ತಲೆಹೊಟ್ಟು ನಿವಾರಣೆಗೆ ಸಿಂಪಲ್ ವೀಳ್ಯದೆಲೆ ಹೇರ್ ಪ್ಯಾಕ್

By Roopa Hegde  |  First Published Nov 20, 2024, 6:31 PM IST

ತಲೆಹೊಟ್ಟು ಈಗಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಮನೆಯಲ್ಲೇ ಮದ್ದಿದೆ. ಪೂಜೆಗೆ ಬಳಸಿ, ಕಸಕ್ಕೆ ಎಸೆಯುವ ವೀಳ್ಯದೆಲೆಯಲ್ಲಿ ನಿಮ್ಮ ಸೌಂದರ್ಯದ ಗುಟ್ಟಿದೆ. 
 


ಭಾರತದಲ್ಲಿ ಹಬ್ಬ (Festival) ಕ್ಕೆ ಬರವಿಲ್ಲ. ಹಬ್ಬಗಳಲ್ಲಿ, ದೇವರ ಪೂಜೆಯಲ್ಲಿ ವೀಳ್ಯದೆಲೆ (betel leaf) ಪ್ರಮುಖ ಪಾತ್ರವಹಿಸುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ವೀಳ್ಯದೆಲೆಯನ್ನು ಪೂಜೆಗೆ ಬಳಸ್ತಾರೆ. ಆದ್ರೆ ನಂತ್ರ ಅದನ್ನು ಏನು ಮಾಡ್ಬೇಕು ಎಂಬುದು ಬಹುತೇಕ ಯಾರಿಗೂ ತಿಳಿಸಿಲ್ಲ. ಒಣಗುವವರೆಗೆ ಹಾಗೆ ಬಿಟ್ಟು ನಂತ್ರ ಕಸಕ್ಕೆ ಹಾಕುವವರ ಸಂಖ್ಯೆ ಹೆಚ್ಚಿದೆ. ನಿಮ್ಮ ಮನೆಯಲ್ಲೂ ಹಬ್ಬಕ್ಕೆ ತಂದ, ಕುಂಕುಮಕ್ಕೆ ನೀಡಿದ ವೀಳ್ಯದೆಲೆ ಹಾಗೆ ಇದೆ ಅಂದ್ರೆ ಅದನ್ನು ನಿಮ್ಮ ಸೌಂದರ್ಯ (beauty) ವರ್ಧಕವಾಗಿ ಬಳಕೆ ಮಾಡ್ಕೊಳ್ಳಿ. ಕೂದಲಿಗೆ ಹೇರ್ ಪ್ಯಾಕ್ ಮಾಡ್ಕೊಂಡು, ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ. ವೀಳ್ಯದೆಲೆಯಲ್ಲಿ ಪೊಟ್ಯಾಸಿಯಮ್, ನಿಕೋಟಿನಿಕ್ ಆಮ್ಲ, ವಿಟಮಿನ್ ಎ, ಬಿ1, ಬಿ2 ಮತ್ತು ಸಿ ಹೇರಳವಾಗಿರುತ್ತದೆ. 

ಈಗಿನ ದಿನಗಳಲ್ಲಿ ಕೂದಲು ಉದುರೋದು, ತಲೆಹೊಟ್ಟು (dandruff), ಬಿಳಿ ಕೂದಲು ಸಾಮಾನ್ಯ ಎನ್ನುವಂತಾಗಿದೆ. ಹದಗೆಟ್ಟ ವಾತಾವರಣ, ಕೆಟ್ಟ ಜೀವನಶೈಲಿ, ಅನಾರೋಗ್ಯಕರ ಆಹಾರ ತಲೆ ಕೂದಲಿನ ಈ ಎಲ್ಲ ಸಮಸ್ಯೆಗೆ ಕಾರಣ.  ತಲೆಹೊಟ್ಟಿನಿಂದ ಮುಕ್ತಿ ಪಡೆಯಲು  ಜನರು ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಔಷಧಿ, ಶಾಂಪೂ ಪ್ರಯೋಗ ಮಾಡಿರ್ತಾರೆ. ಆದ್ರೆ ಯಾವುದರಿಂದ್ಲೂ ಪ್ರಯೋಜನವಾಗೋದಿಲ್ಲ. ತಲೆಹೊಟ್ಟಿನಿಂದ ತುರಿಕೆ ಕಾಣಿಸಿಕೊಳ್ಳುತ್ತದೆ. ಅನೇಕ ಬಾರಿ ಈ ತಲೆ ಹೊಟ್ಟಿನಿಂದ ಮುಜುಗರ ಎದುರಿಸಬೇಕಾಗುತ್ತದೆ. ನೀವು ಈ ತಲೆಹೊಟ್ಟು ನಿವಾರಣೆಗೆ ಗೌರಿ ಅಮ್ಮ ಹೇಳಿದ ಔಷಧಿಯನ್ನು ಬಳಸಬಹುದು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜನ (Bombat Bhojan)ದ ಆರೋಗ್ಯವೇ ಭಾಗ್ಯ ವಿಭಾಗದಲ್ಲಿ ಕಾಣಿಸಿಕೊಳ್ಳುವ ಗೌರಿ ಅಮ್ಮ (Gowri Amma), ಈ ಬಾರಿ ತಲೆ ಹೊಟ್ಟಿಗೆ ವೀಳ್ಯದೆಲೆ ಹೇರ್ ಪ್ಯಾಕ್ (Betel leaf hair pack) ಟಿಪ್ಸ್ ನೀಡಿದ್ದಾರೆ. 

Tap to resize

Latest Videos

undefined

ವೀಳ್ಯದೆಲೆ ಹೇರ್ ಪ್ಯಾಕ್ : ವೀಳ್ಯದೆಲೆ ಹೇರ್ ಪ್ಯಾಕ್ ತಯಾರಿಸೋದು ಬಹಳ ಸುಲಭ. ಅದಕ್ಕೆ ಅಗತ್ಯವಿರೋದು ಎರಡೇ ಎರಡು ಪದಾರ್ಥ. ಒಂದು ವೀಳ್ಯದೆಲೆ. ಇನ್ನೊಂದು ತೆಂಗಿನ ಎಣ್ಣೆ. 

ಮಾಡುವ ವಿಧಾನ : ಅಗತ್ಯಕ್ಕೆ ತಕ್ಕಂತೆ ವೀಳ್ಯದೆಲೆ ತೆಗೆದುಕೊಳ್ಳಿ. ಒಂದೆರಡು ಚಮಚ ನೀರನ್ನು ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಆ ನಂತ್ರ ಈ ಮಿಶ್ರಣಕ್ಕೆ ತೆಂಗಿನ ಎಣ್ಣೆಯನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ತಲೆ ಕೂದಲಿನ ಬುಡಕ್ಕೆ ಈ ಮಿಶ್ರಣವನ್ನು ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ನೀವು ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.

ವೀಳ್ಯದೆಲೆ ಲಾಭಗಳು : ತಲೆಯಲ್ಲಿ ತುರಿಕೆಯಾಗ್ತಿದೆ ಅಂದ್ರೆ ಅದಕ್ಕೆ ತಲೆಹೊಟ್ಟು ಕಾರಣ. ಕೆಲವೊಮ್ಮೆ ಇದ್ರಿಂದ ತಲೆಯಲ್ಲಿ ಗಾಯಗಳಾಗೋದಿದೆ. ವಾತಾವರಣದ ಕೊಳಕು ಇದಕ್ಕೆ ಕಾರಣ. ನೀವು ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ವೀಳ್ಯದೆಲೆ ಎಣ್ಣೆ ಪ್ಯಾಕನ್ನು ವಾರದಲ್ಲಿ ಒಂದು ದಿನದಂತೆ ಮೂರ್ನಾಲ್ಕು ವಾರ ಹೇರ್ ಪ್ಯಾಕ್ ಮಾಡ್ತಾ ಬಂದ್ರೆ ನಿಮಗೆ ಫಲಿತಾಂಶ ಕಾಣುತ್ತೆ. ನವೆ ನಿಧಾನವಾಗಿ ಕಡಿಮೆಯಾಗುತ್ತದೆ. ಕೂದಲಿನ ಬುಡ ಗಟ್ಟಿಯಾಗುತ್ತದೆ. ಕೂದಲು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ. ಕೂದಲು ಹೊಳಪು ಪಡೆಯುತ್ತದೆ. ಒಣಗಿದ ವೀಳ್ಯದೆಲೆಯನ್ನು ಕೂಡ ನೀವು ಪ್ಯಾಕ್ ಗೆ ಬಳಸಬಹುದು ಎನ್ನುತ್ತಾರೆ ಗೌರಿ ಅಮ್ಮ. ಇದನ್ನು ಹೇರ್ ಟಾನಿಕ್ ಅಂತ ಪರಿಗಣಿಸಲಾಗಿದೆ.

ವೀಳ್ಯದೆಲೆ ಮತ್ತು ತುಪ್ಪದ ಹೇರ್ ಮಾಸ್ಕ್ : 4 ರಿಂದ 5 ವೀಳ್ಯದೆಲೆ, 1 ರಿಂದ 2 ಚಮಚ ತುಪ್ಪ, 1 ಚಮಚ ಜೇನುತುಪ್ಪ ಮತ್ತು ಕೆಲವು ಹನಿ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ತಲೆಗೆ ಹೆಚ್ಚಿಕೊಂಡು 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಶಾಂಪೂವಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ.  

 
 
 
 
 
 
 
 
 
 
 
 
 
 
 

A post shared by Star Suvarna (@starsuvarna)

click me!