ಪ್ರೆಗ್ನೆಂಟ್​ ಆಗ್ತಾಳೆ, ಮಗು ಬೀಳಿಸ್ತಾಳೆ, ಕಂಕುಳ ಕೂದ್ಲು ತೋರಿಸ್ತಾಳೆ... ಕಾರಣ ಕೇಳಿದ್ರೆ ಗಂಡಸ್ರು ಸುಸ್ತಾಗ್ತೀರಾ!

Published : Oct 03, 2024, 09:01 PM ISTUpdated : Oct 03, 2024, 09:03 PM IST
ಪ್ರೆಗ್ನೆಂಟ್​ ಆಗ್ತಾಳೆ, ಮಗು ಬೀಳಿಸ್ತಾಳೆ, ಕಂಕುಳ ಕೂದ್ಲು ತೋರಿಸ್ತಾಳೆ... ಕಾರಣ ಕೇಳಿದ್ರೆ ಗಂಡಸ್ರು ಸುಸ್ತಾಗ್ತೀರಾ!

ಸಾರಾಂಶ

ಪ್ರೆಗ್ನೆಂಟ್​ ಆಗ್ತಾಳೆ, ಮಗು ಬೀಳಿಸ್ತಾಳೆ, ಕಂಕುಳ ಕೂದ್ಲು ತೋರಿಸ್ತಾಳೆ ಇನ್ನು ಏನೇನೋ ಮಾಡ್ತಾಳೆ ಈ ಮಹಿಳೆ. ಅಷ್ಟಕ್ಕೂ ಇವಳು ಹೀಗೆಲ್ಲಾ ಮಾಡೋದಕ್ಕೆ ಕಾರಣ ಏನ್​ ಗೊತ್ತಾ?   

ಈ ಮಹಿಳೆ ಪ್ರೆಗ್ನೆಂಟ್​ ಆಗ್ತಾಳೆ, ಮಗು ಬೀಳಿಸ್ತಾಳೆ, ಕಂಕುಳ ಕೂದ್ಲು ತೋರಿಸ್ತಾಳೆ, ಗಂಡಸರಂತೆ ಒಂದೇ ಕಿವಿಗೆ ಓಲೆ ಹಾಕ್ತಾಳೆ, ಗಂಡಸರ ರೀತಿ ಡ್ರೆಸ್​ ಮಾಡಿಕೊಳ್ತಾಳೆ... ಇನ್ನು ಏನೇನೋ. ಹಾಗಂತ ಇವಳೇನೂ ಹುಚ್ಚಿ ಅಂದುಕೊಂಡ್ರೆ ತಪ್ಪು. ಸರಿಯಾಗೇ ಇದ್ದಾಳೆ.  ಆದ್ರೂ ಹೀಗೆ ಯಾಕೆ ಮಾಡ್ತಾಳೆ ಗೊತ್ತಾ? ಇದರ ಕಾರಣ ಕೇಳಿದ್ರೆ ಹೆಂಗಸರಿಗಿಂತ್ಲೂ ಹೆಚ್ಚಾಗಿ ಗಂಡಸ್ರು ಬೆಚ್ಚಿ ಬೀಳೋದು ಗ್ಯಾರೆಂಟಿ. ಅಷ್ಟಕ್ಕೂ ಅದ್ಯಾಕೆ ಇವಳು ಹೀಗೆ ಮಾಡ್ತಾಳೆ ಗೊತ್ತಾ? ಗಂಡಸರು ತನ್ನನ್ನು ನೋಡ್ತಾಳೆ, ಫ್ಲರ್ಟ್​ ಮಾಡ್ತಾರೆ ಅಂತ ತನ್ನನ್ನು ನೋಡಬಾರದು ಎನ್ನುವ ಕಾರಣಕ್ಕೆ ಹೀಗೆಲ್ಲಾ ಮಾಡ್ತಾಳಂತೆ!

ಕೆಳಗಡೆ ವಿಡಿಯೋ ಇದ್ದು, ಈಕೆ ಏನೇನು ಮಾಡ್ತಾಳೆ ಎನ್ನೋದನ್ನು ಒಮ್ಮೆ ನೋಡಿಬಿಡಿ. ಅಷ್ಟಕ್ಕೂ ಇವಳೇನು ನಿಜವಾಗಿ ಪ್ರೆಗ್ನೆಂಟ್​ ಆಗಿದ್ದಲ್ಲ, ಇವಳು ಬೀಳಿಸೋ ಮಗು ನಿಜವಾದದ್ದೂ ಅಲ್ಲ, ಕಂಕುಳಿನಲ್ಲಿ ಕೂದಲು ಕೂಡ ಕೃತಕವಾದದ್ದು. ಇವೆಲ್ಲಾ ಬೇಕಂತಲೇ ಮಾಡುತ್ತಾಳಂತೆ ಈಕೆ. ಗೊಂಬೆಯನ್ನು ಕ್ಯಾರಿ ಚೇರ್​ನಲ್ಲಿ ಮಗುವಿನಂತೆ ಕರೆದುಕೊಂಡು ಹೋಗುವ ಈಕೆ, ಹತ್ತಿರ ಗಂಡಸರು ಬಂದಾಗ ಅದಕ್ಕೆ ಬಾಟಲಿಯಿಂದ ಹಾಲು ಕುಡಿಸುವ ಹಾಗೆ ಮಾಡುತ್ತಾಳೆ. ಒಂದಿಷ್ಟು ಬಟ್ಟೆ ಸುತ್ತಿರುವ ಗಂಡನ್ನು ಪ್ರೆಗ್ನೆಂಟ್​ ರೀತಿಯಲ್ಲಿ ಹೊಟ್ಟೆಗೆ ಹಾಕಿಕೊಂಡಿರುತ್ತಾಳೆ. ಕಂಕುಳಿನಲ್ಲಿನ ಕೂದಲು ನೋಡಿ ಗಂಡಸರು ಹತ್ತಿರ ಬರಲ್ವಂತೆ. ಹೀಗೆಲ್ಲಾ ಪ್ಲ್ಯಾನ್​ ಮಾಡ್ತಿದ್ದಾಳೆ ಈಕೆ.

ಕೋಟಿ ಯುವಕರಿಗೆ ಉದ್ಯೋಗಕ್ಕೆ ದಾರಿ: ಪ್ರಧಾನಿ ಇಂಟರ್ನ್‌ಷಿಪ್ ಯೋಜನೆಗೆ ಸಿಕ್ಕಿತು ಚಾಲನೆ- ಯಾರೆಲ್ಲಾ ಅರ್ಹರು? ಡಿಟೇಲ್ಸ್‌ ಇಲ್ಲಿದೆ

ಕುತೂಹಲದ ವಿಷಯ ಎಂದರೆ, ಇದಕ್ಕೆ ಸಹಸ್ರಾರು ಕಮೆಂಟ್​ ಬಂದಿದ್ದು, ಬಹುತೇಕ ಎಲ್ಲರೂ ಅದರಲ್ಲೂ ಹೆಚ್ಚಾಗಿ ಮಹಿಳೆಯರು ಇದಕ್ಕೆ ಭೇಷ್​ ಭೇಷ್​ ಎಂದಿದ್ದಾರೆ. ತಾವು ಕೂಡ ಹೀಗೆ  ಮಾಡುವುದಾಗಿ ಹೇಳುತ್ತಿದ್ದಾರೆ. ಇನ್ನು ಹಲವರು ಈಗಿನ ಕೆಲವು ಪುರುಷರು ಗರ್ಭಿಣಿಯರನ್ನೂ ಬಿಡುವುದಿಲ್ಲ, ಅವರಿಗೆ ಹೆಣ್ಣು ಪ್ರಾಣಿ ಸಿಕ್ಕರೂ ಸಾಕು, ನಿನ್ನ ಇಂಥ ಟ್ರಿಕ್ಸ್​ ವರ್ಕ್​ಔಟ್​ ಆಗುವುದಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ನಿನ್ನ ಮೂತಿ ನೋಡಿದರೆ ಬಿಡು ಯಾವ ಗಂಡಸೂ ಹತ್ತಿರ ಬರಲ್ಲ ಎಂದಿದ್ರೆ, ಮತ್ತೆ  ಕೆಲವರು ನೀನು ಇರೋದೇ ಗಂಡಸರ ರೀತಿ, ಅದಕ್ಯಾಕೆ ಗಂಡಸರ ವೇಷ ಹಾಕೋದು ಎಂದೂ ಟ್ರೋಲ್​ ಮಾಡಿದ್ದಾರೆ. 

ಅದೇನೇ ಇದ್ದರೂ ದೇಶ, ಭಾಷೆಯ ಗಡಿ ದಾಟಿ ಹೆಣ್ಣು ಎಷ್ಟು ಅಸುರಕ್ಷಿತವಾಗಿದ್ದಾಳೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ ಎಂದೇ ಹೇಳಲಾಗುತ್ತಿದೆ. ಗಂಡಿನ ಕಣ್ಣಿಗೆ ತಾನು ಕುರೂಪಿಯಾಗಿ ಕಾಣಿಸುವ ಸಲುವಾಗಿ ಇಷ್ಟೆಲ್ಲಾ ಮಾಡುತ್ತಿದ್ದಾಳೆ ಎಂದರೆ ಹೆಣ್ಣಿಗೆ ಯಾವ ರೀತಿಯ ಭಯ ಇದೆ ಎನ್ನುವುದು ತಿಳಿಯುತ್ತದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ. ಹೆಣ್ಣಿಗೆ ಇರುವ ಭಯದ ವಾತಾವರಣ ಕುರಿತು ಈ ವಿಡಿಯೋ ಚರ್ಚೆಗೆ ನಾಂದಿ ಹಾಡಿದೆ. 

ಗಗನಸಖಿಯಂತೆ ಇನ್ಮುಂದೆ ಬಸ್ಸಲ್ಲೂ ಬರ್ತಿದ್ದಾಳೆ ‘ಶಿವನೇರಿ ಸುಂದರಿ': ಪ್ರಯಾಣಿಕರಿಗೆ ಬಸ್‌ ಸಖಿ ಭಾಗ್ಯ!

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!