ಭಾರತದ ಈ ರಾಜ್ಯದಲ್ಲಿ ಮಹಿಳೆಯರದ್ದೇ ಕಾರುಬಾರು, ಇಲ್ಲಿ ನಾರಿಯರೇ ಮಾಡ್ತಾರೆ ಲವ್ ಪ್ರಪೋಸಲ್, ಇಲ್ಲಿ ಮದುವೆ ನಂತರ ಗಂಡನೇ ಹೋಗಬೇಕು ಹೆಣ್ಣಿನ ಮನೆಗೆ ಹಾಗಿದ್ರೆ ವಿಶಿಷ್ಟ ಸಂಸ್ಕೃತಿ ಇರೋದು ಯಾವ ರಾಜ್ಯದಲ್ಲಿ ಇಲ್ಲಿದೆ ಡಿಟೇಲ್..!
ಭಾರತದ ಬಹುತೇಕ ರಾಜ್ಯಗಳಲ್ಲಿ ಪುರುಷ ಪ್ರಧಾನ ಕುಟುಂಬಗಳೇ ಹೆಚ್ಚು ಕೆಲವು ರಾಜ್ಯಗಳ ಕೆಲವು ಸಮುದಾಯಗಳಲ್ಲಿ ಮಾತ್ರ ಇಂದಿಗೂ ಸ್ತ್ರೀ ಪ್ರಧಾನ ಪದ್ಧತಿ ಇದೆ. ಆದರೆ ಭಾರತದ ಈ ರಾಜ್ಯದಲ್ಲಿ ಮಾತ್ರ ಇಂದಿಗೂ ಮಹಿಳೆಯರದ್ದೇ ಕಾರುಬಾರು.
212
ಅಮೋಘವಾದ ಪ್ರಾಕೃತಿಕ ಸೌಂದರ್ಯದಿಂದ ದೇಶದ ಗಮನ ಸೆಳೆಯುವ ಈಶಾನ್ಯ ಭಾರತದ ಪುಟ್ಟ ರಾಜ್ಯ ಮೇಘಾಲಯದಲ್ಲಿ ಈ ವಿಶೇಷವೆನಿಸುವ ಸ್ತ್ರಿ ಪ್ರಧಾನ ಕುಟುಂಬ ಪದ್ಧತಿ ಜಾರಿಯಲ್ಲಿದೆ. ಇಲ್ಲಿ ಪ್ರಪಂಚದಲ್ಲೇ ಎಲ್ಲಿಯೂ ಇಲ್ಲದ ದೀರ್ಘ ಕಾಲದಿಂದ ಪ್ರಚಲಿತದಲ್ಲಿರುವ ಸ್ತ್ರೀ ಪ್ರಧಾನ ಕುಟುಂಬವಿದೆ
312
ನಮ್ಮ ದೇಶದ ವಿವಿಧ ರಾಜ್ಯಗಳ ವಿವಿಧ ಸಮುದಾಯಗಳಲ್ಲಿ ಈ ಸ್ತ್ರೀ ಪ್ರಧಾನ ಕುಟುಂಬದ ಪದ್ಧತಿ ಇದೇ. ಆದರೆ ಇಲ್ಲಿ ಕಾಣಸಿಗುವ ಸ್ತ್ರೀ ಪ್ರಧಾನ್ಯತೆ ಎಲ್ಲಕ್ಕಿಂತಲೂ ವಿಭಿನ್ನ. ಇಲ್ಲಿ ಮಹಿಳೆಯರೇ ಪುರುಷರಿಗೆ ಪ್ರೇಮ ನಿವೇದನೆ ಮಾಡ್ತಾರೆ. ಮದ್ವೆಯ ನಂತರ ಇಲ್ಲಿ ಪುರುಷರೇ ತಮ್ಮ ಪತ್ನಿಯ ಮನೆಗೆ ಹೋಗುತ್ತಾರೆ.
412
Meghalaya
ಮಗನಲ್ಲ ಇಲ್ಲಿ ಮಗಳೇ ಉತ್ತರಾಧಿಕಾರಿ, ಇಂದಿಗೂ ಭಾರತದ ಬಹುತೇಕ ಕುಟುಂಬಗಳಲ್ಲಿ ಗಂಡು ಮಕ್ಕಳೇ ಕುಟುಂಬದ ವಾರಸುದಾರರು, ಗಂಡು ವಾರಸುದಾರನಿಗಾಗಿ ಕೆಲ ಕುಟುಂಬಗಳು ಅನೇಕ ಹರಕೆಗಳನ್ನು ಹೊರುತ್ತಾರೆ. ಗಂಡು ಮಗು ಜನಿಸಿದಾಗ ಇನ್ನಿಲ್ಲದ ಖುಷಿ ಪಡುತ್ತಾರೆ.
512
Meghalaya
ಆದರೆ ಇಲ್ಲಿ ಹಾಗಿಲ್ಲ, ಇಲ್ಲಿ ಹೆಣ್ಣು ಮಗುವಿನ ಜನನವನ್ನು ಭಾರಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿನ ಪ್ರತಿಯೊಂದು ಕುಟುಂಬವೂ ಹೆಣ್ಣು ಮಗು ಜನಿಸುವುದೇ ತಮ್ಮ ಬದುಕಿನ ದೊಡ್ಡದಾದ ಪುಣ್ಯ ಎಂದು ಭಾವಿಸುತ್ತಾರೆ.
612
Meghalaya
ಮೇಘಾಲಯದ ಖಾಸಿ ಹಾಗೂ ಘಾರೋ ಎಂಬ ಸಮುದಾಯದಲ್ಲಿ ಈ ವಿಶೇಷವಾದ ಸ್ತ್ರೀ ಪ್ರಧಾನ ಆಚರಣೆ ಇದೆ. ಹಿಂದೆ ಪುರುಷರು ಯುದ್ಧಗಳಿಗೆ ಹೋದರೆ ಇಲ್ಲಿ ಮಹಿಳೆಯರು ಇಡೀ ಮನೆಯನ್ನು ನೊಡಿಕೊಳ್ಳುತ್ತಿದ್ದರಂತೆ ಇದೇ ಪದ್ಧತಿ ಇಲ್ಲಿಇಂದಿಗೂ ಮುಂದುವರೆದಿದೆ.
712
Meghalaya
ಮಹಿಳೆಯರು ಸ್ವಂತ ಭೂಮಿಯನ್ನು ಹೊಂದಿದ್ದು, ಕೃಷಿ ಸಂಬಂಧಿ ಕೆಲಸ ಹಾಗೂ ಸಾಮಾಜಿಕ ಪಾಲುದಾರಿಕೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಇಲ್ಲಿ ತಮ್ಮ ಮುಂದಿನ ತಲೆಮಾರಿಗೆ ತಾಯಿಯ ಹೆಸರನ್ನೇ ಮತ್ತೆ ಇಡುತ್ತಾರೆ.
812
Meghalaya
ಇನ್ನು ವಿಶೇಷವೆಂದರೆ ಇಲ್ಲಿ ವರದಕ್ಷಿಣೆಯೂ ಇಲ್ಲ, ಒತ್ತಾಯಪೂರ್ವಕ ಮದುವೆಯೂ ಇಲ್ಲ, ಇಲ್ಲಿನ ಮಹಿಳೆಯರು ಸ್ವತಂತ್ರವಾಗಿರುವುದರ ಧೈರ್ಯಶಾಲಿಗಳು ಆತ್ಮವಿಶ್ವಾಸಿಗಳು ಆಗಿದ್ದಾರೆ.
912
Meghalaya
ಹಾಗಂತ ಈ ಮಾತೃ ಪ್ರಧಾನತೆ ಮತ್ತು ಮಾತೃಪ್ರಧಾನಕ್ಕೆ ತುಂಬಾ ವ್ಯತ್ಯಾಸವಿದೆ. ಇಲ್ಲಿ ಸ್ತ್ರೀಯರು ಪುರುಷರನ್ನು ಡಾಮಿನೆಟ್ ಮಾಡಲ್ಲ.
1012
Meghalaya
ಪುರುಷರು ಹಾಗೂ ಮಹಿಳೆಯರಿಗೆ ಸಮಾನವಾದ ಗೌರವವಿದ್ದು, ಎರಡು ಲಿಂಗವನ್ನು ಸಮಾನವಾಗಿ ಕಾಣುವುದರ ಜೊತೆಗೆ ಸಮತೋಲಿತ ಸಮಾಜದ ಗುರಿ ಹೊಂದಿವೆ ಈ ಎರಡು ಬುಡಕಟ್ಟು ಸಮುದಾಯಗಳು.
1112
Meghalaya
ಮೇಘಾಲಯ ಬಹುತೇಕ ಬುಡಕಟ್ಟು ಜನರನ್ನೇ ಹೊಂದಿರುವ ಪುಟ್ಟ ರಾಜ್ಯ, ಸಾಮಾನ್ಯವಾಗಿ ಬುಡಕಟ್ಟು ಸಮುದಾಯದವರಿಗೆ ಸರಿಯಾದ ಶಿಕ್ಷಣವಿಲ್ಲ ಎಂಬ ಮಾತುಗಳಿವೆ.
1212
Meghalaya
ಆದರೆ ಇಲ್ಲಿ ಬುಡಕಟ್ಟು ಸಮುದಾಯ ಸ್ತ್ರೀ ಪುರುಷರಿಗೆ ಸಮಾನವಾದ ಗೌರವ ನೀಡುವ ಮೂಲಕ ಸರಿಸಮಾಜದ ನಿರ್ಮಾಣ ಮಾಡುತ್ತಿದೆ. ಕೃಷಿಯೇ ಪ್ರಧಾನ ಕಸುಬಾಗಿರುವ ಮೇಘಾಲಯದಲ್ಲಿ ದೇಶದ ಅತ್ಯಂತ ಶ್ರೀಮಂತ ರೈತರಿದ್ದಾರೆ.