ನವದೆಹಲಿ: ಭಾರತದ ಕ್ರೀಡಾಪಟುಗಳಲ್ಲಿ ವರ್ಷದಿಂದ ವರ್ಷಕ್ಕೆ ನಿಷೇಧಿತ ಮದ್ದು ಸೇವನೆ(ಡೋಪಿಂಗ್) ಪ್ರಮಾಣ ಹೆಚ್ಚುತ್ತಿದ್ದು, ಅನರ್ಹ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಈಗ ಕೀನ್ಯಾಕ್ಕಿಂತಲೂ ಕಳಪೆ ಸಾಧನೆ ಮಾಡಿ ವಿಶ್ವದಲ್ಲೇ ನಂ.1 ಸ್ಥಾನದಲ್ಲಿದೆ. ಆಫ್ರಿಕಾ ದೇಶ ಕೀನ್ಯಾ ಈಗ 2ನೇ ಸ್ಥಾನದಲ್ಲಿದೆ.
ವಿಶ್ವ ಅಥ್ಲೆಟಿಕ್ ಸಂಸ್ಥೆಯ ಅಥ್ಲೆಟಿಕ್ಸ್ ಸಮಗ್ರತಾ ಘಟಕ(ಎಐಯು) ವರದಿ ಪ್ರಕಾರ, ಭಾರತದಲ್ಲಿ ಈಗ ಬರೋಬ್ಬರಿ 148 ಕ್ರೀಡಾಪಟುಗಳು ಸ್ಪರ್ಧೆಗೆ ಅನರ್ಹಗೊಂಡಿದ್ದಾರೆ. ಇದರಲ್ಲಿ ಅಗ್ರ ಅಥ್ಲೀಟ್‌ಗಳಾದ ದ್ಯುತೀ ಚಂದ್, ಶೇಕರ್ ಧನಲಕ್ಷ್ಮಿ, ಫರ್ವೇಜ್ ಖಾನ್ ಸೇರಿ ಪ್ರಮುಖರಿದ್ದಾರೆ. ಇನ್ನು, ಕೀನ್ಯಾದಲ್ಲಿ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು ಅನರ್ಹಗೊಂಡ ಅಥ್ಲೀಟ್‌ಗಳ ಸಂಖ್ಯೆ 146. ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಒಟ್ಟು 66 ಕ್ರೀಡಾಪಟುಗಳು ಅನರ್ಹಗೊಂಡಿದ್ದಾರೆ.
11:37 PM (IST) Apr 04
08:02 PM (IST) Apr 04
ಆಸ್ತಿ ಮನೆ ಇಲ್ಲ, ವಾಹನ ಇಲ್ಲ, ಕೈಯಲ್ಲಿದೆ 84 ರೂ, ವಿಧಾನಸಭೆ ಚುನಾವಣೆ ಅಚ್ಚರಿ ಅಭ್ಯರ್ಥಿ , ಎಟುಮಾನೂರು ಕ್ಷೇತ್ರದ ಅಭ್ಯರ್ಥಿ ಖಾತೆಯಲ್ಲಿ 40 ರೂಪಾಯಿ, ಕೈಯಲ್ಲಿ 44 ರೂಪಾಯಿ ಬಿಟ್ಟರೆ ಇನ್ಯಾವ ಆಸ್ತಿಯೂ ಇಲ್ಲ.
07:36 PM (IST) Apr 04
ಉಪ ಮುಖ್ಯಮಂತ್ರಿಗೆ 17 ಬಾರಿ ಕರೆ ಮಾಡಿದ ರಾಸಲೀಲೆ ಗುರೂಜಿ, ಆ್ಯಕ್ಟಿವಿಸ್ಟ್‌ನಿಂದ CDR ಬಿಡುಗಡೆ, 100ಕ್ಕೂ ಹೆಚ್ಚು ಮಹಿಳೆಯರನ್ನು ಬಳಸಿಕೊಂಡು ಅರೆಸ್ಟ್ ಆಗಿರುವ ಸ್ವಾಮೀಜಿ ಕುರಿತು ಕೆಲ ಮಾಹಿತಿ ಬಹಿರಂಗವಾಗಿದೆ.
06:47 PM (IST) Apr 04
ಟಾಟಾ ಟ್ರಸ್ಟ್‌ನ ಮಾಜಿ ಟ್ರಸ್ಟಿ ಮೆಹ್ಲಿ ಮಿಸ್ತ್ರಿ, 'ಬಾಯಿ ಹೀರಾಬಾಯಿ' ಸಂಸ್ಥೆಗೆ ಪಾರ್ಸಿಗಳಲ್ಲದವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿದ್ದಾರೆ. 1923ರ ಟ್ರಸ್ಟ್ ಒಪ್ಪಂದದ ಉಲ್ಲಂಘನೆ ಎಂದು ಆರೋಪಿಸಿರುವ ಅವರು, ಇದು ಕಾನೂನುಬಾಹಿರವೆಂದು ಮಹಾರಾಷ್ಟ್ರ ಚಾರಿಟಿ ಕಮಿಷನರ್ ಬಳಿ ದೂರು ದಾಖಲಿಸಿದ್ದಾರೆ.
06:47 PM (IST) Apr 04
ಬಾಕ್ಸ್ ಆಫೀಸ್‌ನಲ್ಲಿ ಮಿನುಗುತ್ತಿರುವ 'ಧುರಂಧರ್' ಚಿತ್ರಕ್ಕೆ ಈ ಕಾನೂನು ಸಮರವು ಹೊಸ ತಲೆನೋವಾಗಿ ಪರಿಣಮಿಸಿದೆ. ರಣವೀರ್ ಸಿಂಗ್ ಅವರ ಅಪ್ಪಟ ಅಭಿಮಾನಿಗಳು ಈ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಎಂದು ಆತಂಕದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಈ 'ಕಥೆಯ ಕದನ' ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ.
06:39 PM (IST) Apr 04
ನಟ ಅಜಯ್ ದೇವಗನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, 2013ರ 'ಸತ್ಯಾಗ್ರಹ' ಚಿತ್ರದಲ್ಲಿ ಕರೀನಾ ಕಪೂರ್ ಅವರು ಲಿಪ್‌ಲಾಕ್ ದೃಶ್ಯಕ್ಕೆ ನಿರಾಕರಿಸಿದ ಘಟನೆ ಮುನ್ನೆಲೆಗೆ ಬಂದಿದೆ. ಸೈಫ್ ಅಲಿ ಖಾನ್ ಜೊತೆಗಿನ ಮದುವೆಯ ನಂತರ ಕರೀನಾ ಈ ನಿರ್ಧಾರ ತೆಗೆದುಕೊಂಡಿದ್ದರು. ಅಲ್ಲಿ ಆಗಿದ್ದೇನು?
06:27 PM (IST) Apr 04
06:26 PM (IST) Apr 04
ರಿಲಯನ್ಸ್ ಜಿಯೋದ ಕೆಲವು ರೀಚಾರ್ಜ್ ಯೋಜನೆಗಳು ತಾರತಮ್ಯದಿಂದ ಕೂಡಿದ್ದು, ಪಾರದರ್ಶಕತೆಯ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಟ್ರಾಯ್ ಹೇಳಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಪ್ಲಾನ್‌ಗಳನ್ನು ಎಲ್ಲ ವೇದಿಕೆಗಳಲ್ಲಿ ಮತ್ತು ಎಲ್ಲ ಸಾಧನಗಳಿಗೆ ಲಭ್ಯವಾಗುವಂತೆ ಮಾಡಲು ಟ್ರಾಯ್ ಕಟ್ಟುನಿಟ್ಟಿನ ಆದೇಶ ನೀಡಿದೆ.
05:56 PM (IST) Apr 04
ಮಹಿಳೆಯರಲ್ಲಿರುವ ಸೂಕ್ಷ್ಮ ಸಂವೇದನೆ ಪುರುಷರಲ್ಲಿ ಕಡಿಮೆ ಇರುತ್ತದೆ. ಆದರೂ ನಾನು ಮತ್ತು ಐಶ್ವರ್ಯಾ ಮಗಳಿಗೆ ಉತ್ತಮ ಮಾದರಿಯಾಗಲು ಬಯಸುತ್ತೇವೆ. ಮಕ್ಕಳಿಗೆ ಬರಿ ಮಾತಿನ ಮೂಲಕ ಪಾಠ ಮಾಡುವ ಬದಲು, ನಾವೇ ಅದನ್ನು ಮಾಡಿ ತೋರಿಸುತ್ತೇವೆ. ಮನೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳೊಂದಿಗೆ ಜೀವನ ನಡೆಸಿದರೆ ಮಕ್ಕಳು ಅದನ್ನು ನೋಡಿ ಕಲಿಯುತ್ತಾರೆ. ನಮ್ಮ ಮನೆಯಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಯಾವುದೇ ಸ್ಪರ್ಧೆಯಿಲ್ಲ..
05:14 PM (IST) Apr 04
05:09 PM (IST) Apr 04
ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದ ವಾರ್ಷಿಕ ಜಾತ್ರೆಯಲ್ಲಿ 60 ಅಡಿ ಎತ್ತರದ ದೈತ್ಯ ಜಾಯಿಂಟ್ ವೀಲ್ ಕುಸಿದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತಿದ್ದರಿಂದ ಹಾಗೂ ದುರ್ಬಲ ಬುನಾದಿಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
04:58 PM (IST) Apr 04
ಚಂದ್ರನ ಬಳಿ ಪ್ರಯಾಣ ನಡುವೆ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ದೃಶ್ಯ ಸೆರೆ ಹಿಡಿದ ನಾಸಾ, ವಿಜ್ಞಾನಿಗಳ ತಂಡ ಆರ್ಟಮೆಸ್ 2 ಮೂಲಕ ಮಹತ್ತರ ಸಂಶೋಧನೆಯಲ್ಲಿ ತೊಡಗಿದ್ದಾರೆ. ಇದರ ನಡುವೆ ಭೂಮಿ ದೃಶ್ಯ ಕುತೂಹಲಕ್ಕೆ ಕಾರಣವಾಗಿದೆ.
04:45 PM (IST) Apr 04
ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ. ಮೊದಲ ಭಾಗವು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬರಲಿದ್ದು, ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ.
04:39 PM (IST) Apr 04
04:13 PM (IST) Apr 04
ಇಮಾಮ್ ಮುಖ್ಯಸ್ಥ ಉಮರ್ ಸ್ಫೋಟಕ ಭವಿಷ್ಯ, ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಘರ್ ವಾಪ್ಸಿ, ಆರ್ಟಿಕಲ್ 370 ತೆಗೆದು ಹಾಕಿದ ಬಳಿಕ ಕಾಶ್ಮೀರದಲ್ಲಿ ಅದ್ಭುತ ಬದಲಾವಣೆ ಆಗಿದೆ ಎಂದಿದ್ದಾರೆ.
04:09 PM (IST) Apr 04
ಬೆಂಗಳೂರು: 19ನೇ ಆವೃತ್ತಿಯ IPL ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುತ್ತಿದೆ. ಹೀಗಿರುವಾಗಲೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಈ ಬಾರಿ ಪ್ಲೇ ಆಫ್ ಪ್ರವೇಶಿಸಲಿರುವ ನಾಲ್ಕು ತಂಡಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
04:00 PM (IST) Apr 04
ನಿತೇಶ್ ತಿವಾರಿ ನಿರ್ದೇಶನದ ಈ 'ರಾಮಾಯಣ' ಕೇವಲ ಸಿನಿಮಾ ಅಲ್ಲ, ಅದೊಂದು ದೃಶ್ಯ ವೈಭವ. ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸಿದರೆ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ.
03:36 PM (IST) Apr 04
ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ, ಇದು ಅತ್ಯಧಿಕ ದಾಖಲೆಯಾಗಿದೆ. ಅಷ್ಟಕ್ಕೂ ಬೆಂಗಳೂರಲ್ಲಿ ಇವಿ ಖರೀದಿ ಹೆಚ್ಚಾಗಲು ಕಾರಣವೇನು?
02:58 PM (IST) Apr 04
ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ, ಆಕೆಗೀಗ 44 ವರ್ಷ, ಮೂರು ದಶಕಗಳಿಂದ ಹುಡುಕಾಟ ನಿರಂತರವಾಗಿ ಸಾಗಿತ್ತು. ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ.
02:28 PM (IST) Apr 04
02:13 PM (IST) Apr 04
ಆದಿತ್ಯ ಧರ್ ಅವರ ಮುಂದಿನ ಚಿತ್ರ ಯಾವುದಾದರೂ ಇರಲಿ, ಅದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗುವುದಂತೂ ಗ್ಯಾರಂಟಿ. ಆದಿತ್ಯ ಧರ್ ಅವರ ಮೇಕಿಂಗ್ ನೋಡಲು ಅಭಿಮಾನಿಗಳು ಈಗಿನಿಂದಲೇ ಕಾತರರಾಗಿದ್ದಾರೆ. ಧುರಂಧರ್ ಗ್ರಾಂಡ್ ಸಕ್ಸಸ್ ಬಳಿಕ ಆದಿತ್ಯ ಧರ್ ಅವರ ಕ್ರೇಜ್ ಹೆಚ್ಚಾಗಿದ್ದು, ಬಾಲಿವುಡ್‌ನ ಮೇರು ನಿರ್ದೇಶಕರಾಗಿ ಅವರೀಗ ಸ್ಥಾನ ಪಡೆದಿದ್ದಾರೆ.
01:19 PM (IST) Apr 04
'ಪ್ರಿನ್ಸ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಶಕೀಬ್ ಖಾನ್, ನಟಿ ಜ್ಯೋತಿರ್ಮಯಿ ಅವರ ಸೊಂಟಕ್ಕೆ ಕೈ ಹಾಕಿ ಮುಜುಗರ ಉಂಟುಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ನಟ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
01:07 PM (IST) Apr 04
12:58 PM (IST) Apr 04
12:49 PM (IST) Apr 04
ತೊಗರಿ ಬೇಳೆಯಲ್ಲಿ ಕ್ಯಾನ್ಸರ್ಕಾರಕ ಮತ್ತು ನರರೋಗಕ್ಕೆ ಕಾರಣವಾಗುವ ವಿಷಕಾರಿ ಕೇಸರಿ ಬೇಳೆಯನ್ನು ಕಲಬೆರಕೆ ಮಾಡಲಾಗುತ್ತಿದೆ. ಹಣದಾಸೆಗಾಗಿ ನಡೆಯುತ್ತಿರುವ ಈ ದಂಧೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಸಲಿ ಮತ್ತು ನಕಲಿ ಬೇಳೆಯನ್ನು ಗುರುತಿಸುವ ಸರಳ ವಿಧಾನಗಳನ್ನು ವಿವರಿಸಲಾಗಿದೆ.
12:48 PM (IST) Apr 04
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಸಿಬಿಎಸ್‌ಇಯ ಹೊಸ ಪಠ್ಯಕ್ರಮ 'ಭಾಷಾ ಹೇರಿಕೆಯ ವ್ಯವಸ್ಥಿತ ಪ್ರಯತ್ನ' ಎಂದು ತೀವ್ರವಾಗಿ ಟೀಕಿಸಿದ್ದಾರೆ. ತ್ರಿಭಾಷಾ ಸೂತ್ರವು ಹಿಂದಿಯನ್ನು ಬಲವಂತವಾಗಿ ಹೇರಲು ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು ಮಾಡಲು ರೂಪಿಸಿರುವ ಒಂದು ಹುನ್ನಾರ ಎಂದಿದ್ದಾರೆ.
12:41 PM (IST) Apr 04
ಮಧ್ಯಪ್ರದೇಶದ ಫುಟ್‌ಬಾಲ್ ಕೋಚ್ ಪರಮ್, 10 ಲಕ್ಷ ರೂ. ವೈಯಕ್ತಿಕ ಸಾಲ ಮಾಡಿ ಗ್ರಾಮೀಣ ಹೆಣ್ಣುಮಕ್ಕಳಿಗೆ ತರಬೇತಿ ನೀಡಿದ್ದಾರೆ. ಅವರ ನಿಸ್ವಾರ್ಥ ಪ್ರಯತ್ನದ ಫಲವಾಗಿ, 'ಡಿಸ್ಟ್ರಿಕ್ಟ್ ರೈಸೇನ್ ಫುಟ್‌ಬಾಲ್ ಕ್ಲಬ್' ಇಂಡಿಯನ್ ವುಮೆನ್ಸ್ ಲೀಗ್ (IWL) ಟೈಯರ್-2 ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ.
12:28 PM (IST) Apr 04
ಈ ವಿವಾಹ ಮಹೋತ್ಸವದ ಹೈಲೈಟ್ ಎಂದರೆ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಅವರು ತಮ್ಮ ಸೊಸೆ ರಶ್ಮಿಕಾಗೆ ನೀಡಿದ ವಿಶೇಷ ಉಡುಗೊರೆ. ತಮ್ಮ ಕುಟುಂಬದ ಪರಂಪರಾಗತ ಚಿನ್ನದ ಬಳೆಗಳನ್ನು (Heirloom Bangles) ಸಂಪ್ರದಾಯದಂತೆ ರಶ್ಮಿಕಾ ಅವರಿಗೆ ತೊಡಿಸಿ ಮನೆಗೆ ಬರಮಾಡಿಕೊಂಡಿದ್ದಾರೆ. ಸಾಕ್ಷಿ ನೋಡಿ..
12:21 PM (IST) Apr 04
'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾ, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಕೇಳಿದ 'ನಿಮ್ಮ ಸೈಜ್ ಎಷ್ಟು?' ಎಂಬ ಅಸಭ್ಯ ಪ್ರಶ್ನೆಗೆ ಆತ ಮುಟ್ಟಿ ಕೊಳ್ಳುವ ಉತ್ತರ ಕೊಟ್ಟಿದ್ದಾರೆ ನಟಿ. ಅವರು ಹೇಳಿದ್ದೇನು| ವಿಡಿಯೋ ಆಗಿದೆ ವೈರಲ್
11:44 AM (IST) Apr 04
ಬಾಲಿವುಡ್‌ನ ‘ದೇಶಿ ಗರ್ಲ್’ ಪ್ರಿಯಾಂಕಾ ಚೋಪ್ರಾ ಜೋನಾಸ್ ಸದಾ ಯಾವುದಾದರೊಂದು ವಿಷಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತಮ್ಮ ಬೆಳಗಿನ ದಿನಚರಿಯ (Morning Routine) ಸಣ್ಣ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
10:33 AM (IST) Apr 04
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಲ್ಲಿರುವ ಸಹಜ ಕ್ರೀಡಾ ಪ್ರತಿಭೆಯನ್ನು ವಿವರಿಸುತ್ತಾರೆ. ಈ ಪ್ರತಿಭೆಗಳನ್ನು ಗುರುತಿಸಿ, 'ಖೇಲೋ ಇಂಡಿಯಾ' ದಂತಹ ಯೋಜನೆಗಳ ಮೂಲಕ ಸೂಕ್ತ ತರಬೇತಿ ಮತ್ತು ಸೌಲಭ್ಯಗಳನ್ನು ಒದಗಿಸುವುದರ ಮಹತ್ವವನ್ನು ಅವರು ಒತ್ತಿಹೇಳುತ್ತಾರೆ.
09:52 AM (IST) Apr 04
09:30 AM (IST) Apr 04
09:03 AM (IST) Apr 04
08:13 AM (IST) Apr 04
08:01 AM (IST) Apr 04
ಕೊಲ್ಲಿ ಯುದ್ಧದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ, ಕೇಂದ್ರ ಸರ್ಕಾರವು ಇಂಡಕ್ಷನ್ ಸ್ಟವ್ ಅದಕ್ಕೆ ಬೇಕಾದ ಪಾತ್ರೆಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲು ನಿರ್ಧರ ದೇಶದಲ್ಲಿ ವಿದ್ಯುತ್ ಆಧಾರಿತ ಅಡುಗೆ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಹೆಚ್ಚಿಸುವ ಕುರಿತು ಚರ್ಚೆ ನಡೆದಿದೆ.
07:38 AM (IST) Apr 04
ಪದೇ ಪದೇ ಸಂಬಂಧಗಳು ಮುರಿದು ಬೀಳಲು ನಿಮ್ಮ ಕೆಟ್ಟ ಸಮಯ ಕಾರಣವಲ್ಲ, ಬದಲಿಗೆ ನಿಮ್ಮ ಬಾಲ್ಯದ ಅನುಭವಗಳು ಮತ್ತು ಮನಸ್ಥಿತಿಯೇ ಕಾರಣವೆಂದು ಮನೋವಿಜ್ಞಾನ ಹೇಳುತ್ತದೆ. ಬಾಲ್ಯದಲ್ಲಿ ಪ್ರೀತಿ, ಗೌರವ ಕಾಣದವರು, ತಮಗರಿವಿಲ್ಲದಂತೆಯೇ ದೊಡ್ಡವರಾದ ಮೇಲೆ ಅಂಥದ್ದೇ ಅಶಾಂತ ಸಂಬಂಧಗಳ ಕಡೆಗೆ ಆಕರ್ಷಿತರಾಗುತ್ತಾರೆ.
06:53 AM (IST) Apr 04