NEWS16, Dec 2018, 7:22 AM IST
ಸಕ್ಕರೆ ಕಾರ್ಖಾನೆ ಎದುರೇ ರೈತ ಆತ್ಮಹತ್ಯೆ
ಕಬ್ಬನ್ನು ಕಟಾವು ಮಾಡಿ ತಂದರೂ ಖರೀದಿಸಲು ಕಾರ್ಖಾನೆಯವರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರೈತನೊಬ್ಬ ಕಾರ್ಖಾನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
NEWS4, Dec 2018, 5:00 PM IST
ಇನ್ನೇನು? ರಮೇಶ್ ಜಾರಕಿಹೊಳಿ ಹೆಸರಿನಲ್ಲಿ ವಿಷ ಕುಡಿಬೇಕಷ್ಟೇ!: ರೈತರ ಅಳಲು
ಕಬ್ಬು ಬೆಳೆಗಾರರಿಗೆ, ರೈತರಿಗೆ ಬೆನ್ನುಲೆಬಾಗಿ ನಿಲ್ಲಬೇಕಾದ ರಾಜಕಾರಣಿ, ಮಂತ್ರಿಗಳೇ ವಿಲನ್ ಆಗಿರುವ ಕಥೆ ಇದು. ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ, ಹಲವು ವರ್ಷಗಳು ಕಳೆದರೂ ಸಕ್ಕರೆ ಫ್ಯಾಕ್ಟರಿ ಮಾಲೀಕರು ಬಿಲ್ ಬಾಕಿಯಿಟ್ಟು ಸತಾಯಿಸುತ್ತಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಕಾರ್ಖಾನೆಯೂ ಅವುಗಳಲ್ಲಿ ಒಂದು.
Belagavi28, Nov 2018, 2:03 PM IST
'ರೈತರು ಅನ್ಯಾಯವಾದಾಗ ಡಿಸಿ ಕಚೇರಿಗೆ ಹೋಗುವುದು ರೂಢಿ'
ಯಾವುದೇ ಸರ್ಕಾರ ಬಂದರೂ ಟೇಕ್ ಆಫ್ ಆಗಲು ಸಮಯ ಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರ ಟೇಕ್ ಆಫ್ ಆಗಿಲ್ಲ ಎನ್ನುವ ಅರ್ಥದಲ್ಲಿ ನಾನೇನೂ ಹೇಳಿರಲಿಲ್ಲ. ತಪ್ಪಾಗಿ ಅದನ್ನು ಅರ್ಥೈಸಲಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
NEWS26, Nov 2018, 9:22 AM IST
ಅಂಬಿ ಪುತ್ರನಿಗೆ ಕಬ್ಬು ನೀಡಿ ಅಭಿಮಾನಿಗಳ ಸಾಂತ್ವನ
ಅಂಬಿ ಅಂತಿಮ ದರ್ಶನ ವೇಳೆ ಅಭಿಶೇಕ್ ಗೆ ಕಬ್ಬು ನೀಡಿ ಭಿಮಾನಿಗಳು ಸಾಂತ್ವನ ಹೇಳಿದ್ದಾರೆ. ಅಭಿಶೇಕ್ ಅದನ್ನು ಪಾರ್ಥೀವ ಶರೀರದ ಬಳಿ ಇಟ್ಟಿದ್ದಾರೆ. ಕಬ್ಬು ಮಂಡ್ಯ ಜಿಲ್ಲೆ ಪ್ರತೀಕ. ಅದೇ ರೀತಿ ಅಂಬರೀಶ್ ಕೂಡಾ. ಹಾಗಾಗಿ ಅಭಿಮಾನಿಗಳು ಕಬ್ಬು ಕೊಟ್ಟಿದ್ದಾರೆ.
state24, Nov 2018, 12:37 PM IST
Left Right and Centre: ಮುಂದೇನು ದಾರಿ..?
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘರ್ಷ ಕೊನೆಗೂ ಬಗೆಹರಿಯಲಿಲ್ಲ. ಇನ್ನು 15 ದಿನಗಳಲ್ಲಿ ರೈತರಿಗೆ ನೀಡಬೇಕಿರುವ ಬಾಲಿಯನ್ನು ಪಾವತಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ರೈತರ ಬಾಕಿ ಪಾವತಿಸುತ್ತಾರಾ ಎನ್ನುವುದರ ಕುರಿತ ಸಂಪೂರ್ಣ ಚರ್ಚೆ ಲೆಫ್ಟ್ ರೈಟ್ & ಸೆಂಟರ್ ಇಲ್ಲಿದೆ ನೋಡಿ.
state24, Nov 2018, 11:26 AM IST
ಟ್ರಬಲ್ ಶೂಟರ್ ಡಿಕೆಶಿಯಿಂದ ಮತ್ತೊಂದು ಬಿಗ್ ಡೀಲ್
ಕರ್ನಾಟಕ ರಾಜಕೀಯದಲ್ಲಿ ಟ್ರಬಲ್ ಶೂಟರ್ ಎಂದೆ ಖ್ಯಾತರಾಗಿರುವ ಸಚಿವ ಡಿ.ಕೆ ಶಿವಕುಮಾರ್ ಇದೀಗ ಮತ್ತೊಂದು ಸಂದಾನ ಮಾಡಿ ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
state23, Nov 2018, 7:04 AM IST
ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಎಚ್ಚರಿಕೆ ಏನು..?
ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಇಂದಿನ ಸ್ಥಿತಿಗೆ ನೀವೇ ಕಾರಣ ಎಂದು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಶೀಘ್ರ ಕಬ್ಬು ಬಾಕಿ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ.
NEWS22, Nov 2018, 2:11 PM IST
ಏನಿದು ವಾರ್ಷಿಕ ಸಕ್ಕರೆ ರೋಗ? ಕಬ್ಬಿನ ಕಾಯಿಲೆಯ ಕಂಪ್ಲೀಟ್ ಡೀಟೆಲ್ಸ್
ರಾಜ್ಯದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರಕ್ಕೆ ಪ್ರತಿ ವರ್ಷ ಕಾಡುವ ಸಮಸ್ಯೆಯೇ ಕಬ್ಬಿನ ಕಾಯಿಲೆ ಎಂದರೆ ತಪ್ಪಾಗಲಾರದು. ಕಳೆದ ಕೆಲದಿನಗಳಿಂದ ರಾಜ್ಯದಲ್ಲೆಲ್ಲಾ ಈ ಸಮಸ್ಯೆಯದ್ದೇ ಚರ್ಚೆ. ರೈತರ ಪ್ರತಿಭಟನೆ ಒಂದೆಡೆಯಾದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರ ವಾದ ಇನ್ನೊಂದೆಡೆ. ಇವರಿಬ್ಬರ ನಡುವೆ ಸರ್ಕಾರದ ಕಸರತ್ತುಗಳು. ಏನಿದು ಸಮಸ್ಯೆ? ಏನಿದರ ಪರಿಹಾರ? ಇಲ್ಲಿದೆ ಸಮಗ್ರ ಮಾಹಿತಿ...
state21, Nov 2018, 9:41 AM IST
ಸರ್ಕಾರದ ಕ್ರಮಕ್ಕೆ ಬಿಎಸ್ ವೈ ಬೆಂಬಲ
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಇದೀಗ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ.
NEWS20, Nov 2018, 10:30 PM IST
ಮಾಲೀಕರಿಲ್ಲದ ಸಭೆಯಲ್ಲಿ ದೊರೆ ತೀರ್ಮಾನ, ರೈತರಿಗೆ ಅಂತಿಮವಾಗಿ ಸಿಕ್ಕಿದ್ದೇನು?
ನಾಲ್ಕು ದಿನಗಳಿಂದ ಸರಕಾರದ ನಿದ್ದೆ ಕೆಡಿಸಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಒಂದು ಹಂತದ ಭರವಸೆಯ ಪರಿಹಾರ ಸಿಕ್ಕಿದೆ. ಇಂದು [ಮಂಗಳವಾರ] ಸಿಎಂ ಕುಮಾರಸ್ವಾಮಿ ಕಬ್ಬು ಬೆಳೆಗಾರರೊಂದಿಗೆ ಸುದೀರ್ಘ ಸಭೆ ನಡೆಸಿ ಅನೇಕ ತೀರ್ಮಾನ ತೆಗೆದುಕೊಂಡರು. ಸಿಎಂ ಸಭೆಯ ಸಾರಾಂಶ ಇಲ್ಲಿದೆ.
NEWS20, Nov 2018, 9:42 PM IST
ಇಂಗ್ಲಿಷ್ ಮಾತನಾಡಿದ ಸಕ್ಕರೆ ಸಂಘದ ಅಧ್ಯಕ್ಷನಿಗೆ ಸಿಎಂ ತರಾಟೆ! ರೈತರಿಂದ ಚಪ್ಪಾಳೆ
ರೈತರೊಂದಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ನಡೆಸಿದ ಸಭೆ ತರಾಟೆಗಳ ಕೇಂದ್ರವಾಗಿತ್ತು. ಒಂದೆಡೆ ರೈತರು ಸಚಿವ ಕೆ.ಜೆ.ಜಾರ್ಜ್ರಿಗೆ ಫುಲ್ ಕ್ಲಾಸ್ ತೆಗೆದುಕೊಂಡರೆ, ಸಿಎಂ ಇಂಗ್ಲಿಷ್ ಮಾತನಾಡಿದ ಸಕ್ಕರೆ ಮಾಲೀಕರ ಸಂಘದ ಅಧ್ಯಕ್ಷನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಏನು ಹೇಳಿದ್ದಾರೆ ಇಲ್ಲಿದೆ ವಿವರ...
NEWS20, Nov 2018, 8:29 PM IST
ವಿಡಿಯೋ: ಸಕ್ಕರೆ ಸಚಿವ ಜಾರ್ಜ್ಗೆ ರೈತರಿಂದ ಫುಲ್ ಚಾರ್ಜ್!
ರೈತರೊಂದಿಗೆ ಚರ್ಚಿಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಸಕ್ಕರೆ ಸಚಿವ ಕೆ.ಜೆ. ಜಾರ್ಜ್ರನ್ನು ರೈತರು ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸಕ್ಕರೆ ಖಾತೆ ನಿಮ್ಮ ಬಳಿ ಇದೆ ಎಂಬುವುದುರ ಜ್ಞಾನವಾದರೂ ನಿಮಗಿದಿಯಾ? ಎಂದು ರೈತರು ಪ್ರಶ್ನಿಸಿದ್ದಾರೆ. ರೈತರ ಪ್ರಶ್ನೆಗಳಿಂದ ಕಂಗಾಲಾದ ಜಾರ್ಜ್ ಸಭೆಯಿಂದ ಅರ್ಧದಲ್ಲೇ ಹೊರಟುಹೋದ ಘಟನೆ ನಡೆದಿದೆ. ಇಲ್ಲಿದೆ ಫುಲ್ ಡೀಟೆಲ್ಸ್..
NEWS20, Nov 2018, 8:57 AM IST
ರಾಜ್ಯದ ರೈತರಿಗೆ ಸಿಗಬೇಕು 670 ಕೋಟಿ ರು.
ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ರೈತರ ಬಿಲ್ ಬಾಕಿ ಉಳಿಸಿಕೊಂಡಿರುವುದು ರೈತರನ್ನು ಕಂಗಾಲಾಗಿಸಿದೆ. ರಾಜ್ಯದ 43ಕ್ಕೂ ಅಧಿಕ ಕಾರ್ಖಾನೆಗಳು 670 ರು. ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿರುವುದು ಲೆಕ್ಕಕ್ಕೆ ಸಿಕ್ಕಿದೆ.
NEWS19, Nov 2018, 7:44 PM IST
ಈಗಲಾದರೂ ಬಾಕಿ ಪಾವತಿಸಿ: ಪಕ್ಷದ ಅಂಗಸಂಸ್ಥೆಯಿಂದಲೇ ಕೈ ನಾಯಕರಿಗೆ ಬಹಿರಂಗ ಪತ್ರ!
ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಪಕ್ಷದ ಕಿಸಾನ್ ಸಂಘದಿಂದಲೇ ಬಹಿರಂಗ ಪತ್ರ ಬರೆಯಲಾಗಿದೆ. ಪತ್ರದಲ್ಲಿ, ರೈತರಿಗೆ ನೀಡಬೇಕಾದ ಬಾಕಿಯನ್ನು ಕೂಡಲೇ ಕೊಟ್ಟುಬಿಡುವಂತೆ ಕಾಂಗ್ರೆಸ್ ನಾಯಕರೂ, ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವವರಿಗೆ ತಾಕೀತು ಮಾಡಲಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...
NEWS19, Nov 2018, 5:10 PM IST
ಸಚಿವ ಕೆ.ಜೆ. ಜಾರ್ಜ್ ನಾಪತ್ತೆ!
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರು ಬೆಂಗಳೂರಿಗೆ ಬಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರೂ, ಅದಕ್ಕೆ ಸ್ಪಂದಿಸಬೇಕಾದ ಸಕ್ಕರೆ ಸಚಿವರೇ ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೆ.ಜೆ. ಜಾರ್ಜ್ ಮಾತ್ರ ಎಲ್ಲೂ ಕಾಣಿಸದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.