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಭಾರತ ಹಾಗೂ ಅಮರಿಕ ಐತಿಹಾಸಿಕ ಟ್ರೇಡ್ ಡೀಲ್ ಸಹಿ ಮಾಡಲಿದೆ ಎಂದು ಡೋನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.