Nov 18, 2024, 11:21 PM IST
ನವದೆಹಲಿ (ನ.18): ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನೆ ಮೇಲೆ ಮತ್ತೆ ದಾಳಿ ನಡೆದಿದೆ. ಅದರ ಪ್ರತೀಕಾರದ ಅಗ್ನಿಗೆ ಗಾಜಾ, ಲೆಬನಾನ್..ಧಗಧಗಿಸುತ್ತಿವೆ.. ಅಷ್ಟೇ ಅಲ್ಲ ಇರಾನ್ ಕುಂಭಸ್ಥಳದ ಮೇಲೇ ಇಸ್ರೇಲ್ ಅಂಕುಶ ಪ್ರಯೋಗ ಮಾಡೋಕೆ ಸನ್ನದ್ಧವಾಗಿಬಿಟ್ಟಿದೆ.
ಇಸ್ರೇಲ್ ತನ್ನ ಶತ್ರುಪಾಳಯದ ಹಿರಿತಲೆಗಳನ್ನೆಲ್ಲಾ ಹೊಡೆದುರುಳಿಸಿದ್ದೀನಿ ಅಂತ ಹೇಳ್ಕೊಳ್ತಾ ಇದೆ.. ಆದ್ರೆ, ಇಲ್ ನೋಡಿದ್ರೆ, ಇಸ್ರೇಲ್ ಮೇಲೆ ನಡೀತಿರೋ ದಾಳಿಯ ಪ್ರಮಾಣ ಕಿಂಚಿತ್ತೂ ಕಡಿಮೆಯಾದ ಹಾಗೆ ಕಾಣ್ತಾ ಇಲ್ಲ.. ಇದಕ್ಕೆಲ್ಲಾ ಕಾರಣ ಏನು? ಅಸಲಿಗೆ, ಇಸ್ರೇಲಿ ಶತ್ರು ಯಾರು? ಈ ಯುದ್ಧ ನಡೆದರೆ ನಡೆಯೋದು ಯಾವಾಗ? ನಿಂತರೆ ನಿಲ್ಲೋದ್ ಯಾವಾಗ? ಅನ್ನೋ ಪ್ರಶ್ನೆಗಳಿವೆ.
Bengaluru: ಪ್ರಯಾಣಿಕರ ಎದುರು ಸ್ಟಾರ್ಟ್‌ಅಪ್ ಕನಸು ಬಿಚ್ಚಿಟ್ಟ ಬೆಂಗಳೂರಿನ ಆಟೋ ಡ್ರೈವರ್!
ಇಸ್ರೇಲಿನ ಪ್ರತೀಕಾರದ ಜ್ವಾಲೆಗೆ, ತುಪ್ಪ ಸುರೀತಿದೆ, ಇರಾನ್ ಅಂಡ್ ಅದರ್ಸ್ ನಡೆಸ್ತಾ ಇರೋ, ಕಿತಾಪತಿ.. ಮಧ್ಯಪ್ರಾಚ್ಯದ ಯುದ್ಧ ಕಾರ್ಮೋಡ, ಜಗತ್ತಿಗೇ ಕಂಟಕ ತರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ.. ಆದ್ರೆ, ಅದನ್ನ ನಿವಾರಿಸೋಕೆ, ಈ ಯುದ್ಧಭೀತಿನ ಕಿಂಚಿತ್ತಾದ್ರೂ ಕಡಿಮೆಗೊಳಿಸೋಕೆ ಸಾಧ್ಯವಿಲ್ಲದಂಥಾ ವಾತಾವರಣ ನಿರ್ಮಾಣವಾಗಿದೆ.