ಇದ್ದಕ್ಕಿದ್ದಂತೆ ಕುಸಿದ ಹಳೇ ಕಟ್ಟಡ: ತಾಯಿ ಮಗು ಜಸ್ಟ್ ಮಿಸ್: ವೀಡಿಯೋ ವೈರಲ್

Published : Oct 03, 2024, 06:07 PM IST
ಇದ್ದಕ್ಕಿದ್ದಂತೆ ಕುಸಿದ ಹಳೇ ಕಟ್ಟಡ: ತಾಯಿ ಮಗು ಜಸ್ಟ್ ಮಿಸ್: ವೀಡಿಯೋ ವೈರಲ್

ಸಾರಾಂಶ

ಲೂಧಿಯಾನದಲ್ಲಿ  ಕಟ್ಟಡವೊಂದು ಹಠಾತ್ ಕುಸಿದಿದ್ದು ತಾಯಿ ಮತ್ತು ಮಗು ಪವಾಡಸದೃಶವಾಗಿ ಪಾರಾದ ಘಟನೆ ನಡೆದಿದೆ.  ಸಿಸಿಟಿವಿ ದೃಶ್ಯಾವಳಿಗಳು ತಾಯಿ ತನ್ನ ಮಗುವನ್ನು ಎತ್ತಿಕೊಂಡು ಓಡುತ್ತಿರುವುದನ್ನು ತೋರಿಸುತ್ತವೆ.

ಲೂಧಿಯಾನ: ಕಟ್ಟಡವೊಂದು ಇದ್ದಕ್ಕಿದ್ದಂತೆ ಕುಸಿದು ಬೀಳಲು ಆರಂಭಿಸಿದ್ದು, ಈ ಅವಘಡದಲ್ಲಿ ಕೆಲ ಸೆಕೆಂಡ್‌ಗಳಲ್ಲಿ ತಾಯಿ ಮಗು ಇಬ್ಬರೂ ಪವಾಡ ಸದೃಶರಾಗಿ ಪಾರಾದ ಅಚ್ಚರಿಯ ಘಟನೆ ಪಂಜಾಬ್‌ನ ಲೂಧಿಯಾನಾದಲ್ಲಿ ನಡೆದಿದೆ. ನಾಲ್ಕು ಅಂತಸ್ಥಿನ ಕಟ್ಟಡವೊಂದು ಇದಕ್ಕಿದ್ದಂತೆ ಕುಸಿಯಲು ಶುರುವಾಗಿದ್ದು, ಈ ವೇಳೆ ತಾಯಿ ಹಾಗೂ ಮಗು ಹಾಗೂ ಇನ್ನು ಕೆಲವರು ಆ ಕಟ್ಟಡದ ಪಕ್ಕದಲ್ಲಿ ನಡೆದು ಹೋಗುತ್ತಿದ್ದರು. ಆದರೆ ಈ ಕಟ್ಟಡ ಬೀಳುತ್ತಿರುವುದರ ಅರಿವಾಗುತ್ತಿದ್ದಂತೆ ತಾಯಿ ಮಗುವನ್ನೆತ್ತಿಕೊಂಡು ಓಡಲು ಶುರು ಮಾಡಿದ್ದು, ಸಾವಿನ ದವಡೆಯಿಂದ ಕೆಲ ಕ್ಷಣದಲ್ಲಿ ಪಾರಾಗಿದ್ದಾರೆ. ಈ ಆಘಾತಕಾರಿ ದೃಶ್ಯ ಸಂಪೂರ್ಣವಾಗಿ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಲೂಧಿಯಾನದ ಹಳೇ ಮಾರುಕಟ್ಟೆ ಬಳಿ ನಿನ್ನೆ ಈ ಘಟನೆ ನಡೆದಿದೆ. ಕುಸಿದ ಕಟ್ಟಡವೂ ಅಂದಾಜು 100 ವರ್ಷ ಹಳೆಯ ಕಟ್ಟಡವಾಗಿದ್ದು, ತಾಯಿಯೋರ್ವಳ ಸಮಯಪ್ರಜ್ಞೆಯಿಂದ ಅಮ್ಮ ಮಗು ಇಬ್ಬರು ಈ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಈ ತಾಯಿ ಮಗುವಿನ ಜೊತೆ ಅಲ್ಲಿದ್ದ ಇನ್ನು ಕೆಲ ಯುವಕರು ಕಟ್ಟಡ ಬೀಳುತ್ತಿರುವುದನ್ನು ನೋಡಿ ಓಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಕಟ್ಟಡ ಅವಶೇಷಗಳು ಕುಸಿದು ಮಹಿಳೆ ಪಕ್ಕದಲ್ಲೇ ಬೀಳುತ್ತಿರುವುದನ್ನು ಕಾಣಬುದಾಗಿದೆ. ಈ ತಾಯಿ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಕಟ್ಟಡ ಕುಸಿಯುತ್ತಿದ್ದಂತೆ ತಾಯಿ ಮಗುವನ್ನೆತ್ತಿಕೊಂಡು ಓಡಿದರೂ ಆಕೆ ನಡುವೆ ಕುಸಿದು ಬಿದ್ದಿರುವುದು ವೀಡಿಯೋದಲ್ಲಿದೆ. ಆದರೆ ಅದೃಷ್ಟವಶಾತ್ ದೊಡ್ಡ ಅನಾಹುತದಿಂದ ಆಕೆ ಪಾರಾಗಿದ್ದಾಳೆ. 

ಜಗನ್ನಾಥಯಾತ್ರೆ ವೇಳೆ ಅವಘಡ, ರಥಯಾತ್ರೆ ಸಾಗುತ್ತಿದ್ದಂತೆ ಕುಸಿದ ಕಟ್ಟಡ, ವಿಡಿಯೋ ವೈರಲ್!

 ಈ ಕಟ್ಟಡವೂ ಶಿಥಿಲವಾದ ಸ್ಥಿತಿಯಲ್ಲಿದ್ದು, ಅನೇಕ ಬಾರಿ ಈ ಕಟ್ಟಡವನ್ನು ತೆರವುಗೊಳಿಸುವಂತೆ ಸ್ಥಳೀಯರು ಸ್ಥಳೀಯಾಡಳಿತ ಹಾಗೂ ಕಟ್ಟಡ ಮಾಲೀಕರಿಗೆ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ ನಿನ್ನೆ ಈ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ಅವಘಢದಲ್ಲಿ ಪಾರಾದವರನ್ನು ಖುಷಿ ಆರೋರಾ ಹಾಗೂ ಅವರ ಒಂದೂವರೆ ವರ್ಷದ ಮಗು ಎಂದು ಗುರುತಿಸಲಾಗಿದೆ. ಕೆಲ ಮೂಲಗಳ ಪ್ರಕಾರ ಕಟ್ಟಡದ ಅವಶೇಷಗಳ ಸಣ್ಣ ತುಂಡುಗಳು ಇವರ ಮೇಲೆ ಬಿದ್ದಿದ್ದು, ಇದರಿಂದ ಖುಷಿ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ