Oct 3, 2024, 11:56 AM IST
ದಾವಣಗೆರೆ: ಅದೊಂದು ಪುಟ್ಟ ಕುಟುಂಬ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮನೆಯಲ್ಲಿ ಬಡತನವಿದ್ದರೂ ನೆಮ್ಮದಿಯಾಗಿ ಜೀವನ ಸಾಗಿಸುತ್ತಿತ್ತು.. ಗಂಡ ಪೇಂಟಿಂಗ್ ಕೆಲಸ ಮಾಡ್ತಿದ್ರೆ ಹೆಂಡತಿ ಮನೆಯಲ್ಲಿ ಮಕ್ಕಳನ್ನ ನೋಡಿಕೊಂಡಿದ್ದಳು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ಒಂದೂವರೆ ವರ್ಷದ ಹಿಂದೆ ಗಂಡ ಮನೆಯಿಂದ ಹೊರಗೆ ಹೋದವನು ಮಿಸ್ಸಿಂಗ್ ಆಗಿಬಿಟ್ಟಿದ್ದ. ಎಲ್ಲಿ ಹುಡುಕಿದ್ರೂ ಸಿಕ್ಕಿರಲಿಲ್ಲ.
ಪೊಲೀಸ್ ಕಂಪ್ಲೆಂಟ್ ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಆದ್ರೆ ಬರೊಬ್ಬರಿ ಒಂದು ವರ್ಷದ ಬಳಿಕ ಆ ಗಂಡ ಸತ್ತಿದ್ದಾನೆ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ ಪೊಲೀಸರು ಅವನ ಸಾವಿನ ರಹಸ್ಯವನ್ನ ಬೇಧಿಸಿದ್ದಾರೆ. ಅವನನ್ನ ಒಂದೂವರೆ ವರ್ಷದ ಹಿಂದೆ ನದಿಯ ಚಾನಲ್ಗೆ ತಳ್ಳಿ ಕೊಲ್ಲಲ್ಪಟ್ಟಿದ್ದ. ಹಾಗಾದ್ರೆ ಆತನನ್ನ ಕೊಂದಿದ್ಯಾರು? ಒಂದೂವರೆ ವರ್ಷದ ಬಳಿಕ ಅವನ ಸಾವಿನ ರಹಸ್ಯ ಬಯಲಾಗಿದ್ದು ಹೇಗೆ? ಒಂದು ಮಿಸ್ಸಿಂಗ್ ಕೇಸ್ನ ರೋಚಕ ಇನ್ವೆಸ್ಟಿಗೇಷನ್ ಕಥೆ ಇಲ್ಲಿದೆ ನೋಡಿ