ಮುಂದಿನ ದಿನಗಳಲ್ಲಿ ವರ್ಷಕ್ಕೆ ಮುರ್ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡ ಅಶ್ವಿನಿ ಪುನೀತ್. ವಾರದಲ್ಲಿ 2-3 ಕಥೆ ಕೇಳುತ್ತಾರಂತೆ.
ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಪವರ್ ಸ್ಟಾರ್, ಡಾ. ಪುನೀತ್ ರಾಜ್‌ಕುಮಾರ್ ಅಗಲಿ ಅಕ್ಟೋಬರ್ 29ಕ್ಕೆ ಮೂರು ವರ್ಷವಾಗುತ್ತದೆ. ಇಂದಿನ ಅಪ್ಪು ನಡೆಸಿಕೊಂಡು ಬಂದಿರುವ ಕೆಲಸಗಳನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅತ್ತಿಗೆ ಇದ್ದಲ್ಲಿ ನಮ್ಮ ಅಣ್ಣ ಇದ್ದೇ ಇರುತ್ತಾರೆ ಅನ್ನೋ ಮಾತುಗಳನ್ನು ಕೇಳಬಹುದು. 'ನಾನು ಸಿಕ್ಕಾಪಟ್ಟೆ ಬ್ಯುಸಿಯಾಗಿರುವೆ..ಬ್ಯುಸಿಯಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಏಕೆಂದರೆ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತೀನಿ' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.
'ವ್ಯತ್ಯಾಸ ಏನೆಂದರೆ ಈ ಜವಾಬ್ದಾರಿ ಸಂಪೂರ್ಣವಾಗಿ ನನ್ನ ಮೇಲಿದೆ. ಪ್ರತಿ ದಿನವೂ ಹೊಸತನ ಕಲಿಯುತ್ತೀನಿ ಹೊಸ ಚಾಲೆಂಜ್‌ಗಳನ್ನು ಎದುರಿಸುತ್ತೀನಿ. ನಿಜ ಹೇಳಬೇಕು, ನನ್ನ ಕೆಲಸವನ್ನು ನಾನು ಎಂಜಾಯ್ ಮಾಡುತ್ತಿರುವೆ. ಈಗ ಜೀವನ ಒಳ್ಳೆಯ ಹಂತದಲ್ಲಿದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಅಶ್ವಿನಿ ಮಾತನಾಡಿದ್ದಾರೆ. ಇದುವರೆಗೂ ಪಿಆರ್‌ಕೆ ಸಂಸ್ಥೆ ನಿರ್ಮಾಣ ಮಾಡಿರುವ ಪ್ರತಿಯೊಂದು ಚಿತ್ರಕ್ಕೂ ಅಪ್ಪು ಒಪ್ಪಿಗೆ ಮತ್ತು ಪ್ಲ್ಯಾನ್ ಇತ್ತಂತೆ. ಕಳೆದ ಎರಡು ವರ್ಷಗಳಿಂದ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಧೈರ್ಯ ಹೆಚ್ಚಾಗಿದೆ ಎಂದಿದ್ದಾರೆ. 'ಈಗ ನಾವು ನಮ್ಮ ಬ್ಯಾನರ್‌ನಲ್ಲಿ ಬರಲಿರುವ ದೊಡ್ಡ ಬಜೆಟ್ ಕಮರ್ಷಿಯಲ್ ಚಿತ್ರಕ್ಕೆ ಪ್ಲ್ಯಾನ್ ನಡೆಯುತ್ತಿದೆ. ಈ ಚಿತ್ರಕ್ಕೆ ಯುವ ರಾಜ್‌ಕುಮಾರ್ ಲೀಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ನಿರ್ಧಾರದ ಬಗ್ಗೆ ಖುಷಿ ಇದೆ ಆದರೆ ಅಷ್ಟೇ ಚಿಂತೆ ಇದೆ ಏಕೆಂದರೆ ಪ್ರತಿ ಹಂತದಲ್ಲೂ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಕಷ್ಟವಿದೆ' ಎಂದಿದ್ದಾರೆ ಅಶ್ವಿನಿ.
undefined
ಬಿಗ್ ಬಾಸ್ ಮನೆಯಲ್ಲಿರುವ ಉಗ್ರಂ ಮಂಜು ಈ ಕಾರಣಕ್ಕೆ ಮದ್ವೆ ಆಗಿಲ್ಲ!
'ಮೊದಲ ದಿನದಿಂದ ನಮ್ಮೊಟ್ಟಿಗೆ ಕೆಲಸ ಮಾಡುತ್ತಿರುವವರೂ ಈಗಲೂ ಇದ್ದಾರೆ ಆದರೆ ಅಂತಿಮ ನಿರ್ಧಾರ ನನ್ನ ಕೈಯಲ್ಲಿ ಇರುವ ಕಾರಣ ಅದೊಂದು ದೊಡ್ಡ ಚಾಲೆಂಜ್ ಆಗಲಿದೆ. ಇದುವರೆಗೂ ರಿಲೀಸ್ ಆಗಿರುವ ಸಿನಿಮಾಗಳ ನಿರ್ಧಾರವನ್ನು ಅಪ್ಪು ತೆಗೆದುಕೊಂಡಿದ್ದರು. ಆಚಾರ್ ಆಂಡ್ ಕೋ ಚಿತ್ರದ ಮಾತುಕಥೆ ನಡೆಯುತ್ತಿತ್ತು ಅಷ್ಟರಲ್ಲಿ ಎಲ್ಲವೂ ಬದಲಾಗಿತ್ತು. ಚಿತ್ರಕ್ಕೆ ಮುಂದಕ್ಕೆ ತೆಗೆದುಕೊಂಡು ಹೋಗ ಬೇಕಾ ಅಲ್ಲಿಗೆ ನಿಲ್ಲಿಸಬೇಕು..ಮಾಡಿದರೂ ಹೇಗೆ ಮಾಡಬೇಕು ಅನ್ನೋದು ನನ್ನ ನಿರ್ಧಾರ ಆಗಿತ್ತು. ಆಚಾರ್ ಆಂಡ್ ಕೋ ಚಿತ್ರದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ಇದ್ದ ಕಾರಣ ನಿರ್ಧಾರ ಮುಖ್ಯವಾಗಿತ್ತು..ವರ್ಕ್ ಆಗುತ್ತಾ ಇಲ್ವಾ ಎಂದು ನೋಡಬೇಕಿತ್ತು ಆ ಧೈರ್ಯದ ಮೇಲೆ ಮುಂದೆ ನಡೆದೆ ..ಸಿನಿಮಾ ಅದ್ಭುತವಾಗಿ ಮೂಡಿ ಬಂದಿತ್ತು ಅದರ ಬಗ್ಗೆ ನನಗೆ ಖುಷಿ ಇದೆ. ಇನ್ನು ಮುಂದೆ ರಿಲೀಸ್ ಆಗಲಿರುವ ಸಿನಿಮಾಗಳ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತಿರುವೆ. ಸದ್ಯಕ್ಕೆ ಯುವ ಚಿತ್ರದ ತಯಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮಾಡಲು ಒಳ್ಳೆಯ ಕಥೆಗಳನ್ನು ಹುಡುಕುತ್ತಿರುವೆ...ವಾರದಲ್ಲಿ ಮೂರ್ನಾಲ್ಕು ಕಥೆಗಳನ್ನು ಕೇಳುತ್ತಿರುವೆ...ವರ್ಷದಲ್ಲಿ ಎರಡು ಮೂರು ಸಿನಿಮಾ ರಿಲೀಸ್ ಮಾಡಬೇಕು ಅನ್ನೋ ನನ್ನ ಆಸೆ' ಎಂದು ಅಶ್ವಿನಿ ಪುನೀತ್ ಮಾತನಾಡಿದ್ದಾರೆ.
ರಾತ್ರಿ ದಮ್ಕಿ ಹಾಕಿದ್ದ ಜಗದೀಶ್ ಈಗ ಕೈ ಮುಗಿದು ಕ್ಷಮೆ ಕೇಳಿದ್ದಾರೆ; ಡೋಂಗಿ ವಕೀಲ್ ಸಾಬ್ ಎಂದು ಕಾಲೆಳೆದ ನೆಟ್ಟಿಗರು