News Hour: 100 ಕೋಟಿ ಆಫರ್.. ಸುಳ್ಳಾ.. ನಿಜಾನಾ?

Nov 18, 2024, 11:33 PM IST

ಬೆಂಗಳೂರು (ನ.18): ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಹಾಗೂ ಚಿಕ್ಕಮಗಳೂರು ಶಾಸಕ ಹೆಚ್ ಡಿ ತಮ್ಮಯ್ಯ ಅವರಿಗೆ 100 ಕೋಟಿ ರೂ. ಆಫರ್ ಮಾಡಿರುವ ಬಗ್ಗೆ ನನ್ನ ಬಳಿ ಎಲ್ಲಾ ಸಾಕ್ಷ್ಯಾಧಾರಗಳು ಲಭ್ಯವಿದ್ದು, ಶೀಘ್ರವೇ ಪುರಾವೆಯನ್ನು ಬಿಡುಗಡೆ ಮಾಡುವುದಾಗಿ ಮಂಡ್ಯ ಕಾಂಗ್ರೆಸ್ ಶಾಸಕ ಪಿ.ರವಿಕುಮಾರ್ ಸೋಮವಾರ ಹೇಳಿದ್ದಾರೆ.

ಮಂಡ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್ ಸರಕಾರವನ್ನು ಬೀಳಿಸಲು ಬಿಜೆಪಿ ಶಾಸಕರಿಗೆ 50 ಕೋಟಿ ಅಲ್ಲ 100 ಕೋಟಿ ರೂ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಯಸುತ್ತಿವೆ. ಶೀಘ್ರದಲ್ಲೇ ಆಪರೇಷನ್ ಕಮಲದ ಸಾಕ್ಷ್ಯವನ್ನು ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

Breaking: ಸಮುದ್ರದಲ್ಲಿ ಭಾರತ-ಪಾಕಿಸ್ತಾನ ಹಡಗಿನ ನಡುವೆ ಭಾರೀ ಫೈಟ್‌, 7 ಮಂದಿ ಮೀನುಗಾರರ ರಕ್ಷಣೆ!

ಒಂದೆಡೆ ಸಿಎಂ 50 ಕೋಟಿ ಆಫರ್‌ ಎಂದು ಹೇಳಿದ್ದರೆ, ರವಿ ಕುಮಾರ್‌ ಇದನ್ನು 100 ಕೋಟಿಗೆ ಏರಿಸಿದ್ದಾರೆ. ಇನ್ನು ಬಿಜೆಪಿ ಇದಕ್ಕೆ ದಾಖಲೆ ನೀಡಿ ಎಂದು ಸವಾಲೆಸಿದೆ. ಆದರೆ, ಈ ಆರೋಪವನ್ನು  ಕಿತ್ತೂರು, ಚಿಕ್ಕಮಂಗಳೂರು ಕಾಂಗ್ರೆಸ್​ ಶಾಸಕರು ಅಲ್ಲಗಳೆದಿದ್ದಾರೆ.