Monsoon 2026 ಯುರೋಪ್‌ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ, ಈ ವರ್ಷ ಕೇರಳಕ್ಕೆ ಮಾನ್ಸೂನ್ ವಾಡಿಕೆಗಿಂತ ಮುಂಚಿತವಾಗಿ, ಅಂದರೆ ಮೇ ಕೊನೆಯ ವಾರದಲ್ಲೇ ಪ್ರವೇಶಿಸುವ ಸಾಧ್ಯತೆಯಿದೆ. ದಕ್ಷಿಣ ಭಾರತವು ಬೇಸಿಗೆಯ ಬಿಸಿಲಿನಿಂದ ಶೀಘ್ರದಲ್ಲೇ ಮುಕ್ತಿ ಪಡೆಯಲಿದೆ ಎಂದು ವರದಿ ತಿಳಿಸಿದೆ.

-ಯುರೋಪ್‌ ಹವಾಮಾನ ಮುನ್ಸೂಚನೆ ಕೇಂದ್ರದ ಹೇಳಿಕೆ

ತಿರುವನಂತಪುರಂ (ಏ.25): ‘ವಾಡಿಕೆಯಂತೆ ಕೇರಳಕ್ಕೆ ಜೂ.1ರ ಸುಮಾರಿಗೆ ಆರಂಭವಾಗುತ್ತಿದ್ದ ಮಾನ್ಸೂನ್‌ ಈ ವರ್ಷ ಮೇ ಕೊನೆಯ ವಾರದಲ್ಲೇ (ಮೇ.25-ಜೂ.1) ಆರಂಭವಾಗಲಿದ್ದು, ಬಿಸಿಲಿನ ಧಗೆಗೆ ಬೇಸತ್ತಿರುವ ದಕ್ಷಿಣ ಭಾರತಕ್ಕೆ ಶೀಘ್ರವಾಗಿ ತಂಪೆರೆಯಲಿದೆ’ ಎಂದು ಯುರೋಪ್‌ ಹವಾಮಾನ ಮುನ್ಸೂಚನೆ ಕೇಂದ್ರ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಕ್ಷಿಣ-ಪೂರ್ವ ಅರಬ್ಬೀ ಸಮುದ್ರದಲ್ಲಿ ಬಲವಾದ ಪಶ್ಚಿಮ ಗಾಳಿಗಳು ರೂಪುಗೊಳ್ಳುವುದರಿಂದ ಕೇರಳ ಮತ್ತು ದಕ್ಷಿಣ ತಮಿಳುನಾಡು ಪ್ರದೇಶಗಳಿಗೆ ಹೆಚ್ಚಿನ ತೇವಾಂಶವುಂಟಾಗಬಹುದು. ಇದು ಸಾಧ್ಯವಾದರೆ, ಕೇರಳದಲ್ಲಿ ಮಾನ್ಸೂನ್ ಮೇ 25ರಷ್ಟು ಮುಂಚಿತವಾಗಿ ಆರಂಭವಾಗಬಹುದು. 

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೇ 18ರಿಂದ 25ರ ನಡುವೆ, ದಕ್ಷಿಣ ಭಾರತಕ್ಕೆ ಮೇ ಕೊನೆಯ ವೇಳೆಗೆ ಮಾನ್ಸೂನ್ ತಲುಪುವ ನಿರೀಕ್ಷೆ ಇದೆ. ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮೇ 25ರಿಂದ ಜೂ.1ರವರೆಗೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.