LIVE NOW
Published : Feb 18, 2026, 06:54 AM ISTUpdated : Feb 18, 2026, 10:49 PM IST

India Latest News Live: ನಿಮಿಷಾ ಪ್ರಿಯಾ ಬಿಡುಗಡೆಗೆ ಮುದ್ರೆ? ಮರಣದಂಡನೆ ರದ್ದತಿ ಬೆನ್ನಲ್ಲೇ ಎಪಿ ಅಬೂಬಕರ್ ಮುಸ್ಲ್ಯಾರ್ ಬಣದಿಂದ ಮಹತ್ವದ ಘೋಷಣೆ!

ಸಾರಾಂಶ

ಹೈದರಾಬಾದ್‌: ರಂಜಾನ್‌ ಉಪವಾಸದ ಸಂದರ್ಭದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಯಿಂದ ನಿತ್ಯ 1 ಗಂಟೆ ಬೇಗ ತೆರಳುವುದಕ್ಕೆ ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಸೇವೆ ಕಡ್ಡಾಯ ಎನ್ನುವ ಸಂದರ್ಭ ಹೊರತುಪಡಿಸಿ ಇತರ ದಿನಗಳಲ್ಲಿ 5 ಗಂಟೆ ಬದಲು 1 ಗಂಟೆ ಮುಂಚಿತವಾಗಿ ನಿತ್ಯ ಸಂಜೆ 4 ಗಂಟೆಗೆ ತೆರಳಬಹುದು ಎಂದಿದೆ. ಮೂರು ದಿನಗಳ ಹಿಂದಷ್ಟೇ ಶಿಕ್ಷಣ ಇಲಾಖೆಯ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಾಲಾ ಅವಧಿಯಲ್ಲಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರ ತನಕ ಬದಲಿಸಿ ಆದೇಶಿಸಿತ್ತು.

 Kanthapuram AP Aboobacker Musliyar's mediation in Nimisha Priya's release case

10:49 PM (IST) Feb 18

ನಿಮಿಷಾ ಪ್ರಿಯಾ ಬಿಡುಗಡೆಗೆ ಮುದ್ರೆ? ಮರಣದಂಡನೆ ರದ್ದತಿ ಬೆನ್ನಲ್ಲೇ ಎಪಿ ಅಬೂಬಕರ್ ಮುಸ್ಲ್ಯಾರ್ ಬಣದಿಂದ ಮಹತ್ವದ ಘೋಷಣೆ!

ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಅವರ ಕ್ಷಮಾದಾನಕ್ಕಾಗಿ ಎಪಿ ಅಬೂಬಕರ್ ಮುಸ್ಲ್ಯಾರ್ ಮಧ್ಯಪ್ರವೇಶಿಸಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾರೆ. ಆದರೆ, ಕೊಲೆಯಾದ ತಲಾಲ್ ಅವರ ಸಹೋದರ ಕ್ಷಮಾದಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Read Full Story

10:21 PM (IST) Feb 18

ಯಾವುದೇ ಕ್ಷಣದಲ್ಲಿ ಅಮೆರಿಕ-ಇರಾನ್‌ ಯುದ್ಧ, ಒಂದು ವಾರಗಳ ಕಾಲ ಕದನ ಸಾಧ್ಯತೆ - ವರದಿ

ಆಕ್ಸಿಯಾಸ್ ಪ್ರಕಾರ, ಮಿಲಿಟರಿ ಕ್ರಮವನ್ನು ಪ್ರಾರಂಭಿಸಿದರೆ, ಅದು ಸೀಮಿತ ಅಥವಾ ಸಾಂಕೇತಿಕವಾಗಿರುವುದಿಲ್ಲ, ಬದಲಾಗಿ ನಿರಂತರ, ಬಹು ವಾರಗಳ ಅಭಿಯಾನವಾಗಿರುತ್ತದೆ ಎಂದು ಯುಎಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Read Full Story

10:09 PM (IST) Feb 18

ಸೇವ್ ಬಾಕ್ಸ್ ಹಗರಣ - ಇಡಿಯಿಂದ ನಟ ಜಯಸೂರ್ಯ 39 ಲಕ್ಷ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

'ಸೇವ್ ಬಾಕ್ಸ್' ಆನ್‌ಲೈನ್ ಹರಾಜು ಅಪ್ಲಿಕೇಶನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲೆಯಾಳಂ ನಟ ಜಯಸೂರ್ಯ ಅವರ ₹39 ಲಕ್ಷ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ. ಜಯಸೂರ್ಯ ಈ ಸೇವ್‌ ಬಾಕ್ಸ್‌ ಅಪ್ಲಿಕೇಶನ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು .

Read Full Story

09:50 PM (IST) Feb 18

ಪತ್ನಿಯನ್ನು ಶಾಪಿಂಗ್​ಗೆ ಕರೆದೊಯ್ಯದಿದ್ರೆ 3 ವರ್ಷ ಜೈಲು ಶಿಕ್ಷೆ? ಏನಿದು ಹೊಸ ಸುದ್ದಿ? ಇಲ್ಲಿದೆ ಅಸಲಿಯತ್ತು

ಪತಿಯು ಶಾಪಿಂಗ್‌ಗೆ ಕರೆದೊಯ್ಯುವುದಿಲ್ಲ ಎಂಬುದು ಹಲವು ಪತ್ನಿಯರ ಸಾಮಾನ್ಯ ದೂರು. ಈ ನಡುವೆ, ಪತ್ನಿಯನ್ನು ಶಾಪಿಂಗ್‌ಗೆ ಕರೆದೊಯ್ಯದಿದ್ದರೆ ಗಂಡನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಕಾನೂನು ಬಂದಿದೆ ಎಂದು ಹೇಳುವ ವಿಡಿಯೋವೊಂದು ವೈರಲ್ ಆಗಿದೆ. ಇದೇನಿದು ವಿಶೇಷತೆ?

Read Full Story

09:25 PM (IST) Feb 18

AI Impact ಶೃಂಗದಲ್ಲಿ ವಿವಾದಕ್ಕೆ ಕಾರಣವಾಗಿರುವ ರೋಬೋ ನಾಯಿಯ ವಿಶೇಷತೆಯೇನು?

ದೆಹಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಾಲ್ಗೋಟಿಯಾ ವಿವಿ ಪ್ರಸ್ತುತಪಡಿಸಿದ ರೋಬೋಟ್ ನಾಯಿಯ ಬಗ್ಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ರೋಬೋಟ್‌ ನಾಯಿಯನ್ನು ನಮ್ಮದು ಎಂದು ನಾವು ಹೇಳಿಕೊಂಡಿಲ್ಲ ಎಂದು ವಿವಿ ತಿಳಿಸಿದೆ.

 

Read Full Story

08:51 PM (IST) Feb 18

ಬೇರೆಯವರ ವಸ್ತುಗಳನ್ನು ನಿಮ್ಮದೆಂದು ಪ್ರದರ್ಶಿಸಬೇಡಿ - ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ವಿವಾದದ ಬಳಿಕ ಸರ್ಕಾರದ ಎಚ್ಚರಿಕೆ

ದೆಹಲಿಯ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾ ನಿರ್ಮಿತ ರೋಬೋಟ್ ಡಾಗ್‌ ಅನ್ನು ತಮ್ಮದೆಂದು ಪ್ರದರ್ಶಿಸಿ ರಾಷ್ಟ್ರೀಯ ಮುಜುಗರಕ್ಕೆ ಕಾರಣವಾಯಿತು. ಈ ವಿವಾದದ ನಂತರ, ವಿಶ್ವವಿದ್ಯಾಲಯವನ್ನು ಶೃಂಗಸಭೆಯಿಂದ ಹೊರಹಾಕಲಾಯಿತು ಈ ವಿವಾದದ ನಂತರ ಸರ್ಕಾರ ಎಚ್ಚರಿಕೆ ನೀಡಿದೆ.

Read Full Story

08:34 PM (IST) Feb 18

ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್‌ ಮುಚ್ಚಾಲ್‌ ಆಗ್ತಾರಾ ವಿಜಯ್‌ ದೇವರಕೊಂಡ, ಬೆಡ್‌ರೂಮ್‌ ಫೋಟೋ ಮತ್ತೆ ವೈರಲ್‌!

Vijay Deverakonda's Old Photos with Belgian Model Virginie Go Viral ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ವದಂತಿಗಳ ನಡುವೆಯೇ, ದಶಕದ ಹಿಂದೆ ವಿಜಯ್ ಪ್ರೀತಿಸುತ್ತಿದ್ದ ಬೆಲ್ಜಿಯಂ ಮಾಡೆಲ್ ವರ್ಜಿನಿ ಅವರೊಂದಿಗಿನ ಖಾಸಗಿ ಫೋಟೋಗಳು ವೈರಲ್ ಆಗಿವೆ. 

Read Full Story

07:52 PM (IST) Feb 18

Zero. Zero. Zero.. ಬದಲಾಗದ ಅಭಿಷೇಕನ ಅದೃಷ್ಟ!

ವಿಶ್ವದ ನಂಬರ್ 1 ಟಿ20 ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮ, ಹಾಲಿ ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ತೀವ್ರ ಕಳಪೆ ಫಾರ್ಮ್ ಪ್ರದರ್ಶಿಸಿದ್ದಾರೆ. ಈ ಮೂಲಕ ಅವರು ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಡಕ್‌ಗಳಂತಹ ಹಲವಾರು ಅನಪೇಕ್ಷಿತ ದಾಖಲೆಗಳನ್ನು ಸರಿಗಟ್ಟಿದ್ದಾರೆ.
Read Full Story

07:48 PM (IST) Feb 18

ಮೊದಲ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್

ಪಾಕಿಸ್ತಾನದಿಂದ ಗಡಿ ದಾಟಿ ಭಾರತೀಯ ಪ್ರಿಯಕರ ಸಚಿನ್ ಮೀನಾನನ್ನು ಸೇರಿದ ಸೀಮಾ ಹೈದರ್ ಮತ್ತೊಮ್ಮೆ ತಾಯಿಯಾಗಿದ್ದಾರೆ. ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದು ಸಚಿನ್ ಜೊತೆಗಿನ ಅವರ ಎರಡನೇ ಮಗುವಾಗಿದೆ. ಈ ಮೂಲಕ ಸೀಮಾ ಹೈದರ್ ಈಗ ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ.
Read Full Story

06:37 PM (IST) Feb 18

ಪೋಕ್ಸೋ ಕೇಸ್‌ನಲ್ಲಿ 23 ವರ್ಷ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಕೋರ್ಟ್‌ನಿಂದ ಅಪರಾಧಿ ನಾಪತ್ತೆ

ಪೋಕ್ಸೋ ಕೇಸ್‌ನಲ್ಲಿ 23 ವರ್ಷ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಕೋರ್ಟ್‌ನಿಂದ ಅಪರಾಧಿ ನಾಪತ್ತೆ, ಶಾಲಾ ಬಾಲಕಿ ಅಪಹರಿಸಿ ಅತ್ಯಾ**ರ ಎಸಗಿದ್ದ ಅಪರಾಧಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಆದರೆ ಆತ ಕೋರ್ಟ್‌ನಿಂದಲೇ ಪರಾರಿಯಾದ ಘಟನೆ ನಡೆದಿದೆ.

 

Read Full Story

06:10 PM (IST) Feb 18

ಫ್ಯಾಮಿಲಿ ಟ್ರಿಪ್‌ ನೆಪದಲ್ಲಿ ರಾಜಧಾನಿಗೆ 7.5 ಕೋಟಿ ಮೊತ್ತದ ಹೆರಾಯಿನ್ ಸಾಗಿಸುತ್ತಿದ್ದ ದಂಪತಿ ಅಂದರ್

couple arrested for smuggling heroin: ಕುಟುಂಬ ಪ್ರವಾಸದ ನೆಪದಲ್ಲಿ ದೆಹಲಿಗೆ 7.5 ಕೋಟಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಆರಿಫ್ ಖಾನ್, ಪತ್ನಿ ಶಿಖಾ ಅಲಿ, ರಿಸೀವರ್ ಜುಮ್ಮನ್‌ನಿಂದ ಒಟ್ಟು 1.504 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

Read Full Story

06:08 PM (IST) Feb 18

ಭಾರತಕ್ಕೆ ಮರಳುತ್ತಿದ್ದಾರ ವಿಜಯ್ ಮಲ್ಯ? ಹೈಕೋರ್ಟ್‌ಗೆ ಮಹತ್ವದ ಅಫಿಡವಿಟ್ ಸಲ್ಲಿಸಿದ ಉದ್ಯಮಿ

ಭಾರತಕ್ಕೆ ಮರಳುತ್ತಿದ್ದಾರ ವಿಜಯ್ ಮಲ್ಯ? ಹೈಕೋರ್ಟ್‌ಗೆ ಮಹತ್ವದ ಅಫಿಡವಿಟ್ ಸಲ್ಲಿಸಿದ ಉದ್ಯಮಿ,  ಇತ್ತೀಚೆಗೆ ಬಾಂಬೆ ಹೈಕೋರ್ಟ್ ಉದ್ಯಮಿ ಭಾರತಕ್ಕೆ ಮರಳಿ ಕೋರ್ಟ್‌ಗೆ ಹಾಜರಾಗದ ಹೊರತು ವಿಚಾರಣೆ ನಡೆಸುವುದಿಲ್ಲ ಎಂದಿತ್ತು. ಇದರ ಬೆನ್ನಲ್ಲೇ ಉದ್ಯಮಿ ಮಹತ್ವದ ಅಫಿಡವಿಟ್ ಸಲ್ಲಿಸಿದ್ದಾರೆ.

 

Read Full Story

05:48 PM (IST) Feb 18

ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು - ಪುರುಷ ಜನನಾಂಗ ಪ್ರವೇಶವಾಗದೆ ವೀರ್ಯ ವಿಸರ್ಜನೆಯಾದ್ರೆ ಅದು ಅ*ತ್ಯಾಚಾರವಲ್ಲ!

Ejaculation Without Penetration is Attempt to Rape, Not Rape: HC ಛತ್ತೀಸ್‌ಗಢ ಹೈಕೋರ್ಟ್‌ ಮಹತ್ವದ ತೀರ್ಪೊಂದರಲ್ಲಿ, ಯೋನಿಯೊಳಗೆ ಜನನಾಂಗವನ್ನು ನುಗ್ಗಿಸದೆ ಮೇಲಿನಿಂದ ಉಜ್ಜುವುದು 'ಅ*ತ್ಯಾಚಾರ' ಅಲ್ಲ, ಬದಲಿಗೆ 'ಅ*ತ್ಯಾಚಾರಕ್ಕೆ ಯತ್ನ' ಎಂದು ಸ್ಪಷ್ಟಪಡಿಸಿದೆ. 

Read Full Story

05:32 PM (IST) Feb 18

ಮಗುವಿಗೆ ಮುತ್ತು ಕೊಡುವ ಮುನ್ನ ಎಚ್ಚರ! ಸಣ್ಣ ನಿರ್ಲಕ್ಷ್ಯಕ್ಕೆ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಪುಟ್ಟ ಕಂದ!

ಸಂಬಂಧಿಕರು ಅಥವಾ ಸ್ನೇಹಿತರು ಪ್ರೀತಿಯಿಂದ ನೀಡುವ ಮುತ್ತು ಮಗುವಿನ ಜೀವನವನ್ನೇ ಹಾಳುಮಾಡಬಹುದು. ಹರ್ಪಿಸ್ ವೈರಸ್ ಸೋಂಕಿತ ವ್ಯಕ್ತಿಯೊಬ್ಬರು ನೀಡಿದ ಮುತ್ತಿನಿಂದಾಗಿ ನಮೀಬಿಯಾದ ಎರಡು ವರ್ಷದ ಬಾಲಕನೊಬ್ಬ ತನ್ನ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ.

Read Full Story

05:17 PM (IST) Feb 18

ದೇಶದ ಈ ಐದು ರಾಜ್ಯಗಳಲ್ಲಿ ಅತಿಹೆಚ್ಚು ಅಶ್ಲೀ*ಲ ವಿಡಿಯೋ ನೋಡ್ತಾರಂತೆ! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಇತ್ತೀಚಿಗಿನ ವರ್ಷಗಳಲ್ಲಿ ಅಶ್ಲೀ*ಲ ವಿಡಿಯೋ ಕಂಟೆಂಟ್ ನೋಡುವುದು ಒಂದು ಘೀಳಾಗಿ ಪರಿಣಮಿಸಿದೆ. ಲಿಂಗಭೇದವಿಲ್ಲದೇ, ಹಿರಿ-ಕಿರಿಯ ವಯಸ್ಸಿನವರು ಕದ್ದುಮುಚ್ಚಿ ಪೋ*ರ್ನ್ ವಿಡಿಯೋ ನೋಡುತ್ತಾರೆ. ಬನ್ನಿ ನಾವಿಂದು ದೇಶದಲ್ಲಿ ಅತಿಹೆಚ್ಚು ಅಶ್ಲೀ*ಲ ವಿಡಿಯೋ ನೋಡುವವರು ಯಾವ ರಾಜ್ಯದಲ್ಲಿದ್ದಾರೆ ಎಂದು ತಿಳಿಯೋಣ

 

Read Full Story

05:00 PM (IST) Feb 18

ಆಸ್ಟ್ರೇಲಿಯಾದಲ್ಲಿ ಹೋಟೆಲ್ ಬಿಲ್ ಕಟ್ಟಲಾಗದೆ ಕಿಚನ್‌ ಕ್ಲೀನ್‌ ಮಾಡಿ ಪಾತ್ರೆ ತೊಳೆದ ಪಾಕಿಸ್ತಾನ ಹಾಕಿ ಪ್ಲೇಯರ್ಸ್‌!

ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ತಾನದ ಹಾಕಿ ಆಟಗಾರರು ಹೋಟೆಲ್ ಬಿಲ್ ಪಾವತಿಸಲು ವಿಫಲವಾದ ಕಾರಣ ಪಾತ್ರೆ ತೊಳೆಯುವಂತಹ ಹೀನಾಯ ಸ್ಥಿತಿಯನ್ನು ಎದುರಿಸಿದ್ದಾರೆ. ಈ ಅವಮಾನಕಾರಿ ಘಟನೆಯಿಂದಾಗಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್, ರಾಷ್ಟ್ರೀಯ ಹಾಕಿ ಫೆಡರೇಶನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

04:18 PM (IST) Feb 18

60 ದಾಟಿದ್ರೂ ಸಲ್ಮಾನ್ ಖಾನ್ ಯಾಕೆ ಬ್ಯಾಚುಲರ್? ಈ ಕಂಡೀಷನ್‌ಗಳೇ ಅಡ್ಡಿಯಾಯ್ತಾ? ತಂದೆ ಸಲೀಂ ಖಾನ್ ಹೇಳಿದ್ದೇನು?

ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಸಲೀಂ ಅವರ ಮಕ್ಕಳಲ್ಲಿ ಸಲ್ಮಾನ್‌ಗೆ ಮಾತ್ರ ಇನ್ನೂ ಮದುವೆಯಾಗಿಲ್ಲ. ಆದರೆ ಯಾಕೆ? ಈ ಪ್ರಶ್ನೆಗೆ ಸ್ವತಃ ಸಲೀಂ ಖಾನ್ ಅವರೇ ಒಂದು ಸಂದರ್ಶನದಲ್ಲಿ ಉತ್ತರ ನೀಡಿದ್ದರು.
Read Full Story

04:14 PM (IST) Feb 18

ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ 10 ತಿಂಗಳ ಮಗುವಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ 10 ತಿಂಗಳ ಮಗು ಅಲಿನ್ ಶಿರಿನ್ ಅಬ್ರಹಾಂ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯ್ತು. ಸಾಮಾನ್ಯವಾಗಿ ಗಣ್ಯಾತಿಗಣ್ಯರು, ಖ್ಯಾತ ಕಲಾವಿದರು, ಸೈನಿಕರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

Read Full Story

04:08 PM (IST) Feb 18

ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿದ ಮಹಾರಾಷ್ಟ್ರ ಸರ್ಕಾರ!

Maharashtra Govt Scraps 5% Reservation for Muslim Community ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶ ಮತ್ತು ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಗಳಲ್ಲಿನ ನೇಮಕಾತಿಗೆ ಅನ್ವಯವಾಗುವ ಕೋಟಾವನ್ನು ಔಪಚಾರಿಕವಾಗಿ ರದ್ದುಗೊಳಿಸಿ ಸಾಮಾಜಿಕ ನ್ಯಾಯ ಇಲಾಖೆ ಮಂಗಳವಾರ ತಡರಾತ್ರಿ ಆದೇಶ ಹೊರಡಿಸಿದೆ.

 

Read Full Story

03:46 PM (IST) Feb 18

ಓ ಹೆಣ್ಮಗು ಹೆಣ್ಮಗು, ಲೆಫ್ಟ್ ರೈಟ್ ಗೊಂದಲಕ್ಕೆ ಕೈಯಲ್ಲೇ ಬರೆದು ಡ್ರೈವಿಂಗ್, ಅಡ್ಡ ಬರಬೇಡಿ ಅಷ್ಟೆ

ಓ ಹೆಣ್ಮಗು ಹೆಣ್ಮಗು, ಈ ವೈರಲ್ ಮೀಮ್ಸ್‌ಗೆ ಪರ ವಿರೋಧಗಳಿವೆ. ಇದಕ್ಕೆ ಅನ್ವರ್ಥವಾಗುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಗೆ ಡ್ರೈವಿಂಗ್ ವೇಳೆ ಯಾವತ್ತೂ ಗೊಂದಲ. ಇದಕ್ಕೆ ಮಹಿಳೆ ಮಾಡಿದ ಐಡಿಯಾ ಚೆನ್ನಾಗಿದೆ. ಆದರೆ ರಸ್ತೆ ಖಾಲಿ ಇರಬೇಕು ಅಷ್ಟೆ.

 

Read Full Story

03:40 PM (IST) Feb 18

ಸಿಗರೇಟ್‌ ಬೆಲೆ ಏರಿಕೆ ನ್ಯೂಸ್‌ ಬೆನ್ನಲ್ಲೇ ಭರ್ಜರಿಯಾಗಿ ಏರಿದ ITC, Godfrey Phillips ಷೇರು!

ಫೆ.18 ರಂದು, ಸಿಗರೇಟ್ ಬೆಲೆ ಏರಿಕೆಯ ಸುದ್ದಿಯಿಂದಾಗಿ ಐಟಿಸಿ ಮತ್ತು ಗಾಡ್ಫ್ರೇ ಫಿಲಿಪ್ಸ್‌ನಂತಹ ಕಂಪನಿಗಳ ಷೇರುಗಳು ಭಾರಿ ಏರಿಕೆ ಕಂಡಿವೆ. ಅಬಕಾರಿ ಸುಂಕ ಹೆಚ್ಚಳದ ಪರಿಣಾಮವನ್ನು ಸರಿದೂಗಿಸಲು ಕಂಪನಿಗಳು ಈ ನಿರ್ಧಾರ ಕೈಗೊಂಡಿದ್ದು, ಇದು ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
Read Full Story

03:28 PM (IST) Feb 18

ವಿರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಯಾರು? ಅವರ ಬ್ಯುಸಿನೆಸ್ ಏನು ಗೊತ್ತಾ?

ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಅಹ್ಲಾವತ್ ದೆಹಲಿ ಮೂಲದ ಯಶಸ್ವಿ ಉದ್ಯಮಿ. ಸೆಹ್ವಾಗ್ ಕ್ರಿಕೆಟ್ ಜಗತ್ತಿನಲ್ಲಿ ಎಷ್ಟು ಸಕ್ರಿಯರಾಗಿದ್ದರೋ, ಆರತಿ ಕಾರ್ಪೊರೇಟ್ ಜಗತ್ತಿನಲ್ಲಿ ಅಷ್ಟೇ ಸಕ್ರಿಯರಾಗಿದ್ದಾರೆ. ಅಷ್ಟಕ್ಕೂ ಅವರು ಯಾವ ಬ್ಯುಸಿನೆಸ್ ಮಾಡ್ತಾರೆ ಗೊತ್ತಾ?
Read Full Story

03:09 PM (IST) Feb 18

ಚೋಲಿ ಕೆ ಪೀಚೆ ಕ್ಯಾ ಹೆ ಶೂಟಿಂಗ್‌ ಹಿಂದಿನ ಪ್ಯಾಡೆಡ್ ಬ್ರಾ ರಹಸ್ಯ ಬಿಚ್ಚಿಟ್ಟ ನಟಿ ನೀನಾ ಗುಪ್ತಾ

ಚೋಲಿ ಕೆ ಪೀಚೆ ಕ್ಯಾ ಹೆ ಶೂಟಿಂಗ್‌ ಹಿಂದಿನ ಪ್ಯಾಡೆಡ್ ಬ್ರಾ ರಹಸ್ಯ ಬಿಚ್ಚಿಟ್ಟ ನಟಿ ನೀನಾ ಗುಪ್ತಾ, ಬಾಲಿವುಡ್‌ನ ಜನಪ್ರಿಯ ಸಾಂಗ್ ಹಿಂದೆ ನಡೆದ ಘಟನೆಗೆ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನಿದು ಪ್ಯಾಡೆಡ್ ಬ್ರಾ ಘಟನೆ

 

Read Full Story

02:40 PM (IST) Feb 18

ರಶ್ಮಿಕಾ-ವಿಜಯ್ ಮದುವೆ ಮುಹೂರ್ತಕ್ಕೆ ಇದೆ ಬಹಳ ವಿಶೇಷ ಅರ್ಥ! ಫೆಬ್ರವರಿ 26 ಸೆಲೆಕ್ಟ್ ಮಾಡಿಕೊಂಡಿದ್ದೇಕೆ?

ಟಾಲಿವುಡ್‌ನ ಬಹುಚರ್ಚಿತ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಬಗ್ಗೆ ಬಹಳ ದಿನಗಳಿಂದ ಸುದ್ದಿಗಳು ಹರಿದಾಡುತ್ತಲೇ ಇವೆ. ಇದೀಗ ಈ ವಿಷಯದಲ್ಲಿ ಸ್ಪಷ್ಟನೆ ಸಿಕ್ಕಿದೆ. ಜ್ಯೋತಿಷ್ಯ ತಜ್ಞರ ಪ್ರಕಾರ, ಅವರ ಮದುವೆ ದಿನಾಂಕಕ್ಕೆ ಬಹಳ ವಿಶೇಷತೆ ಇದೆಯಂತೆ.
Read Full Story

02:14 PM (IST) Feb 18

ಬಂಗಾರದ ಬೆಲೆ ಲಕ್ಷಕ್ಕಿಂತಲೂ ಕಡಿಮೆಯಾಗುತ್ತಾ? ಇನ್ವೆಸ್ಟ್ ಮಾಡೋರು ಏನು ಮಾಡಿದರೆ ಒಳ್ಳೇದು? ತಜ್ಞರು ಹೇಳೋದೇನು?

ಹಳದಿ ಲೋಹ ಬಂಗಾರ ಹಾಗೂ ಬೆಳ್ಳಿ ದಿನಾಲೂ ಹಾವು ಏಣಿ ಆಟವಾಡುತ್ತಿದೆ. ಒಂದಿನ ಸಾವಿರಗಟ್ಟಲೆ ಕಡಿಮೆಯಾಗುವ ಬಂಗಾರದ ಬೆಲೆ ಮತ್ತೊಂದು ದಿನ ಮತ್ತೆ ಕೈಗೆ ಸಿಗದ ಗಗನ ಕುಸುಮವಾಗುತ್ತದೆ. ಅಷ್ಟಕ್ಕೂ ಮಾರ್ಕೆಟ್ ತಜ್ಞರು ಈ ಬಗ್ಗೆ ಹೇಳುವುದೇನು?

Read Full Story

02:03 PM (IST) Feb 18

ಮಹಿಳೆ ದುರಂತ ಸಾವಿಗೆ ಟ್ವಿಸ್ಟ್ ಕೊಟ್ಟ ಡೆತ್ ನೋಟ್, ಪ್ರಮುಖ ಕಾಂಗ್ರೆಸ್ ನಾಯಕ ಪೊಲೀಸ್ ವಶಕ್ಕೆ

ಮಹಿಳೆ ದುರಂತ ಸಾವಿಗೆ ಟ್ವಿಸ್ಟ್ ಕೊಟ್ಟ ಡೆತ್ ನೋಟ್, ಗಂಡನ ಮನೆಯಲ್ಲಿ ಬದುಕು ಅಂತ್ಯಗೊಳಿಸಿದ್ದ 35ರ ಮಹಿಳೆ ಬರೆದ ಡೆತ್ ನೋಟ್ ಪತ್ತೆಯಾಗಿದೆ. ಈ ನೋಟ್ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು ಮಾತ್ರವಲ್ಲ ಕಾಂಗ್ರೆಸ್ ನಾಯಕ ಪೊಲೀಸರ ವಶವಾಗಿದ್ದಾನೆ.

 

Read Full Story

01:50 PM (IST) Feb 18

ಟಿವಿ ವಿಚಾರಕ್ಕೆ ಗಲಾಟೆ - ಆಶ್ರಯ ನೀಡಿದ್ದ ಅತ್ತೆಯನ್ನೇ ಹೊಡೆದು ಕೊಂದ 15 ವರ್ಷದ ಸೋದರಳಿಯ

ಮಹಾರಾಷ್ಟ್ರದ ವಸಾಯಿಯಲ್ಲಿ, ಟಿವಿ ಲೋಡಿಂಗ್ ವಿಚಾರಕ್ಕೆ ನಡೆದ ಜಗಳದಲ್ಲಿ 15ರ ಬಾಲಕನೊಬ್ಬ ತನ್ನ ಅತ್ತೆಯನ್ನು ಬಿದಿರಿನ ಬಡಿಗೆಯಿಂದ ಹೊಡೆದು ಕೊಂದಿದ್ದಾನೆ. ನಂತರ ಸ್ನೇಹಿತನ ಸಹಾಯದಿಂದ ಶವವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದು, ಪೊಲೀಸರ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿದೆ.
Read Full Story

12:59 PM (IST) Feb 18

ಟಿ20 ವಿಶ್ವಕಪ್ - ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಮ್ಯಾಚ್! ಪಂದ್ಯ ರದ್ದಾದ್ರೆ ಭಾರತ ಜತೆ ಸೂಪರ್-8 ಹಂತಕ್ಕೇರೋದು ಯಾರು?

ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಹಂತಕ್ಕೇರಲು ಪಾಕಿಸ್ತಾನಕ್ಕೆ ಇಂದು ನಮೀಬಿಯಾ ವಿರುದ್ಧದ ಪಂದ್ಯ ನಿರ್ಣಾಯಕವಾಗಿದೆ. ಭಾರತ ವಿರುದ್ಧದ ಸೋಲಿನಿಂದ ಒತ್ತಡದಲ್ಲಿರುವ ಪಾಕ್, ಈ ಪಂದ್ಯವನ್ನು ಗೆದ್ದರೆ ಅಥವಾ ಮಳೆಯಿಂದ ರದ್ದಾದರೆ ಮಾತ್ರ ಮುಂದಿನ ಹಂತಕ್ಕೆ ಪ್ರವೇಶಿಸಲಿದೆ.
Read Full Story

12:46 PM (IST) Feb 18

ಬೀದಿ ಬದಿ ಪಾನಿಪುರಿ ತಿನ್ತಾ ನಿಂತಿದ್ದವರಿಗೆ ಆಘಾತ - ಪಾನಿಯಲ್ಲಿ ಈಜಾಡ್ತಿತ್ತು ಇಲಿ - ವಿಡಿಯೋ

ರಸ್ತೆ ಬದಿ ಪಾನಿಪುರಿ ಅಥವಾ ಗೋಲ್ಗಪ್ಪವನ್ನು ತಿನ್ನದವರಿಲ್ಲ, ಎಂಥಾ ಶ್ರೀಮಂತರು ಕೂಡ ರಸ್ತೆ ಬದಿಯ ಪಾನಿಪುರಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಹೀಗೆ ಪಾನಿಪುರಿ ಅಥವಾ ಗೋಲ್ಗಪ್ಪವನ್ನು ಇಷ್ಟಪಟ್ಟು ತಿನ್ನುವವರಿಗೆ ಶಾಕ್ ಆಗುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

12:45 PM (IST) Feb 18

ಕಂಕಣ ಸೂರ್ಯಗ್ರಹಣ ವೇಳೆ ಭೂಮಿಯಲ್ಲಿನ ಬದಲಾವಣೆಯ ಅದ್ಭುತ ದೃಶ್ಯ ಸೆರೆ ಹಿಡಿದ ಸ್ಯಾಟಲೈಟ್

ಕಂಕಣ ಸೂರ್ಯಗ್ರಹಣ ಅದ್ಭುತ ದೃಶ್ಯವನ್ನು ಸ್ಯಾಟಲೈಟ್ ಸೆರೆ ಹಿಡಿದಿದೆ. ವಿಶೇಷವಾಗಿ ಕಂಕಣ ಸೂರ್ಯಗ್ರಹಣ ವೇಳೆ ಭೂಮಿಯಲ್ಲಿನ ಬದಲಾವಣೆಯ ಅದ್ಭುತ ದೃಶ್ಯ ಇದಾಗಿದೆ. ಮೊದಲ ಸೂರ್ಯಗ್ರಹಣ ವಿಡಿಯೋ ಇಲ್ಲಿದೆ.

 

Read Full Story

12:28 PM (IST) Feb 18

Epstein Row - ಎಪ್‌ಸ್ಟೀನ್‌ ವಿವಾದ - ಸಿಬಲ್, ಪಿತ್ರೋಡಾ ಹೆಸರು ಎಳೆದು ತಂದ ಬಿಜೆಪಿ, ರಾಹುಲ್ ಗಾಂಧಿಗೆ ನೇರ ಪ್ರಶ್ನೆ

ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಹಣ ನೀಡಿದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಪಿಲ್ ಸಿಬಲ್ ಪ್ರಶಸ್ತಿ ಸ್ವೀಕರಿಸಿದ್ದೇಕೆ ಎಂದು ಬಿಜೆಪಿ, ರಾಹುಲ್ ಗಾಂಧಿಯನ್ನು ಪ್ರಶ್ನಿಸಿದೆ. ಆದರೆ, ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದ್ದು, ಅದೊಂದು ಸಾರ್ವಜನಿಕ ಕಾರ್ಯಕ್ರಮವಾಗಿತ್ತು ಎಂದು ಸ್ಪಷ್ಟಪಡಿಸಿದೆ.

Read Full Story

12:17 PM (IST) Feb 18

ಆಫರ್ ಇದೆ ಬನ್ನಿ ಅಂತ ಕರೆದು, ಆಮೇಲೆ ಕೈ ಕೊಡ್ತಾರೆ; ನಟಿಯರ ಕಡೆಗಣನೆ ಬಗ್ಗೆ ಸುಪ್ರೀತಾ ಹೀಗಂದಿದ್ದೇಕೆ?

ತೆಲುಗು ಚಿತ್ರರಂಗದಲ್ಲಿ ಸ್ಥಳೀಯ ನಟಿಯರಿಗೆ ಅವಕಾಶ ಸಿಗುತ್ತಿಲ್ಲ ಎಂದು ನಟಿ ಸುರೇಖಾ ವಾಣಿ ಪುತ್ರಿ ಸುಪ್ರೀತಾ ಬೇಸರ ವ್ಯಕ್ತಪಡಿಸಿದ್ದಾರೆ. ಭಾಷೆ, ಭಾವನೆ ಗೊತ್ತಿಲ್ಲದ ಬೇರೆ ಭಾಷೆಯ ನಟಿಯರಿಗೆ ಮಣೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Read Full Story

12:13 PM (IST) Feb 18

Rijiju Slams Rahul - ರಾಹುಲ್ ಗಾಂಧಿ ವರ್ತನೆ ಮಕ್ಕಳಾಟ, ದೇಶಕ್ಕೆ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದ ರಿಜಿಜು!

Kiren Rijiju Labels Rahul Gandhi A National Security Threat And Childish ರಾಹುಲ್ ಗಾಂಧಿ ವರ್ತನೆ ಮಕ್ಕಳಾಟದಂತಿದೆ, ಅವರು ದೇಶದ ಭದ್ರತೆಗೆ ಅಪಾಯಕಾರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಗಂಭೀರ ಆರೋಪ ಮಾಡಿದ್ದಾರೆ.

Read Full Story

12:03 PM (IST) Feb 18

ಒಂದೇ ನಿಮಿಷದಲ್ಲಿ ನಿಮ್ಮನ್ನು ಸ್ಕ್ಯಾನ್ ಮಾಡಿ ಹೆಲ್ತ್ ರಿಪೋರ್ಟ್ ನೀಡಲಿದೆ ಜಿಯೋ ಎಐ ಕ್ಲಿನಿಕ್

ಒಂದೇ ನಿಮಿಷದಲ್ಲಿ ನಿಮ್ಮನ್ನು ಸ್ಕ್ಯಾನ್ ಮಾಡಿ ಹೆಲ್ತ್ ರಿಪೋರ್ಟ್ ನೀಡಲಿದೆ ಜಿಯೋ ಎಐ ಕ್ಲೀನಿಕ್, ಸಂಪೂರ್ಣ ಎಐ ಚಾಲಿತ ಕ್ಲಿನಿಕ್ ಇದು. ಕಣ್ಣು,ಚರ್ಮ ಸೇರಿ ದೇಹವನ್ನು ಸ್ಕ್ಯಾನ್ ಮಾಡಿ ನಿಮ್ಮ ಆರೋಗ್ಯ ಸಮಸ್ಯೆಯನ್ನು ಹೇಳಲಿದೆ.

 

Read Full Story

11:29 AM (IST) Feb 18

ಸತತ 2 ದಿನ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಇವತ್ತಿನ ರೇಟ್ ಏನಿದೆ? ಬೆಳ್ಳಿ ಬೆಲೆಯಲ್ಲಿ ಮತ್ತೆ ಕುಸಿತ!

ಬೆಂಗಳೂರು: ಮದುವೆ ಶುಭ ಸಮಾರಂಭಗಳು ಹತ್ತಿರವಾಗುತ್ತಿದ್ದಂತೆಯೆ ಕಳೆದೆರಡು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರವಾದ ಇಳಿಕೆ ಕಂಡಿತ್ತು. ಆದರೆ ಫೆಬ್ರವರಿ 18ರಂದು ಚಿನ್ನದ ಬೆಲೆ ಎಷ್ಟಿದೆ? ಬೆಳ್ಳಿ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ಎನ್ನುವುದನ್ನು ನೋಡೋಣ ಬನ್ನಿ.

 

Read Full Story

11:28 AM (IST) Feb 18

ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಬೀಳೋ ಭಯವಿಲ್ಲ, ಬ್ಯಾಲೆನ್ಸ್ ಬೇಕಿಲ್ಲ

ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಇದು ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್, ಸ್ಕೂಟರ್ ಬ್ಯಾಲೆನ್ಸ್ ಬೇಕಿಲ್ಲ, ಎಲ್ಲಿ ಬೀಳುತ್ತೆ ಅನ್ನೋ ಭಯವಿಲ್ಲ. ಟ್ರಾಫಿಕ್‌ನಲ್ಲಿ ಪದೇ ಪದೇ ಕಾಲು ಕೆಳಗಿಡಬೇಕಾದ ಅನಿವಾರ್ಯತೆ ಇಲ್ಲ.

 

Read Full Story

11:26 AM (IST) Feb 18

ಪೈಜಾಮದ ದಾರ ಎಳೆಯುವುದು ಅತ್ಯಾ*ಚಾರಕ್ಕೆ ಸಿದ್ಧತೆ ಎಂದ ಅಲಹಾಬಾದ್ ಹೈಕೋರ್ಟ್ - ಸುಪ್ರೀಂಕೋರ್ಟ್ ಹೇಳಿದ್ದೇನು?

ಮಹಿಳೆಯನ್ನು ಮುಟ್ಟುವುದು ಮತ್ತು ಆಕೆಯ ಪೈಜಾಮ ದಾರವನ್ನು ಬಿಚ್ಚುವುದು ಅತ್ಯಾ*ಚಾರಕ್ಕೆ ಪ್ರಯತ್ನ ಎಂದು ಸುಪ್ರೀಂ ಕೋರ್ಟ್  ತೀರ್ಪು ನೀಡಿದೆ ಮತ್ತು ಈ ಅಪರಾಧವನ್ನು  ಅತ್ಯಾಚಾರ ಮಾಡಲು ಸಿದ್ಧತೆ ಎಂದು ಕರೆದ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿದೆ.

Read Full Story

10:50 AM (IST) Feb 18

ಲೀವ್ ಇನ್ ರಿಲೇಶನ್‌ಶಿಪ್, ಒಪ್ಪಿಗೆಯ ದೈಹಿಕ ಸಂಪರ್ಕ ಕುರಿತು ಹೈಕೋರ್ಟ್ ಮಹತ್ವದ ಆದೇಶ

ಲೀವ್ ಇನ್ ರಿಲೇಶನ್‌ಶಿಪ್, ಒಪ್ಪಿಗೆಯ ದೈಹಿಕ ಸಂಪರ್ಕ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಗಂಡ ಹೆಂಡತಿಯಂತೆ ಇದ್ದು ಬಳಿಕ ಅತ್ಯಾ**ರ ಸೇರಿದಂತೆ ಇತರ ನಂಬಿಕೆ ದ್ರೋಹ ಆರೋಪ ಮಾಡುವ ದೂರುದಾರರಿಗೆ ಕೋರ್ಟ್ ಹೇಳಿದ್ದೇನು?

 

Read Full Story

10:25 AM (IST) Feb 18

'ಮೊದಲು ಒಂದು ಸಿಂಗಲ್ ತೆಗಿ, ಆಮೇಲೆ ಅಬ್ಬರಿಸು' ಟೀಂ ಇಂಡಿಯಾ ಯುವ ಓಪನರ್‌ಗೆ ಸನ್ನಿ ಕಿವಿಮಾತು

ಅಹಮದಾಬಾದ್: ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಾವಾಡುತ್ತಿರುವ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡು ಪಂದ್ಯ ಆಡಿದ್ದರೂ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೀಗ ಅಭಿಷೇಕ್ ಶರ್ಮಾಗೆ ಸುನಿಲ್ ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.

 

Read Full Story

09:48 AM (IST) Feb 18

ನಿಮಗೂ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಆಗ್ತಿಲ್ಲವೇ? ವಿಶ್ವದೆಲ್ಲೆಡೆ YouTube ಡೌನ್

ನಿಮಗೂ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಆಗ್ತಿಲ್ಲವೇ? ಬಳಕೆದಾರರು ಕ್ರಿಯೇಟರ್ಸ್ ಪರದಾಡಿದ್ದಾರೆ. ಇಂದು ಬೆಳಗ್ಗೆಯಿಂದ ಹಲೆವೆಡೆ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಸಾಧ್ಯಾವಾಗುತ್ತಿಲ್ಲ. ನೀವು ಈ ಸಮಸ್ಯೆ ಎದುರಿಸುತ್ತಿದ್ದೀರಾ? ಏನು ಮಾಡಬೇಕು?

 

Read Full Story

More Trending News