ಸ್ಯಾಂಡಲ್ವುಡ್ ದಂಪತಿ ಸಿಂಹಪ್ರಿಯಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಿಂಗಾಪುರ ಸುತ್ತಿ ಬಂದ ಜೋಡಿ ಈಗ ಫೋಟೋಶೂಟ್ ನಲ್ಲಿ ಬ್ಯುಸಿಯಿದ್ದಾರೆ. ಹರಿಪ್ರಿಯಾ ಬೇಬಿ ಬಂಪ್ ಫೋಟೋ ಶೂಟ್ ಫ್ಯಾನ್ಸ್ ಗಮನ ಸೆಳೆದಿದೆ.
ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ (Sandalwood actress Haripriya) ಅಮ್ಮನಾಗ್ತಿದ್ದಾರೆ, ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ (actor Vasishta Simha)ಗೆ, ಕೆಲವೇ ತಿಂಗಳಲ್ಲಿ ಪ್ರಮೋಷನ್ ಸಿಗಲಿದೆ ಎಂಬ ವಿಷ್ಯ ಬಹುತೇಕ ಎಲ್ಲರಿಗೂ ತಿಳಿದಿದೆ. ಹರಿಪ್ರಿಯಾ ಗರ್ಭಿಣಿ ಎನ್ನುವ ವದಂತಿ ಕೇಳಿ ಬರ್ತಿದ್ದ ಸಂದರ್ಭದಲ್ಲೇ ಸಿಂಹಪ್ರಿಯಾ (Simhapriya) ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡು ತಾವಿಬ್ಬರು ಅಪ್ಪ – ಅಮ್ಮನಾಗ್ತಿದ್ದೇವೆ ಎಂದಿದ್ದರು. ಈಗ ದಂಪತಿ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದಾರೆ.
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ವಿಡಿಯೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಹಬ್ಬದ ಸಲುವಾಗಿ, ನಾವು ಎಂದು ಬರೆದಿರುವ ಹರಿಪ್ರಿಯಾ ಮಗು ಹಾಗೂ ದೃಷ್ಟಿ ಬೀಳದ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ ಹರಿಪ್ರಿಯಾ, ಸುಂದರವಾದ ಜೂಡಿದಾರ್ ಧರಿಸಿದ್ದು, ವಸಿಷ್ಠ ಕುರ್ತಾ ಹಾಕಿದ್ದಾರೆ. ಬೇಬಿ ಬಂಪ್ ಹಿಡಿದು ದಂಪತಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್, ದಂಪತಿಗೆ ಶುಭ ಕೋರಿದ್ದಾರೆ. ಮುದ್ದಾದ ಜೋಡಿಗೆ ಮುದ್ದಾದ ಮಗು ಬರಲಿ, ಮರಿ ಸಿಂಹಕ್ಕೆ ಕಾಯ್ತಿದ್ದೇವೆ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಕಿಯಾರಾ ಕೈಯಲ್ಲಿ ಗೋಲ್ಡ್ ಟೂತ್ ಬ್ರಷ್: ದುಡ್ಡು ಹೆಚ್ಚಾದರೆ ಹೇಗ್ ಆಗುತ್ತೆ ಎಂದ ನೆಟ್ಟಿಗರು
ಮಾಲ್ಡೀವ್ಸ್ಗೆ ಹೋಗಿದ್ದ ದಂಪತಿ ಅಲ್ಲಿ ಫೋಟೋ ಶೂಟ್ ಮಾಡಿಸಿ, ಒದಲ ಬಾರಿ ಫ್ಯಾನ್ಸ್ ಗೆ ಖುಷಿ ಸುದ್ದಿಯನ್ನು ನೀಡಿದ್ದರು. ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ ಕುಡಿಗಾಗಿ ಎದುರುನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ ಎಂದು ಬರೆದಿದ್ದರು.
ಮಾಲ್ಡೀವ್ಸ್ ನಂತ್ರ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸಿಂಗಾಪುರ ಸುತ್ತಿ ಬಂದಿದ್ದಾರೆ. ಸಿಂಗಾಪುರದ ಮೆಟ್ರೋದಲ್ಲಿ ನಿಂತಿದ್ದ, ಅಲ್ಲಿನ ಬೀದಿ ಸುತ್ತಿದ್ದ ವಿಡಿಯೋ, ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೆಟ್ರೋ ಪ್ರಯಾಣದ ವೇಳೆ ಹರಿಪ್ರಿಯಾ ಜೀನ್ಸ್ ಧರಿಸಿದ್ದು, ಫ್ಯಾನ್ಸ್ ಗೆ ಇಷ್ಟವಾಗಿರಲಿಲ್ಲ. ಗರ್ಭಿಣಿಯರು ಜೀನ್ಸ್ ಧರಿಸಬಾರದು ಅಂತ ಸಲಹೆ ಕೂಡ ನೀಡಿದ್ದರು.
ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಆಗಾಗ ಒಂದಿಷ್ಟು ರೀಲ್ಸ್, ಫೋಟೋಗಳನ್ನು ಅವರು ಪೋಸ್ಟ್ ಮಾಡ್ತಿರುತ್ತಾರೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆ ಆದ್ಮೇಲೆ ಸಿಂಹಪ್ರಿಯಾ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆಯಾಗಿ ಒಂದುವರೆ ವರ್ಷ ಕಳೆದಿದೆ. ಕನ್ನಡ ಸ್ಟಾರ್ ಜೋಡಿ ಕಳೆದ 2023ರ ಜನವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2025ರ ಜನವರಿಗೆ ಎರಡು ವರ್ಷ ತುಂಬಲಿದ್ದು, ಮುದ್ದಾದ ಮಗು ಅವರ ಕೈನಲ್ಲಿರಲಿದೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ಮಹಿಳಾ ಸ್ಪರ್ಧಿಗಳು ರೆಡಿಯಾಗುತ್ತಿರುವ ಫೋಟೋ ಲೀಕ್; ಆತಂಕಗೊಂಡ ಬಿಗ್ ಬಾಸ್ ಫಾಲೋವರ್ಸ್!
ಮನಸುಗಳ ಮಾತು ಮಧುರ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಹರಿಪ್ರಿಯಾ ಚಲುವೆಯೇ ನಿನ್ನ ನೋಡಲು, ಕಳ್ಳರ ಸಂತೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಉಗ್ರಂ, ಹರಿಪ್ರಿಯಾಗೆ ಹೆಸರು ತಂದ್ಕೊಟ್ಟ ಸಿನಿಮಾ. ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿರುವ ಹರಿಪ್ರಿಯಾ, 2022, ಡಿಸೆಂಬರ್ ನಲ್ಲಿ ವಸಿಷ್ಠ ಸಿಂಹ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದರು. ಸದ್ಯ ಹರಿಪ್ರಿಯಾ, ಪೆಟ್ರೋ ಮ್ಯಾಕ್ಸ್, ಯಧಾ ಯಧಾಹಿ, ಅಲ್ಲಾ ಇಲ್ಲಾ ಎಲ್ಲ ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವಸಿಷ್ಠ ಸಿಂಹ, ರಾಜಾಹುಲಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 6ನೇ ಮೈಲಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಸಿಷ್ಠ ಸಿಂಹ, ಈಗಷ್ಟೇ ಬಿಡುಗಡೆಯಾಗಿರುವ ಭೈರತಿ ರಣಗಲ್ನಲ್ಲಿ ಮಿಂಚಿದ್ದಾರೆ.