ನವದೆಹಲಿ: ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ವಿವಾಹಿತ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾ*ಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕಥೆ ಕರುಳು ಹಿಂಡುವಂತಿದೆ. ಘಟನೆಯಲ್ಲಿ ಗಂಬೀರ ಗಾಯಗೊಂಡಿದ್ದರೂ ಮಹಿಳೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡೋರು ಇಲ್ಲ ಎಂದು ಆಸ್ಪತ್ರೆ ಸೇರಲು ಹಿಂದೇಟು ಹಾಕಿದ್ದಾರೆ.
ಮಹಿಳೆ ದೂರಿನ ಬಳಿಕ ಪೊಲೀಸರು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆಗೆ ಗಂಭೀರ ಗಾಯಗಳಾಗಿರುವುದು ಗೊತ್ತಾಗಿದ್ದು, ವೈದ್ಯರು ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಿದ್ದಾರೆ. ಆದರೆ ಮಹಿಳೆ ಅದನ್ನು ನಿರಾಕರಿಸಿದ್ದು, ‘ನಾನು ಆಸ್ಪತ್ರೆ ಸೇರಿದ್ರೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡೋದ್ಯಾರು?’ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಆಕೆ ಪತಿ ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.
10:50 PM (IST) May 16
ಗುಜರಾತ್‌ನ ಮೋರ್ಬಿಯಲ್ಲಿ, ಕೇವಲ ₹2,000 ಮನೆ ಬಾಡಿಗೆ ಪಾವತಿಸಲಾಗದ ಪತಿಯೊಬ್ಬನು, ತನ್ನ ಹೆಂಡತಿ ಮತ್ತು ಅಪ್ರಾಪ್ತ ಮಗಳನ್ನು ಮನೆ ಮಾಲೀಕನ ಲೈಂಗಿಕ ದೌರ್ಜನ್ಯಕ್ಕೆ ಒಪ್ಪಿಸಿದ್ದಾನೆ. ಈ ಘೋರ ಕೃತ್ಯವು ಬಾಲಕಿಯ ತಾತ ನೀಡಿದ ದೂರಿನಿಂದ ಬೆಳಕಿಗೆ ಬಂದಿದೆ.
10:15 PM (IST) May 16
ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ನಿರ್ದಿಷ್ಟ ವರ್ಗದ ಬೆಳ್ಳಿ ಬಾರ್‌ಗಳ ಆಮದಿನ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇದರೊಂದಿಗೆ, 'ಅಡ್ವಾನ್ಸ್ ಅಥರೈಸೇಷನ್' ಯೋಜನೆಯಡಿ ಚಿನ್ನದ ಆಮದಿಗೆ 100 ಕೆಜಿ ಮಿತಿ ನಿಗದಿಪಡಿಸಿದೆ.
09:39 PM (IST) May 16
ಎಐಎಡಿಎಂಕೆ ಪಕ್ಷದಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ಸಿವಿ ಷಣ್ಮುಗಂ ಬಣಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ವಿಲ್ಲುಪುರಂ, ಕಡಲೂರು ಮುಂತಾದೆಡೆ ಪಕ್ಷದ ಕಚೇರಿಗಳ ನಿಯಂತ್ರಣಕ್ಕಾಗಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ. ಈ ಒಳಜಗಳವು ವಿಧಾನಸಭಾ ಚುನಾವಣೆಯ ನಂತರ ತೀವ್ರಗೊಂಡಿದೆ.
09:37 PM (IST) May 16
ಒಟ್ಟಿನಲ್ಲಿ, 'ಜಯಂ' ರವಿ ಅವರ ಜೀವನ ಈಗ ದೊಡ್ಡ ಸಂಕಷ್ಟದ ಸುಳಿಯಲ್ಲಿದೆ. ಸಮಾಜದ ಮುಂದೆ ಸದಾ ನಗುತ್ತಾ ಕಾಣಿಸಿಕೊಳ್ಳುವ ನಟನ ಹಿಂದಿರುವ ಈ ಕರಾಳ ನೋವು ಕಂಡು ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಮುಂದೆ ಇದು ಎಲ್ಲಿಗೆ ನಿಲ್ಲುತ್ತೋ ಅಥವಾ ಎಲ್ಲಿಗೆ ಹೋಗುತ್ತೋ? ಕಾಲವೇ ಹೇಳ್ಬೇಕು..
09:34 PM (IST) May 16
ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್, ಅಪ್ರಾಪ್ತೆಯ ಮೇಲಿನ ಪೋಕ್ಸೋ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಲುಕ್-ಔಟ್ ಸರ್ಕ್ಯುಲರ್ ಜಾರಿ ಮತ್ತು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ನಿರಾಕರಣೆಯ ನಂತರ ಈ ಬೆಳವಣಿಗೆ ನಡೆದಿದೆ.
09:19 PM (IST) May 16
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 2026 ರಿಂದ 9ನೇ ತರಗತಿಗೆ ಮೂರು ಭಾಷೆಗಳ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಈ ನಿಯಮದಂತೆ, ವಿದ್ಯಾರ್ಥಿಗಳು ಕಲಿಯುವ ಮೂರು ಭಾಷೆಗಳಲ್ಲಿ ಎರಡು ಭಾರತೀಯ ಭಾಷೆಗಳಾಗಿರಬೇಕು ಎಂದಿದೆ.
08:43 PM (IST) May 16
ನಟ ರಾಮ್ ಪೋತಿನೇನಿ ಇದೀಗ ನಿರ್ದೇಶಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಅವರು ನಾಯಕರಾಗಿ ನಟಿಸಲಿರುವ ತಮ್ಮ 23ನೇ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ 'ರಾಪೋ23' ಎಂದು ಹೆಸರಿಡಲಾಗಿದೆ.
08:24 PM (IST) May 16
ಉತ್ತರ ಪ್ರದೇಶದ ಸಂಭಲ್‌ನಲ್ಲಿ, ಮಹಿಳೆಯೊಬ್ಬರು ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಮೊದಲ ಮಗು ಜನಿಸಿದ ಐದು ದಿನಗಳ ನಂತರ ಮತ್ತೆ ಮೂರು ಮಕ್ಕಳು ಜನಿಸಿದ್ದು, ಈ ವೈದ್ಯಕೀಯ ವಿಸ್ಮಯವು ವೈದ್ಯರನ್ನು ಅಚ್ಚರಿಗೊಳಿಸಿದೆ.
08:16 PM (IST) May 16
ನಟ ಕೃಷ್ಣಕುಮಾರ್ ಅವರು ತಮ್ಮ ಮಗಳು ಅಹಾನಾ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದರು. ಇದರಿಂದಾಗಿ ಆಗಸ್ಟ್‌ನಲ್ಲೇ ಮದುವೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ, ಅಪ್ಪ ಹೇಳಿದ್ದು ಭವಿಷ್ಯದ ಬಗ್ಗೆ, ಸದ್ಯಕ್ಕೆ ಮದುವೆ ಇಲ್ಲ ಎಂದು ಅಹಾನಾ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.
08:01 PM (IST) May 16
ಪತ್ನಿ ಆರತಿ ಜೊತೆಗಿನ ವೈವಾಹಿಕ ಸಮಸ್ಯೆಯಿಂದಾಗಿ ನಟ ರವಿ ಮೋಹನ್ ಅವರು ಸದ್ಯಕ್ಕೆ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, 'ಇಡ್ಲಿ ನಟಿ' ಎಂದು ಉಲ್ಲೇಖಿಸಿ, ಓರ್ವ ನಟಿ ತನ್ನ ಕುಟುಂಬವನ್ನು ಒಡೆಯಲು ಪ್ರಯತ್ನಿಸಿದಳು ಎಂದು ಭಾವನಾತ್ಮಕವಾಗಿ ಆರೋಪಿಸಿದ್ದಾರೆ.
07:31 PM (IST) May 16
ಉದ್ಯಮಿ ಆನಂದ್ ಮಹೀಂದ್ರಾ ಅವರು ಕೊಡಗಿನಲ್ಲಿರುವ ತಮ್ಮ ಕೌಟುಂಬಿಕ ಕಾಫಿ ಎಸ್ಟೇಟ್‌ಗೆ ಆನೆಗಳ ಹಿಂಡು ಲಗ್ಗೆ ಇಟ್ಟಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ದಶಕಗಳಿಂದ ನಡೆದುಕೊಂಡು ಬಂದಿದ್ದು, ಕಾಡಿನ ಅತಿಕ್ರಮಣದ ಪರಿಣಾಮವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
07:31 PM (IST) May 16
ಬೆಂಗಳೂರಿನ ವೃತ್ತಿಪರ ಮಹಿಳೆಯೊಬ್ಬರು ಅಮೆರಿಕ ಮತ್ತು ಭಾರತದ ಕೆಲಸದ ಸಂಸ್ಕೃತಿಯ ವ್ಯತ್ಯಾಸವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಪದ್ಧತಿ ಮತ್ತು ಭಾರತದಲ್ಲಿನ ದೀರ್ಘಾವಧಿಯ ಕೆಲಸದ ನಡುವಿನ ಅಂತರವನ್ನು ಅವರು ಎತ್ತಿ ತೋರಿಸಿದೆ.
07:20 PM (IST) May 16
ದಕ್ಷಿಣ ಭಾರತದ ‘ನ್ಯಾಚುರಲ್ ಬ್ಯೂಟಿ’ ಸಾಯಿ ಪಲ್ಲವಿ ಬಗ್ಗೆ ಈಗ ಕೇಳಿ ಬರುತ್ತಿರುವ ಹೊಸ ಸುದ್ದಿಯೊಂದು ಅವರ ಅಭಿಮಾನಿಗಳಿಗೆ ತುಸು ನಿರಾಸೆ ಮೂಡಿಸಿದೆ. ಚಿತ್ರತಂಡ ಸಾಯಿ ಪಲ್ಲವಿ ಅವರ ವಿಷಯದಲ್ಲಿ ಒಂದು ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾತುಗಳು ಬಿ-ಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿವೆ. ಏನದು..?
07:04 PM (IST) May 16
ಒಂದು ಕಾರ್ಯಕ್ರಮದಲ್ಲಿ ತಮಿಳು ಪತ್ರಕರ್ತರೊಬ್ಬರು ಕೇಳಿದ ಅಸಹ್ಯಕರ ಪ್ರಶ್ನೆಯಿಂದ ನಟಿ ಮಾಳವಿಕಾ ಮೋಹನನ್ ಗರಂ ಆಗಿದ್ದಾರೆ. ಇದು ತುಂಬಾನೇ ಅಸಹ್ಯವಾದ ಪ್ರಶ್ನೆ, ಮಾಧ್ಯಮದವರು ಸ್ವಲ್ಪವಾದರೂ ಘನತೆ ಕಾಪಾಡಿಕೊಳ್ಳಬೇಕು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
06:43 PM (IST) May 16
ನಟ ಅಜಿತ್ ಸಿನಿಮಾ ಹೀರೋ ಮಾತ್ರವೇ ಅಲ್ಲ, ತಮಿಳರ ಪಾಲಿಗೆ ಅವರು ರಿಯಲ್ ಲೈಫ್ ಹೀರೊ ಕೂಡ. ಯಾಕಂದ್ರೆ ಸಿಂಪ್ಲಿಸಿಟಿಗೆ ಅಜಿತ್ ಬ್ರ್ಯಾಂಡ್ ಅಂಬಾಸೀಡರ್. ಕಾರ್ ರೇಸಿಂಗ್, ಬೈಕ್ ಸವಾರಿ ಎಂದರೆ ಅಜಿತ್‌ಗೆ ಪ್ರಾಣ.. ಸಿಕ್ಕ ಸುದ್ದಿಯ ಪ್ರಕಾರ, ವಿಜಯ್ ವಿರುದ್ಧ ಯುದ್ಧ ಮಾಡ್ತಾರೆ ನಟ ತಲಾ ಅಜಿತ್..
06:41 PM (IST) May 16
06:19 PM (IST) May 16
ಟಾಲಿವುಡ್‌ನ ಯುವ ನಟಿ ಅನನ್ಯ ನಾಗಳ್ಳ ಅವರು ತಮ್ಮ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು ಸಿನಿಮಾಗಳೆಂದರೆ ಇಷ್ಟವಂತೆ, ಆದರೆ ತಮ್ಮ ಕ್ರಶ್ ಮಾತ್ರ ಒಬ್ಬ ಫ್ಲಾಪ್ ಹೀರೋ ಮೇಲಂತೆ. ಹಾಗಾದ್ರೆ ಆ ನಟ ಯಾರು?
06:12 PM (IST) May 16
ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ಮೂರನೇ ಮಗುವಿಗೆ ₹30,000 ಮತ್ತು ನಾಲ್ಕನೇ ಮಗುವಿಗೆ ₹40,000 ಆರ್ಥಿಕ ಪ್ರೋತ್ಸಾಹ ಧನ ನೀಡಲಾಗುವುದು ಎಂದಿದ್ದಾರೆ.
05:03 PM (IST) May 16
ಚೋಳರ ಕಾಲದ 'ಆನೈಮಂಗಲಂ ತಾಮ್ರಶಾಸನಗಳು' ಒಂದು ಶತಮಾನದ ನಂತರ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ಅಧಿಕೃತವಾಗಿ ಮರಳಿವೆ. ರಾಜರಾಜ ಚೋಳ I ರ ಕಾಲದ ಈ ಶಾಸನಗಳು, ನಾಗಪಟ್ಟಣಂನ ಬೌದ್ಧ ವಿಹಾರಕ್ಕೆ ನೀಡಿದ ದಾನವನ್ನು ದಾಖಲಿಸಿದೆ.
04:49 PM (IST) May 16
ನನ್ನ ಮಗಳಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತೇನೆ. ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್ ಮಾಡಲಿ. ಡೇಟಿಂಗ್ ಮಾಡುವಾಗ ಮುಂದೇನಾಗುತ್ತೋ ಎಂಬ ಆತಂಕ ಅವಳಿಗೆ ಇರಬಾರದು ಎಂದರು ನಟಿ ಕಿಯಾರಾ ಅಡ್ವಾಣಿ.
04:16 PM (IST) May 16
ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಮುಂದುವರಿಸಿದರೆ, ಪಾಕಿಸ್ತಾನವು ಭೂಪಟದಲ್ಲಿ ಉಳಿಯಬೇಕೇ ಅಥವಾ ಇತಿಹಾಸ ಸೇರಬೇಕೇ ಎಂದು ನಿರ್ಧರಿಸಬೇಕಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
03:12 PM (IST) May 16
ಮಹತ್ವಾಕಾಂಕ್ಷಿ ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ ಇಂದು ನೆದರ್ಲೆಂಡ್‌ನ ಭಾರತೀಯ ಸಮುದಾಯದ ಜೊತೆ ಮಾತನಾಡಿದ್ದಾರೆ. ಈ ವೇಳೆ ಬಂಗಾಳ ಚುನಾವಣೆಯಲ್ಲಿ ಜಲ್ಮುರಿ ನೆದರ್ಲೆಂಡ್‌ನಲ್ಲೂ ಸದ್ದು ಮಾಡಿದೆ.
03:08 PM (IST) May 16
ಬದುಕಿನ ಕರಾಳ ಪುಟಗಳನ್ನು ಸೀಳಿ ಫೀನಿಕ್ಸ್‌ನಂತೆ ಎದ್ದು ಬಂದ ಶಗುಫ್ತಾ ಅವರ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆ. ಕಷ್ಟಗಳು ಮನುಷ್ಯನನ್ನು ಕುಗ್ಗಿಸಬಾರದು, ಬದಲಿಗೆ ಕಥೆಯಾಗಿ ಬದಲಾಗಬೇಕು ಎಂಬುದಕ್ಕೆ ಇವರೇ ಸಾಕ್ಷಿ. ಈ ಕಥೆ ಹಲವರಿಗೆ ಸ್ಪೂರ್ತಿಯ ಸೆಲೆ ಆಗಬಹುದು, ನೋಡಿ..
02:36 PM (IST) May 16
ಐಪಿಎಲ್ ಟೂರ್ನಿಯಲ್ಲಿ ವ್ಯವಸ್ಥಿತವಾಗಿ ಟಿಕೆಟ್ ಕಳ್ಳಾಟ ನಡೆಯುತ್ತಿರುವುದು ಇದೀಗ ಬಯಲಾಗಿದೆ. ಡಿಸಿ ಹಾಗೂ ಆರ್‌ಸಿಬಿ ಪಂದ್ಯದ ಟಿಕೆಟ್‌ನ್ನು ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರೇ 80 ಸಾವಿರ ರೂಗೆ ಮಾರಾಟ ಮಾಡುತ್ತಿರುವುದು ಬಯಲಾಗಿದೆ.
01:28 PM (IST) May 16
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನಂತರ ದೇಶದ ಹಲವೆಡೆ ವಿದ್ಯಾರ್ಥಿಗಳು ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದು, ಇದನ್ನು 'ವ್ಯವಸ್ಥೆಯ ಕೊಲೆ' ಎಂದು ಕರೆದಿರುವ ರಾಹುಲ್ ಗಾಂಧಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ರದ್ದು, ಮರುಪರೀಕ್ಷೆ ಘೋಷಣೆ .
01:03 PM (IST) May 16
01:02 PM (IST) May 16
ವಿವಾಧಿತ ಭೋಜಶಾಲ ಸಂಕೀರ್ಣ ವಾಗ್ದೇವಿ ಸರಸ್ವತಿ ದೇವಸ್ಥಾನ ಎಂದು ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ದ ಮುಸ್ಲಿಮಂ ಮುಖಂಡರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೂ ಮೊದಲೇ ಹಿಂದೂಗಳು ಸುಪ್ರೀಂ ಕದ ತಟ್ಟಿದ್ದೇಕೆ?
12:38 PM (IST) May 16
12:20 PM (IST) May 16
ಪುಟ್ಟ ಮಗು 300 ಅಡಿ ಆಳದ ಬೋರ್‌ವೆಲ್ ಬಿದ್ದ ಪರಿಣಾಮ ರಕ್ಷಣಾ ತಂಡಗಳು ಸತತ 10 ಗಂಟೆ ರಕ್ಷಣಾ ಕಾರ್ಯಾಚರಣೆ ನಡೆಸಿ ಮಗು ರಕ್ಷಿಸಿದೆ. ಮಗುವನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕಾರ್ಯಾಚರಣೆ ಹಾಗೂ ರಕ್ಷಣೆ ವಿಡಿಯೋ ಇಲ್ಲಿದೆ.
12:03 PM (IST) May 16
ಈಗ ತ್ರಿಶಾ ಈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್ ಮತ್ತು ಸ್ಟಾಲಿನ್ ನಡುವೆ ರಾಜಕೀಯ ಸಮರ ನಡೆಯುತ್ತಿರುವಾಗ, ತ್ರಿಶಾ ಅವರು ವಿಜಯ್ ವಿರೋಧಿ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿರುವುದು 'ಇದು ಜಸ್ಟ್ ಕೆಲಸೋ ಅಥವಾ ಸ್ನೇಹದಲ್ಲಿ ಬಿರುಕೇ?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
11:53 AM (IST) May 16
10:51 AM (IST) May 16
ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ಬೆನ್ನಲ್ಲೇ ಒಂದೊಂದೆ ವಲಯದ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ. ಗಿಗ್ ಕಾರ್ಮಿಕರು ಇಂದು ಮುಷ್ಕರ ಘೋಷಿಸಿದ್ದಾರೆ. ಇಂದು ಎಷ್ಟು ಗಂಟೆಗಳ ಕಾಲ ಆನ್‌ಲೈನ್ ಡೆಲಿವರಿ ಇರುವುದಿಲ್ಲ?
10:01 AM (IST) May 16
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಹವಾಮಾನ ಇಲಾಖೆ ಮೇ.26ಕ್ಕೆ ನೈಖುತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದಿದೆ. ಇಲ್ಲಿಂದ ಮಳೆಗಾಲ ಆರಂಭಗೊಳ್ಳಲಿದೆ. ಆದರೆ ಎಲ್ ನಿನೋ ಎಚ್ಚರಿಕೆ ನೀಡಲಾಗಿದೆ.