ದುಬಾರಿ ಬಟ್ಟೆ ಧರಿಸಿದ್ರೂ ಆನೆ ಲದ್ದಿ ಹಾಕ್ತಿದ್ರೆ ಕ್ಯಾಚ್‌ ಹಿಡಿದೇ ಬಿಡ್ತಾಳೆ ಈ ಸುಂದ್ರಿ... ವಿಡಿಯೋ ವೈರಲ್

By Suchethana D  |  First Published Nov 21, 2024, 5:40 PM IST

ಆನೆಯ ಲದ್ದಿ ಎಂದರೆ ಈಕೆಗೆ ಬಲು ಖುಷಿ. ಎಲ್ಲೇ ಆನೆ ಲದ್ದಿ ಮಾಡ್ತಿದ್ರೂ ಅದನ್ನು ಕ್ಯಾಚ್‌ ಹಿಡೀತಾಳೆ. ಇದಕ್ಕೆ ಕಾರಣ ಏನು? 
 


ಕಾಮಧೇನು ಎಂದೇ ಕರೆಸಿಕೊಳ್ಳುವ ಗೋವಿನ ಪ್ರಯೋಜನ ಎಲ್ಲರಿಗೂ ತಿಳಿದದ್ದೇ. ಹುಟ್ಟಿನಿಂದಲೂ ಸಾಯುವವರೆಗೂ, ಸತ್ತ ಬಳಿಕವೂ ಗೋವಿನ ಪ್ರಯೋಜನಗಳು ಅಷ್ಟಿಷ್ಟಲ್ಲ. ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೇ ನೊಸಲಿಗೆ ವಿಭೂತಿಯಾದೆ ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವಾ.. ಎಂದು ಕವಿ ಎಸ್. ಜಿ. ನರಸಿಂಹಾಚಾರ್ಯರು ಹೇಳಿದ್ದಾರೆ. ಗೋವಿನ ಮಹಿಮೆ ಅದನ್ನು ಅರಿತವರಿಗೆ ಮಾತ್ರ ತಿಳಿದಿದೆ. ಆದರೆ ಅದೇ ರೀತಿ ಆನೆಯ ಲದ್ದಿಯಿಂದಲೂ ಸಾಕಷ್ಟು ಪ್ರಯೋಜನ ಇದೆ ಎನ್ನುವುದು ನಿಮಗೆ ಗೊತ್ತೆ? ಈ ಕುತೂಹಲದ ವಿಷಯವನ್ನು ಭಾರತೀಯರು ಎಷ್ಟು ಅರಿತುಕೊಂಡಿದ್ದಾರೋ ಗೊತ್ತಿಲ್ಲ. ಆದರೆ ವಿದೇಶಿಗರಿಗೆ ಇದರ ಅರಿವು ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ವೈರಲ್ ವಿಡಿಯೋ. 

ಈ ವಿಡಿಯೋದಲ್ಲಿ ಯುವತಿಯೊಬ್ಬಳು ಎಷ್ಟೇ ದುಬಾರಿ ಬಟ್ಟೆ ಧರಿಸಿದರೂ, ಆನೆ ಲದ್ದಿ ಮಾಡುತ್ತಿರುವುದನ್ನು ನೋಡಿದ್ರೆ ಕೂಡಲೇ ಬಟ್ಟೆ ಹಿಡಿದು ಅದನ್ನು ಕ್ಯಾಚ್‌ ಹಿಡಿಯುತ್ತಾಳೆ. ಕೆಳಗೆ ಬೀಳಲು ಕೊಡುವುದಿಲ್ಲ. ಆನೆ ಲದ್ದಿ ಹಾಕುವುದನ್ನೇ ಕಾಯುವ ಈ ಯುವತಿಯ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಕೊನೆಗೆ ಈ ಯುವತಿ ಹೀಗೆ ಮಾಡುವುದಕ್ಕೆ ಕಾರಣ, ಅದನ್ನು ಸೌಂದರ್ಯ ಸಾಧನವಾಗಿ ಬಳಸಲು ಎಂದು ಹೇಳಲಾಗಿದೆ. ಇದರಿಂದ ಸೋಪ್ ತಯಾರಿಸಿ ನೈಸರ್ಗಿಕ ಸೌಂದರ್ಯವನ್ನು ಪಡೆಯಲಾಗುತ್ತದೆ. ಇಷ್ಟೇ ಅಲ್ಲದೇ ಆನೆಯ ಲದ್ದಿಯಿಂದ ಸಾಕಷ್ಟು ಪ್ರಯೋಜನಗಳಿವೆ. ಕಾಡಿನಲ್ಲಿ ಸಿಗುವ ವಿವಿಧ ಬಗೆಯ ಸೊಪ್ಪುಗಳು ಔಷಧೀಯ ಗುಣಲಕ್ಷಣಗಳನ್ನು ಒಳಗೊಂಡಿರುತ್ತವೆ. ಆನೆಗಳು ಇಂತಹ ಸೊಪ್ಪುಗಳನ್ನು ಸೇವಿಸಿ, ಲದ್ದಿಯ ರೂಪದಲ್ಲಿ ಹೊರಹಾಕುತ್ತವೆ. ಆದ್ದರಿಂದ ಇದು ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳನ್ನೂ ಹೊಂದಿವೆ.

Tap to resize

Latest Videos

undefined

ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್​ಬಾಸ್​ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!
 

ಇಷ್ಟೇ ಅಲ್ಲದೇ, ಕಾಗದ ಬಳಕೆಯಲ್ಲಿಯೂ ಆನೆ ಲದ್ದಿ ಬಳಕೆಯಾಗುತ್ತದೆ.  ಕಾಗದವನ್ನು ಮರದ ನಾರಿನ ತಿರುಳಿನಿಂದ ತಯಾರಿಸಲಾಗುತ್ತದೆ. ಇದೇ ಬಗೆಯ ತಿರುಳು ಆನೆಯ ಲದ್ದಿಯಲ್ಲಿರುವ ಕಾರಣ ಅದನ್ನು ಬಳಸಲಾಗುತ್ತದೆ. ಮಾತ್ರವಲ್ಲದೇ   ತಲೆನೋವು, ಹಲ್ಲು ನೋವಿನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಅಥವಾ ಸೈನಸ್ ಸಮಸ್ಯೆ ಇರುವವರಿಗೆ, ಲದ್ದಿ ವಾಸನೆ ಗ್ರಹಿಕೆಗೆ ಹೇಳಲಾಗುತ್ತದೆ.  ರಸ್ತೆ ಗುಂಡಿ ಮುಚ್ಚಲೂ ಇದನ್ನು ಬಳಸುತ್ತಾರೆ. ಆನೆಯ ಲದ್ದಿಗಳನ್ನು  ಗುಂಡಿಗಳ ಮೇಲೆ ಹರಡಿದಾಗ ಅದರಲ್ಲಿರುವ ಸೋಸುವ ಪ್ರಕ್ರಿಯೆಯಿಂದ ನೀರು ಭೂಮಿಯೊಳಗೆ ಇಂಗಿ ಹೋಗುತ್ತದೆ.   ಮೊದಲೇ ಗಟ್ಟಿಯಾಗಿ ಮಣ್ಣಿಗೆ ಕಚ್ಚಿಕೊಂಡಿರುವುದರಿಂದ ಮತ್ತೊಮ್ಮೆ ರಸ್ತೆ ಆ ಜಾಗದಲ್ಲಿ ಜೋರಾಗಿ ಮಳೆ ಬಂದರೂ ಗುಂಡಿ ಆಗುವುದಿಲ್ಲ ಎನ್ನುವ ಕಾರಣಕ್ಕೆ ಇದರ ಬಳಕೆ ಆಗುತ್ತದೆ.

 
ಇದು ಸೊಳ್ಳೆಗಳ ನಿವಾರಣೆಗೂ ಉಪಕಾರಿ.  ಲದ್ದಿಯನ್ನು ಸೊಳ್ಳೆ ನಿವಾರಕವಾಗಿ ಬಳಕೆ ಮಾಡುತ್ತಾರೆ. ಇದನ್ನು ಮನಗಂಡು ಕೆಲವು ಕಂಪನಿಗಳು ಸೊಳ್ಳೆ ಬತ್ತಿ ತಯಾರಿಸುತ್ತಿವೆ. ಅಷ್ಟೇ ಏಕೆ, ಥೈಯ್ಲೆಂಡ್‌ ಸೇರಿದಂತೆ ಕೆಲವು ದೇಶಗಳಲ್ಲಿ  ವಿಶ್ವದ ಅತಿ ಹೆಚ್ಚಿನ ದರದ ಕಾಫಿ ಪುಡಿ ತಯಾರಿಕೆಯಲ್ಲಿ ಆನೆಯ ಲದ್ದಿಯನ್ನು ಬಳಸುತ್ತಾರೆ ಎಂದೂ ಹೇಳಲಾಗುತ್ತದೆ.   ಅಲ್ಲಿನ ಕಾಫಿ ಬೆಳೆಗಾರರ ಜಮೀನುಗಳ ಸುತ್ತಮುತ್ತ ಬಹಳಷ್ಟು ಆನೆಗಳು ವಾಸ ಮಾಡುತ್ತವೆ. ಅಲ್ಲಿ ಬರುವ ಆನೆಗಳು  ಕಾಫಿ ಬೀಜಗಳನ್ನು ತಿಂದು ಲದ್ದಿ ಮಾಡುತ್ತವೆ. ಆದ್ದರಿಂದ ಅಲ್ಲಿನ ಕಾಫಿ ಬೆಳೆಗಾರ ಜನರು ಒಂದು ದಿನದ ನಂತರ ಆನೆ ಲದ್ದಿ ಇಂದ ತಮ್ಮ ಹಾನಿಯಾದ ಕಾಫಿ ಬೀಜಗಳ ಸಾರವನ್ನು ತೆಗೆದುಕೊಂಡು ಮತ್ತೆ ಕಾಫಿ ಕುಡಿ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ ಎನ್ನಲಾಗಿದೆ.   ಕೆಲವು ಬಿಯರ್ ತಯಾರು ಮಾಡುವ ಕಂಪೆನಿಗಳು ಆನೆ ಲದ್ದಿ ಬಳಸುತ್ತಾರೆ ಎಂದೂ  ಹೇಳಲಾಗುತ್ತದೆ. 

ಮದುಮಕ್ಕಳ ಮೆರವಣಿಗೆ ವೇಳೆ ರಸ್ತೆ ಮೇಲೆ ಹಣದ ಹೊಳೆ ಹರಿಸಿದ ಬಂಧುಗಳು! ಶಾಕಿಂಗ್ ವಿಡಿಯೋ ವೈರಲ್

click me!