ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ರೋಗ… ಕಡೆಗಣಿಸಿದ್ರೆ ಸಾವು ಖಚಿತ

Published : Jan 10, 2023, 05:45 PM IST

ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಸಮಸ್ಯೆಗಳು ಸಾಕಷ್ಟು ಸಾಮಾನ್ಯವಾಗಿದೆ. ಅನೇಕ ಜನರು ಈ ಗಂಭೀರ ಸಮಸ್ಯೆಯಿಂದ ನರಳುತ್ತಿದ್ದಾರೆ. ಈ ಗಂಭೀರ ಮಾನಸಿಕ ಅಸ್ವಸ್ಥತೆಗಳಲ್ಲಿ ಒಂದಾದ ಸ್ಕಿಜೋಫ್ರೇನಿಯಾದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಹಾಗಾಗಿ ಅದರ ಬಗ್ಗೆ ಹೆಚ್ಚಿಗೆ ತಿಳಿಯೋಣ.  

PREV
111
ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ರೋಗ… ಕಡೆಗಣಿಸಿದ್ರೆ ಸಾವು ಖಚಿತ

ಕೆಲವು ದಿನಗಳ ಹಿಂದೆ, ಪ್ರಸಿದ್ಧ ನಟಿ ತುನಿಶಾ ಶರ್ಮಾ(Tunisha Sharma) ಹಠಾತ್ ಸಾವು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. ನಟಿಯ ಸಾವಿನ ನಂತರ, ಅದಕ್ಕೆ ಸಂಬಂಧಿಸಿದ ಆಘಾತಕಾರಿ ಅಂಶಗಳು ಹೊರಬಂದವು. ಆ ಸಮಯದಲ್ಲಿ, ನಟಿ ಖಿನ್ನತೆಯ ಸಮಸ್ಯೆಯೊಂದಿಗೆ ಹೆಣಗಾಡುತ್ತಿದ್ದಾರೆ ಎಂದು ಹೇಳಲಾಯಿತು. ಖಿನ್ನತೆಯಿಂದ ಸಾವನ್ನಪ್ಪಿದ ನಟಿ ಇವರು ಮಾತ್ರ ಅಲ್ಲ, ಈ ಸಮಸ್ಯೆಯಿಂದಾಗಿ ಅನೇಕ ನಟರು ಮತ್ತು ಸಾಮಾನ್ಯ ಜನರು ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. 

211

ಕೆಲವು ಸಮಯದಿಂದ, ಖಿನ್ನತೆ ಸೇರಿದಂತೆ ಅನೇಕ ಮಾನಸಿಕ ಸಮಸ್ಯೆಗಳು ಗಂಭೀರ ಸ್ವರೂಪವನ್ನು ಪಡೆಯುತ್ತಿವೆ. ನಿಮ್ಮ ಸುತ್ತಲಿನ ಅನೇಕ ಜನರು ವಿವಿಧ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ಮಾನಸಿಕ ಅಸ್ವಸ್ಥತೆಗಳಲ್ಲಿ(Mental disorder) ಒಂದಾದ ಸ್ಕಿಜೋಫ್ರೇನಿಯಾವು ಬಹಳ ಗಂಭೀರವಾದ ಕಾಯಿಲೆಯಾಗಿದೆ. ಅನೇಕ ಜನರ ಜೀವನವನ್ನು ಹಿಂಡಿದ ಕಾಯಿಲೆ ಇದಾಗಿದೆ. 

311

ಹಿಂದಿ ಚಿತ್ರರಂಗದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಈ ಹಿಂದೆ ಅನೇಕ ಚಿತ್ರಗಳನ್ನು ಮಾಡಲಾಗಿದೆ. ಈ ಗಂಭೀರ ಸಮಸ್ಯೆಯನ್ನು ದೊಡ್ಡ ಪರದೆಯ ಮೇಲೆಯೂ ತೋರಿಸಲಾಗಿದೆ. ನಟಿ ಬಿಪಾಶಾ ಬಸು ಅವರ ಚಿತ್ರ ಮದ್ ಹೋಶ್ (Madhosh)ಮತ್ತು ನಟಿ ಕೊಂಕಣಾ ಸೇನ್ ಅವರ ಚಲನಚಿತ್ರ 15 ಪಾರ್ಕ್ ಅವೆನ್ಯೂ ಸಹ ಸ್ಕಿಜೋಫ್ರೇನಿಯಾದಂತಹ ಗಂಭೀರ ಮಾನಸಿಕ ಕಾಯಿಲೆಯನ್ನು ಆಧರಿಸಿದ ಚಿತ್ರಗಳಾಗಿವೆ. 

411

ಈಗ ನಿಮ್ಮ ಮನಸ್ಸಿನಲ್ಲಿಯೂ ಈ ಗಂಭೀರ ಸಮಸ್ಯೆ ಯಾವುದು, ಅದರ ಕಾರಣವೇನು ಮತ್ತು ಅದನ್ನು ಸರಿಯಾದ ಸಮಯದಲ್ಲಿ ಹೇಗೆ ಗುರುತಿಸಬಹುದು ಮತ್ತು ಹೇಗೆ ಚಿಕಿತ್ಸೆ(Treatment) ನೀಡಬಹುದು ಎಂಬ ಪ್ರಶ್ನೆ ಈಗ ಉದ್ಭವಿಸುತ್ತೆ ಅಲ್ವಾ?. ಈ ಗಂಭೀರ ಮಾನಸಿಕ ಕಾಯಿಲೆಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ-

511
ಸ್ಕಿಜೋಫ್ರೇನಿಯಾ(Schizophrenia) ಎಂದರೇನು?

ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಭಿನ್ನ ಕಲ್ಪನೆಯನ್ನು ಹೊಂದಿದ್ದಾನೆ. ಪ್ರತಿಯೊಬ್ಬರೂ ಈ ಫ್ಯಾಂಟಸಿ ಜಗತ್ತಿನಲ್ಲಿ ವಾಸಿಸುತ್ತಾರೆ. ಆದರೆ ಅನೇಕ ಬಾರಿ ಜನರು ಈ ಜಗತ್ತಿನಲ್ಲಿ ಎಷ್ಟು ಕಳೆದುಹೋಗುತ್ತಾರೆ ಎಂದರೆ ಅವರು ನಿಜ ಜೀವನ ಮತ್ತು ಕಲ್ಪನೆಯ ನಡುವಿನ ವ್ಯತ್ಯಾಸವನ್ನು ಮರೆತುಬಿಡುತ್ತಾರೆ. 

611

ಸರಳ ಭಾಷೆಯಲ್ಲಿ ಹೇಳುವುದಾದರೆ, ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಒಬ್ಬ ವ್ಯಕ್ತಿಯು ತನ್ನ ಕಲ್ಪನೆಯನ್ನು ನಿಜವೆಂದು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾನೆ. ಅವನು ತನ್ನ ಮನಸ್ಸಿನಲ್ಲಿರುವ ಕಲ್ಪನೆಯ ಜಗತ್ತನ್ನು ಸತ್ಯವೆಂದು ಒಪ್ಪಿಕೊಳ್ಳುತ್ತಾನೆ. ಈ ರೋಗವನ್ನು ವಿಜ್ಞಾನದ ಭಾಷೆಯಲ್ಲಿ ಅರ್ಥಮಾಡಿಕೊಂಡರೆ, ನಮ್ಮ ಮೆದುಳಿನಲ್ಲಿ ಡೋಪಮೈನ್ ಎಂಬ ನ್ಯೂರೋಟ್ರಾನ್ಸ್ಮಿಟರ್(Neurotransmeter) ಇದೆ. ನ್ಯೂರೋಟ್ರಾನ್ಸ್ ಮಿಟರ್ ಕೆಲಸವೆಂದರೆ ಮನಸ್ಸು ಮತ್ತು ದೇಹದ ನಡುವೆ ಸಮನ್ವಯ ಸಾಧಿಸೋದು. ಆದರೆ ಕೆಲವು ಕಾರಣಗಳಿಗಾಗಿ ದೇಹದಲ್ಲಿ ಡೋಪಮೈನ್ ರಾಸಾಯನಿಕದ ಪ್ರಮಾಣವು ಹೆಚ್ಚಾದಾಗ, ಈ ಸ್ಥಿತಿಯನ್ನು ಸ್ಕಿಜೋಫ್ರೇನಿಯಾ ಎಂದು ಕರೆಯಲಾಗುತ್ತೆ.
 

711
ಸ್ಕಿಜೋಫ್ರೇನಿಯಾಕ್ಕೆ ಕಾರಣಗಳು

ಅನೇಕ ಸಂಶೋಧನೆಗಳಲ್ಲಿ, ಸ್ಕಿಜೋಫ್ರೇನಿಯಾ ರೋಗ ಪರಿಸರದ ಅಂಶ ಮತ್ತು ಕೆಲವು ನರವೈಜ್ಞಾನಿಕ ಪರಿಸ್ಥಿತಿಗಳ ಜೊತೆಗೆ ಆನುವಂಶಿಕತೆಯಿಂದ ಉಂಟಾಗಬಹುದು ಎಂದು ಕಂಡುಹಿಡಿಯಲಾಗಿದೆ. ಪೋಷಕರು(Parents) ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರೆ, ಮಗುವಿನಲ್ಲಿ ಈ ಕಾಯಿಲೆ ಬರುವ ಅಪಾಯವು 40% ರಷ್ಟು ಹೆಚ್ಚಾಗುತ್ತೆ. ಇದಲ್ಲದೆ, ತಾಯಿ ಅಥವಾ ತಂದೆಯಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ, ಮಗುವಿನಲ್ಲಿ ಅದರ ಅಪಾಯವು 12% ಆಗುತ್ತೆ. 

811
ಸ್ಕಿಜೋಫ್ರೇನಿಯಾದ ಇತರ ಕಾರಣಗಳಲ್ಲಿ ಇವು ಸೇರಿವೆ:

ವೃತ್ತಿಜೀವನ(Professional life)
ಬದಲಾಗುತ್ತಿರುವ ಜೀವನಶೈಲಿ
ಬೇರೆ ಬೇರೆಯಾಗಿರುವ ಅವಿಭಕ್ತ ಕುಟುಂಬ
ಹಣ ಗಳಿಸಲು ಓಟ
ಜವಾಬ್ದಾರಿಗಳು

911
ಸ್ಕಿಜೋಫ್ರೇನಿಯಾದ ಲಕ್ಷಣಗಳು

ಗೊಂದಲದ ಸ್ಥಿತಿಯಲ್ಲಿ ಜೀವನ(Life) ಸಾಗಿಸೋದು
ವಿಚಿತ್ರ ವಿಷಯಗಳನ್ನು, ಘಟನೆಗಳನ್ನು ಅನುಭವಿಸೋದು
ಏಕಾಂಗಿಯಾಗಿರಲು ಇಷ್ಟಪಡೋದು, ಯಾರೋಂದಿಗೂ ಬೆರೆಯುವ ಮನಸಾಗದೇ ಇರೋದು 
ಅನೇಕ ರೀತಿಯ ಶಬ್ದಗಳು ಕೇಳೋದು

1011

ಇನ್ನೂ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅವುಗಳೆಂದರೆ…
ಜೀವನದ ಬಗ್ಗೆ ಹತಾಶೆ ಅನುಭವಿಸೋದು
ಅನೇಕ ವಸ್ತುಗಳು, ಜನರು ಅಥವಾ ಯಾವುದೇ ಆಕಾರಗಳನ್ನು ನೋಡೋದು
ಜನಸಂದಣಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಏನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೊಳಗಾಗೋದು
ಆಲಸ್ಯ ಹೆಚ್ಚಾಗಿ ದೈಹಿಕ ಚಟುವಟಿಕೆ (Physical activity)ಮೇಲೆ ಪರಿಣಾಮ ಬೀರುತ್ತೆ 
ಆಗಾಗ್ಗೆ ಮನಸ್ಥಿತಿಯ ಬದಲಾವಣೆ ಮತ್ತು ಖಿನ್ನತೆಯ ಚಿಹ್ನೆಗಳು ಕಾಣಿಸಿಕೊಳ್ಳುತ್ತೆ
ವಾಸ್ತವದೊಂದಿಗೆ ಯಾವುದೇ ಸಂಬಂಧವಿಲ್ಲದ ಕೆಲಸಗಳನ್ನು ಮಾಡೋದು

1111
ಸ್ಕಿಜೋಫ್ರೇನಿಯಾ ಚಿಕಿತ್ಸೆ

ಸ್ಕಿಜೋಫ್ರೇನಿಯಾ ಒಂದು ಮಾನಸಿಕ ಕಾಯಿಲೆ. ಅದನ್ನು ಸಂಪೂರ್ಣವಾಗಿ ಗುಣಪಡಿಸಲಾಗೋದಿಲ್ಲ. ಆದರೆ ನಿರಂತರ ಔಷಧಿ ಮತ್ತು ಕೌನ್ಸೆಲಿಂಗ್ (Counselling) ಸಹಾಯದಿಂದ, ಅದನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಇದಲ್ಲದೆ, ಯೋಗ, ಧ್ಯಾನ ಮತ್ತು ಕುಟುಂಬ ಬೆಂಬಲವು ಸಹ ಈ ರೋಗದ ಚಿಕಿತ್ಸೆಯಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.

Read more Photos on
click me!

Recommended Stories