ರೈತನಿಂದ ವಧು ದಕ್ಷಿಣೆ ಪಡೆದು ಮದುವೆಯಾದ ಹೆಂಡತಿ ಒಂದು ವಾರದಲ್ಲೇ ಬ್ರೋಕರ್‌ನೊಂದಿಗೆ ಪರಾರಿ!

By Sathish Kumar KHFirst Published Oct 3, 2024, 1:29 PM IST
Highlights

ಆಂಧ್ರಪ್ರದೇಶದಲ್ಲಿ ವಧು ದಕ್ಷಿಣೆ ಕೊಟ್ಟು ಮದುವೆಯಾದ ರೈತನೊಬ್ಬನ ಹೆಂಡತಿ ಒಂದು ವಾರದಲ್ಲೇ ಬ್ರೋಕರ್‌ನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಹೆಣ್ಣು ಸಿಗುತ್ತಿಲ್ಲ ಎಂದು ಬ್ರೋಕರ್ ಮೂಲಕ ಮದುವೆಯಾದ ರೈತ ವಂಚನೆಗೆ ಒಳಗಾಗಿದ್ದಾನೆ.

ವಿಜಯವಾಡ (ಅ.03): ಕೃಷಿ ಕೆಲಸ ಮಾಡಿಕೊಂಡಿದ್ದ ರೈತನಿಗೆ ಹೆಣ್ಣು ಸಿಗುತ್ತಿಲ್ಲವೆಂದು ವಧು ದಕ್ಷಿಣೆ ಕೊಟ್ಟು ಮದುವೆಯಾದರೆ, ಒಂದೇ ವಾರದಲ್ಲಿ ಮದುವೆ ಮಾಡಿಸಿದ ಬ್ರೋಕರ್‌ನೊಂದಿಗೆ ಹೆಂಡತಿ ಪರಾರಿ ಆಗಿರುವ ಘಟನೆ ನಡೆದಿದೆ. ಹೆಂಡತಿ ಮನೆ ಬಿಟ್ಟು ಓಡಿ ಹೋಗಿದ್ದು, ಮೂರ್ನಾಲ್ಕು ದಿನದ ಬಳಿಕ ತಾನು ವಂಚನೆಗೆ ಒಳಗಾಗಿದ್ದಾಗಿ ರೈತನಿಗೆ ತಿಳಿದುಬಂದಿದೆ.

ಈ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಹಿಂದೂಪುರಂ ಮಂಡಲದ ರಾಚಪಲ್ಲಿಯಲ್ಲಿ ನಡೆದಿದೆ. ಕೃಷಿಕ ವೇಮರೆಡ್ಡಿ ಪಕ್ಕದ ಜಿಲ್ಲೆಯ ಭೀಮಾವರಂ ಸತ್ಯವತಿ ನಗರದ ಮಹಿಳೆಯನ್ನು ಮದುವೆ ಮಾಡಿಕೊಂಡಿದ್ದಾನೆ. ಆದರೆ, ಈಕೆ ವಧು ದಕ್ಷಿಣೆ ಪಡೆದು ಮದುವೆ ಮಾಡಿಕೊಂಡು ಒಂದು ವಾರಕ್ಕೆ ತವರು ಮನೆಗೆಂದು ಹೋದವಳು ವಾಪಸ್ ಬರದೇ ಬ್ರೋಕರ್‌ನೊಂದಿಗೆ ಪರಾರಿ ಆಗಿದ್ದಾಳೆ. ಇದೀಗ ಒಂದೂ ವಾರದಲ್ಲಿ ಮದುವೆ ಮಾಡಿಕೊಳ್ಳುವುದಕ್ಕೆ ಲಕ್ಷಾಂತರ ರೂ. ಹಣ ಕಳೆದುಕೊಂಡ ರೈತ, ಇತ್ತ ಹೆಂಡತಿಯೂ ಇಲ್ಲ, ಅತ್ತ ಹಣವೂ ಇಲ್ಲ ಎಂಬಂತೆ ಎಲ್ಲವನ್ನು ಕಳೆದುಕೊಂಡು ವಂಚನೆಗಿಳಗಾಗಿ ಪೊಲೀಸ್ ಠಾಣೆಗೆ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ.

Latest Videos

ಘಟನೆ ನಡೆದಿದ್ದಾರೂ ಹೇಗೆ?
ನಾನು ಅಪ್ಪ ಅಮ್ಮನೊಂದಿಗೆ ಇರಬೇಕೆಂದು ಯಾವುದೇ ಕೆಲಸಕ್ಕೆ ಹೋಗದೇ ಕೃಷಿ ಕೆಲಸವನ್ನೇ ಮಾಡಿಕೊಂಡಿದ್ದ ರೈತನಿಗೆ ಹೆಣ್ಣು ಸಿಗುತ್ತಿರಲಿಲ್ಲ. ಪಕ್ಕದ ಊರಿನ ಬ್ರೋಕರ್‌ನನ್ನು ಸಂಪರ್ಕ ಮಾಡಿ ಹೇಗಾದರೂ ಮಾಡಿ ನನಗೊಂದು ಹೆಣ್ಣು ಹುಡುಕಿಕೊಡಿ ಎಂದು ಕೇಳಿದ್ದಾನೆ. ಆಗ ನೋಡಪ್ಪಾ ನೀನು ಕೃಷಿ ಕೆಲಸ ಮಾಡಿಕೊಂಡಿದ್ದೀಯ. ಈಗಾಗಲೇ ನಿನಗೆ 40 ವರ್ಷವಾಗಿದೆ. ನಿನಗೆ ಹೆಣ್ಣು ಸಿಗುವುದು ತುಂಬಾ ಕಷ್ಟ ಎಂದು ಹೇಳಿದ್ದಾನೆ. ಆಗ ರೈತ ನೋಡಿ, ನಮ್ಮ ತಂದೆ ತಾಯಿಗೂ ವಯಸ್ಸಾಗಿದ್ದು, ಮನೆಗೊಂದು ಸೊಸೆಯ ಅಗತ್ಯವಿದೆ. ಹೇಗಾದರೂ ಮಾಡಿ ಹೆಣ್ಣು ಹುಡುಕಿಕೊಡಿ ನಿಮಗೆ ಒಂದಿಷ್ಟು ಬ್ರೋಕರ್ ಫೀಸು ಜಾಸ್ತಿ ಕೊಡುತ್ತೇನೆ ಎಂದಿದ್ದಾನೆ.

ಗಂಡನಿಗೆ ನಿದ್ರೆ ಮಾತ್ರೆ ಹಾಕಿ ಬಾಯ್‌ಫ್ರೆಂಡ್ ಜತೆ ಚಕ್ಕಂದ; ಆಮೇಲೆ ಆಡಿದ ಆಟ ಒಂದೆರಡಲ್ಲ!

ಆಗ ಒಂದಿಷ್ಟು ಹಣವನ್ನು ಪಡೆದು ಬ್ರೋಕರ್ ಶೀಘ್ರದಲ್ಲಿ ನಿಮಗೆ ಸರಿ ಹೊಂದು ಹೆಣ್ಣು ಹುಡುಕಿಕೊಂಡು ಬರುವುದಾಗಿ ಹೇಳಿ ಹೋಗಿದ್ದಾನೆ. ಆಗ ಕೃಷಿಕನ ಬಳಿ ಹೆಚ್ಚು ಹಣ ಇದ್ದು, ಹೇಗಾದರೂ ಮಾಡಿ ಕಿತ್ತುಕೊಳ್ಳಬೇಕು ಎಂದು ಮೋಸದ ಜಾಲ ಸೃಷ್ಟಿಸಿದ್ದಾನೆ. ಒಂದು ವಾರದ ನಂತರ ಕೃಷಿಕನ ಮನೆಗೆ ಹೋದ ಬ್ರೋಕರ್, ನಿಮಗೆ 40 ವರ್ಷವೆಂದು ಹೇಳಿದ್ದಕ್ಕೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಜೊತೆಗೆ ಹೆಣ್ಣು ಮಕ್ಕಳು ಮದುವೆ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಆದರೆ, ಒಂದು ಹೆಣ್ಣು ಒಪ್ಪಿಕೊಂಡಿದ್ದು, ಅವರಿಗೆ ನೀವೇ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾನೆ. ಜೊತೆಗೆ, ನನಗೂ ಹೆಚ್ಚು ಕಮೀಷನ್ ಕೊಡಬೇಕು ಎಂದು ಹೇಳಿದ್ದಾನೆ. ಈ ಎಲ್ಲ ಕಂಡೀಷನ್‌ಗೆ ಒಪ್ಪಿಕೊಂಡ ರೈತ ಹೇಗಾದರೂ ಆಗಲಿ, ವಧು ದಕ್ಷಿಣೆ ಕೊಟ್ಟು ಜೊತೆಗೆ ನಿಮಗೆ ಹೆಚ್ಚು ಕಮೀಷನ್ ಕೊಟ್ಟು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

ಇದಾದ ಮೂರ್ನಾಲ್ಕು ದಿನಗಳಲ್ಲಿ ಬ್ರೋಕರ್ ಒಂದು ಹೆಣ್ಣು ಕರೆದುಕೊಂಡು ಬಂದಿದ್ದಾನೆ. ಆಗ ಬ್ರೋಕರ್ ಈ ಹುಡುಗಿ ನಿನ್ನನ್ನು ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದು, ಆಕೆಗೆ ಒಂದಿಷ್ಟು ಹಣವನ್ನು ವಧು ದಕ್ಷಿಣೆಯಾಗಿ ಭದ್ರತಾ ದೃಷ್ಟಿಯಿಂದ ಕೊಟ್ಟು ಸರಳವಾಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಿ ಎಂದು ಹೇಳಿದ್ದಾನೆ. ಈಕೆಗೆ ತಂದೆ ತಾಯಿ ಇಲ್ಲ, ನೀವೇ ನಿಮ್ಮ ಸಂಬಂಧಿಕರೊಂದಿಗೆ ಸೇರಿ ಮನೆ ತುಂಬಿಸಿಕೊಳ್ಳಿ ಎಂದಿದ್ದಾನೆ. ಈಗಲೂ ಬ್ರೋಕರ್ ಮೋಸವನ್ನು ರೈತ ಅರಿಯದೇ ಹೋದನು. ಬ್ರೋಕರ್‌ಗೆ 4 ಲಕ್ಷ ರೂ. ಕಮೀಷನ್ ಹಣವನ್ನು ಕೊಟ್ಟಿದ್ದಾನೆ. ಇದಾದ ನಂತರ ವಧು ದಕ್ಷಿಣೆಯಾಗಿ ಹಣ, ಚಿನ್ನಾಭರಣ ಎಲ್ಲವನ್ನೂ ಮಾಡಿಸಿ ಹಾಕಿದ್ದಾನೆ. ಸರಳವಾಗಿ ಆದರೂ ಗ್ರಾಮಸ್ಥರಿಗೆಲ್ಲಾ ಊಟ ಹಾಕಿಸಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದಾನೆ.

ಕನ್ನಡತಿ ಧಾರಾವಾಹಿ ನಟಿ ಮದುವೆ ಪ್ರಸ್ತಾಪಕ್ಕೆ ಹೆದರಿ ಪ್ರಾಣ ಬಿಟ್ಟ ಯುವಕ

ಹೊಸದಾಗಿ ಮದುವೆ ಮಾಡಿಕೊಂಡ ಹೆಂಡತಿಯೊಂದಿಗೆ ಒಂದೆರಡು ದಿನ ದೇವಸ್ಥಾನಗಳಿಗೆ ಸುತ್ತಾಡಿ, ಮದುವೆ ಶಾಸ್ತ್ರಗಳೆಲ್ಲವನ್ನೂ ಮಾಡಿಕೊಂಡಿದ್ದಾರೆ. ಆಗ ಹೆಂಡತಿ ನನ್ನ ತಂದೆ ತಾಯಿಗೆ ಅನಾರೋಗ್ಯ ಅಲ್ಲಿಗೆ ಹೋಗಬೇಕು ಎಂದು ಹೇಳಿದ್ದಾಳೆ. ಆಗ ಗಂಡ ನಿನಗೆ ತಂದೆ ತಾಯಿ ಇಲ್ಲವೆಂದು ಹೇಳಿದ್ದೀಯಾ ಎಂದಿದ್ದಾನೆ. ನಾನು ಯಾವಾಗ ನಿಮಗೆ ಹೇಳಿದ್ದೇನೆ. ನಾನು ಮನೆಯಲ್ಲಿ ಗೊತ್ತಿಲ್ಲದಂತೆ ನಿಮ್ಮನ್ನು ಮದುವೆ ಮಾಡಿಕೊಂಡಿದ್ದೇನೆ. ನಿಧಾನವಾಗಿ ಅವರಿಗೆ ತಿಳಿಸೋಣ. ಈಗ ಅನಾರೋಗ್ಯ ಇದ್ದು ನೋಡಿಕೊಂಡು ಬರುವುದಾಗಿ ಹೇಳಿ ಊರಿಗೆ ಹೋಗೋಣ ಎಂದಿದ್ದಾಳೆ. ಆಗ ಮನೆಯವರು ಮದುವೆಯಾದ ಹೆಂಡತಿಯನ್ನು ಒಬ್ಬಳನ್ನು ಕಳಿಸದೇ ಗಂಡ ಹೆಂಡತಿ ಇಬ್ಬರನ್ನೂ ಕಳಿಸಿದ್ದಾರೆ.

ಆಗ ರೈಲ್ವೆ ಸ್ಟೇಷನ್‌ವರೆಗೆ ಗಂಡನೊಂದಿಗೆ ಹೋದ ಮಹಿಳೆ, ಈಗ ಮನೆಯಲ್ಲಿ ತಾಯಿಗೆ ಅನಾರೋಗ್ಯದ ಸಂದರ್ಭದಲ್ಲಿ ಹೇಳುವುದು ಬೇಡ. ಈಗ ನಾನೊಬ್ನಬಳೇ ಹೋಗಿ ನೆಯವರನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಮನವೊಲಿಸಿದ್ದಾಳೆ. ಆಗ ಒಪ್ಪಿಕೊಂಡ ಗಂಡ ಹೆಂಡತಿ ಒಬ್ಬಳನ್ನೇ ತವರು ಮನೆ ಭೀಮಾವರಂಗೆ ಕಳಿಸಿದ್ದಾನೆ. ಆದರೆ, ಊರಿಗೆ ತಲುಪಿದ್ದಾಗಿ ಹೇಳಿದ ಹೆಂಡತಿ ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಕರೆ ಮಾಡಿ ಸಂಪರ್ಕಕ್ಕೆ ಸಿಗದಾಗ ಬ್ರೋಕರ್‌ಗೆ ಕರೆ ಮಾಡಿದ್ದಾನೆ. ಬ್ರೋಕರ್ ಈತನ ನಂಬರ್ ಅನ್ನು ಬ್ಲಾಕ್ ಲಿಸ್ಟ್‌ಗೆ ಹಾಕಿದ್ದು, ಹೆಚ್ಚು ಬಾರಿ ಕರೆ ಮಾಡಿದಾಗ ಸ್ವಿಚ್ ಆಫ್ ಮಾಡಿದ್ದಾನೆ. ಗಂಡನೇ ಭೀಮಾವರಂಗೆ ಹೋಗಿ ವಿಚಾರಣೆ ಮಾಡಿದಾಗೆ ಆಕೆ ಕೊಟ್ಟ ಅಡ್ರೆಸ್ ತಪ್ಪಾಗಿದ್ದು, ತಾನು ಮೋಸ ಹೋಗಿದ್ದಾಗಿ ತಿಳಿದುಬಂದಿದೆ. ಬ್ರೋಕರ್ ಹಾಗೂ ಮಹಿಳೆ ಇಬ್ಬರೂ ಸೇರಿಕೊಂಡು ವಂಚನೆ ಮಾಡಿದ್ದಾರೆ ಎಂಬುದನ್ನು ಅರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

click me!