ಭಾರತದ ಪಾಸ್‌ಪೋರ್ಟ್ ಇದೆ ಎಂದರೆ ನೀವು ಭಾರತೀಯ ಪೌರರಾಗಲ್ಲ. ಸಿಟಿಜನ್‌ಶಿಪ್‌ಗೆ ಭಾರತದ ಪಾಸ್‌ಪೋರ್ಟ್ ದಾಖಲೆ ನೀಡಲು ಸಾಧ್ಯವಿಲ್ಲ. ಪಾಸ್‌ಪೋರ್ಟ್ ಪ್ರಯಾಣದ ದಾಖಲೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತ ಸರ್ಕಾರದ ಸೌಲಭ್ಯ ಪಡೆಯಲು ಪೌರತ್ವ ದಾಖಲೆಯಾಗಿ ಪಾಸ್‌ಪೋರ್ಟ್ ಸಲ್ಲಿಕೆ ಕುರಿತು ಇದ್ದ ಗೊಂದಲಕ್ಕೆ ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಭಾರತದ ಪಾಸ್‌ಪೋರ್ಟ್ ಭಾರತೀಯರ ವಿದೇಶ ಪ್ರಯಾಣಕ್ಕಾಗಿ ನೀಡುವ ದಾಖಲೆ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

11:10 PM (IST) Jun 25
ಮಧ್ಯಪ್ರಾಚ್ಯದ ಬಿಕ್ಕಟ್ಟು ತಿಳಿಯಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ವಾಣಿಜ್ಯ ಮತ್ತು ಕೈಗಾರಿಕಾ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಈ ನಿರ್ಧಾರದಿಂದಾಗಿ ಹೋಟೆಲ್ ಮತ್ತು ಕೈಗಾರಿಕಾ ವಲಯಕ್ಕೆ ಶೇ. 50 ರಷ್ಟು ಗ್ಯಾಸ್ ಪೂರೈಕೆ ಮುಕ್ತವಾಗಲಿದೆ.
10:53 PM (IST) Jun 25
ಕಳೆದ ಜೂನ್ 22ರಂದು ತಮಿಳುನಾಡು ಸಿಎಂ ವಿಜಯ್ ತಮ್ಮ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕವಾಗಿ ಶುಭ ಕೋರಿದ್ದರು. ಆದರೆ ರಜನಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿಲ್ಲ ಎಂಬ ಕಾರಣಕ್ಕೆ ಟ್ರೋಲರ್‌ಗಳು ಕಿಡಿಕಾರಿದ್ದರು.
10:50 PM (IST) Jun 25
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕ ಮತ್ತು ಜೆಮಿಮಾ ರೊಡ್ರಿಗಸ್ ಅವರ ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ ಭಾರತ 137 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು.
10:27 PM (IST) Jun 25
ಜಮ್ಮು-ಕಾಶ್ಮೀರದ ಕಿಶ್ತ್ವಾಡ್‌ನಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಸೇನಾ ಅಧಿಕಾರಿಯ ವಾಹನ ಜಪ್ತಿ ಮಾಡಿದ್ದಕ್ಕೆ ಪ್ರತಿಯಾಗಿ ಸೇನಾ ಯೋಧರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.
08:02 PM (IST) Jun 25
07:36 PM (IST) Jun 25
07:36 PM (IST) Jun 25
ಆಂಧ್ರಪ್ರದೇಶದ ಜೊನ್ನಗಿರಿಯಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ ಯೋಜನೆ ಅಧಿಕೃತವಾಗಿ ಆರಂಭವಾಗಿದೆ. ಜಿಯೋಮೈಸೋರ್ ಸರ್ವೀಸಸ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಈ ಗಣಿಯು ವಾರ್ಷಿಕ 2 ಟನ್ ಚಿನ್ನ ಉತ್ಪಾದಿಸುವ ಗುರಿ ಹೊಂದಿದ್ದು, ಇದು ಸ್ಥಳೀಯ ಉದ್ಯೋಗ ಸೃಷ್ಟಿ .
07:28 PM (IST) Jun 25
ಭೋಪಾಲ್‌ನ ಬರಕತುಲ್ಲಾ ವಿಶ್ವವಿದ್ಯಾಲಯದ ಹೆಸರನ್ನು 'ವಾಗ್ದೇವಿ ಭೋಜಪಾಲ್ ವಿಶ್ವವಿದ್ಯಾಲಯ' ಎಂದು ಬದಲಾಯಿಸುವ ಪ್ರಸ್ತಾಪವನ್ನು ಅಂತಿಮವಾಗಿ ಕೈಬಿಡಲಾಗಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರ ತೀವ್ರ ವಿರೋಧ ಮತ್ತು ಉಪಕುಲಪತಿ ರಾಜೀನಾಮೆಯ ನಂತರ, ವಿಶ್ವವಿದ್ಯಾಲಯವು ತನ್ನ ಮೂಲ ಹೆಸರಿನಲ್ಲೇ ಮುಂದುವರಿಯಲಿದೆ.
06:12 PM (IST) Jun 25
05:40 PM (IST) Jun 25
ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ದಕ್ಷಿಣ ರೈಲ್ವೆಯು ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವಿನ ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ. ಈ ರೈಲು ಜುಲೈ 2026 ರಲ್ಲಿ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದ್ದು, ಕರ್ನಾಟಕದ ಯಾತ್ರಾರ್ಥಿಗಳಿಗೆ ರಾಮೇಶ್ವರಂ ದೇವಸ್ಥಾನಕ್ಕೆ ಪ್ರಯಾಣ ಒದಗಿಸುತ್ತದೆ.
05:23 PM (IST) Jun 25
04:24 PM (IST) Jun 25
ದಿಶಾ ಪಟಾನಿ ಅವರ ಈ ಪೋಸ್ಟ್ ಅಡಿಯಲ್ಲಿ ಅಭಿಮಾನಿಗಳು ಮತ್ತು ಬಾಲಿವುಡ್‌ನ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ದಿಶಾ ಹಂಚಿಕೊಳ್ಳುತ್ತಿದ್ದ ವಿಡಿಯೋಗಳಲ್ಲಿ ಬೆಲ್ಲಾ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಹೀಗಾಗಿ ದಿಶಾ ಅಭಿಮಾನಿಗಳಿಗೂ ಬೆಲ್ಲಾ ಅಚ್ಚುಮೆಚ್ಚಿನದಾಗಿತ್ತು!
04:13 PM (IST) Jun 25
ಮ್ಯಾಂಚೆಸ್ಟರ್: ಭಾರತದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ, ಇದೀಗ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಬಾಂಗ್ಲಾದೇಶ ಎದುರಿನ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಇದರ ಬೆನ್ನಲ್ಲೇ ವಿಶ್ವದಾಖಲೆ ಬರೆಯಲು ದೀಪ್ತಿ ಶರ್ಮಾ ಸಜ್ಜಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
03:16 PM (IST) Jun 25
03:02 PM (IST) Jun 25
ಆಪ್ ಪಕ್ಷದ ಮುನ್ಸಿಪಲ್ ಚುನಾವಣೆಯ ಮಾಜಿ ಅಭ್ಯರ್ಥಿ 23 ವರ್ಷದ ನಂದಿನಿ ಬೊಸಮಿಯಾ ಶವವಾಗಿ ಪತ್ತೆಯಾಗಿದ್ದಾಳೆ. ಅಸ್ಲಂ ಸಾಮ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ನಂದಿನಿ ಸಾವು ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ.
01:22 PM (IST) Jun 25
Bill Gates on Jeffrey Epstein: ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ಜಗತ್ತಿನ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿರುವ ಬಿಲ್ ಗೇಲ್ಸ್, ಜೆಫ್ರಿ ಎಫ್‌ಸ್ಟೀನ್ ಜತೆಗಿನ ಒಡನಾಟ ಹಾಗೂ ತಮ್ಮ ಅಕ್ರಮ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಬಿಲ್ ಗೇಟ್ಸ್ ಹೇಳಿದ್ದೇನು? ನೋಡೋಣ ಬನ್ನಿ
12:56 PM (IST) Jun 25
"ಕಂಟೆಂಟ್ ಈಸ್ ಕಿಂಗ್" ಎಂಬುದನ್ನು 'ಒಬ್ಸೆಷನ್' ಸಿನಿಮಾ ಮತ್ತೊಮ್ಮೆ ಸಾಬೀತುಪಡಿಸಿದೆ. ಸಿನಿಮಾ ಮಾಡಲು ಕೋಟಿ ಕೋಟಿ ಹಣ ಬೇಕಿಲ್ಲ, ಗಟ್ಟಿಯಾದ ಕಥೆ ಮತ್ತು ನಿರೂಪಣೆ ಇದ್ದರೆ ಸಾಕು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಈ ಚಿತ್ರದ ಗಳಿಕೆ ಎಷ್ಟು? ಈ ಸ್ಟೋರಿ ನೋಡಿ!
11:54 AM (IST) Jun 25
11:53 AM (IST) Jun 25
"ಮಗ ಬೆಳೆದಿದ್ದಾನೆ ಎಂದು ನಾನು ವಿಶ್ರಾಂತಿ ಪಡೆಯುವುದಿಲ್ಲ. ಕೆಲಸ ಮಾಡುವುದೇ ನಮಗೆ ಆನಂದ. ನಮ್ಮ ಕುಟುಂಬದಲ್ಲಿ ಸೋಮಾರಿತನಕ್ಕೆ ಜಾಗವೇ ಇಲ್ಲ" ಎನ್ನುವ ಮೂಲಕ ತಮ್ಮ ಸಿನಿಮಾ ಪಯಣ ಮುಂದುವರಿಯಲಿದೆ ಎಂಬ ಭರವಸೆ ನೀಡಿದರು. ಇನ್ನೂ ಏನ್ ಹೇಳಿದ್ರು? ಈ ಸ್ಟೋರಿ ನೋಡಿ..
11:18 AM (IST) Jun 25
ವೆನಿಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದೆ. ಮೃತರ ಸಂಖ್ಯೆ 10 ಸಾವಿರಿಂದ 1 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ವೆನಿಜುವೆಲಾದ ಭೀಕರ ಭೂಕಂಪದ ಚಿತ್ರಗಳು ಇಲ್ಲಿವೆ.
11:01 AM (IST) Jun 25
10:58 AM (IST) Jun 25
ಭಾರತದ 1983ರ ವಿಶ್ವಕಪ್ ವಿಜಯದ 43ನೇ ವಾರ್ಷಿಕೋತ್ಸವದಂದು ಬಿಸಿಸಿಐ(BCCI) ಈ ಗೆಲುವನ್ನು 'ತಲೆಮಾರುಗಳಿಗೆ ಸ್ಫೂರ್ತಿ' ಎಂದು ಬಣ್ಣಿಸಿದೆ. ಕಪಿಲ್ ದೇವ್ ನಾಯಕತ್ವದ ತಂಡ, ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನ ಸೋಲಿಸಿ ಇತಿಹಾಸ ನಿರ್ಮಿಸಿತ್ತು.
10:54 AM (IST) Jun 25
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿಮಾನ ನಿಲ್ದಾಣ, ಕಚೇರಿಗಳು ಬಂದ್ ಆಗಿದೆ. ಭೀಕರ ಭೂಕಂಪದ ಪರಿಣಾಮ ವೆನಿಜುವೆಲಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 10 ಸಾವಿರ ದಿಂದ 1 ಲಕ್ಷ ಮಂದಿ ಮೃತಪಟ್ಟಿರುವ ಸಾಧ್ಯೆ ಇದೆ.
09:31 AM (IST) Jun 25
08:58 AM (IST) Jun 25
07:49 AM (IST) Jun 25
07:32 AM (IST) Jun 25
07:16 AM (IST) Jun 25
ಭಾರತದಲ್ಲಿ ಪಾಸ್‌ಪೋರ್ಟ್ ಮಾಡುವ ಪ್ರಕ್ರಿಯೆ ಸರಳಗೊಳಿಸಲಾಗಿದೆ.ಗರಿಷ್ಠ 15 ದಿನದ ಒಳಗೆ ಪಾಸ್‌ಪೋರ್ಟ್ ಕೈಸೇರಲಿದೆ. ಆದರೆ ಇದೇ ಪಾಸ್‌ಪೋರ್ಟ್ ಹಿಡಿದು ಭಾರತೀಯ ಪೌರತ್ವ ದಾಖಲೆಯಾಗಿ ಬಳಸಲು ಸಾಧ್ಯವಿಲ್ಲ. ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.