ಅಯೋಧ್ಯಾ/ರಾಯ್‌ಬರೇಲಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆಗೆ ನಿಷೇಧವಿದ್ದರೂ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್ ಮೀನು ತಿಂದಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ರಾಯ್, ಸಾಕ್ಷ್ಯಕೊಡಿ ಎಂದು ಸವಾಲು ಹಾಕಿದ್ದಾರೆ.
ರಾಯ್ ಅಯೋಧ್ಯೆಯ ಹನುಮಾನ್ ಗಢಿ ಹಾಗೂ ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ದರು. ಆ ಬಳಿಕ 30 ಕಿ.ಮೀ. ದೂರದ ತರುಣ್‌ಗೆ ತೆರಳಿ ನಿಷಾದ ಸಮುದಾಯ ಸಭೆಯಲ್ಲಿ ಭಾಗವಹಿಸಿ ಭೋಜನ ಮಾಡಿದ್ದರು. ಆ ವೇಳೆ ಅವರು ಮೀನೂಟ ಮಾಡಿದ್ದಾರೆ ಎಂದು ಆರೋಪಿಸಿರುವ ಯೋಗಿ, ‘ಕಾಂಗ್ರೆಸ್ ಅಧ್ಯಕ್ಷರು ದರ್ಶನಕ್ಕಾಗಿ ಹನುಮಾನ್‌ಗಢಿಗೆ ಹೋಗುತ್ತಾರೆ, ಹೊರಬಂದ ನಂತರ ಮೀನೂಟ ಸವಿಯುತ್ತಾರೆ. ನಂತರ ರಾಮ್-ರಾಮ್ ಎನ್ನುತ್ತಾರೆ. ನಿರ್ಲಜ್ಜತನಕ್ಕೂ ಒಂದು ಮಿತಿಯಿರುತ್ತದೆ’ ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ರಾಯ್, ‘ಸಿಎಂ ತಮ್ಮ ಆರೋಪಕ್ಕೆ ವಿಡಿಯೋ ಅಥವಾ ಫೋಟೊ ಸಾಕ್ಷ್ಯ ನೀಡಬೇಕು. ಹಾಗಾದರೆ ನಾನು ಅಧ್ಯಕ್ಷ ಸ್ಥಾನಕ್ಕೇ ರಾಜೀನಾಮೆ ಕೊಡುತ್ತೇನೆ’ ಎಂದಿದ್ದಾರೆ.
10:47 PM (IST) Aug 25
ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಬೆಕ್ಕು ಅಡ್ಡ ಬಂದ ಕಾರಣ ಚಾಲಕ ಹಠಾತ್ತಾಗಿ ಬ್ರೇಕ್ ಹಾಕಿದ್ದರಿಂದ ಕೂಲಿ ಕಾರ್ಮಿಕರಿದ್ದ ಆಟೋ ಪಲ್ಟಿಯಾಗಿ 10 ಮಹಿಳೆಯರು ಗಾಯಗೊಂಡಿದ್ದಾರೆ. ಬೆಕ್ಕನ್ನು ಉಳಿಸಲು ಹೋಗಿ ನಡೆದ ಈ ಅಪಘಾತದಲ್ಲಿ ಮೂವರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.
10:13 PM (IST) Aug 25
ಪಾಕಿಸ್ತಾನದ ಕಿರಾನಾ ಹಿಲ್ಸ್ ಅಣ್ವಸ್ತ್ರ ತಾಣದ ಮೇಲಿನ ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಮಾಜಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ. 'ಆಪರೇಷನ್ ಸಿಂಧೂರ್' ವೇಳೆ ರಡಾರ್ ಪತ್ತೆಗಾಗಿ ಕಳುಹಿಸಿದ್ದ ಡ್ರೋನ್ ಇಂಧನ ಖಾಲಿಯಾಗಿ ಅಲ್ಲಿ ಅಪ್ಪಳಿಸಿತ್ತು ಎಂದು ಅವರು ವಿವರಿಸಿದ್ದಾರೆ.
10:09 PM (IST) Aug 25
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವಿನ ಹಾದಿಯಲ್ಲಿದ್ದರೂ, ಕೊಲಂಬೊದಲ್ಲಿ ಬುಧವಾರ ಭಾರಿ ಮಳೆಯ ಮುನ್ಸೂಚನೆ ಇರುವುದು ಗೆಲುವಿಗೆ ಅಡ್ಡಿಯಾಗಬಹುದು. ಫಾಲೋ-ಆನ್ ತಪ್ಪಿಸಿಕೊಳ್ಳಲು ಲಂಕಾ ಪಡೆಗೆ ಇನ್ನೂ 39 ರನ್‌ಗಳ ಅಗತ್ಯವಿದ್ದು, ಸೋನಲ್ ದಿನುಶಾ ಅವರ ಬ್ಯಾಟಿಂಗ್ ಪಂದ್ಯವನ್ನು ಡ್ರಾ ಮಾಡುವತ್ತ ಕೊಂಡೊಯ್ಯುವ ಸಾಧ್ಯತೆಯಿದೆ.
07:23 PM (IST) Aug 25
07:18 PM (IST) Aug 25
ಇಶಾ ಫೌಂಡೇಶನ್ ಮತ್ತು 'ದಿ ಲೆಜೆಂಡ್ ಆಫ್ ಹನುಮಾನ್' ಖ್ಯಾತಿಯ ಗ್ರಾಫಿಕ್ ಇಂಡಿಯಾ ಸಂಸ್ಥೆಯು 'ಶಿವ – ದಿ ಆದಿಯೋಗಿ' ಎಂಬ ಅನಿಮೇಷನ್ ಚಲನಚಿತ್ರವನ್ನು ನಿರ್ಮಿಸುತ್ತಿವೆ. ಸದ್ಗುರುಗಳ ಬೋಧನೆಗಳನ್ನು ಆಧರಿಸಿದ ಈ ಚಿತ್ರವು ಯೋಗದ ಉಗಮ ಮತ್ತು ಆದಿಯೋಗಿಯ ಜೀವನವನ್ನು ಚಿತ್ರಿಸಲಿದೆ.
06:58 PM (IST) Aug 25
06:54 PM (IST) Aug 25
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೊಡಗಿನ ಕುವರ ರಾಬಿನ್ ಉತ್ತಪ್ಪ, ಇಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿಯ ಬೇಡಿಕೆಯಿಟ್ಟಿದ್ದಾರೆ. ಅಷ್ಟಕ್ಕೂ ರಾಬಿನ್ ಉತ್ತಪ್ಪ ಬೇಡಿಕೆ ಏನು ಎನ್ನುವುದನ್ನು ನೋಡೋಣ ಬನ್ನಿ.
06:41 PM (IST) Aug 25
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ರೈತನೊಬ್ಬ ಹೊಲವನ್ನು ಸಮತಟ್ಟು ಮಾಡುವಾಗ ಬರೋಬ್ಬರಿ 32 ಪುರಾತನ ನಾಗಪಡಗ ಶಿಲೆಗಳು ಪತ್ತೆಯಾಗಿವೆ. ಭಾರೀ ಕುತೂಹಲ ಮೂಡಿಸಿರುವ ಶಿಲೆಗಳು ಒಂದಷ್ಟು ರಹಸ್ಯಗಳನ್ನು ಹೊದ್ದು ನಿಂತಿರುವ ಅನುಮಾನ ಸ್ಥಳೀಯರಲ್ಲಿ ಕಾಡಿದೆ.
06:36 PM (IST) Aug 25
06:17 PM (IST) Aug 25
ಕೃತಕ ಬುದ್ಧಿಮತ್ತೆ (ಎಐ) ಬರುವ ಮುನ್ನವೇ ಡೇಟಾ ಸೆಂಟರ್‌ಗಳು ಅಸ್ತಿತ್ವದಲ್ಲಿದ್ದವು, ಇವು ವೆಬ್‌ಸೈಟ್‌ಗಳು, ಆನ್‌ಲೈನ್ ಸೇವೆಗಳು ಮತ್ತು ಸರ್ಕಾರಿ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಪ್ರಕ್ರಿಯೆಗೊಳಿಸುತ್ತಿದ್ದವು.
06:14 PM (IST) Aug 25
06:07 PM (IST) Aug 25
05:43 PM (IST) Aug 25
05:27 PM (IST) Aug 25
ಕೇರಳದಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟ 17 ವರ್ಷದ ಆದಿಲ್ ಎಂಬ ಬಾಲಕನ ಪೋಷಕರು, ಮಗನ ಸಾವಿನ ನೋವಿನ ನಡುವೆಯೂ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಹೃದಯದ ಕವಾಟಿನ ದೋಷದಿಂದಾಗಿ ಹೃದಯ ದಾನ ಮಾಡಲು ಸಾಧ್ಯವಾಗದಿದ್ದರೂ, ಆತನ ಮೂತ್ರಪಿಂಡ ಹಾಗೂ ಯಕೃತ್ತನ್ನು ದಾನ ಮಾಡುವ ಮೂಲಕ ಇತರರಿಗೆ ಮರುಜೀವ ನೀಡಲು ಪೋಷಕರು ಮುಂದಾಗಿದ್ದಾರೆ.
05:16 PM (IST) Aug 25
ನಟಿ ಕೃತಿ ಸನೋನ್ ಅವರ ರಕ್ಷಾಬಂಧನ ಜಾಹೀರಾತು, ಅವರ ಉಡುಪು ಮತ್ತು ನಾಯಿಗೆ ರಾಖಿ ಕಟ್ಟಿದ್ದಕ್ಕಾಗಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೃತಿ, 'ಸಂಸ್ಕೃತಿ ಇರುವುದು ಮನಸ್ಸಿನಲ್ಲಿ, ಉಡುಪಿನ ನೆಕ್‌ಲೈನ್‌ನಲ್ಲಿ ಅಲ್ಲ' ಎಂದು ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ.
04:49 PM (IST) Aug 25
ಜೈಪುರದ ಸಿಎ ಒಬ್ಬರು 3,168 ನಕಲಿ 15CB ಪ್ರಮಾಣಪತ್ರಗಳನ್ನು ಬಳಸಿ 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿದ ಆರೋಪದ ಮೇಲೆ ಎಫ್‌ಐಆರ್ ಎದುರಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ, ಯಾವುದೇ ವಹಿವಾಟು ನಡೆಸದ 40ಕ್ಕೂ ಹೆಚ್ಚು ಶಂಕಾಸ್ಪದ ಕಂಪನಿಗಳ ಮೂಲಕ ಈ ಹಣ ರವಾನೆಯಾಗಿರುವುದು ಬಯಲಾಗಿದೆ.
04:44 PM (IST) Aug 25
ಜಾಗತಿಕ ಆಹಾರ ದೈತ್ಯ ಕಂಪನಿಗಳಾದ ಕೊಕಾ-ಕೋಲಾ, ನೆಸ್ಲೆ ಭಾರತದಲ್ಲಿ ಪ್ಯಾಕ್ ಮಾಡಿದ ಆಹಾರಗಳ ಮೇಲೆ ಆರೋಗ್ಯ ಮುನ್ನೆಚ್ಚರಿಕೆ ಲೇಬಲ್‌ಗಳನ್ನು ವಿರೋಧಿಸುತ್ತಿವೆ. ಯುರೋಪ್‌ಗೆ ಹೋಲಿಸಿದರೆ ಭಾರತದಲ್ಲಿ ಮಾರಾಟವಾಗುವ ಇಂಥ ಪ್ರಾಡಕ್ಟ್‌ಗಳಲ್ಲಿ ಮುನ್ನೆಚ್ಚರಿಕೆಗಳೂ ಇರೋದಿಲ್ಲ.
04:37 PM (IST) Aug 25
ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟ್ ಇತ್ತೀಚಿಗಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟಿಗ ಕ್ರಶ್ ಆಗಿದ್ದ ಸ್ಮೃತಿ ಮಂಧನಾ ಅವರನ್ನೇ ಹಿಂದಿಕ್ಕುವಂತಹ ಸುಂದರಿ ಕ್ರಿಕೆಟ್‌ಗೆ ಎಂಟ್ರಿಕೊಟ್ಟಿದ್ದಾರೆ. ಅಷ್ಟಕ್ಕೂ ಯಾರೀಕೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
04:08 PM (IST) Aug 25
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನಿಯರ್ ಕ್ರಿಕೆಟ್ ಸಮಿತಿಯ ಐದು ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕನಿಷ್ಠ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, ಐದು ವರ್ಷಗಳ ಹಿಂದೆ ನಿವೃತ್ತರಾದ ಮಾಜಿ ಕ್ರಿಕೆಟಿಗರು ಸೆಪ್ಟೆಂಬರ್ 5, 2026 ರೊಳಗೆ ಅರ್ಜಿ ಸಲ್ಲಿಸಬಹುದು.
03:02 PM (IST) Aug 25
02:55 PM (IST) Aug 25
ಭಾರತದಲ್ಲಿ ಕೆಲವು ವರ್ಗಗಳು ಕಡಿಮೆ ಮಕ್ಕಳನ್ನು ಹೊಂದುವತ್ತ ಸಾಗುತ್ತಿದ್ದರೆ, ಸಿಂಗಾಪುರದಲ್ಲಿ ಜನಸಂಖ್ಯಾ ಕುಸಿತ ತೀವ್ರವಾಗಿದೆ. ಈ ಸಮಸ್ಯೆಯನ್ನು ಎದುರಿಸಲು, ಸಿಂಗಾಪುರ ಸರ್ಕಾರವು ಪ್ರತಿ ಮಗುವಿನ ಜನನಕ್ಕೆ ಸುಮಾರು 8 ಲಕ್ಷ ರೂಪಾಯಿಗಳ ಪ್ರೋತ್ಸಾಹಧನ ಮತ್ತು ಇತರ ಸೌಲಭ್ಯಗಳನ್ನು ಘೋಷಿಸಿದೆ.
02:38 PM (IST) Aug 25
ಹದಿಹರೆಯದ ಮಕ್ಕಳಿಗೆ ಹಣಕಾಸಿನ ಪಾಠ ಕಲಿಸಲು ಸ್ಟ್ರೀಕಿಂಗ್ ಆ್ಯಪ್‌ಗಳು, ಮೈನರ್ ಡಿಮ್ಯಾಟ್ ಖಾತೆಗಳ ಮೂಲಕ ಹೂಡಿಕೆ, ಮತ್ತು ಫ್ರಾಕ್ಷನಲ್ ಓನರ್‌ಶಿಪ್‌ನಂತಹ ಆಧುನಿಕ ವಿಧಾನಗಳನ್ನು ಬಳಸಬಹುದು. ಫ್ಯಾಮ್ ಪೇ, ಯುಪಿಐ ಸರ್ಕಲ್‌ನಂತಹ ಸಾಧನಗಳು ಸುರಕ್ಷಿತವಾಗಿ ಹಣದ ನಿರ್ವಹಣೆಯನ್ನು ಕಲಿಸಲು ಸಹಾಯ ಮಾಡುತ್ತವೆ.
02:08 PM (IST) Aug 25
02:08 PM (IST) Aug 25
01:52 PM (IST) Aug 25
ಭಾರತದ ಬ್ಯಾಂಕುಗಳ ಸ್ಥಿತಿ ಸಖತ್ ಸ್ಟ್ರಾಂಗ್ ಆಗಿದೆ ಅಂತ ಬ್ಯಾಂಕ್ ಆಫ್ ಅಮೆರಿಕಾ ಗ್ಲೋಬಲ್ ರಿಸರ್ಚ್ ವರದಿ ಹೇಳಿದೆ. ಇದಕ್ಕೆ ಕಾರಣ, ಭರ್ಜರಿ ಸಾಲ ಬೆಳವಣಿಗೆ ಮತ್ತು ಸುಧಾರಿಸಿದ ಆಸ್ತಿ ಗುಣಮಟ್ಟ. HDFC ಮತ್ತು ICICI ಬ್ಯಾಂಕ್‌ಗಳು ಈ ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿವೆ.ವಿವರಗಳಿಗೆ ಮುಂದೆ ಓದಿ..
01:35 PM (IST) Aug 25
01:28 PM (IST) Aug 25
ಕಂಗನಾ ರನೌತ್ ಈಗ ಬಾಲಿವುಡ್‌ನ 'ಬಿಗ್ ಬಾಸ್' ರೀತಿ ವರ್ತಿಸುತ್ತಿದ್ದು, ತಪ್ಪು ಕಂಡಲ್ಲಿ ಯಾರನ್ನೂ ಬಿಡುತ್ತಿಲ್ಲ. ಸಿನಿಮಾ ಮತ್ತು ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಈ 'ಕ್ವೀನ್' ಮುಂದೆ ಸದ್ಯಕ್ಕೆ ಯಾರೂ ಬಾಯಿ ಬಿಡದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲೇನು ಹೇಳಿದ್ದಾರೆ ನೋಡಿ..
01:16 PM (IST) Aug 25
ಕೆವಿಎನ್ ಸಂಸ್ಥೆಯ ಚಿತ್ರದಲ್ಲಿ ನಟಿಸಿದ ವಿಜಯ್ ಅವರು ಬಳಿಕ ಮುಖ್ಯಮಂತ್ರಿಯಾದರು. ಈಗ ನೀವು ಕೂಡ ಅದೇ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಟಾಕ್ಸಿಕ್ ಸಿನಿಮಾ ಮಾಡುತ್ತಿದ್ದೀರಿ. ಕಟ್ ಮಾಡಿದರೆ ನೀವೂ ಮುಂದೆ ಸಿಎಂ ಆಗ್ತೀರಾ ಎಂದು ಕಾರ್ಯಕರ್ಮದಲ್ಲಿ ನಿರೂಪಕರು ಪ್ರಶ್ನಿಸಿದರು. ಅದಕ್ಕೆ ಯಶ್ ಉತ್ತರ ಇದು..
01:04 PM (IST) Aug 25
Cockroach janata party (ಸಿಜೆಪಿ) ನೇತೃತ್ವದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ಸಮಿತಿಯ ರಚನೆಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು 'Mysterious' ಎಂದು ಕರೆದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರೋಧ
12:43 PM (IST) Aug 25
ಇತ್ತೀಚಿನ ದಿನಗಳಲ್ಲಿ ವೈರಲ್ ಆಗಲು ಅಥವಾ ಲೈಕ್ಸ್ ಗಳಿಸಲು ಯುವಜನತೆ ಇಂತಹ ಹುಚ್ಚಾಟಗಳಿಗೆ ಮುಂದಾಗುತ್ತಿದ್ದಾರೆ. ಈ ಘಟನೆ ಈಗ ಸಖತ್ ಟ್ರೋಲ್ ಆಗುತ್ತಿದ್ದು, "ಪ್ರೀತಿಯ ಮುತ್ತು ಇಷ್ಟೊಂದು ಕಾಸ್ಟ್ಲಿ ಆಗುತ್ತೆ ಅಂತ ಆ ಪ್ರೇಮಿ ಪಾಪ ಕನಸಿನಲ್ಲೂ ಅಂದುಕೊಂಡಿರಲಿಲ್ಲ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
12:19 PM (IST) Aug 25
ಟಾಲಿವುಡ್‌ನಲ್ಲಿ ಕಳೆದ ವಾರ ಬಿಡುಗಡೆಯಾದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ. ಕಳೆದ ಮೂರು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.
11:33 AM (IST) Aug 25
ಕೇರಳದ ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರಿಸುವ ಪ್ರಸ್ತಾಪ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಮರ್ಥಿಸಿಕೊಂಡಿದ್ದಾರೆ. ಇದು ಆಡಳಿತಾತ್ಮಕ ನಿರ್ಧಾರ, ಯುಡಿಎಫ್ ಸರ್ಕಾರ ತನ್ನ ವೈಫಲ್ಯ ಮುಚ್ಚಲು ವಿವಾದ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
11:00 AM (IST) Aug 25
09:27 AM (IST) Aug 25
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ನ್ಯಾಯಾಲಯ ಮತ್ತೊಮ್ಮೆ 21 ದಿನಗಳ ಪೆರೋಲ್ ನೀಡಿದೆ. ಅತ್ಯಾ೧ಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ. 2020 ರಿಂದ 17ನೇ ಬಾರಿಗೆ ಬಿಡುಗಡೆಯಾಗುತ್ತಿದ್ದು, ಒಟ್ಟು 450 ದಿನಗಳಿಗೂ ಹೆಚ್ಚು ಕಾಲ ಜೈಲಿನಿಂದ ಹೊರಗೆ.
08:48 AM (IST) Aug 25
ಕೇಂದ್ರ ಸರ್ಕಾರವು ಕರ್ನಾಟಕದ ಹುಬ್ಬಳ್ಳಿ, ವಾರಾಣಸಿ ಮತ್ತು ತಿರುಪತಿ ಸೇರಿದಂತೆ ದೇಶದ 11 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ) ಗುತ್ತಿಗೆ ನೀಡಲು ಯೋಜಿಸಿದೆ. ಈ ವಿಮಾನ ನಿಲ್ದಾಣಗಳನ್ನು ಐದು ಗುಚ್ಛಗಳಾಗಿ ವಿಂಗಡಿಸಿ, 50 ವರ್ಷಗಳ ಅವಧಿಗೆ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು.
08:30 AM (IST) Aug 25
07:28 AM (IST) Aug 25