ನವದೆಹಲಿ: ಭಾನುವಾರ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಸಮಾದಾನ ವ್ಯಕ್ತಪಡಿಸಿದ್ದು, ‘ ಈ ಬಜೆಟ್‌ನಲ್ಲಿ ದೇಶದ ನೈಜ ಬಿಕ್ಕಟ್ಟುಗಳನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್ , ‘ ಭಾರತದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸಿ ಅದರ ಪರಿಹಾರ ಕಂಡುಕೊಳ್ಳಲು ಸರಿಯಾದ ಮಾರ್ಗವನ್ನು ಕಂಡುಕೊಳ್ಳದೆ ಮೂಲೆಗುಂಪು ಮಾಡಲಾಗಿದೆ. ನಿರುದ್ಯೋಗಿ ಯುವಕರು, ಉತ್ಪಾದನೆ ಕುಸಿತ, ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ, ಮನೆಯ ಉಳಿತಾಯ ಕುಸಿತ, ರೈತರು ಸಮಸ್ಯೆ, ಜಾಗತಿಕ ಆಘಾತಗಳು ಎದುರಾಗಿವೆ. ಆದರೆ ಅದೆಲ್ಲವನ್ನೂ ನಿರ್ಲಕ್ಷಿಸಲಾಗಿದೆ’ ಎಂದು ಹರಿಹಾಯ್ದಿದ್ದಾರೆ.
11:33 PM (IST) Feb 02
PM Modi Thanks Donald Trump for 18% Tariff Cut on Indian Exports ಮೇಕ್ ಇನ್ ಇಂಡಿಯಾ ಉತ್ಪನ್ನಗಳು ಸುಂಕವನ್ನು ಶೇ. 18 ಕ್ಕೆ ಇಳಿಸಿವೆ ಎಂದು ತಿಳಿದು ಸಂತೋಷವಾಯಿತು ಎಂದು ವ್ಯಾಪಾರ ಒಪ್ಪಂದಕ್ಕಾಗಿ ಟ್ರಂಪ್‌ಗೆ ಪ್ರಧಾನಿ ಧನ್ಯವಾದ ಸಲ್ಲಿಸಿದ್ದಾರೆ.
11:23 PM (IST) Feb 02
10:51 PM (IST) Feb 02
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಅಮೆರಿಕ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ, ಭಾರತೀಯ ರಫ್ತಿನ ಮೇಲಿನ ಪರಸ್ಪರ ಸುಂಕವನ್ನು 25% ರಿಂದ 18% ಕ್ಕೆ ಇಳಿಸಲಾಗುವುದು.
09:43 PM (IST) Feb 02
Hyderabad ATM robbery incident: ಎಸ್‌ಬಿಐ ಎಟಿಎಂ ಮುಂದೆಯೇ ದುಷ್ಕರ್ಮಿಗಳು ಕೇರಳ ಮೂಲದ ಯುವ ಉದ್ಯಮಿಯ ಕಾಲಿಗೆ ಗುಂಡಿಕ್ಕಿ ಆತನ ಬಳಿ ಇದ್ದ 6 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ನಡೆದಿದೆ.
09:25 PM (IST) Feb 02
Viral: Woman Books Rs 1,500 Vande Bharat Seat for Son's Slippers ನಮ್ಮ ಪ್ರಯಾಣ ಏಳರಿಂದ 8 ಗಂಟೆಯದ್ದಾಗಿತ್ತು. ಪ್ರತಿ ವಯಸ್ಕ ಟಿಕೆಟ್‌ಗೆ ಸರಿಸುಮಾರು 1,500-1,700 ರೂ. ವೆಚ್ಚವಾಗಿತ್ತು ಎಂದು ಮಹಿಳೆ ಹೇಳಿದ್ದಾರೆ.
08:51 PM (IST) Feb 02
ಎಷ್ಟೇ ಎತ್ತರಕ್ಕೆ ಬೆಳೆಯಲಿ ಎಷ್ಟೇ ದೂರ ಸಾಗಲಿ ತನ್ನ ಮೂಲದ ಬಗ್ಗೆ ತಿಳಿಯದೇ ಇದ್ದರೆ ಆ ಮಗುವಿಗೆ/ ನೂರೆಂಟು ಪ್ರಶ್ನೆಗಳು ಕಾಡುತ್ತದೆ. ನಾನು ಯಾರು? ಹೇಗೆ ಜನಿಸಿದೆ ಎಂಬ ಪ್ರಶ್ನೆ ಆ ಮಗುವನ್ನು ಕಾಡದೇ ಇರದು, ಹಾಗೆಯೇ ಇಲ್ಲೊಂದು ಮಗು ತನ್ನ ಮೂಲ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದಿದೆ.
08:22 PM (IST) Feb 02
ಮಧ್ಯರಾತ್ರಿ ಸ್ಮಶಾನದಿಂದ ಬಂದ ಬಿರಿಯಾನಿ ಆರ್ಡರ್ ಸ್ವೀಕರಿಸಿದ ಡೆಲಿವರಿ ಬಾಯ್‌ಗೆ ವಿಚಿತ್ರ ಅನುಭವವಾಗಿದೆ. ಆರ್ಡರ್ ಮಾಡಿದ ಮಹಿಳೆ ಸ್ಮಶಾನದೊಳಗೆ ಬರುವಂತೆ ಕರೆದಾಗ, ಭಯಗೊಂಡ ಡೆಲಿವರಿ ಪಾರ್ಟ್ನರ್ ಆರ್ಡರ್ ಕ್ಯಾನ್ಸಲ್ ಮಾಡುವಂತೆ ಕೇಳಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
08:05 PM (IST) Feb 02
ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿ ತಾಯಿಯೊಬ್ಬರು ತಮ್ಮ ಇಬ್ಬರು ಹದಿಹರೆಯದ ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಸಾವಿಗೂ ಮೊದಲು ಅವರು ತಮ್ಮ ಸಂಬಂಧಿಕರ ಕ್ಷಮೆ ಕೇಳಿದ್ದಾರೆ.
08:00 PM (IST) Feb 02
ಭಾರತದ ಅತಿ ನಿಧಾನಗತಿಯ ರೈಲು ಎಂದು ಪ್ರಸಿದ್ಧವಾಗಿರುವ ನೀಲಗಿರಿ ಮೌಂಟೇನ್ ರೈಲ್ವೆಯು, ಮೆಟ್ಟುಪಾಳಯಂ ಮತ್ತು ಊಟಿಯ ನಡುವೆ 46 ಕಿಲೋಮೀಟರ್ ದೂರವನ್ನು ಕ್ರಮಿಸಲು 5 ಗಂಟೆ ತೆಗೆದುಕೊಳ್ಳುತ್ತದೆ.
07:36 PM (IST) Feb 02
ಲಂಡನ್-ಬೆಂಗಳೂರು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನವನ್ನು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿನ ಸಂಭವನೀಯ ದೋಷದಿಂದಾಗಿ ಸ್ಥಗಿತಗೊಳಿಸಲಾಗಿದೆ. ಪೈಲಟ್ ವರದಿ ಮಾಡಿದ ನಂತರ, ಏರ್ ಇಂಡಿಯಾ ಈ ವಿಷಯವನ್ನು ಬೋಯಿಂಗ್ ಮತ್ತು ಡಿಜಿಸಿಎಗೆ ತಿಳಿಸಿದೆ.
07:13 PM (IST) Feb 02
ಶಾಲಾ ವಾರ್ಷಿಕೋತ್ಸವದಲ್ಲಿ ಡಾನ್ಸ್ ಮಾಡಲು ವೇದಿಕೆ ಹತ್ತಿದ ಇಬ್ಬರು ಪುಟಾಣಿಗಳು, ಸ್ಟೇಜ್ ಹೊಗೆಯನ್ನು ನೋಡಿ ಹೆದರಿ ಓಡಿಹೋಗುತ್ತಾರೆ. ಒಬ್ಬಳು ಓಡಿಹೋದರೆ, ಇನ್ನೊಬ್ಬಳು ಅಳಲು ಶುರುಮಾಡುತ್ತಾಳೆ, 2 ಮಿಲಿಯನ್ ವ್ಯೂವ್ಸ್ ಬಂದಿದ್ಯಾಕೆ ನೋಡಿ!
07:06 PM (IST) Feb 02
NASA Finds Evidence of Ancient Rain on Mars: Perseverance Rover Update ಮಂಗಳ ಗ್ರಹದಲ್ಲಿ ಬಿಳಿ ಕಾಯೋಲಿನೈಟ್ ಬಂಡೆಗಳನ್ನು ನಾಸಾದ ಪರ್ಸಿವೆರೆನ್ಸ್ ಕಂಡುಹಿಡಿದಿದೆ. ಇದು ಲಕ್ಷಾಂತರ ವರ್ಷಗಳ ಹಿಂದೆ ಮಳೆ ಮತ್ತು ಆರ್ದ್ರ ಪರಿಸ್ಥಿತಿಗಳು ಈ ಗ್ರಹದಲ್ಲಿತ್ತು ಅನ್ನೋದನ್ನು ಬಹಿರಂಗಪಡಿಸಿದೆ.
06:36 PM (IST) Feb 02
ಬಾಲಿವುಡ್ ನಟಿ ಸೋನಂ ಕಪೂರ್ ತಮ್ಮ ಎರಡನೇ ಗರ್ಭಾವಸ್ಥೆಯಲ್ಲಿ ಪದೇ ಪದೇ ಬೇಬಿ ಬಂಪ್ ಪ್ರದರ್ಶಿಸುತ್ತಿದ್ದಾರೆ. ಬಿಳಿ ಉಡುಪಿನಲ್ಲಿ ಹೊಟ್ಟೆ ತೋರಿಸಿಕೊಂಡು ತಿರುಗುತ್ತಿರುವ ಅವರ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು 'ಇಷ್ಟಕ್ಕೆ ಮುಗಿಸು ತಾಯಿ' ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
06:35 PM (IST) Feb 02
ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, ಬರೋಬ್ಬರಿ 17,000 ವರ್ಷಗಳ ಹಿಂದಿನ ಅತೀ ಅಮೂಲ್ಯ ಸಂಪತ್ತನ್ನು ನಾಯಿ ಹಾಗೂ 18ರ ಯುವಕ ಪತ್ತೆ ಹಚ್ಚಿದ್ದ ಘಟನೆ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಏನಿದು ಘಟನೆ?
06:32 PM (IST) Feb 02
ಕುಟುಂಬದ ವಿರೋಧದ ನಡುವೆಯೂ ಡೇನಿಯಲ್ ಎಂಬುವವರು ಬಾಲಕಿಯೊಬ್ಬಳನ್ನು ದತ್ತು ಪಡೆದು ಪ್ರೀತಿಯಿಂದ ಸಾಕುತ್ತಾರೆ. ವರ್ಷಗಳ ನಂತರ, ತಂದೆ ಡೇನಿಯಲ್ ದುರ್ಬಲರಾದಾಗ, ಮಗಳು ಅಂದು ತನ್ನನ್ನು ಹೊತ್ತ ತಂದೆಯನ್ನು ಈಗ ತಾನು ಹೊತ್ತು ಆರೈಕೆ ಮಾಡುತ್ತಿದ್ದಾಳೆ. ಈ ತಂದೆ-ಮಗಳ ಬಾಂಧವ್ಯದ ಕಥೆ ವೈರಲ್ ಆಗಿದೆ.
04:56 PM (IST) Feb 02
Perfect February 2026: Why the Viral Calendar is Going Viral 2026ರ ಫೆಬ್ರವರಿ ತಿಂಗಳು ಭಾನುವಾರದಂದು ಪ್ರಾರಂಭವಾಗಿ ಶನಿವಾರದಂದು ಕೊನೆಗೊಳ್ಳುತ್ತದೆ, ಇದು ಕ್ಯಾಲೆಂಡರ್ ವಿನ್ಯಾಸಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿದೆ.
04:53 PM (IST) Feb 02
ಸ್ವಂತ ಮಗಳು, ಅಣ್ಣನ ಮಗಳು ಇಬ್ಬರನ್ನು 7 ವರ್ಷ ನಿರಂತರ ಅತ್ಯಾ**ರ, ಇಬ್ಬರು ಮಕ್ಕಳ ಕಣ್ಣೀರ ಕತೆ ಬಯಲಾಗುತ್ತಿದ್ದಂತೆ ತಂದೆ ಅರೆಸ್ಟ್ ಆಗಿದ್ದಾರೆ. ಈ ಘಟನೆ ಬಯಲಾಗಿದ್ದೇ ಮತ್ತೊಂದು ದುರಂತದ ಮೂಲಕ.
04:46 PM (IST) Feb 02
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ವದಂತಿಗಳು ಹಬ್ಬಿದ್ದು, ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
04:41 PM (IST) Feb 02
ಕೇರಳದ ಕೋಝಿಕೋಡ್ ಬೀಚ್‌ನಲ್ಲಿ ಗಾಂಜಾ ಒಣಗಿಸಲು ಹಾಕಿ ನಿದ್ರೆಗೆ ಜಾರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾನೆ ವಾಕಿಂಗ್ ಬಂದವರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯಿಂದ 372 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
04:21 PM (IST) Feb 02
ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಮಧ್ಯಮ ವರ್ಗಕ್ಕೆ ನಿರಾಸೆ ಮೂಡಿಸಿದ ನಂತರ, ಅವರ ಆಸ್ತಿ ಮತ್ತು ಸಂಬಳದ ಬಗ್ಗೆ ಚರ್ಚೆ ಶುರುವಾಗಿದೆ. ಅವರ ಒಟ್ಟು ಆಸ್ತಿ 2.75 ಕೋಟಿ ರೂ. ಆಗಿದ್ದು, 1.11 ಕೋಟಿ ರೂ. ಸಾಲವಿದೆ. ಅವರ ಬಳಿ ಕಾರು ಇಲ್ಲ, ಬದಲಾಗಿ ಒಂದು ಬಜಾಜ್ ಚೇತಕ್ ಸ್ಕೂಟರ್ ಮಾತ್ರ ಇದೆ.
03:51 PM (IST) Feb 02
ಮದುವೆ ಆದರೆ ಪರಿಚಿತರನ್ನೇ ಮದುವೆ ಆಗಬೇಕು ಅಪರಿಚಿತರನ್ನು ಮದುವೆ ಆಗಬಾರದು ಎಂದು ಅನೇಕರು ಹೇಳುತ್ತಾರೆ. ಆದರೆ ಇಲ್ಲೊಂದು ಕಡೆ ಬರೋಬ್ಬರಿ 9 ವರ್ಷಗಳ ಕಾಲ ಪ್ರೀತಿಸಿ ಇತ್ತೀಚೆಗಷ್ಟೇ ಮದುವೆಯಾಗಿದ್ದ ಜೋಡಿಯ ಜೀವನವೂ ದುರಂತದಲ್ಲಿ ಅಂತ್ಯವಾಗಿದೆ. ಇಲ್ಲಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ.
03:41 PM (IST) Feb 02
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾರತ ವಿರುದ್ದ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಒಂದು ವೇಳೆ ಈ ಮ್ಯಾಚ್ ರದ್ದಾದರೆ, ಬ್ರಾಡ್‌ಕಾಸ್ಟರ್‌ಗಳು ಮತ್ತು ಐಸಿಸಿಗೆ ಭಾರೀ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ.
02:58 PM (IST) Feb 02
ತುಟಿ, ನಾಲಿಗೆ ಮತ್ತು ಬಾಯಿಯ ಒಳಪದರದಲ್ಲಿ (ಸಾಮಾನ್ಯವಾಗಿ ಸ್ಕ್ವಾಮಸ್ ಸೆಲ್ ಕಾರ್ಸಿನೋಮ) ಕಾಣಿಸಿಕೊಳ್ಳುವ ಕ್ಯಾನ್ಸರ್‌ಗೆ ಓರಲ್ ಕ್ಯಾನ್ಸರ್ ಅಥವಾ ಬಾಯಿ ಕ್ಯಾನ್ಸರ್ ಎನ್ನುತ್ತಾರೆ. ಬಾಯಿ ಕ್ಯಾನ್ಸರ್ ಲಕ್ಷಣಗಳೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
02:43 PM (IST) Feb 02
AI ಡೇಟಾ ಸೆಂಟರ್ ವಿಸ್ತರಣೆಗೆ ಬೇಕಾದ ಹಣಕಾಸಿನ ಒತ್ತಡದಿಂದಾಗಿ, ಒರಾಕಲ್ ಸುಮಾರು 20,000 ದಿಂದ 30,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಓಪನ್‌ಎಐ ಜೊತೆಗಿನ ಒಪ್ಪಂದವು ಕಂಪನಿಗೆ ಆರ್ಥಿಕ ಹೊರೆಯಾಗಿದ್ದು, ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುತ್ತಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ.
02:27 PM (IST) Feb 02
02:17 PM (IST) Feb 02
ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರಕ ಜೈಕಿಶೋರ್ ಅವರ ಮೇಲೆ ಗುಂಪು ಹಲ್ಲೆ ನಡೆದಿದೆ. ಕಿರಿದಾದ ರಸ್ತೆಯಲ್ಲಿ ಕಾರ್ ಮತ್ತು ಬೈಕ್ ನಡುವಿನ ಜಗಳ ತಾರಕಕ್ಕೇರಿ, ದುಷ್ಕರ್ಮಿಗಳು ಇಟ್ಟಿಗೆ ಹಾಗೂ ಮೆಕ್ಯಾನಿಕ್ ಉಪಕರಣಗಳಿಂದ ದಾಳಿ ನಡೆಸಿ, ಅವರನ್ನು ಚರಂಡಿ ಬಳಿ ಎಸೆದು ಪರಾರಿಯಾಗಿದ್ದಾರೆ.
01:41 PM (IST) Feb 02
ಭೂಮಿಯಲ್ಲಿ ಪ್ರಾಣಿ ಹುಟ್ಟು ಹೇಗಾಯ್ತು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ 460 ಕೋಟಿ ವರ್ಷ ಹಳೇ ಉಲ್ಕೆ, ಈ ಉಲ್ಕೆ ಸೌರಮಂಡಲ ಹಲವು ಕುತೂಹಲಕ್ಕೆ ಉತ್ತರ ನೀಡಲಿದೆ. ಇದೀಗ ಈ ಉಲ್ಕೆ ಬರೋಬ್ಬರಿ 460 ಕೋಟಿ ವರ್ಷ ಹಳೇದು ಅನ್ನೋದು ಪತ್ತೆಯಾಗಿದೆ.
01:38 PM (IST) Feb 02
ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಖಾಸಗಿ ಫ್ಲಾಟ್‌ವೊಂದರಲ್ಲಿ ಬೋರ್‌ವೆಲ್ ಕೊರೆಯುತ್ತಿದ್ದಾಗ, ಒತ್ತಡ ಹೆಚ್ಚಾಗಿ ಪಕ್ಕದ ಮನೆಯ ಟೈಲ್ಸ್ ಹಾಕಿದ್ದ ನೆಲವೇ ಒಡೆದು ನೀರು ಮಹಡಿಯತ್ತರಕ್ಕೆ ಚಿಮ್ಮಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
01:25 PM (IST) Feb 02
ರಾಮ್ ಚರಣ್ ಮತ್ತು ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಚಿರಂಜೀವಿ ಕುಟುಂಬಕ್ಕೆ ಎರಡನೇ ತಲೆಮಾರಿನ ಉತ್ತರಾಧಿಕಾರಿ ಬಂದಿದ್ದಾನೆ. ಆದರೆ ಈ ಮಗು ಈಗ ಭಾರತದ ಅತ್ಯಂತ ಶ್ರೀಮಂತ ಮಗು ಎಂದು ಹೇಳಲಾಗುತ್ತಿದೆ.
01:15 PM (IST) Feb 02
01:10 PM (IST) Feb 02
ರಾಮ್ ಚರಣ್ ಮತ್ತು ಉಪಾಸನಾ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ ಎಂಬ ಟೀಕೆಗಳ ಹಿನ್ನೆಲೆಯಲ್ಲಿ, ಚರಣ್ ಅದ್ಭುತವಾದ ತಿರುಗೇಟು ನೀಡಿದ್ದಾರೆ. ಉಪಾಸನಾ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
12:47 PM (IST) Feb 02
ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಭಿಕ್ಷುಕನೋರ್ವ, ಆಹಾರ ತಲುಪಿಸಿದ ಡೆಲಿವರಿ ಬಾಯ್‌ಗೆ 50 ರೂಪಾಯಿ ಟಿಪ್ಸ್ ನೀಡಿದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
12:45 PM (IST) Feb 02
ಇಂಡೋ-ಪಾಕ್ ಪಂದ್ಯದ ವೇಳೆ ಸಿಕ್ಕಿಬಿದ್ದ ಸರ್ಫರಾಜ್, ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನ ಟೀಂ ಮೆಂಟರ್ ಫೋನ್ ಬಳಕೆ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.
12:35 PM (IST) Feb 02
ಸಿಗರೇಟ್ ಸೇದುವುದು ಕೇವಲ ಸೇದೋರಿಗೆ ಮಾತ್ರವಲ್ಲ, ಅವರ ಸುತ್ತಮುತ್ತ ಇರುವವರಿಗೂ ತುಂಬಾನೇ ಹಾನಿಕಾರಕ. ಹೀಗಾಗಿ, ಸಿಗರೇಟ್ ಬೆಲೆ ಏರಿಕೆಯನ್ನು ಹೆಚ್ಚಿನವರು ಸ್ವಾಗತಿಸಿದ್ದಾರೆ.
12:26 PM (IST) Feb 02
ಹಳೇ ಲವ್ ದ್ವೇಷ, ಮಾಜಿ ಬಾಯ್‌ಫ್ರೆಂಡ್ ಪತ್ನಿ-6 ತಿಂಗಳ ಮಗುವಿಗೆ ಬೆಂಕಿ ಹಚ್ಚಿ ಕೊಂದ ಮಹಿಳೆ, ಪ್ರೀತಿ ಬ್ರೇಕ್ ಅಪ್ ಆಗಿ ಬೇರೆ ಮದುವೆಯಾಗಿದ್ದಾನೆ. ಆದರೆ ಈಕೆಗೆ ಆತನೇ ಬೇಕು. ಇದಕ್ಕಾಗಿ ಮಾಡಿದ ಕೆಲಸಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿದೆ.
12:08 PM (IST) Feb 02
ವಕೀಲರೊಬ್ಬರು ಹಂಚಿಕೊಂಡ 'ಬ್ರಾಹ್ಮಣರು ತಯಾರಿಸಿದ ಹಪ್ಪಳ' ಎಂಬ ಬರಹವಿರುವ ಪ್ಯಾಕೆಟ್‌ನ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಏನಾಗ್ತಿದೆ ನೋಡಿ…
12:05 PM (IST) Feb 02
ಇಂಡಿಯಾ ಪೋಸ್ಟ್ GDS ನೇಮಕಾತಿ 2026ರಲ್ಲಿ 28,740 ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕಟವಾಗಿದೆ. 10ನೇ ತರಗತಿ ಪಾಸಾದವರು ಪರೀಕ್ಷೆ ಇಲ್ಲದೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ನಂತರ ಗ್ರಾಮೀಣ ಅಂಚೆ ಸೇವಕರಿಗೆ ಎಷ್ಟು ಸಂಬಳ ಸಿಗುತ್ತದೆ ಎಂದು ತಿಳಿಯಿರಿ.
11:08 AM (IST) Feb 02
ಗಂಡನೋರ್ವ ಕಾರು ಚಾಲನಾ ತರಬೇತಿ ಹೇಳಿಕೊಡುತ್ತಿದ್ದ ವೇಳೆ ಪತ್ನಿ ಗೊಂದಲಕ್ಕೊಳಗಾಗಿ ಬ್ರೇಕ್ ಒತ್ತುವ ಬದಲು ಆಕ್ಸಲಿರೇಟರ್ ಮೇಲೆ ಕಾಲಿಟ್ಟ ಪರಿಣಾಮ ಕಾರು ಸೀದಾ ಹೋಗಿ ಸಮೀಪದ ಕೆರೆಗೆ ಬಿದ್ದಂತಹ ಘಟನೆ ತಮಿಳುನಾಡಿನ ಕಾರೈಕುಡಿಯಲ್ಲಿ ನಡೆದಿದೆ.
10:07 AM (IST) Feb 02
ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರದ ವಿರುದ್ಧ ಐಸಿಸಿ ಕಠಿಣ ಕ್ರಮಕ್ಕೆ ಸಿದ್ಧವಾಗಿದೆ. ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವು ಫೆಬ್ರವರಿ 15ಕ್ಕೆ ನಿಗದಿಯಾಗಿದೆ.
09:59 AM (IST) Feb 02
ಕಳೆದ ನಾಲ್ಕು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸತತವಾಗಿ ಕುಸಿತ ಕಂಡುಬಂದಿದೆ. ಇಂದಿನ ವರದಿಯ ಪ್ರಕಾರ, 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ದರಗಳು ಹಾಗೂ ಬೆಳ್ಳಿ ದರದಲ್ಲಿ ಗಣನೀಯ ಇಳಿಕೆಯಾಗಿದೆ. ದೇ