ಬಾಲಿವುಡ್ ನಟ ಅಮೀರ್ ಖಾನ್ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಏನಾಯ್ತು ಅಂತಾ ಗಾಬರಿ ಆಗ್ಬೇಡಿ. ಥೆರಪಿ ತೆಗೆದುಕೊಳ್ಳಲು ಕಾರಣವೇನು? ಪ್ರಯೋಜನ ಏನು ಎಂಬುದನ್ನು ಅಮೀರ್ ಹೇಳಿದ್ದಾರೆ.
ಬಾಲಿವುಡ್ ನ ಮಿಸ್ಟರ್ ಪೆರ್ಫೆಕ್ಷನಿಸ್ಟ್, ಅಮೀರ್ ಖಾನ್ (Bollywood Mr. Perfectionist Aamir Khan). ಅವರ ನಟನೆ, ಬುದ್ದಿವಂತಿಕೆಯನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ತಾರೆ. ಲಾಲ್ ಸಿಂಗ್ ಚಡ್ಡಾ (al Singh Chadha) ನಂತ್ರ ಅಮೀರ್ ಖಾನ್ ಸಿನಿಮಾದಿಂದ ದೂರವಿದ್ದರು. ವರ್ಷಾಂತ್ಯದಲ್ಲಿ ಅವರ ಹೊಸ ಚಿತ್ರ ತೆರೆಗೆ ಬರಲಿದೆಯಾದ್ರೂ ಅಮೀರ್ ಈ ಸಮಯದಲ್ಲಿ ತಮ್ಮ ಆರೋಗ್ಯಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ಅದ್ರಲ್ಲೂ ತಮ್ಮ ಮಾನಸಿಕ ಆರೋಗ್ಯ (Mental Health)ಕ್ಕೆ ಹೆಚ್ಚು ಇಂಪಾರ್ಟೆಂಟ್ ನೀಡಿದ್ದಾರೆ. ತಮ್ಮ ಮಗಳು ಇರಾ ಖಾನ್ (Ira Khan )ಜೊತೆ ಅಮೀರ್ ಖಾನ್ ಥೆರಪಿ ತೆಗೆದುಕೊಳ್ತಿದ್ದಾರೆ.
ನೆಟ್‌ಫ್ಲಿಕ್ಸ್ ಇಂಡಿಯಾ ವಿಡಿಯೋದಲ್ಲಿ ಅಮೀರ್ ಖಾನ್, ಥೆರಪಿ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಮಗಳು ಇರಾ ಖಾನ್ ಜೊತೆ ಜಂಟಿಯಾಗಿ ಥೆರಪಿ ತೆಗೆದುಕೊಳ್ತಿರೋದಾಗಿ ಅವರು ಹೇಳಿದ್ದಾರೆ. ಇದು ಸಂಬಂಧಗಳನ್ನು ಸುಧಾರಿಸಲು ಬಹಳ ಪ್ರಯೋಜನಕಾರಿ ಎಂಬುದು ಅಮೀರ್ ಅಭಿಪ್ರಾಯ. ತನಗೆ ಮತ್ತು ಇರಾಗೆ ಇದ್ರಿಂದ ಸಾಕಷ್ಟು ಅನುಕೂಲವಾಗಿದೆ. ಭಾರತದಲ್ಲಿ ಥೆರಪಿ ತೆಗೆದುಕೊಳ್ಳಲು ಜನರು ಹಿಂಜರಿಯುತ್ತಾರೆ. ಆದ್ರೆ ಇದ್ರಲ್ಲಿ ನಾಚಿಕೆಪಟ್ಟುಕೊಳ್ಳುವಂತದ್ದು ಏನೂ ಇಲ್ಲ. ಅಗತ್ಯವಿರುವವರು ಥೆರಪಿ ತೆಗೆದುಕೊಳ್ಳಬೇಕು ಎಂದು ಅಮೀರ್ ಖಾನ್ ಇದೇ ಸಮಯದಲ್ಲಿ ಸಲಹೆ ನೀಡಿದ್ದಾರೆ.
undefined
ಅಯ್ಯೋ, ಬೀಳ್ತಿದ್ರು ಮಲೈಕಾ! ಕುಡಿದಿದ್ದು ಹೆಚ್ಚಾಯ್ತಾ ಅಂತಿದ್ದಾರೆ ಟ್ರೋಲರ್
ಅಮೀರ್ ಖಾನ್, ಇರಾ ಖಾನ್, ಡಾ. ವಿವೇಕ್ ಮೂರ್ತಿ ಅವರೊಂದಿಗೆ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುತ್ತಿರುವುದನ್ನು ವೀಡಿಯೊದಲ್ಲಿ ನೋಡ್ಬಹುದು. ಅಮೀರ್ ಖಾನ್ ಅವರಿಗೆ ಥೆರಪಿ ತೆಗೆದುಕೊಳ್ಳುವಂತೆ ಅವರ ಮಗಳು ಇರಾ ಖಾನ್ ಮನವರಿಕೆ ಮಾಡಿದ್ದರಂತೆ. ಮಗಳ ಮಾತಿಗೆ ತಲೆಬಾಗಿದ ಅಮೀರ್, ಇರಾ ಜೊತೆ ಥೆರಪಿ ತೆಗೆದುಕೊಳ್ಳಲು ಶುರು ಮಾಡಿದ್ದಾರೆ. ಥೆರಪಿ ತೆಗೆದುಕೊಳ್ಳಲು ಶುರು ಮಾಡಿದ ನಂತರ ಸಾಕಷ್ಟು ಬದಲಾವಣೆಯಾಗಿದೆ ಎಂದು ಅಮೀರ್ ಹೇಳಿದ್ದಾರೆ.
ಅಪ್ಪ – ಮಗಳ ಸಂಬಂಧವನ್ನು ಸುಧಾರಿಸಿಕೊಳ್ಳಲು ಥೆರಪಿಸ್ಟ್ ಬಳಿ ನಾವು ಹೋಗುತ್ತಿದ್ದೇವೆ. ನಮ್ಮಿಬ್ಬರ ನಡುವೆ ಅಂತರ ಉಂಟುಮಾಡುವ ಸಮಸ್ಯೆಗಳ ಬಗ್ಗೆ ನಾವು ಮುಕ್ತವಾಗಿ ಮಾತನಾಡುತ್ತೇವೆ ಎಂದು ಅಮೀರ್ ಖಾನ್ ಹೇಳಿದ್ದಾರೆ. ಸಂಬಂಧವನ್ನು ಸುಧಾರಿಸಲು ಇದು ಬಹಳ ಮುಖ್ಯ ಎಂದು ಅವರು ಅರಿತುಕೊಂಡಿದ್ದಾರೆ. ಒಬ್ಬ ವ್ಯಕ್ತಿಯ ಬುದ್ಧಿವಂತಿಕೆ ಹಾಗೂ ಜೀವನದ ಅನುಭವಗಳು ತರಬೇತಿ ಪಡೆದ ಚಿಕಿತ್ಸಕರ ಜಾಗವನ್ನು ತುಂಬಲು ಸಾಧ್ಯವಿಲ್ಲ. ಥೆರಪಿ ನಮ್ಮ ಒಳನೋಟವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದಿದ್ದಾರೆ. ಮೊದಲು ನಾನು ತುಂಬಾ ಬುದ್ಧಿವಂತ ವ್ಯಕ್ತಿ ಎಂದು ಭಾವಿಸಿದ್ದೆ. ನನ್ನ ಬಗ್ಗೆ ನಾನು ಯೋಚಿಸಬಲ್ಲೆ, ನಮ್ಮ ಸಮಸ್ಯೆಗಳನ್ನು ನಾನೇ ಪರಿಹರಿಸಿಕೊಳ್ಳಬಲ್ಲೆ ಎಂದುಕೊಂಡಿದ್ದೆ. ಆದ್ರೆ ಅದು ಸುಳ್ಳು. ನೀವು ಎಷ್ಟು ಬುದ್ಧಿವಂತರು ಎಂಬುದು ಇಲ್ಲಿ ಮುಖ್ಯವಲ್ಲ. ನಮ್ಮ ಮೆದುಳಿನ ಬಗ್ಗೆ ನಮಗೆ ತಿಳಿಯದಿರುವ ಅನೇಕ ವಿಷ್ಯಗಳಿವೆ. ಅದನ್ನು ಚಿಕಿತ್ಸಕರ ಸಹಾಯದಿಂದ ಅರ್ಥ ಮಾಡಿಕೊಳ್ಳಬಹುದು ಎಂದು ಅಮೀರ್ ಖಾನ್ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಅನುಷಾ ರೈ ಹೇಳಿದ್ದೇನು?
ಜನರಿಗೆ ಅಮೀರ್ ಖಾನ್ ಸಲಹೆ : ಮಾನಸಿಕ ತಜ್ಞರ ಜೊತೆ ಥೆರಪಿ ತೆಗೆದುಕೊಳ್ತಿರುವ ಅಮೀರ್ ಖಾನ್, ಜನರಿಗೆ ಸೂಕ್ತ ಸಲಹೆಯನ್ನು ನೀಡಿದ್ದಾರೆ. ಭಾರತದಲ್ಲಿ ಜನರು ಥೆರಪಿಯನ್ನು ಭಿನ್ನವಾಗಿ ನೋಡ್ತಾರೆ. ಅದನ್ನು ಮಾನಸಿಕ ಅಸ್ವಸ್ಥತೆ ಎಂದುಕೊಳ್ತಾರೆ. ಆದ್ರೆ ಥೆರಪಿ ಅಗತ್ಯವಿದೆ ಎಂದು ಭಾವಿಸುವವರು ಅದನ್ನು ಪಡೆಯಬೇಕು. ಅದು ನಮಗೆ ತುಂಬಾ ಸಹಕಾರಿ. ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ ಎಂದು ಅಮೀರ್ ಖಾನ್ ಹೇಳಿದ್ದಾರೆ.
ಅಮೀರ್ ಮುಂದಿನ ಸಿನಿಮಾ ಯಾವುದು? : ತೆರೆಯಿಂದ ಬಹಳ ದಿನಗಳ ಕಾಲ ದೂರವಿದ್ದ ಅಮೀರ್ ಖಾನ್, ಸಿತಾರೆ ಜಮೀನ್ ಪರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರ ಜೊತೆ ಜೆನಿಲಿಯಾ ಡಿಸೋಜಾ ನಟಿಸಲಿದ್ದು, ಆರ್ ಎಸ್ ಪ್ರಸನ್ನ ನಿರ್ದೇಶನದ ಈ ಚಿತ್ರ ಡಿಸೆಂಬರ್ 25 ರಂದು ತೆರೆಗೆ ಬರಲಿದೆ.