Published : Apr 25, 2026, 06:50 AM ISTUpdated : Apr 25, 2026, 10:24 PM IST

India Latest News Live: 15 ಎಸೆತದಲ್ಲಿ ಫಿಫ್ಟಿ, 36ಕ್ಕೆ ಶತಕ, ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ

ಸಾರಾಂಶ

ವಾಷಿಂಗ್ಟನ್‌: ಅಮೆರಿಕವು ಚೀನಾದ ಒಂದು ಪ್ರಮುಖ ತೈಲ ಸಂಸ್ಕರಣಾಗಾರ ಮತ್ತು ಇರಾನ್‌ ತೈಲ ಸಾಗಣೆಯಲ್ಲಿ ತೊಡಗಿರುವ ಸುಮಾರು 40 ಹಡಗು ಕಂಪನಿಗಳು ಹಾಗೂ ಟ್ಯಾಂಕರ್‌ಗಳ ಮೇಲೆ ಶುಕ್ರವಾರ ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಇವುಗಳಲ್ಲಿ ಚೀನಾದ ದಾಲಿಯನ್ ಬಂದರಿನಲ್ಲಿರುವ ಹೆಂಗ್ಲಿ ಪೆಟ್ರೋಕೆಮಿಕಲ್ ಸಂಸ್ಕರಣಾ ಕೇಂದ್ರವೂ ಸೇರಿದೆ. ಇದು ದಿನಕ್ಕೆ ಸುಮಾರು 4 ಲಕ್ಷ ಬ್ಯಾರಲ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ಇರಾನ್‌ಗೆ ನೂರಾರು ಮಿಲಿಯನ್ ಡಾಲರ್ ಆದಾಯ ಒದಗಿಸಿದೆ ಎನ್ನಲಾಗಿದೆ. ಇರಾನ್‌ನ ಪ್ರಮುಖ ಆದಾಯ ಮೂಲವಾದ ತೈಲ ರಫ್ತನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Vaibhav Sooryavanshi

10:24 PM (IST) Apr 25

15 ಎಸೆತದಲ್ಲಿ ಫಿಫ್ಟಿ, 36ಕ್ಕೆ ಶತಕ, ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ

15 ಎಸೆತದಲ್ಲಿ ಫಿಫ್ಟಿ, 36ಕ್ಕೆ ಶತಕ, ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ, ಮೊದಲ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸಿ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಸೆಂಚುರಿ ಅಬ್ಬರದಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ.

Read Full Story

10:04 PM (IST) Apr 25

ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ

ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದಿದ್ದಾರೆ. ಇತ್ತ ಟಿಎಂಸಿ ಕೂಡ ಭವಿಷ್ಯ ಹೇಳಿದೆ.

Read Full Story

08:25 PM (IST) Apr 25

ಸ್ವರ್ಗ ತೋರಿಸ್ತೇವೆಂದು ಹನಿಟ್ರ್ಯಾಪ್​ - ವಿವಸ್ತ್ರಗೊಳಿಸಿ ವಿಡಿಯೋ- ಜಾಸ್ಮಿನ್​ ಬಲೆಯಲ್ಲಿ ಪುರುಷರು

 ಸೋಷಿಯಲ್ ಮೀಡಿಯಾ ಮೂಲಕ ಶ್ರೀಮಂತ ಪುರುಷರನ್ನು ಪರಿಚಯಿಸಿಕೊಂಡು, ಹೋಟೆಲ್‌ಗೆ ಕರೆದೊಯ್ದು ವಿವಸ್ತ್ರಗೊಳಿಸಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ 'ಜಾಸ್ಮಿನ್ ಗ್ಯಾಂಗ್' ಎಂಬ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ನಾಲ್ವರು ಮಹಿಳೆಯರು ಸೇರಿದಂತೆ ಹಲವರನ್ನು ಬಂಧಿಸಲಾಗಿದ್ದು, ಕಿಂಗ್‌ಪಿನ್‌ಗಾಗಿ ಹುಡುಕಾಟ ಮುಂದುವರೆದಿದೆ.

Read Full Story

08:14 PM (IST) Apr 25

265 ರನ್ ಟಾರ್ಗೆಟ್ ಚೇಸ್, ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್

265 ರನ್ ಟಾರ್ಗೆಟ್ ಚೇಸ್, ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್, ಡೆಲ್ಲಿ ಬೃಹತ್ ಮೊತ್ತ ಸಿಡಿಸಿ ನಿರಾಳರಾಗಿದ್ದರೆ, ಪಂಜಾಬ್ ಕಿಂಗ್ಸ್ ಗುರಿ ಚೇಸ್ ಮಾಡಿ ಹೊಸ ಇತಿಹಾಸ ರಚಿಸಿದೆ.

Read Full Story

07:44 PM (IST) Apr 25

Romantic Hero ಯಾರು? 71ರ ರೇಖಾ ಉತ್ತರಕ್ಕೆ ಬಾಲಿವುಡ್​ ತತ್ತರ! ಅಂದ್ಕೊಂಡಿದ್ದೇ ಒಂದು, ಹೇಳಿದ್ದೇ ಇನ್ನೊಂದು

71ರ ಹರೆಯದಲ್ಲೂ ಸೌಂದರ್ಯದಿಂದ ಮಿಂಚುತ್ತಿರುವ ನಟಿ ರೇಖಾ, ಅಮಿತಾಭ್ ಬಚ್ಚನ್ ಮೇಲಿನ ತಮ್ಮ ಪ್ರೀತಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಕೇಳಿದ ಪ್ರಶ್ನೆಗೆ ಅಮಿತಾಭ್ ಹೆಸರನ್ನು ಹೇಳದೆ ಉತ್ತರಿಸಿದರೂ, ಅವರ ಪ್ರತಿಕ್ರಿಯೆ ಹಳೆಯ ಪ್ರೀತಿಯನ್ನು ನೆನಪಿಸಿತು.

Read Full Story

07:38 PM (IST) Apr 25

ಏಕ್‌ದಂ ರೇರ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ಸ್ಟಾರ್ ನಟಿ; ಕನ್ನಡದಲ್ಲೂ ನಟಿಸಿದ್ದರು ನೆನಪಿದ್ಯಾ?

ಈ ಮೊದಲು ಕನ್ನಡ ಚಿತ್ರಗಳಲ್ಲೂ ನಟಿಸಿರುವ ಈ ನಟಿ, ಇದೀಗ ಮತ್ತೆ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್‌ ಶುರುಮಾಡಿದ್ದಾರೆ.   8 ವರ್ಷಗಳ ಕಾಲ ಪ್ರೀತಿಸಿ ಹಸೆಮಣೆ ಏರಿದ ಈ ನಟಿಗೆ ಈಗ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯ ನಂತರ ಸುದೀರ್ಘ ಕಾಲ ಚಿತ್ರರಂಗದಿಂದ ದೂರವಿದ್ದು, ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಯಾರು ನೋಡಿ..

Read Full Story

07:32 PM (IST) Apr 25

ಒಂದೇ ವಿಡಿಯೋದಿಂದ ಸ್ಟಾರ್ ಆದ ಗಾಯಕಿ ಸಮೀರಾ - ಒಂದು ಹಾಡಿಗೆ ಇವರ ಸಂಭಾವನೆ ಎಷ್ಟು?

'ಅಲ್ಲಾಡಿಪೋತುನ್ನಾಡಮ್ಮಾ' ಎಂಬ ಒಂದೇ ಒಂದು ವಿಡಿಯೋದಿಂದ ಸಿಕ್ಕಾಪಟ್ಟೆ ಫೇಮಸ್ ಆದ ಗಾಯಕಿ ಸಮೀರಾ ಭಾರದ್ವಾಜ್, ಸದ್ಯ ಗಾಯಕಿಯಾಗಿ ಸಖತ್ ಬ್ಯುಸಿಯಾಗಿದ್ದಾರೆ. ಹಾಗಾದರೆ, ಒಂದು ಹಾಡಿಗೆ ಅವರು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಗೊತ್ತಾ? ಇಲ್ಲಿದೆ ವಿವರ.

Read Full Story

07:01 PM (IST) Apr 25

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ವೇಗಿ ಎನ್ಗಿಡಿಗೆ ತಲೆಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ವೇಗಿ ಎನ್ಗಿಡಿಗೆ ತಲೆಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು, ಮೈದಾನದಲ್ಲೇ ಬಿದ್ದ ಎನ್ಗಿಡಿಯನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಿಸಲಾಗಿದೆ.

Read Full Story

07:00 PM (IST) Apr 25

ಗಂಡ ನಿಮ್ಮ ಮಾತು ಕೇಳದೇ ಬೇಡಿಕೆ ಈಡೇರಿಸಬೇಕಾ? ಬೆಸ್ಟ್​ ಟೈಂ ಇದಂತೆ ನೋಡಿ - ಸುಧಾ ಮೂರ್ತಿ ಟಿಪ್ಸ್​

ಇನ್ಫೋಸಿಸ್ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ತಮ್ಮ ಸರಳ ಜೀವನಕ್ಕೆ ಹೆಸರುವಾಸಿ. ಪತಿ ಪೇಪರ್ ಓದುವಾಗ ಪತ್ನಿಯ ಮಾತನ್ನು ಕೇಳದೆ 'ಓಕೆ' ಎನ್ನುವ ಬಗ್ಗೆ ಸುಧಾ ಮೂರ್ತಿ ತಮಾಷೆಯ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸುಖಮಯ ದಾಂಪತ್ಯಕ್ಕೆ ಕಿವಿಮಾತನ್ನೂ ನೀಡಿದ್ದಾರೆ.
Read Full Story

06:22 PM (IST) Apr 25

ಐಶ್ವರ್ಯಾ ರೈ ಜೊತೆ ನಟಿಸಿದ್ದ ಈ ನಟಿ ಸೀರಿಯಲ್‌ನಲ್ಲಿ ಸಿಕ್ಕಾಪಟ್ಟೆ ಸಂಭಾವನೆ ಪಡೀತಿದ್ರು; ಇದ್ದಕ್ಕಿದ್ದಂತೆ ನಟನೆ ಬಿಟ್ಟಿದ್ದೇಕೆ?

ದಯಾಬೆನ್ ಪಾತ್ರಕ್ಕೆ ಬಣ್ಣ ಹಚ್ಚುವ ಮುನ್ನ ದಿಶಾ ವಕಾನಿ ಬಾಲಿವುಡ್‌ನ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 2008 ರಲ್ಲಿ ತೆರೆಕಂಡ 'ಜೋಧಾ ಅಕ್ಬರ್'ನಲ್ಲಿ ಅವರು ಐಶ್ವರ್ಯಾ ರೈ ಆತ್ಮೀಯ ಗೆಳತಿ, ಸಹಾಯಕಿ 'ಮಾಧವಿ' ಎಂಬ ಪಾತ್ರವನ್ನು ನಿರ್ವಹಿಸಿದ್ದರು.

Read Full Story

05:57 PM (IST) Apr 25

ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿ

ಗುಜುರಿ ಸೇರಿದ್ದ ವಸ್ತುಗಳನ್ನು ಬಳಸಿ ಈ ಕಾರು ತಯಾರಿಸಲಾಗಿದೆ. ಸಂಪೂರ್ಣವಾಗಿ ಸೋಲಾರ್‌ನಿಂದ ಕಾರು ಓಡುತ್ತಿದೆ. ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿಗೆ ಈಗ ಹಲವು ಕಂಪನಿಗಳಿಂದ ಬೇಡಿಕೆ

Read Full Story

05:44 PM (IST) Apr 25

ಪಂಜಾಬ್ ಬೌಲರ್‌ಗಳನ್ನು ಚೆಂಡಾಡಿ ಕೆ ಎಲ್ ರಾಹುಲ್ ಸ್ಪೋಟಕ ಶತಕ; ಶ್ರೇಯಸ್ ಅಯ್ಯರ್ ಪಡೆಗೆ ಬೆಟ್ಟದಂತ ಸವಾಲು

ಕನ್ನಡಿಗ ಕೆಎಲ್ ರಾಹುಲ್ ಅವರ ಸ್ಪೋಟಕ ಅಜೇಯ 152 ರನ್ ಮತ್ತು ನಿತೀಶ್ ರಾಣಾ ಅವರ 91 ರನ್‌ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 264 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ರಾಹುಲ್ ಐಪಿಎಲ್‌ನಲ್ಲಿ ಭಾರತೀಯ ಬ್ಯಾಟರ್‌ನ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಮುರಿದಿದ್ದಾರೆ.
Read Full Story

05:37 PM (IST) Apr 25

Eid 2027 Clash - ಸಲ್ಮಾನ್ vs ಪ್ರಭಾಸ್ ಬಾಕ್ಸ್‌ ಆಫೀಸ್‌ ವಾರ್; ಗೆಲ್ಲೋದ್ಯಾರು ಈ ಬಿಗ್ ಫೈಟ್?

ಸಲ್ಮಾನ್ ಖಾನ್ ಸಿನಿಮಾ 2027ರ ಈದ್ ಹಬ್ಬಕ್ಕೆ ರಿಲೀಸ್ ಆಗಲಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಇದೇ ವೇಳೆ, 2027ರ ಈದ್‌ಗೆ ಬಾಕ್ಸ್‌ ಆಫೀಸ್‌ನಲ್ಲಿ ಅತಿದೊಡ್ಡ ಕ್ಲ್ಯಾಶ್ ನಡೆಯಲಿದೆ. ಏಕೆಂದರೆ ಇದೇ ದಿನ ಪ್ರಭಾಸ್ ಸಿನಿಮಾ ಸಹ ರಿಲೀಸ್ ಆಗಲಿದೆ.

Read Full Story

05:34 PM (IST) Apr 25

ಮತ್ತೆ ಬರ್ತಿದ್ದಾನೆ 'ಖಳ್ ನಾಯಕ್' ಸಂಜಯ್ ದತ್! ರಗಡ್ ಲುಕ್‌ನಲ್ಲಿ ಬಾಬಾ, ಫ್ಯಾನ್ಸ್ ಫಿದಾ!

ನಟ ಸಂಜಯ್ ದತ್ ತಮ್ಮ ಐಕಾನಿಕ್ 'ಖಳ್ ನಾಯಕ್' ಪಾತ್ರಕ್ಕೆ ಮರಳಿದ್ದಾರೆ. 'ಖಳ್ ನಾಯಕ್ ರಿಟರ್ನ್ಸ್' ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಅವರ ರಗಡ್ ಮತ್ತು ಗಂಭೀರ ಅವತಾರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

Read Full Story

05:25 PM (IST) Apr 25

ರಿಯಲ್ ಧುರಂಧರ್ ಸೀನ್, ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ ಅರೆಸ್ಟ್,ಪಾಕಿಸ್ತಾನ ಗಲಿಬಿಲಿ

ರಿಯಲ್ ಧುರಂಧರ್ ಸೀನ್, ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ ಅರೆಸ್ಟ್,ಪಾಕಿಸ್ತಾನ ಗಲಿಬಿಲಿ, ಭಾರತದ ಮೇಲೆ ಭಯೋತ್ಪಾದಕರ ಬಿಟ್ಟು ಖುಷಿಪಡುವ ಒಬ್ಬೊಬ್ಬರನ್ನೇ ಹೊಸಕಿ ಹಾಕುವ ಕೆಲಸ ಮುಂದುವರಿದಿದೆ.

Read Full Story

05:18 PM (IST) Apr 25

ಆರು ತಿಂಗಳಿಗೆ 3 ಲಕ್ಷ, ಈಗ ಒಂದೇ ದಿನಕ್ಕೆ 40 ಸಾವಿರ - ಬಿಗಿಲ್ ನಟಿ ಇಂದ್ರಜಾ ಸಂಭಾವನೆ ಸೀಕ್ರೆಟ್ ಔಟ್!

ವಿಜಯ್ ನಟನೆಯ 'ಬಿಗಿಲ್' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ಇಂದ್ರಜಾ ಶಂಕರ್, ತಮ್ಮ ಮೊದಲ ಸಿನಿಮಾ ಹಾಗೂ ಇತ್ತೀಚಿನ ಚಿತ್ರದ ಸಂಭಾವನೆಯಲ್ಲಿನ ವ್ಯತ್ಯಾಸವನ್ನು ಬಹಿರಂಗಪಡಿಸಿದ್ದಾರೆ.

Read Full Story

04:55 PM (IST) Apr 25

ಶುಭ್‌ಮನ್ ಗಿಲ್ ಕ್ಯಾಪ್ಟನ್ಸಿ ಸರಿ ಇಲ್ಲ; ಆರ್‌ಸಿಬಿ ಎದುರು ಗುಜರಾತ್ ಟೈಟಾನ್ಸ್‌ ಸೋಲಿನ ಬೆನ್ನಲ್ಲೇ ವಿರೇಂದ್ರ ಸೆಹ್ವಾಗ್ ಗರಂ

ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ಸೋತ ನಂತರ, ನಾಯಕ ಶುಭ್‌ಮನ್ ಗಿಲ್ ಅವರ ಕಳಪೆ ನಾಯಕತ್ವದ ಬಗ್ಗೆ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಬೌಲರ್‌ಗಳನ್ನು ಸರಿಯಾಗಿ ಬಳಸಿಕೊಳ್ಳದ ಗಿಲ್ ನಿರ್ಧಾರಗಳನ್ನು 'ಹೇಡಿತನ' ಎಂದು ಸೆಹ್ವಾಗ್ ಖಾರವಾಗಿ ಟೀಕಿಸಿದ್ದಾರೆ.
Read Full Story

04:31 PM (IST) Apr 25

ಆರಾಧ್ಯ ಬಚ್ಚನ್​ ಬಳಿ ಫೋನೇ ಇಲ್ಲ - ಫ್ರೆಂಡ್ಸ್​ ಫೋನ್​ ಬಂದ್ರೆ ಮಾಡೋದೇನು? ಅಪ್ಪ ಅಭಿಷೇಕ್​ ಹೇಳಿದ್ದು ಹೀಗೆ

ನಟ ಅಭಿಷೇಕ್ ಬಚ್ಚನ್ ತಮ್ಮ 14 ವರ್ಷದ ಮಗಳು ಆರಾಧ್ಯ ಬಳಿ ವೈಯಕ್ತಿಕ ಮೊಬೈಲ್ ಫೋನ್ ಇಲ್ಲ ಎಂಬ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮತ್ತು ಐಶ್ವರ್ಯಾ ರೈ ನಡುವಿನ ವಿಚ್ಛೇದನದ ವದಂತಿಗಳು ಮಗಳ ಮೇಲೆ ಪರಿಣಾಮ ಬೀರದಂತೆ ಹೇಗೆ ನೋಡಿಕೊಳ್ಳುತ್ತಾರೆ ಮತ್ತು ಆಕೆಗೆ ಫೋನ್ ನೀಡದಿರಲು ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.
Read Full Story

04:26 PM (IST) Apr 25

ಡಿಗ್ರಿಯೇ ಇಲ್ಲದಿದ್ದರೂ ಆರ್ಥಿಕ ತಜ್ಞರಂತೆ ಸಲಹೆ, ಯೂಟ್ಯೂಬರ್‌ಗೆ 11 ಲಕ್ಷ ರೂ ದಂಡ

ಡಿಗ್ರಿಯೇ ಇಲ್ಲದಿದ್ದರೂ ಆರ್ಥಿಕ ತಜ್ಞರಂತೆ ಸಲಹೆ, ಯೂಟ್ಯೂಬರ್‌ಗೆ 11 ಲಕ್ಷ ರೂ ದಂಡ ವಿಧಿಸಲಾಗಿದೆ. ಯೂಟ್ಯೂಬ್‌ನಲ್ಲಿ ಫಿನಾನ್ಸ್, ವೈದ್ಯಕೀಯ, ಶಿಕ್ಷಣ ಸೇರಿದಂತೆ ಕೆಲ ವಿಚಾರಗಳ ಕುರಿತು ಕಂಟೆಂಟ್ ಮಾಡಲು ಕನಿಷ್ಠ ಅರ್ಹತೆ ಬೇಕು ಎಂಬ ಎಚ್ಚರಿಕೆಯನ್ನು ರವಾನಿಸಲಾಗಿದೆ.

 

Read Full Story

03:43 PM (IST) Apr 25

ಹೆಚ್ಚಾಯ್ತು ವಯಾಗ್ರ ಡೋಸ್, ಆಹ್ವಾನಿಸಿದ ಗೆಳತಿ ಕೋಣೆಗೆ ಬರುವ ಮೊದಲೇ ಯುವಕ ಸಾವು

ಹೆಚ್ಚಾಯ್ತು ವಯಾಗ್ರ ಡೋಸ್, ಆಹ್ವಾನಿಸಿದ ಗೆಳತಿ ಕೋಣೆಗೆ ಬರುವ ಮೊದಲೇ ಯುವಕ ಸಾವು, ಕಾಂಡೋಮ್ ಸೇರಿದಂತೆ ಕೆಲ ವಸ್ತುಗಳು ಮೃತದೇಹ ಬಳಿ ಪತ್ತೆಯಾಗಿದೆ. ಏನಿದು ಘಟನೆ, ಯುವಕ ಸಾವು ಕಂಡಿದ್ದು ಹೇಗೆ?

Read Full Story

03:18 PM (IST) Apr 25

Good Cholesterol - ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ನೀವು ಈ 10 ಆಹಾರಗಳನ್ನು ತಿನ್ನಿ; ಮ್ಯಾಜಿಕ್ ನೋಡಿ!

ಒಳ್ಳೆಯ ಕೊಲೆಸ್ಟ್ರಾಲ್, ಅಂದರೆ HDL, ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ರಕ್ತನಾಳಗಳಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕಿ, ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

Read Full Story

02:40 PM (IST) Apr 25

ಜೈಲಿನಲ್ಲಿದ್ದಾಗ ಹೊಳೆದ ‘ಖಲ್ನಾಯಕ್ ರಿಟರ್ನ್ಸ್', 4000 ಕೈದಿಗಳು ಬರೆದಿದ್ದ ಕಥೆಯ ರಹಸ್ಯ ಬಿಚ್ಚಿಟ್ಟ ಸಂಜಯ್ ದತ್!

1993ರಲ್ಲಿ ಬಿಡುಗಡೆಯಾಗಿದ್ದ ‘ಖಲ್ನಾಯಕ್’ ಚಿತ್ರದಲ್ಲಿ ಸಂಜಯ್ ದತ್ ‘ಬಲ್ಲು’ ಎಂಬ ಪಾತ್ರದಲ್ಲಿ ನಟಿಸಿದ್ದರು. ಮಾಧುರಿ ದೀಕ್ಷಿತ್ ಮತ್ತು ಜಾಕಿ ಶ್ರಾಫ್ ಅವರ ಪ್ರಮುಖ ಪಾತ್ರಗಳಿದ್ದ ಈ ಚಿತ್ರವು ಅಂದು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈಗ 30 ವರ್ಷಗಳ ನಂತರ ಮತ್ತೆ ಅದೇ ‘ಖಲ್ನಾಯಕ್’ ಅಬ್ಬರಿಸಲು ಸಿದ್ಧವಾಗುತ್ತಿದೆ.

Read Full Story

01:47 PM (IST) Apr 25

ಎಲ್ಲರನ್ನೂ ಹಿಂದಿಕ್ಕಿ ಮತ್ತೆ ವಿರಾಟ್ ಕೊಹ್ಲಿ ಶಿರವೇರಿದ ಆರೆಂಜ್ ಕ್ಯಾಪ್! ಟಾಪ್-3 ಪಟ್ಟಿಯಿಂದ ಸಂಜು ಸ್ಯಾಮ್ಸನ್ ಔಟ್

ವಿರಾಟ್ ಕೊಹ್ಲಿ 328 ರನ್ ಗಳಿಸಿ ಐಪಿಎಲ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಹಿಂದಿಕ್ಕಿದ್ದಾರೆ. ಲೇಖನವು ಶುಭ್‌ಮನ್ ಗಿಲ್, ಸಂಜು ಸ್ಯಾಮ್ಸನ್ ಅವರ ಸ್ಥಾನಗಳು ಮತ್ತು ಪರ್ಪಲ್ ಕ್ಯಾಪ್ ಪೈಪೋಟಿಯ ಬಗ್ಗೆಯೂ ಮಾಹಿತಿ ನೀಡುತ್ತದೆ.
Read Full Story

01:44 PM (IST) Apr 25

AAP Crisis - 7 ಸಂಸದರು ಬಿಜೆಪಿಗೆ ಜಂಪ್; ಆಪ್ ವಿರುದ್ಧವೇ ಗುಡುಗಿದ ಅಣ್ಣಾ ಹಜಾರೆ!

ರಾಘವ್ ಚಡ್ಡಾ ಸೇರಿದಂತೆ ಆಮ್ ಆದ್ಮಿ ಪಕ್ಷದ ಏಳು ರಾಜ್ಯಸಭಾ ಸಂಸದರು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಪಕ್ಷವು ಸರಿಯಾದ ದಾರಿಯಲ್ಲಿದ್ದರೆ ನಾಯಕರು ಪಕ್ಷ ಬಿಡುತ್ತಿರಲಿಲ್ಲ, ಅವರಿಗೆ ಪಕ್ಷದೊಳಗೆ ಸಮಸ್ಯೆಗಳಾಗಿರಬಹುದು ಎಂದಿದ್ದಾರೆ. 

Read Full Story

01:12 PM (IST) Apr 25

Global Capital - 'Non-AI' ಅನ್ನೋ ಕಾರಣಕ್ಕೆ ಭಾರತದಿಂದ ದೂರ ಸರಿಯುತ್ತಿದೆಯಾ ವಿದೇಶಿ ಬಂಡವಾಳ?

ಭಾರತದಲ್ಲಿ 'AI' (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸಂಬಂಧಿತ ಬೆಳವಣಿಗೆಗಳು ಕಡಿಮೆ ಎಂಬ ಕಾರಣಕ್ಕೆ ಜಾಗತಿಕ ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆಎಂದು ಮಿರೇ ಅಸೆಟ್‌ನ ಸ್ವರೂಪ್ ಮೊಹಂತಿ ಹೇಳಿದ್ದಾರೆ.

Read Full Story

12:55 PM (IST) Apr 25

ಆಪ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ರಾಘವ್ ಚಡ್ಡಾಗೆ ಫಾಲೋವರ್ಸ್‌ಗಳಿಂದ ಬಿಗ್ ಶಾಕ್

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಆಪ್ ಪಕ್ಷ ತೊರೆದು ಇತರ 6 ಸಂಸದರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಯ ನಂತರ, ರಾಘವ್ ಚಡ್ಡಾ ಅವರಿಗೆ ದೊಡ್ಡ ಆಘಾತ ನೀಡಿದೆ.

Read Full Story

12:53 PM (IST) Apr 25

Bakasura Politics - ಬಿಜೆಪಿ ಅದು ಪಕ್ಷ ಅಲ್ಲ, ಬಕಾಸುರರ ಗ್ಯಾಂಗ್ - ಕಾಂಗ್ರೆಸ್ ಸಂಸದ ಸಂಜಯ್ ರಾವತ್ ಕಿಡಿ | ರಾಘವ್ ಚಡ್ಡಾ ವಿರುದ್ಧವೂ ಆಕ್ರೋಶ

ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ಸೇರಿದ್ದಕ್ಕೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು 'ನಾಚಿಕೆಗೇಡಿ' ಮತ್ತು 'ಬಕಾಸುರ' ರಾಕ್ಷಸನಿಗೆ ಹೋಲಿಸಿರುವ ಅವರು, ಪಕ್ಷಾಂತರಿಗಳು 'ಗೂಂಡಾಗಳ ಪಕ್ಷ' ಸೇರಿದ್ದಾರೆ ರಾಘವ್ ಚಡ್ಡಾ ವಿರುದ್ಧವೂ ಕಿಡಿ ಕಾರಿದ್ದಾರೆ.

Read Full Story

12:43 PM (IST) Apr 25

'ಬ್ಯಾಡ್ ಲಕ್' ಗರ್ಲ್ ಆಗ್ಬಿಟ್ರಾ ಶ್ರೀಲೀಲಾ? ಈ ನಟಿ ಕುಣಿದ ಸಾಂಗ್ಸ್ ಹಿಟ್, ಸಿನಿಮಾ ಮಾತ್ರ ಫ್ಲಾಪ್!

ಶ್ರೀಲೀಲಾಗೆ ಸಾಲು ಸಾಲು ಅವಕಾಶಗಳು ಬಂದಿದ್ದು ಸುಳ್ಳಲ್ಲ. ಒಂದು ಹಂತದಲ್ಲಿ ಈಕೆ ಟಾಲಿವುಡ್ ಟಾಪ್ ಹೀರೋಯಿನ್ ಆಗ್ತಾಳೆ ಅನ್ನೋ ಮಾತು ಕೇಳಿಬಂದ್ವು. ಆದ್ರೆ ಅದ್ಯಾಕೋ ರಶ್ಮಿಕಾಗಿದ್ದಂಥ ಅದೃಷ್ಟ ಈಕೆಗಿಲ್ಲ ಅನ್ನೋದು ಬಹುಬೇಗ ಪ್ರೂವ್ ಆಗೋಯ್ತು. ಯಾಕೆ ಹೀಗೆ?

Read Full Story

12:24 PM (IST) Apr 25

ಚಿಪ್ಸ್, ಬಿಸ್ಕತ್ತು, ಲಿಪ್‌ಸ್ಟಿಕ್‌ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ? ಭಾರತದ ಮುಂದೆ ಮತ್ತೊಂದು ಸಂಕಷ್ಟ

ಇಂಡೋನೇಷ್ಯಾ ರಫ್ತು ನೀತಿಯನ್ನು ಬದಲಾಯಿಸುತ್ತಿರುವುದರಿಂದ ಭಾರತದಲ್ಲಿ ಅಡುಗೆ ಎಣ್ಣೆಯಿಂದ ಹಿಡಿದು ಸೋಪು, ಶಾಂಪೂ, ಬಿಸ್ಕತ್ತುಗಳಂತಹ ಅನೇಕ ದೈನಂದಿನ ಬಳಕೆಯ ವಸ್ತುಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆಯಿದೆ.

Read Full Story

12:14 PM (IST) Apr 25

ಪಶ್ಚಿಮ ಬಂಗಾಳ ಚುನಾವಣೆ - ಬಿಜೆಪಿ ಬಗ್ಗೆ ಬಿಎಸ್ ಯಡಿಯೂರಪ್ಪ ಅಚ್ಚರಿ ಹೇಳಿಕೆ! ಗೆಲ್ಲೋದ್ಯಾರು?

ಪ ಬಂಗಾಳದಲ್ಲಿ ಹೆಚ್ಚಿನ ಮತದಾನದಿಂದಾಗಿ ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಲ್ಲಿಕಾರ್ಜುನ್ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಕ್ಷಮೆ ಕೇಳಬೇಕು ಎಂದು ಹೇಳಿದ್ದು, ಉಪಚುನಾವಣೆಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದ್ದಾರೆ.

Read Full Story

12:13 PM (IST) Apr 25

ಬ್ರಾಹ್ಮಣ ಹುಡುಗಿ ತ್ರಿ‍ಷಾ ಕೃಷ್ಣನ್ ಕಾರಲ್ಲಿ ಶಿಲುಬೆ, 'ವಿಜಯ್‌'ಗಾಗಿ ಮತಾಂತರ ಆದ್ರಾ? ಇಲ್ಲ ಮದ್ವೆನೂ ಆಗೋಯ್ತಾ?

ಜೊಸೆಫ್ ವಿಜಯ್​ಗಾಗಿ ತ್ರಿಷಾ ಕೂಡ ಕ್ರಿಶ್ಚಿಯನ್ ಆದ್ರಾ ಅನ್ನೋ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಈಗಾಗ್ಲೇ ವಿಜಯ್ ಪತ್ನಿ ಡಿವೋರ್ಸ್ ಗೆ ಅಪ್ಲೈ ಮಾಡಿದ್ದು, ವಿಚ್ಛೇದನದ ಬಳಿಕ ವಿಜಯ್ - ತ್ರಿಷಾ ಮದುವೆಯಾಗ್ತಾರೆ ಅನ್ನೋ ಸುದ್ದಿ ಇದೆ. ಈ ನಡುವೆ ತ್ರಿಷಾ ಧರ್ಮಾಂತರ ಸುದ್ದಿ ಬೇರೆ ಕಿಚ್ಚು ಹಚ್ಚಿದೆ. ಆದ್ರೆ ಮದ್ವೆ ಆಗೋಗಿದ್ಯಾ?

Read Full Story

11:45 AM (IST) Apr 25

Gen Naravane Book - Gen Naravane Book - ಸೇನೆಯೊಳಗಿನ ಅಚ್ಚರಿಯ ಕಥೆಗಳು; ಚಕ್ ದೇ ಫಟ್ಟೆ'ಯಿಂದ 'ಬದ್ಲುರಾಮ್'ವರೆಗೆ ಎಲ್ಲವೂ ಇಲ್ಲಿದೆ

ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು 'The Curious and the Classified' ಎಂಬ ತಮ್ಮ ಹೊಸ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಯಾರಿಗೂ ತಿಳಿಯದ ಜಾನಪದ ಕಥೆಗಳು, ದಂತಕಥೆಗಳು ಮತ್ತು ಕುತೂಹಲಕಾರಿ ಸಂಗತಿಗಳನ್ನು ವಿವರಿಸಲಾಗಿದೆ.
Read Full Story

11:11 AM (IST) Apr 25

Jio Recharge Plans - 84 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕರೆ! ದಿನಕ್ಕೆ 10 ರೂ.ಗಿಂತ ಕಡಿಮೆ ಬೆಲೆಯ ಪ್ಲಾನ್‌ಗಳ ಲಿಸ್ಟ್

ಪ್ರಸಿದ್ಧ ಟೆಲಿಕಾಂ ಕಂಪನಿ ಜಿಯೋ ತನ್ನ ಬಳಕೆದಾರರಿಗಾಗಿ ಹೊಸ ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ, ಇದೀಗ 84 ದಿನಗಳ ವ್ಯಾಲಿಡಿಟಿಯೊಂದಿಗೆ ಕೆಲವು ಅತ್ಯುತ್ತಮ ಹಾಗೂ ಅಗ್ಗದ ಪ್ಲಾನ್‌ಗಳನ್ನು ತಂದಿದೆ.
Read Full Story

09:53 AM (IST) Apr 25

ಶನಿವಾರದ ಸಮರ - ಇಂದು ಎರಡು ಹೈವೋಲ್ಟೇಜ್ ಮ್ಯಾಚ್, ಸೇಡಿನ ಕದನಕ್ಕೆ ಕ್ಷಣಗಣನೆ

ಅಜೇಯ ಓಟದಲ್ಲಿರುವ ಪಂಜಾಬ್ ಕಿಂಗ್ಸ್, ಸ್ಥಿರತೆ ಇಲ್ಲದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇನ್ನೊಂದು ಪಂದ್ಯದಲ್ಲಿ, ಸೇಡು ತೀರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಕಾಯುತ್ತಿದ್ದು, ಸ್ಫೋಟಕ ಬ್ಯಾಟರ್‌ಗಳಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ವರ್ಮಾ ಅವರ ಮೇಲೆ ಎಲ್ಲರ ಕಣ್ಣಿದೆ.
Read Full Story

09:37 AM (IST) Apr 25

Bengaluru devotee donation to Tirupati - ತಿರುಪತಿಗೆ ಬೆಂಗಳೂರು ಭಕ್ತೆಯಿಂದ ₹95 ಲಕ್ಷದ 7 ಚಿನ್ನದ ಪದಕ ದಾನ!

Bengaluru devotee donation to Tirupati ಬೆಂಗಳೂರಿನ ಭಕ್ತರೊಬ್ಬರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ದಾನವಾಗಿ ನೀಡಿದ್ದಾರೆ. ಎಂ.ಮಹದೇವಮ್ಮ ಎಂಬ ಭಕ್ತೆಯು ಟಿಟಿಡಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಬೃಹತ್ ದೇಣಿಗೆಯನ್ನು ಸಮರ್ಪಿಸಿದ್ದಾರೆ.

Read Full Story

09:01 AM (IST) Apr 25

ತಿಂಗಳ ಸಂಬಳಕ್ಕೆ ಗುಡ್‌ ಬೈ; ಅದೊಂದು ಕಾರಣಕ್ಕಾಗಿ ನಮ್ಮ ಪಕ್ಕದ ದೇಶದಲ್ಲಿ ಇನ್ಮುಂದೆ 15 ದಿನಕ್ಕೊಮ್ಮೆ ಸಂಬಳ!

ಕಾಠ್ಮಂಡು: ನೇಪಾಳ ಸರ್ಕಾರ ತನ್ನ ನೌಕರರಿಗೆ ಸಂಬಳ ನೀಡುವ ವಿಚಾರದಲ್ಲಿ ಒಂದು ದೊಡ್ಡ ಬದಲಾವಣೆ ತಂದಿದೆ. ಇನ್ಮುಂದೆ ತಿಂಗಳಿಗೊಮ್ಮೆ ಸಂಬಳ ಕೊಡುವ ಬದಲು, ಪ್ರತಿ 15 ದಿನಕ್ಕೊಮ್ಮೆ ಸಂಬಳ ನೀಡಲು ನಿರ್ಧರಿಸಿದೆ.

Read Full Story

07:52 AM (IST) Apr 25

Monsoon 2026 - ಈ ವರ್ಷ ಮೇ 25ಕ್ಕೇ ಕೇರಳಕ್ಕೆ ಮುಂಗಾರು ಆಗಮನ ಸಾಧ್ಯತೆ

Monsoon 2026 ಯುರೋಪ್‌ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ, ಈ ವರ್ಷ ಕೇರಳಕ್ಕೆ ಮಾನ್ಸೂನ್ ವಾಡಿಕೆಗಿಂತ ಮುಂಚಿತವಾಗಿ, ಅಂದರೆ ಮೇ ಕೊನೆಯ ವಾರದಲ್ಲೇ ಪ್ರವೇಶಿಸುವ ಸಾಧ್ಯತೆಯಿದೆ. ದಕ್ಷಿಣ ಭಾರತವು ಬೇಸಿಗೆಯ ಬಿಸಿಲಿನಿಂದ ಶೀಘ್ರದಲ್ಲೇ ಮುಕ್ತಿ ಪಡೆಯಲಿದೆ ಎಂದು ವರದಿ ತಿಳಿಸಿದೆ.

Read Full Story

07:48 AM (IST) Apr 25

IPL 2026 - ನಿನ್ನೆ ನಡೆದ ಆರ್‌ಸಿಬಿ - ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಗುಜರಾತ್ ಪರ ಸಾಯಿ ಸುದರ್ಶನ್ ಅವರ ಶತಕ ವ್ಯರ್ಥವಾಯಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
Read Full Story

More Trending News