ತೂಕ ಹೆಚ್ಚಾದ್ರೆ ಮಾತ್ರವಲ್ಲ, ದೇಹದಲ್ಲಿ ಈ ಬದಲಾವಣೆಯಾದ್ರೂ ಸಕ್ಕರೆ ಹೆಚ್ಚಾಗಿದೆ ಎಂದರ್ಥ!

By Roopa Hegde  |  First Published Jul 9, 2024, 1:28 PM IST

ನಾವು ತಿನ್ನುವ ಅನ್ನ, ಹಣ್ಣು ಸೇರಿದಂತೆ ನಿತ್ಯ ಸೇವನೆ ಮಾಡುವ ಪದಾರ್ಥದಲ್ಲಿ ಸಾಕಷ್ಟು ಸಕ್ಕರೆ ಇರುತ್ತದೆ. ಅದ್ರ ಜೊತೆ ನಾವು ಹೆಚ್ಚುವರಿ ಸಕ್ಕರೆ ತಿಂದಾಗ ಸಮಸ್ಯೆ ಶುರುವಾಗುತ್ತದೆ. ಕೆಲ ನಾರ್ಮಲ್ ಲಕ್ಷಣಗಳೇ ನಮಗೆ ಇದ್ರ ಮುನ್ಸೂಚನೆ ನೀಡುತ್ತವೆ. 
 


ಅತಿಯಾದ ಸಕ್ಕರೆ ಆರೋಗ್ಯಕ್ಕೆ ಹಾನಿಕರ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಸಕ್ಕರೆಯನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದಾಗ ನಾನಾ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ತೂಕ ಏರಿಕೆ, ಮಧುಮೇಹದ ಅಪಾಯ ಹೆಚ್ಚು ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದಿದೆ. ನೀವು ಹೆಚ್ಚು ಪ್ರಮಾಣದಲ್ಲಿ ಸಕ್ಕರೆಯನ್ನು ಸೇವನೆ ಮಾಡುತ್ತಿದ್ದೀರಿ ಎಂಬುದು ತೂಕ ಹೆಚ್ಚಳ, ಮಧುಮೇಹದಿಂದ ಮಾತ್ರವಲ್ಲ ಇನ್ನೂ ಕೆಲ ಲಕ್ಷಣಗಳಿಂದ ನೀವು ಪತ್ತೆ ಮಾಡಬಹುದು.

ಡಾಕ್ಟರ್ ಕಿಚನ್ ಇನ್ಸ್ಟಾಗ್ರಾಮ್ (Instagram) ನಲ್ಲಿ ಡಾಕ್ಟರ್ ರೂಪಿ ಚಾವ್ಲಾ ಅವರು, ಸಕ್ಕರೆ (Sugar)  ಹೆಚ್ಚು ಸೇವನೆ ಮಾಡ್ತಿದ್ದೀರಿ ಎಂಬುದನ್ನು ಹೇಗೆ ಪತ್ತೆ ಮಾಡೋದು ಎಂಬುದನ್ನು ಹೇಳಿದ್ದಾರೆ. ಐದು ಚಿಹ್ನೆಗಳು ನೀವು ಸಕ್ಕರೆಯನ್ನು ಹೆಚ್ಚು ಸೇವನೆ ಮಾಡುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ ಎಂದು ರೂಪಾ ಚಾವ್ಲಾ ಹೇಳಿದ್ದಾರೆ. 

Latest Videos

undefined

Kissing ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ! ಏನಿದು ಹೊಸ ಕಾಯಿಲೆ, ಲಕ್ಷಣಗಳೇನು?

ಸಕ್ಕರೆ ಹೆಚ್ಚು ಸೇವನೆ ಮಾಡಿದ್ರೆ ಕಾಡುತ್ತೆ ಈ ಎಲ್ಲ ಸಮಸ್ಯೆ : 

ಕ್ರಾನಿಕ್ ಸೈನಸ್ – ಅಲರ್ಜಿ : ಆಹಾರದ ಜೊತೆ ಹೆಚ್ಚುವರಿ ಸಕ್ಕರೆ ಸೇವನೆ ಮಾಡುವ ಜನರಿದ್ದಾರೆ. ಸಾಮಾನ್ಯವಾಗಿ ಈ ಸಕ್ಕರೆ ನಮ್ಮ ದೇಹದಲ್ಲಿ ಹೆಚ್ಚಾಗಿದೆ ಎಂಬುದು ನಮಗೆ ತಿಳಿಯೋದೇ ಇಲ್ಲ. ನೀವು ಸಕ್ಕರೆಯನ್ನು ಹೆಚ್ಚಾಗಿ ಸೇವನೆ ಮಾಡಿದಾಗ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ದೇಹ ಸೋಂಕಿಗೊಳಗಾಗುವುದು ಹೆಚ್ಚಾಗುತ್ತದೆ. ಸಕ್ಕರೆ ಮತ್ತು ದೀರ್ಘಕಾಲದ ಸೈನಸ್ ಸಮಸ್ಯೆಗಳ ನಡುವೆ ಯಾವುದೇ ಸ್ಪಷ್ಟವಾದ ಸಂಬಂಧವಿಲ್ಲವಾದ್ರೂ ಸೈನಸ್, ಅಲರ್ಜಿಯಂತಹ ಸಮಸ್ಯೆ ಸಕ್ಕರೆ ಹೆಚ್ಚಾದಾಗಲೂ ಕಾಣಿಸಿಕೊಳ್ಳುತ್ತದೆ. 

ಕ್ರೇವಿಂಗ್ ಮತ್ತು ಹಸಿವು : ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಾಗ್ತಿದ್ದಂತೆ ನಮಗೆ ಕ್ರೇವಿಂಗ್ ಶುರುವಾಗುತ್ತದೆ. ಪದೇ ಪದೇ ಹಸಿವಾಗಲು ಶುರುವಾಗುತ್ತದೆ. ಎಷ್ಟೇ ಆಹಾರ ತಿಂದ್ರೂ ಹೊಟ್ಟೆ ತುಂಬಿದ ಅನುಭವ ಆಗೋದಿಲ್ಲ. ಇದ್ರಿಂದ ನಾವು ಮತ್ತಷ್ಟು ಆಹಾರ ಸೇವನೆ ಮಾಡ್ತೇವೆ. ಇದೇ ನಮ್ಮ ತೂಕವನ್ನು ಹೆಚ್ಚಿಸುತ್ತದೆ. 

ಕಡಿಮೆ ಶಕ್ತಿ, ನಿದ್ರೆ ಸಮಸ್ಯೆ : ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗ್ತಿದ್ದಂತೆ ಶಕ್ತಿ ಕಡಿಮೆ ಆಗುತ್ತದೆ. ಸಣ್ಣ ಪುಟ್ಟ ಕೆಲಸ ಮಾಡಿದ್ರೂ ನೀವು ಸುಸ್ತಾಗ್ತೀರಿ. ಅಷ್ಟೇ ಅಲ್ಲ ರಾತ್ರಿ ಸೂಕ್ತ ನಿದ್ರೆ ಬರೋದಿಲ್ಲ. ನಿದ್ರಾಹೀನತೆ ನಿಮ್ಮನ್ನು ಕಾಡಲು ಶುರುವಾಗುತ್ತದೆ.

ಅತಿಯಾದ ಒತ್ತಡ, ಆತಂಕ (Over Stress): ನಾವು ನಿತ್ಯ ಮಿತಿಗಿಂತ ಹೆಚ್ಚು ಪ್ರಮಾಣದಲ್ಲಿ ಸಕ್ಕರೆಯನ್ನು ಸೇವನೆ ಮಾಡ್ತಿದ್ದರೆ ಅತಿಯಾದ ಒತ್ತಡ, ಆತಂಕ ನಮ್ಮನ್ನು ಕಾಡಲು ಶುರುಮಾಡುತ್ತದೆ. ಡಿಪ್ರೆಶನ್, ಮೂಡ್ ಸ್ವಿಂಗ್, ಕಿರಿಕಿರಿ ಸೇರಿದಂತೆ ಮಾನಸಿಕ ಸಮಸ್ಯೆಗಳನ್ನು ಜನರು ಎದುರಿಸುತ್ತಾರೆ. 

ಸೆಳೆತ : ಅತಿಯಾದ ಸಕ್ಕರೆ ಸೇವನೆಯು ನಿಮ್ಮ ಕರುಳಿನಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಸಕ್ಕರೆ ನಮ್ಮ ದೇಹದಲ್ಲಿ ಹೆಚ್ಚಾಗ್ತಿದ್ದಂತೆ ಮೈಕೈನಲ್ಲಿ ಸೆಳೆತ ಕಾಣಿಸಿಕೊಳ್ಳುತ್ತದೆ. ಅಸ್ವಸ್ಥತೆ, ನೋವು ನಮ್ಮನ್ನು ಕಾಡಲು ಶುರು ಮಾಡುತ್ತದೆ. 

ಆಹಾರದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡೋದು ಹೇಗೆ? : 

ಆಹಾರ ಪಾಕೆಟ್ ಲೇಬಲ್ ಓದಿ : ನೀವು ಯಾವುದೇ ಆಹಾರವನ್ನು ಖರೀದಿ ಮಾಡಿ, ಮೊದಲು ಲೇಬಲ್‌ ಓದಿ. ಅದರಲ್ಲಿ ಸಕ್ಕರೆ ಪ್ರಮಾಣ ಎಷ್ಟಿದೆ ಎಂಬುದನ್ನು ಬರೆದಿರಲಾಗುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್,  ಮಹಿಳೆಯರು 25 ಗ್ರಾಂ ಮತ್ತು ಪುರುಷರು 37.5 ಗ್ರಾಂ ಸಕ್ಕರೆ ಮಾತ್ರ ಸೇವನೆ ಮಾಡಬೇಕೆಂದು ಹೇಳಿದೆ.

ಈ ಹಣ್ಣು ತಿಂದ್ರೆ ವೈದ್ಯರಿಂದ ದೂರ ಉಳೀಬಹುದು, ಬೀಜ ತಿಂದ್ರೆ ಹೊಗೆ ಅಷ್ಟೇ!

ಸ್ನೀಕಿ ಶುಗರ್‌ಗಳ ಬಗ್ಗೆ ಎಚ್ಚರದಿಂದಿರಿ : ಬ್ರೌನ್ ಶುಗರ್, ಕಾರ್ನ್ ಸಿರಪ್, ಜೇನುತುಪ್ಪ, ಕಾಕಂಬಿ ಮತ್ತು ಡೆಕ್ಸ್‌ಟ್ರೋಸ್‌ನಂತಹ ಪದಾರ್ಥದಲ್ಲಿ ಸಕ್ಕರೆ ಇದ್ದು, ನೀವು ಅವುಗಳನ್ನು ಸೇವನೆ ಮಾಡುವಾಗ ಎಚ್ಚರವಹಿಸಬೇಕು. 
ಸಂಪೂರ್ಣ ಆಹಾರಗಳಿಗೆ ಆದ್ಯತೆ ನೀಡಿ: ಹಣ್ಣು, ತರಕಾರಿ, ಧಾನ್ಯ ಮತ್ತು ನೇರ ಪ್ರೋಟೀನ್‌ ಸಿಗುವ ಆಹಾರವನ್ನು ಹೆಚ್ಚಾಗಿ ತೆಗೆದುಕೊಳ್ಳಿ.  

click me!