LIVE NOW
Published : Jan 14, 2026, 06:53 AM ISTUpdated : Jan 14, 2026, 10:52 AM IST

India Latest News Live: ವಿರಾಟ್ ಕೊಹ್ಲಿ ನಿಜಕ್ಕೂ ಅಹಂಕಾರಿನಾ? ಕೊನೆಗೂ ಸತ್ಯ ಬಾಯ್ಬಿಟ್ಟ ಟೀಂ ಇಂಡಿಯಾ ಮಾಜಿ ನಾಯಕ!

ಸಾರಾಂಶ

ರುದ್ರಪುರ: ಬೇಸಿಗೆ ವೇಳೆ ಅಂತರ್ಜಲ ಕುಸಿವ ಭೀತಿಯಿಂದ ಉತ್ತರಾಖಂಡದ ಉದಂಸಿಂಗ್‌ ನಗರ ಜಿಲ್ಲೆಯ ತೆರೈ ಪ್ರಾಂತ್ಯದಲ್ಲಿ ಬೇಸಿಗೆ ಭತ್ತ ಕೃಷಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬದಲಿಗೆ ಮೆಕ್ಕೆಜೋಳ ಕೃಷಿಗೆ ಒತ್ತು ನೀಡಲಾಗಿದೆ. 1 ಕೇಜಿ ಭತ್ತ ಬೆಳೆಯಲು ಸುಮಾರು 5,000 ಲೀಟರ್‌ ನೀರು ಬೇಕಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವದ ವೇಳೆ ಈ ಕೃಷಿ ಅಂತರ್ಜಲಕ್ಕೆ ಕುತ್ತು ತರುತ್ತದೆ. ಜೊತೆಗೆ ಭತ್ತವು ಹೆಚ್ಚು ಕೀಟ, ರೋಗಗಳನ್ನು ಆಕರ್ಷಿಸುವುದರಿಂದ ರೈತರಿಗೆ ಅಧಿಕ ಖರ್ಚು ತಗುಲುತ್ತದೆ. ಹೀಗಾಗಿ ಭತ್ತದ ಬದಲಿಗೆ ಮೆಕ್ಕೆಜೋಳಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಇದರಿಂದಾಗಿ 5000 ಲಕ್ಷ ಲೀಟರ್‌ ಅಂತರ್ಜಲ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

Virat Kohli - Ajinkya Rahane

10:52 AM (IST) Jan 14

ವಿರಾಟ್ ಕೊಹ್ಲಿ ನಿಜಕ್ಕೂ ಅಹಂಕಾರಿನಾ? ಕೊನೆಗೂ ಸತ್ಯ ಬಾಯ್ಬಿಟ್ಟ ಟೀಂ ಇಂಡಿಯಾ ಮಾಜಿ ನಾಯಕ!

ರಾಜ್‌ಕೋಟ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇದೀಗ ಕೊಹ್ಲಿಯ ಬಗ್ಗೆ ಮಾಜಿ ನಾಯಕ ಅಜಿಂಕ್ಯ ರಹಾನೆ ಮನಬಿಚ್ಚಿ ಮಾತನಾಡಿದ್ದಾರೆ.

 

Read Full Story

09:41 AM (IST) Jan 14

ಬೆಂಗಳೂರು ಫ್ಯಾನ್ಸ್‌ಗೆ ಬಿಗ್ ಶಾಕ್ - ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಆರ್‌ಸಿಬಿಯೇ ಹಿಂದೇಟು?

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಭರದ ಸಿದ್ದತೆಗಳು ಶುರುವಾಗಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಆರ್‌ಸಿಬಿ ಹಿಂದೇಟು ಹಾಕುತ್ತಿದೆ ಎಂದು ವರದಿಯಾಗಿದೆ.

 

Read Full Story

08:58 AM (IST) Jan 14

ಬೀದಿಗೆ ಬಿದ್ದ ಬಾಕ್ಸರ್‌ ಮೇರಿ ಕೋಮ್‌ ದಾಂಪತ್ಯ ಕಲಹ; ಆಕೆಗೆ ಆ ಇಬ್ಬರ ಜತೆ ಅಕ್ರಮ ಸಂಬಂಧವಿತ್ತು ಎಂದ ಮಾಜಿ ಪತಿ!

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಕುರಿತಂತೆ ಅವರ ಮಾಜಿ ಪತಿ ಕರುಂಗ್‌ ಒನ್ಲರ್‌ ಕೆಲವೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾದ ಹೊಸ ಅಪ್‌ಡೇಟ್ಸ್ ಇಲ್ಲಿದೆ ನೋಡಿ

 

Read Full Story

08:23 AM (IST) Jan 14

ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು, ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಮೂಲಕ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ ಇದು ಉಲ್ಲಂಘನೆಯಾಗಿದೆ.  

Read Full Story

More Trending News