MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವಿರಾಟ್ ಕೊಹ್ಲಿ ನಿಜಕ್ಕೂ ಅಹಂಕಾರಿನಾ? ಕೊನೆಗೂ ಸತ್ಯ ಬಾಯ್ಬಿಟ್ಟ ಟೀಂ ಇಂಡಿಯಾ ಮಾಜಿ ನಾಯಕ!

ವಿರಾಟ್ ಕೊಹ್ಲಿ ನಿಜಕ್ಕೂ ಅಹಂಕಾರಿನಾ? ಕೊನೆಗೂ ಸತ್ಯ ಬಾಯ್ಬಿಟ್ಟ ಟೀಂ ಇಂಡಿಯಾ ಮಾಜಿ ನಾಯಕ!

ರಾಜ್‌ಕೋಟ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇದೀಗ ಕೊಹ್ಲಿಯ ಬಗ್ಗೆ ಮಾಜಿ ನಾಯಕ ಅಜಿಂಕ್ಯ ರಹಾನೆ ಮನಬಿಚ್ಚಿ ಮಾತನಾಡಿದ್ದಾರೆ. 

2 Min read
Author : Naveen Kodase
Published : Jan 14 2026, 10:52 AM IST
Share this Photo Gallery
  • FB
  • TW
  • Linkdin
  • Whatsapp
19
ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ
Image Credit : BCCI

ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ 93 ರನ್ ಸಿಡಿಸುವ ಮೂಲಕ ಹೊಸ ವರ್ಷದ ಮೊದಲ ಪಂದ್ಯದಲ್ಲೇ ತಮ್ಮ ಮಿಂಚಿನ ಆಟವನ್ನು ಮುಂದುವರೆಸಿದ್ದಾರೆ.

29
ಕೊಹ್ಲಿಗೆ ವಿಪರೀತ ಸೊಕ್ಕಿದೆ ಎನ್ನುವ ಅಪವಾದ
Image Credit : AFP

ಕೊಹ್ಲಿಗೆ ವಿಪರೀತ ಸೊಕ್ಕಿದೆ ಎನ್ನುವ ಅಪವಾದ

ಇನ್ನು ಮೈದಾನದೊಳಗೆ ಸದಾ ಆಕ್ರಮಣಾಕಾರಿ ಮನೋಭಾವ ಹೊಂದಿರುವ ವಿರಾಟ್ ಕೊಹ್ಲಿಗೆ ವಿಪರೀತ ಸೊಕ್ಕು ಇದೆ ಎನ್ನುವ ಆರೋಪ ಆಗಾಗ ಅವರ ಮೇಲೆ ಕೇಳಿ ಬರುತ್ತಲೇ ಇರುತ್ತದೆ.

Related Articles

Related image1
ಕಿವೀಸ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರೋ ವಿಶ್ವದಾಖಲೆ ಮುರೀತಾರಾ ವಿರಾಟ್ ಕೊಹ್ಲಿ?
Related image2
ಕಿವೀಸ್ ಎದುರಿನ 2ನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಮೇಜರ್ ಚೇಂಜ್? ಸುಂದರ್ ಬದಲಿಗೆ ಯಾರಿಗೆ ಸಿಗುತ್ತೆ ಚಾನ್ಸ್?
39
ಕೊಹ್ಲಿ ಸಹ ಆಟಗಾರ ರಹಾನೆ ಮಾತು
Image Credit : Getty

ಕೊಹ್ಲಿ ಸಹ ಆಟಗಾರ ರಹಾನೆ ಮಾತು

ಈ ವಿಚಾರವಾಗಿ ವಿರಾಟ್ ಕೊಹ್ಲಿಯ ಸ್ನೇಹಿತ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಅಜಿಂಕ್ಯ ರಹಾನೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಂದಹಾಗೆ ಅಜಿಂಕ್ಯ ರಹಾನೆ ತಮ್ಮ ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ವಿರಾಟ್ ಕೊಹ್ಲಿ ಜತೆಗೆ ಆಡಿದ್ದಾರೆ.

49
ಕೊಹ್ಲಿ ಬಗ್ಗೆ ತುಟಿಬಿಚ್ಚಿದ ರಹಾನೆ
Image Credit : Instagram

ಕೊಹ್ಲಿ ಬಗ್ಗೆ ತುಟಿಬಿಚ್ಚಿದ ರಹಾನೆ

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಚರ್ಚೆಯಾಗುವ ಕೊಹ್ಲಿಯ ಅಹಂಕಾರದ ಕುರಿತಂತೆ ಮುಂಬೈ ಮೂಲದ ರಹಾನೆ ಮೊದಲ ಬಾರಿಗೆ ಬಹಿರಂಗವಾಗಿಯೇ ಸ್ಪಷ್ಟನೆ ನೀಡಿದ್ದಾರೆ.

59
ಕೊಹ್ಲಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ
Image Credit : Getty

ಕೊಹ್ಲಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ

ಕ್ರಿಕ್‌ಬಜ್ ಜತೆಗಿನ ಮಾತುಕತೆಯ ವೇಳೆ ರಹಾನೆ, 'ವಿರಾಟ್ ಕೊಹ್ಲಿಯ ಬಗ್ಗೆ ನಾವು ಎಷ್ಟು ಮಾತನಾಡಿದರೂ ಕಡಿಮೆಯೇ. ಯಾಕೆಂದರೆ ನಾನು ವಿರಾಟ್ ಕೊಹ್ಲಿಯನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ' ಎಂದಿದ್ದಾರೆ.

69
ಕೊಹ್ಲಿಯ ಗುಣಗಾನ ಮಾಡಿದ ರಹಾನೆ
Image Credit : Getty

ಕೊಹ್ಲಿಯ ಗುಣಗಾನ ಮಾಡಿದ ರಹಾನೆ

'ಅವರು ಬ್ಯಾಟಿಂಗ್ ಮಾಡಲು ಇಳಿದಾಗ ನಾವು ಅವರ ಕ್ರಿಕೆಟ್ ಫ್ಯಾಷನ್ ಹಾಗೂ ಪಂದ್ಯ ಗೆಲ್ಲಿಸಬೇಕೆಂಬ ತುಡಿತವನ್ನು ಪ್ರತಿ ಬಾರಿಯು ನೋಡುತ್ತೇವೆ. ಆದರೆ ನನಗೆ ಅವರ ಆ್ಯಟಿಟ್ಯೂಡ್ ಇವೆಲ್ಲದಕ್ಕಿಂತ ಅದ್ಭುತ ಎಂದೆನಿಸುತ್ತದೆ' ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

79
ಕೊಹ್ಲಿಯ ಆ್ಯಟಿಟ್ಯೂಡ್ ಕೊಂಡಾಡಿದ ಅಜಿಂಕ್ಯ
Image Credit : Getty

ಕೊಹ್ಲಿಯ ಆ್ಯಟಿಟ್ಯೂಡ್ ಕೊಂಡಾಡಿದ ಅಜಿಂಕ್ಯ

'ಕಲಿಯಬೇಕೆಂಬ ಆ್ಯಟಿಟ್ಯೂಡ್, ಕೊನೆಯ ಕ್ಷಣದವರೆಗೂ ಹೋರಾಡಬೇಕು ಎನ್ನುವ ಆ್ಯಟಿಟ್ಯೂಡ್‌ಗೆ ಸಾಟಿಯೇ ಇಲ್ಲ. ಜನರು ಕೊಹ್ಲಿಯನ್ನು ಅಹಂಕಾರಿ ಎನ್ನಬಹುದು. ಆದರೆ ಆತ ಹಾಗಿಲ್ಲ' ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

89
ಕೊಹ್ಲಿ ಸಿದ್ದತೆ ಬಗ್ಗೆ ಮಾತಾಡಿದ ರಹಾನೆ
Image Credit : Getty

ಕೊಹ್ಲಿ ಸಿದ್ದತೆ ಬಗ್ಗೆ ಮಾತಾಡಿದ ರಹಾನೆ

ಅವರು ಮಹತ್ವದ ಪಂದ್ಯಕ್ಕೂ ಎರಡು ದಿನಗಳ ಮೊದಲಿನಿಂದಲೇ ಜನರ ಜತೆ ಹಾಗೂ ಸಹ ಆಟಗಾರರ ಜತೆ ಹೆಚ್ಚು ಮಾತನಾಡುವುದಿಲ್ಲ. ಇದಕ್ಕೇ ಅಹಂ ಅಂದುಕೊಂಡರೆ ಅದು ತಪ್ಪಾಗುತ್ತದೆ. ಅದು ಅವರ ಸಿದ್ದತೆಯ ಭಾಗ ಎಂದು ಅಜಿಂಕ್ಯ ರಹಾನೆ ಸ್ಪಷ್ಟನೆ ನೀಡಿದ್ದಾರೆ. 

99
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಗರಿಷ್ಠ ರನ್ ಸಾಧಕ ಕೊಹ್ಲಿ
Image Credit : AFP + Getty

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಗರಿಷ್ಠ ರನ್ ಸಾಧಕ ಕೊಹ್ಲಿ

2008ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 28,068 ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ
ನ್ಯೂಜಿಲೆಂಡ್

Latest Videos
Recommended Stories
Recommended image1
ಬೆಂಗಳೂರು ಫ್ಯಾನ್ಸ್‌ಗೆ ಬಿಗ್ ಶಾಕ್: ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಆರ್‌ಸಿಬಿಯೇ ಹಿಂದೇಟು?
Recommended image2
ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!
Recommended image3
ಇದೇ ನನ್ನ ಮೊದಲ ಬ್ಯಾಟ್‌, ತೆಂಗಿನ ಹೆಡೆಯನ್ನು ವೇದಿಕೆಗೆ ತಂದು ತೋರಿಸಿದ ಟೀಮ್‌ ಇಂಡಿಯಾ ಬ್ಯಾಟರ್‌!
Related Stories
Recommended image1
ಕಿವೀಸ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರೋ ವಿಶ್ವದಾಖಲೆ ಮುರೀತಾರಾ ವಿರಾಟ್ ಕೊಹ್ಲಿ?
Recommended image2
ಕಿವೀಸ್ ಎದುರಿನ 2ನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಮೇಜರ್ ಚೇಂಜ್? ಸುಂದರ್ ಬದಲಿಗೆ ಯಾರಿಗೆ ಸಿಗುತ್ತೆ ಚಾನ್ಸ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved