LIVE NOW
Published : Oct 27, 2026, 05:35 AM ISTUpdated : Oct 27, 2026, 12:23 PM IST

India Latest News Live: ಭಾರತ ಸೇರಿ 60 ಸಾವಿರ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಕೊಟ್ಟು ಮನೆಗೆ ಕಳಿಸ್ತಿರೋ Microsoft

ಸಾರಾಂಶ

ತಿರುವನಂತಪುರಂ: ಪವಿತ್ರ ಶಬರಿಮಲೆ ಅಯ್ಯಪ್ಪನ ಸನ್ನಿಧಿಯ ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆಯ ವರ್ಚ್ಯುವಲ್‌ ಕ್ಯೂ ಬುಕ್ಕಿಂಗ್‌ ಅ.29ರ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ದರ್ಶನಕ್ಕಾಗಿ ಭಕ್ತರು ಸ್ಲಾಟ್‌ಗಳನ್ನು

http://www.sabarimalaonline.org ವೆಬ್‌ಸೈಟ್ ಮೂಲಕ ಬುಕ್ ಮಾಡಿಕೊಳ್ಳಬಹುದು. ನೀಲಕ್ಕಲ್‌- ಪಂಪಾ ಮಾರ್ಗವಾಗಿ ದಿನಕ್ಕೆ 60,000 ಭಕ್ತರು ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಎರುಮೇಲಿ ಅರಣ್ಯ ಮಾರ್ಗದ ಮೂಲಕ ಪ್ರತಿದಿನ 3,000 ಭಕ್ತರು, ವಂಡಿಪೆರಿಯಾರ್–ಸತ್ರಂ ಮಾರ್ಗದ ಮೂಲಕ ಪ್ರತಿದಿನ 3,000 ಭಕ್ತರು ಬುಕ್ಕಿಂಗ್ ಮಾಡಿಕೊಳ್ಳಬಹುದು. ಬುಕಿಂಗ್ ಸಂಪೂರ್ಣವಾಗಿ ಉಚಿತ.

12:23 PM (IST) Oct 27

ಭಾರತ ಸೇರಿ 60 ಸಾವಿರ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಕೊಟ್ಟು ಮನೆಗೆ ಕಳಿಸ್ತಿರೋ Microsoft

ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯದ ವೆಚ್ಚವನ್ನು ಸರಿದೂಗಿಸಲು ಮೈಕ್ರೋಸಾಫ್ಟ್ ತನ್ನ 60,000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಘೋಷಿಸಿದೆ. ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳ ಅರ್ಹ ಉದ್ಯೋಗಿಗಳಿಗೆ ಈ ಅವಕಾಶ ನೀಡಲಾಗಿದ್ದು, ಡಿಸೆಂಬರ್ ಒಳಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ.
Read Full Story

12:01 PM (IST) Oct 27

ಗರ್ಲ್​ಫ್ರೆಂಡ್​ ಪರೀಕ್ಷೆಯಲ್ಲಿ ಫೇಲಾದಳೆಂದು ಶಾಲೆಗೇ ಬೆಂಕಿ ಹಚ್ಚಿದ ಯುವಕ! ಮುಂದೇನಾಯ್ತು ನೋಡಿ

ಈಜಿಪ್ಟ್‌ನಲ್ಲಿ ಯುವತಿಯೊಬ್ಬಳು ಪರೀಕ್ಷೆಯಲ್ಲಿ ಫೇಲಾದ ಕಾರಣ ಆಕೆಯ ಪ್ರಿಯಕರ ಕೋಪಗೊಂಡು ಶಾಲೆಗೇ ಬೆಂಕಿ ಹಚ್ಚಿದ್ದಾನೆ. ಮದುವೆ ಒಂದು ವರ್ಷ ಮುಂದಕ್ಕೆ ಹೋಗುತ್ತದೆ ಎಂಬ ಹತಾಶೆಯಿಂದ ಈ ಕೃತ್ಯ ಎಸಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
Read Full Story

11:57 AM (IST) Oct 27

Viral - ಪ್ಲೀಸ್ ಹೀಗೆ ಮಾಡ್ಬೇಡಿ! ಇದು ಪೆಟ್ರೋಲ್ ಹಾಕುವ ಸಿಬ್ಬಂದಿಯ ಜೀವನದ ಪ್ರಶ್ನೆ

ಸೋಶಿಯಲ್ ಮೀಡಿಯಾ ಬಳಕೆದಾರರು ಫೋಟೋ ಸಹಿತ ಪೆಟ್ರೋಲ್‌ ಬಂಕ್‌ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಬಳಕೆದಾರರು, ದಯವಿಟ್ಟು ಹೀಗೆ ಮಾಡಬೇಡಿ? ಹಸಿವು ಅನ್ನೋದು ತುಂಬಾ ಕ್ರೂರಿ ಎಂದೆಲ್ಲಾ ಕಮೆಂಟ್‌ಗಳು ಬಂದಿವೆ.

Read Full Story

11:01 AM (IST) Oct 27

'ರಾಮಾಯಣ' ಹಾಡುಗಳ ಬಗ್ಗೆ ಆನ್‌ಲೈನ್‌ ಅಪಸ್ವರ; ಎಆರ್ ರೆಹಮಾನ್ ಕೊಟ್ಟ ತಿರುಗೇಟು ಏನು?

‘ರಾಮಾಯಣ’ ಚಿತ್ರದ ಹಾಡುಗಳ ಬಗ್ಗೆ ಪರ-ವಿರೋಧದ ಚರ್ಚೆಯ ನಡುವೆ, ಎಆರ್ ರೆಹಮಾನ್ ತಮ್ಮ ಸಂಗೀತದ ಆಯ್ಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ‘ಟೀಕೆಗಳಿಗೆ ಪ್ರತಿಕ್ರಿಯಿಸುತ್ತಾ ಕಾಲ ಕಳೆಯುವ ಬದಲು ಹೊಸ ಪ್ರಯೋಗಗಳ ಮೂಲಕ ಮುಂದುವರಿಯುವುದೇ ತಮ್ಮ ಆದ್ಯತೆ’ ಎಂದಿದ್ದಾರೆ. ಜೊತೆಗೆ, ಇನ್ನೂ ಏನು ಹೇಳಿದ್ದಾರೆ ನೋಡಿ..

Read Full Story

09:25 AM (IST) Oct 27

ಸ್ಟಿಫನ್ ಫ್ಲೆಮಿಂಗ್ ಬಳಿಕ ಮತ್ತೊಬ್ಬ ಕೋಚ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಗುಡ್‌ ಬೈ..! ಈತ ಸಿಎಸ್‌ಕೆ ನಂಬಿಗಸ್ಥ ಮಾಜಿ ಕ್ರಿಕೆಟರ್

ಐಪಿಎಲ್ 2027ರ ಸೀಸನ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಕೋಚಿಂಗ್ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮೈಕಲ್ ಹಸ್ಸಿ ಮತ್ತು ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಹಲವು ಪ್ರಮುಖರು ತಂಡದಿಂದ ಹೊರಬಂದಿದ್ದಾರೆ. ಇವರ ಸ್ಥಾನಕ್ಕೆ ಜಹೀರ್ ಖಾನ್ ಮತ್ತು ಮೋಹಿತ್ ಶರ್ಮಾ ಅವರಂತಹ ಹೊಸ ಕೋಚ್‌ಗಳನ್ನು ನೇಮಿಸಲಾಗಿದೆ.
Read Full Story

08:48 AM (IST) Oct 27

IND Vs NZ ಸರಣಿ ಜಯದ ಮೇಲೆ ಭಾರತ ಕಣ್ಣು - ವೆಲ್ಲಿಂಗ್ಟನ್‌ನಲ್ಲಿ ವೈಭವ್‌ಗೆ ಇನ್ನೊಂದು ಚಾನ್ಸ್..!

ನ್ಯೂಜಿಲೆಂಡ್‌ ವಿರುದ್ಧದ 3ನೇ ಟಿ20 ಪಂದ್ಯವನ್ನು ಗೆದ್ದು ಹ್ಯಾಟ್ರಿಕ್‌ ಸರಣಿ ವಶಪಡಿಸಿಕೊಳ್ಳಲು ಭಾರತ ಸಜ್ಜಾಗಿದೆ. ವೆಲ್ಲಿಂಗ್ಟನ್‌ ಮೈದಾನದ ವಿಭಿನ್ನ ವಾತಾವರಣಕ್ಕೆ ತಕ್ಕಂತೆ ಭಾರತ ತನ್ನ ರಣತಂತ್ರ ಬದಲಿಸುವ ಸಾಧ್ಯತೆಯಿದೆ. ಯುವ ಆಟಗಾರ ವೈಭವ್‌ ಸೂರ್ಯವಂಶಿ ಮೇಲೆ ತೀವ್ರ ನಿರೀಕ್ಷೆ ಇಡಲಾಗಿದೆ.
Read Full Story

07:38 AM (IST) Oct 27

ಸಿಇಸಿ ಜ್ಞಾನೇಶ್‌ ಪರ ಸುಪ್ರೀಂಗೆ ಆಯೋಗದಿಂದ ಅಫಿಡವಿಟ್‌ ಸಲ್ಲಿಕೆ - ಏನಿದೆ ಸ್ಪಷ್ಟನೆ?

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆಂಬ ಆರೋಪವನ್ನು ತಳ್ಳಿಹಾಕಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಎಸ್‌ಐಆರ್ ಆದೇಶಗಳನ್ನು ಒಮ್ಮತದಿಂದ ಹೊರಡಿಸಲಾಗಿದೆ ಮತ್ತು ಫಾರ್ಮ್ 6ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
Read Full Story

07:01 AM (IST) Oct 27

60,000 ಸಿಬ್ಬಂದಿಗೆ VRS - ಮೈಕ್ರೋಸಾಫ್ಟ್‌ ಬಿಗ್ ಆಫರ್‌! 4 ದೇಶದ ಟೆಕ್ಕಿಗಳಿಗೆ ಮಾಹಿತಿ

ಕೃತಕ ಬುದ್ಧಿಮತ್ತೆ (ಎಐ) ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಮೈಕ್ರೋಸಾಫ್ಟ್ ಮುಂದಾಗಿದ್ದು, ಭಾರತ ಸೇರಿದಂತೆ 4 ದೇಶಗಳ 60,000 ಉದ್ಯೋಗಿಗಳಿಗೆ ವಿಆರ್‌ಎಸ್ ಆಫರ್ ನೀಡಿದೆ. ಸ್ವಯಂಪ್ರೇರಿತವಾಗಿ ಕೆಲಸ ಬಿಡುವವರಿಗೆ ಉತ್ತಮ ಪ್ಯಾಕೇಜ್ ಘೋಷಿಸಲಾಗಿದೆ.

Read Full Story

06:50 AM (IST) Oct 27

₹100 ಕೋಟಿ ವಂಚನೆ - ಡಿಎಂಕೆ ಮಾಜಿ ಸಚಿವ ಅನ್ಬಿಲ್‌ ಮಹೇಶ್ ಬಂಧನದ ಹಿಂದಿನ ರಹಸ್ಯವೇನು?

ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡುವ ಹೆಸರಿನಲ್ಲಿ ₹100 ಕೋಟಿ ವಂಚಿಸಿದ ಆರೋಪದ ಮೇಲೆ ಡಿಎಂಕೆ ಮಾಜಿ ಸಚಿವ ಅನ್ಬಿಲ್‌ ಮಹೇಶ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

Read Full Story

06:43 AM (IST) Oct 27

ಶೇ.100ರಷ್ಟು ಶುದ್ಧ ಎಥನಾಲ್‌ ಇಂಧನದಿಂದ ಚಲಿಸುವ ವಾಹನಗಳ ಬಳಕೆಗೆ ಕೇಂದ್ರದ ಅನುಮತಿ

ಶೇ.100ರಷ್ಟು ಶುದ್ಧ ಎಥನಾಲ್‌ (ಇ100) ಇಂಧನದಿಂದ ಚಲಿಸುವ ಫ್ಲೆಕ್ಸ್-ಫ್ಯೂಯೆಲ್ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯಿಂದ ವಾಹನಗಳ ತೂಕದ ಮಿತಿಯನ್ನು 3,500 ಕೆಜಿಗಳಿಗೆ ಹೆಚ್ಚಿಸಲಾಗಿದೆ.

Read Full Story

06:34 AM (IST) Oct 27

ಕರಾವಳಿಯತ್ತ ನುಗ್ಗಿ ಬರುತ್ತಿದೆ ಭೀಕರ ‘ಅರ್ನಬ್‌’ ಚಂಡಮಾರುತ; 3 ರಾಜ್ಯಕ್ಕೆ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅರ್ನಬ್' ಚಂಡಮಾರುತವು ಬುಧವಾರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ. ಇದರ ಪ್ರಭಾವದಿಂದ ಆಂಧ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗಲಿದ್ದು, ಭೂಕುಸಿತದ ಆತಂಕ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ನಿಷೇಧಿಸಲಾಗಿದೆ.
Read Full Story

More Trending News