ಮದುವೆಯಲ್ಲಿ ಮೆಹಂದಿ ಹಾಕಿರ್ಲಿಲ್ಲ ಸೋನಾಕ್ಷಿ ಸಿನ್ಹಾ, ಇದಕ್ಕೆ ಕಾರಣವಾಗಿದ್ದು ಜಹೀರ್‌ !

By Roopa Hegde  |  First Published Oct 4, 2024, 2:23 PM IST

ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸಿಂಪಲ್ ಆಗಿ ಮದುವೆ ಆಗಿದ್ದಾರೆ. ಮದುವೆ ಸಮಯದಲ್ಲಿ ಸೋನಾಕ್ಷಿ ಮೆಹಂದಿ ಹಾಕಿರ್ಲಿಲ್ಲ. ಇದಕ್ಕೆ ಕಾರಣವನ್ನು ಮೂರು ತಿಂಗಳ ನಂತ್ರ ಸೋನಾಕ್ಷಿ ಹೇಳಿದ್ದಾರೆ. 
 


ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Bollywood actress Sonakshi Sinha) ಏಳು ವರ್ಷ ಪ್ರೀತಿಸಿದ್ದ ಜಹೀರ್ (Zaheer) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ನವದಾಂಪತ್ಯ ಸುಖವನ್ನು ಸವಿಯುತ್ತಿದ್ದಾರೆ. ಯುವ ಜೋಡಿ ಜೂನ್ 23ರಂದು ವಿವಾಹ ಬಂಧನದಲ್ಲಿ ಬಂಧಿಯಾಗಿದ್ದು, ಈಗ ಹನಿಮೂನ್ ಪಿರಿಯಡ್ ಎಂಜಾಯ್ ಮಾಡ್ತಿದ್ದಾರೆ. ತುಂಬಾ ಸರಳವಾಗಿ ಮದುವೆಯಾದ ಸೋನಾಕ್ಷಿ ಸಿನ್ಹಾ ಫೋಟೋ, ವಿಡಿಯೋಗಳು ಈಗ್ಲೂ ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗ್ತಾನೆ ಇರುತ್ತೆ. ಬಾಲಿವುಡ್ ಹಿರಿಯ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಮಗಳ ಮೆಹಂದಿ, ಸಂಗೀತ ಅದ್ಧೂರಿಯಾಗಿ ನಡೆಯಲಿದ್ದು, ಅದನ್ನು ಕಣ್ತುಂಬಿಕೊಳ್ಬಹುದು ಅಂದ್ಕೊಂಡಿದ್ದವರಿಗೆ ಸ್ವಲ್ಪ ನಿರಾಶೆಯಾಗಿತ್ತು. ಯಾಕೆಂದ್ರೆ ಸೋನಾಕ್ಷಿ ಸಿನ್ಹಾ, ಮದುವೆ ಸಮಯದಲ್ಲಿ ತಮ್ಮ ಕೈಗೆ ಮೆಹಂದಿ ಹಾಕೊಂಡಿರಲಿಲ್ಲ. ಮೆಹಂದಿಯಲ್ಲಿ ಜಹೀರ್ ಹೆಸರು ಬರೆದಿರಲಿಲ್ಲ. ಅವರ ಮದುವೆ ಫೋಟೋದಲ್ಲಿ ಮೆಹಂದಿ ಕಣ್ಣಿಗೆ ಬೀಳಲಿಲ್ಲ. ಮೆಹಂದಿ ಕಾರ್ಯಕ್ರಮ ಏಕೆ ನಡೆದಿಲ್ಲ, ತಮ್ಮ ಕೈ ಮೆಹಂದಿ ರಂಗಿನಿಂದ ಏಕೆ ಕಂಗೊಳಿಸಿಲ್ಲ ಎಂಬುದನ್ನು ಸೋನಾಕ್ಷಿ ಸಿನ್ಹಾ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಸೋನಾಕ್ಷಿ ಸಿನ್ಹಾ ಮೆಹಂದಿ ಹಚ್ಚದಿರಲು ಜಹೀರ್ ಕಾರಣ : ಸೋನಾಕ್ಷಿ ಸಿನ್ಹಾ ಮದುವೆ ಸಮಯದಲ್ಲಿ ತಮ್ಮ ಕೈ ಬೆರಳುಗಳಿಗೆ ಮೆಹಂದಿ (Mehndi) ಬದಲು ಅಲ್ತಾ ಹಚ್ಚಿದ್ದರು. ಅದಕ್ಕೆ ಒಂದು ಕಾರಣ ಜಹೀರ್ ಎನ್ನುತ್ತಾರೆ ಸೋನಾಕ್ಷಿ. ವಾಸ್ತವವಾಗಿ ಜಹೀರ್ ಗೆ ಮೆಹಂದಿ ವಾಸನೆ ಆಗಿಬರೋದಿಲ್ಲ. ಮೆಹಂದಿ ಬದಲು ಏನು ಮಾಡ್ಬಹುದು ಎಂಬುದನ್ನು ನಾನು ಆಲೋಚನೆ ಮಾಡ್ತಿದ್ದೆ ಎಂದಿದ್ದಾರೆ ಸೋನಾಕ್ಷಿ. 

Tap to resize

Latest Videos

undefined

Ignore ಮಾಡಿದ್ರೂ saif ಕೈ ಹಿಡಿದ ಕರೀನಾ, ಸ್ವೀಟಾಗಿ ಸೇಡು ತೀರಿಸಿಕೊಂಡ ಛೋಟಾ ನವಾಬ್

ಸೋಮಾರಿ ಸೋನಾಕ್ಷಿ : ಬರೀ ಜಹೀರ್ ಕಾರಣಕ್ಕೆ ಮಾತ್ರವಲ್ಲ ಸೋಮಾರಿತನದಿಂದಲೂ ಸೋನಾಕ್ಷಿ ಈ ನಿರ್ಧಾರಕ್ಕೆ ಬಂದಿದ್ದರು. ಸೋನಾಕ್ಷಿಗೆ ಒಂದೇ ಜಾಗದಲ್ಲಿ ತುಂಬಾ ಸಮಯ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮೆಹಂದಿ ಅಂದ್ರೆ ಕನಿಷ್ಠ ಮೂರುಗಂಟೆಯಾದ್ರೂ ಒಂದೇ ಕಡೆ ಕುಳಿತುಕೊಳ್ಬೇಕು. ಜೊತೆಗೆ ನನ್ನ ಮೊಬೈಲ್ ಮುಟ್ಟುವಂತಿಲ್ಲ. ಇದು ನನಗೆ ಹಿಂಸೆ ಎನ್ನಿಸ್ತು ಎನ್ನುತ್ತಾರೆ ಸೋನಾಕ್ಷಿ.

ಹೀರಾಮಂಡಿ ಪ್ಲಾನ್ ಮಾಡಿದ ನಟಿ : ಹೀರಾಮಂಡಿ ಸಿನಿಮಾ ಶೂಟಿಂಗ್ ವೇಳೆ ಪ್ರತಿ ದಿನ ಸೋನಾಕ್ಷಿ ಅಲ್ತಾ ಹಚ್ಚುತ್ತಿದ್ದರು. ಅದೇ ಪ್ಲಾನ್ ಅವರಿಗೆ ಹೊಳೆಯಿತಂತೆ. ಅಲ್ತಾ, ಕೈಗೆ ತುಂಬಾ ಸುಂದರವಾಗಿ ಕಾಣುತ್ತದೆ. ಅದನ್ನು ತೆಗೆಯೋದು ಸುಲಭ. ಅದನ್ನು ಹಚ್ಚಿಕೊಳ್ಳಲು ಹೆಚ್ಚು ಸಮಯದ ಅಗತ್ಯವಿಲ್ಲ. ಹಾಗಾಗಿ ನಾನು ಅಲ್ತಾ ಹಚ್ಚಿಕೊಳ್ಳುವ ನಿರ್ಧಾರಕ್ಕೆ ಬಂದೆ. ಮೆಹಂದಿ ದಿನ ಕಳೆದಂತೆ ಅಲ್ಲಲ್ಲಿ ಹೋಗೋದ್ರಿಂದ ಕೈ ಸೌಂದರ್ಯ ಹಾಳು ಮಾಡುತ್ತದೆ ಎನ್ನುತ್ತಾರೆ ಸೋನಾಕ್ಷಿ. 

ನನ್ನ ಅಲ್ತಾ ಐಡಿಯಾ ಕೆಲಸ ಮಾಡಿತ್ತು. ನಾನು ಆರಾಮವಾಗಿದ್ದೆ. ಮೆಹಂದಿ ಟೆನ್ಷನ್ ಇದು ಕಡಿಮೆ ಮಾಡಿತ್ತು. ಮದುವೆಯ ಆ ಕ್ಷಣವನ್ನು ನಾವು ಎಂಜಾಯ್ ಮಾಡಲು ಸಾಧ್ಯವಾಯ್ತು. ಮೆಹಂದಿಗಾಗಿ ಎರಡು ಮೂರು ಗಂಟೆ ಕುಳಿತುಕೊಳ್ಳೋದು ತಪ್ಪಿತು. ಅದು ನನ್ನ ಕಲ್ಪನೆಗೆ ಮೀರಿದ್ದು ಎಂದಿದ್ದಾರೆ ಸೋನಾಕ್ಷಿ.

ಜಹೀರ್ ಮದುವೆ ಆಗ್ತಿರುವ ಕಾರಣ ಸೋನಾಕ್ಷಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರಲಿಲ್ಲ ಎಂದು ಫ್ಯಾನ್ಸ್ ನಂಬಿದ್ದರು. ಆದ್ರೆ ಸೋನಾಕ್ಷಿ ಕಾರಣಕ್ಕೆ ಮೆಹಂದಿ ಕಾರ್ಯಕ್ರಮ ನಡೆದಿಲ್ಲ ಅನ್ನೋದನ್ನು ಕೇಳಿ ಫ್ಯಾನ್ಸ್ ಕೋಪಗೊಂಡಿದ್ದಾರೆ.  

ನಟಾಶಾ ಸ್ಟಾಂಕೋವಿಕ್ ಬಿಕಿನಿ ಲುಕ್: ಹಾರ್ದಿಕ್ ಪಾಂಡ್ಯಾನ ಮಾಜಿ ಮಡದಿ ಫೋಟೋಸ್

ಸೋನಾಕ್ಷಿ – ಜಹೀರ್ ಮದುವೆಯಾಗಿ ಮೂರು ತಿಂಗಳು ಕಳೆದಿದೆ. ಮದುವೆ ಸಂದರ್ಭದಲ್ಲಿ ಸೋನಾಕ್ಷಿ ಕುಟುಂಬ ಹಾಗೂ ಸೋನಾಕ್ಷಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಆದ್ರೆ ಮಗಳ ಪ್ರೀತಿಗೆ ಕೊನೆಗೂ ಒಪ್ಪಿದ್ದ ಶತ್ರುಘ್ನ ಸಿನ್ಹಾ ಕುಟುಂಬ, ಮದುವೆಯಲ್ಲಿ ಖುಷಿಯಾಗಿ ಪಾಲ್ಗೊಂಡಿತ್ತು. ಸೋನಾಕ್ಷಿ ಹಾಗೂ ಜಹೀರ್, ಸದ್ಯ ಅನೇಕ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಗಂಡನ ಮನೆಯಲ್ಲಿ ಖುಷಿಯಾಗಿರುವ ಸೋನಾಕ್ಷಿ, ಜಹೀರ್ ಗಾಗಿ ಅಡುಗೆ ಕಲಿಯುತ್ತೇನೆಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. 

click me!